ಕೆಎನ್ ಎನ್ ಸಿನಿಮಾ ಡೆಸ್ಕ್ : ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ‘ಲಾಫಿಂಗ್ ಬುದ್ಧ’ಸಿನೆಮಾ ಬರ್ತಿರೋದು ಗೊತ್ತಿರೋ ವಿಚಾರವೇ. ಈಗಾಗಲೇ ಮುಹೂರ್ತ ಮಾಡಿಕೊಂಡಿರುವ ತಂಡ ಚಿತ್ರದ ಶೂಟಿಂಗ್ ಪ್ರಾರಂಭಿಸಿರಲಿಲ್ಲ. ಈಗ “ಲಾಫಿಂಗ್ ಬುದ್ದ ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭ,ಎಂದಿನಂತೆ ನಿಮ್ಮ ಆರ್ಶೀವಾದ ತಂಡದ ಮೇಲಿರಲಿ”ಎಂದು ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ ರಿಷಬ್ ಶೆಟ್ಟಿ.
ಎಂ ಭರತ್ ರಾಜ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ‘ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಮತ್ತು ತೇಜು ಬೆಳವಾಡಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಲಾಫಿಂಗ್ ಬುದ್ಧ ಸಿನಿಮಾ ಪೊಲೀಸ್ ಪೇದೆಯ ಸುತ್ತುತ್ತಾ, ದೇಹದ ತೂಕ ಹೆಚ್ಚಿರುವ ಪೊಲೀಸ್ ಕಾನ್‌ಸ್ಟೇಬಲ್ ಹೇಗೆ ಜನರ ಉತ್ಸಾಹವನ್ನು ಹೆಚ್ಚಿಸುತ್ತಾರೆ ಮತ್ತು ಇಡೀ ಪೊಲೀಸ್ ಠಾಣೆಗೆ ಸಂತೋಷವನ್ನು ತರುತ್ತಾರೆ ಎಂಬುದೇ ಚಿತ್ರದ ತಿರುಳಂತೆ. ಹಾಸ್ಯದ ಜತೆಗೆ ಭಾವನಾತ್ಮಕ ದೃಶ್ಯಗಳು ಸಹ ಸಿನಿಮಾದಲ್ಲಿ ಇರಲಿದ್ದು ಚಿತ್ರದ ಟೈಟಲ್ಲೇ ಇಂಟ್ರಸ್ಟಿಂಗ್ ಹುಟ್ಟುಹಾಕುವಂತಿದೆ.
ನಟನಾಗಿ ನಿರ್ದೇಶಕರಾಗಿ ಉತ್ತಮ ಸಿನೆಮಾ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ರಿಷಬ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಅಂದ್ರೆನೇ ಈ ಸಿನೆಮಾದಲ್ಲಿ ಸ್ಪೆಷಲ್ ಇದೆ ಅಂತಾನೇ ಅರ್ಥ.ಹೀಗೆ ನಿರೀಕ್ಷೆ ಹುಟ್ಟು ಹಾಕಿರುವ ಲಾಫಿಂಗ್ ಬುದ್ದ ಸಿನೆಮಾ ಥಿಯೇಟರ್ ಗೆ ಬಂದು ಎಷ್ಟು ನಗಿಸುತ್ತೋ ಗೊತ್ತಿಲ್ಲ ಆದ್ರೆ ಸದ್ಯ ರಿಷಭ್ ಶೆಟ್ಟಿ ಹಂಚಿಕೊಂಡಿರುವ ಚಿತ್ರೀಕರಣ ಆರಂಭವಾಗುವ ಅಪ್ಡೇಟ್ ನ ಟ್ವೀಟ್ ಮಾತ್ರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಕಾಫಿ ಗ್ಯಾಂಗ್ ಸ್ಟುಡಿಯೋಸ್ ಸಹಯೋಗದಲ್ಲಿ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಕಾಂತ್ ಮತ್ತು ವಿಕಾಸ್ ಸಹ ನಿರ್ಮಾಪಕರಾಗಿದ್ದಾರೆ. ವಿಷ್ಣು ವಿಜಯ್ ಅವರ ಸಂಗೀತ, ಚಂದ್ರಶೇಖರ್ ಅವರ ಛಾಯಾಗ್ರಹಣ ಮತ್ತು ಕೆಎಂ ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿರಲಿದೆ.
ಲಾಫಿಂಗ್ ಬುದ್ಧ ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭ, ಎಂದಿನಂತೆ ನಿಮ್ಮ ಆಶೀರ್ವಾದ ತಂಡದ ಮೇಲೆ ಇರಲಿ 🙏🏻#BharathRajM @UrsPramodShetty pic.twitter.com/VzIrzm2IJb
— Rishab Shetty (@shetty_rishab) March 13, 2023