ಕೆಎನ್ಎನ್ ಡಿಜಿಟಲ್ ಡೆಸ್ಕ್ : ಗ್ಯಾಸ್ ಸಿಲಿಂಡರ್ ಮನೆಗೆ ತರುವ ಸಿಲಿಂಡರ್ ಬಾಯ್ಗೆ ಒಂದೇ ಒಂದು ರೂಪಾಯಿ ನೀಡುವ ಆಗತ್ಯವಿಲ್ಲ ಎಂದು ಸರ್ಕಾರಿ ವಲಯದ ತೈಲ ಕಂಪನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸ್ಪಷ್ಟಪಡಿಸಿದೆ.
ಈ ಬಗ್ಗೆ ಎಚ್ಪಿಸಿಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಿ.ಕೆ.ನರಸಿಂಹ ಸ್ಪಷ್ಟಪಡಿಸಿದ್ದು, ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಖರೀದಿಸುವಾಗ 30 ರೂಪಾಯಿ ಅಥವಾ 50 ರೂಪಾಯಿ ಹೆಚ್ಚುವರಿ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ವಿತರಕರು ಗ್ಯಾಸ್ ಸಿಲಿಂಡರ್’ನ ಗ್ರಾಹಕರ ಮನೆಗೆ ಸೇರಿಸಬೇಕು. ಇನ್ನು ಅವರು ಪಾವತಿಸುವ ಬಿಲ್ನಲ್ಲಿ ವೆಚ್ಚವನ್ನ ಸೇರಿಸಲಾಗುತ್ತದೆ ಎಂದು ಹೇಳಿದರು. ಹೀಗಾಗಿ ಡೆಲಿವರಿ ಬಾಯ್’ಗಳಿಗೆ ಹೆಚ್ಚುವರಿ ಹಣ ನೀಡುವ ಅಗತ್ಯವಿಲ್ಲ ಎಂದು ವಿವರಿಸಿದರು.
ಅಂದ್ಹಾಗೆ, ಹೈದರಾಬಾದ್ ನಗರದ ರಾಬಿನ್ ಎಂಬ ವ್ಯಕ್ತಿ ಮಾಹಿತಿ ಹಕ್ಕು ಕಾಯಿದೆ ಮೂಲಕ ಈ ಬಗ್ಗೆ ಕೇಳಿದಾಗ ಈ ಉತ್ತರ ನೀಡಿದ್ದಾರೆ.
BREAKING NEWS : ಟೆಕ್ ದೈತ್ಯ ‘ಗೂಗಲ್’ ಉದ್ಯೋಗಿಗಳಿಗೆ ಬಿಗ್ ಶಾಕ್ ; 12 ಸಾವಿರ ನೌಕರರು ವಜಾ |Google layoff
Watch Video : ಸೂರತ್ ನಲ್ಲಿ ಶಿವನಿಗೆ ‘ಜೀವಂತ ಏಡಿ’ ಅರ್ಪಿಸಿದ ಭಕ್ತರು : ವಿಡಿಯೋ ವೈರಲ್