ಬೆಂಗಳೂರು: ಮಾ.21 ರಿಂದ ಕರೆ ನೀಡಲಾಗಿದ್ದ ‘ಸಾರಿಗೆ ನೌಕರ’ರ ( Transport employee’s Bus Strike) ಮುಷ್ಕರ ವಾಪಸ್ ಪಡೆಯಲಾಗಿದೆ.
ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 21ರಿಂದ ಸಾರಿಗೆ ನೌಕರರು ಮುಷ್ಕರ ನಡೆಸೋದಕ್ಕೆ ಕರೆ ನೀಡಿದ್ದರು. ಆದರೆ ಇದೀಗ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 8 ಟ್ರೇಡ್ ಯೂನಿಯನ್ ಗಳು 20 % ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದರು. 15 % ವೇತನ ಹೆಚ್ಚಳ ಮಾಡಿ ನಿನ್ನೆ ಸರ್ಕಾರ ಆದೇಶ ಹೊರಡಿಸಿದ್ದು, ಅಲ್ಲದೇ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಮಾ.21 ರಂದು ಕರೆ ನೀಡಲಾಗಿದ್ದ ‘ಸಾರಿಗೆ ನೌಕರ’ರ ಮುಷ್ಕರ ವಾಪಸ್ ಪಡೆಯಲಾಗಿದೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾರ್ಚ್ 21ರಿಂದ ಮುಷ್ಕರ ನಡೆಯಲಿದೆ ಎಂಬುದಾಗಿ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದರು. ಸಾರಿಗೆ ನೌಕರರ ಮುಷ್ಕರವನ್ನು ನಡೆಸಲು ಮಾರ್ಚ್ 21ರಂದು ಕರೆ ನೀಡಲಾಗಿದೆ. ಇದು ಜನರಿಗೆ ತೊಂದರೆ ಮಾಡುವ ಉದ್ದೇಶದಿಂದ ಅಲ್ಲ. ವಜಾಗೊಂಡಿರುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಶಿವಮೊಗ್ಗ-ಯಶವಂತಪುರ ರೈಲಿನ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ: ಹಲವರಿಗೆ ಗಾಯ
ತುಮಕೂರು: ಜಿಲ್ಲೆಯ ಕ್ಯಾತ್ಸಂದ್ರ ಬಳಿಯಲ್ಲಿ ಶಿವಮೊಗ್ಗ-ಯಶವಂತಪುರ ರೈಲಿನ ( Shivamogga – Yashwanthpur Train ) ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಸಿದ್ದರಿಂದಾಗಿ ಹಲವು ಪ್ರಯಾಣಿಕರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ತುಮಕೂರಿನ ಕ್ಯಾತ್ಸಂದ್ರ ರೈಲ್ವೆ ನಿಲ್ದಾಣದ ( Railway Station ) ಬಳಿಯಲ್ಲಿ ಚಲಿಸುತ್ತಿದ್ದಂತ ಶಿವಮೊಗ್ಗ-ಯಶವಂತಪುರ ರೈಲಿನ ಜನರಲ್ ಬೋಗಿಯ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟವನ್ನು ಇಂದು ನಡೆಸಿರೋದಾಗಿ ತಿಳಿದು ಬಂದಿದೆ.ಚಲಿಸುತ್ತಿದ್ದಂತ ರೈಲಿನ ಮೇಲೆ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದರಿಂದಾಗಿ ರೈಲಿನಲ್ಲಿದ್ದಂತ ಗುರುಮೂರ್ತಿ ಎಂಬುವರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿರೋದಾಗಿ ಹೇಳಲಾಗುತ್ತಿದೆ.ಇವರಷ್ಟೇ ಅಲ್ಲದೇ ಇನ್ನೂ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರೋದಾಗಿ ಹೇಳಲಾಗುತ್ತಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆಯ ಮೂಲಕ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
BIGG NEWS : ಮೇ ತಿಂಗಳಲ್ಲಿ ‘ಗಗನಯಾನ’ ಪ್ರಯೋಗಕ್ಕೆ ಚಾಲನೆ ; ಕೇಂದ್ರ ಸರ್ಕಾರ ಘೋಷಣೆ