ಬೆಂಗಳೂರು: ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯದಲ್ಲಿ (ರೈಲು ಸಂಖ್ಯೆ. 17307) ನಿಲುಗಡೆಯೊಂದಿಗೆ ಮಾರ್ಗ ಬದಲಿಸಿದ ಬಸವ ಎಕ್ಸ್‌ಪ್ರೆಸ್‌ಗೆ ಇಂದು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯದಲ್ಲಿ ಚಾಲನೆ ನೀಡಲಾಯಿತು.

ಇಂದು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯದಲ್ಲಿ ನಿಲುಗಡೆಯೊಂದಿಗೆ ಮಾರ್ಗ ಬದಲಿಸಿದಂತ ಬಸವ ಎಕ್ಸ್ ಪ್ರೆಸ್ ರೈಲಿಗೆ ನೈರುತ್ಯ ರೈಲ್ವೆಯ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದಂತ ಲಕ್ಷ್ಮಣ್ ಸಿಂಗ್ ಹಸಿರು ನಿಶಾನೆ ತೋರಿದರು.

BIG NEWS: ಮತ್ತೆ ಶುರುವಾದ ಲೋಕಾಯುಕ್ತ ಕಾರ್ಯಾಚರಣೆ: ಭ್ರಷ್ಟಾಚಾರ ಸಂಬಂಧ ಜನರ ದೂರು ಸ್ವೀಕರಿಸಿ ತನಿಖೆ ನಡೆಸುವಂತೆ ಎಡಿಜಿಪಿ ಆದೇಶ

ಈ ಬಳಿಕ ಮಾತನಾಡಿದಂತ ಅವರು, ಈ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಸತ್ಯ ಸಾಯಿ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡುವ ಭಕ್ತರು, ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಈ ರೈಲಿನ ನಿಲುಗಡೆಯಿಂದ ಹೊಸದಾಗಿ ರಚನೆಯಾದ ಸತ್ಯಸಾಯಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದು ಬಸಂತ್ ಕುಮಾರ್ ಹೇಳಿದರು.
ವಿಭಾಗೀಯ ಸಿಬ್ಬಂದಿ ಅಧಿಕಾರಿ ಅಭಿಷೇಕ್ ಗಾಂಧಿ ವಂದಿಸಿದರು.

Good News : ವಿವಿಗಳಲ್ಲಿ ‘ಪ್ರಾಕ್ಟೀಸ್ ಪ್ರೊಫೆಸರ್’ ನೇಮಕಕ್ಕೆ ‘UGC’ ಗ್ರೀನ್ ಸಿಗ್ನಲ್ ; ನೂತನ ಮಾರ್ಗಸೂಚಿ ಪ್ರಕಟ

ಈ ಸಂದರ್ಭದಲ್ಲಿ ಹಿರಿಯ ವಿಭಾಗೀಯ ಇಂಜಿನಿಯರ್ ಪುಷ್ಪೇಂದ್ರ ಕುಮಾರ್, ಜಿಲ್ಲಾಧಿಕಾರಿ ಬಸಂತಕುಮಾರ್,  ಹಾಗೂ ಸತ್ಯಸಾಯಿ ಜಿಲ್ಲೆಯ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share.
Exit mobile version