ಕೊರೊನಾ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಡಿಸೆಂಬರ್ ವೇಳೆಗೆ ಲಸಿಕೆ ಸಿದ್ಧ..! – Kannada News Now


India

ಕೊರೊನಾ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಡಿಸೆಂಬರ್ ವೇಳೆಗೆ ಲಸಿಕೆ ಸಿದ್ಧ..!

ಡಿಜಿಟಲ್ ಡೆಸ್ಕ್:‌ ಕೊರೊನಾ ಆತಂಕದಲ್ಲಿರುವವರಿಗೆ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಹಿಸುದ್ದಿ ನೀಡಿದ್ದು,
ಡಿಸೆಂಬರ್‌ ವೇಳೆಗಾಗ್ಲೇ ಲಸಿಕೆ ಸಿದ್ಧವಾಗಲಿದೆ. ಇನ್ನು 2021ರ ಮಾರ್ಚ್ ವೇಳೆಗೆ ಭಾರತಕ್ಕೆ ಕೋವಿಡ್-19 ಲಸಿಕೆ ಸಿಗಲಿದೆ ಎಂದು ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸುರೇಶ್ ಜಾಧವ್ ತಿಳಿಸಿದ್ದಾರೆ. ‌

‘ಹಲವು ತಯಾರಕರು ಕಾರ್ಯ ಪ್ರವೃತ್ತವಾಗಿ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮಾರ್ಚ್ 2021ರ ವೇಳೆಗೆ ಭಾರತಕ್ಕೆ ಕೋವಿಡ್-19 ಲಸಿಕೆಯನ್ನು ನೀಡಲಾಗುವುದು’ ಎಂದು ಐಸಿಸಿಐಡಿಡಿ ಸಹಯೋಗದಲ್ಲಿ ಹೀಲ್ ಫೌಂಡೇಶನ್ ಆಯೋಜಿಸಿದ್ದ ಇಂಡಿಯಾ ವ್ಯಾಕ್ಸಿನ್ ಆಕ್ಸೆಸಿಬಿಲಿಟಿ ಇ-ಸಮ್ಮಿಟ್ ನಲ್ಲಿ ಡಾ. ಜಾಧವ್ ಈ ರೀತಿ ಹೇಳಿದರು.

‘ಈಗಾಗಲೇ ಎರಡು ಹಂತದ ಪ್ರಯೋಗದಲ್ಲಿ ಮತ್ತು ಎರಡನೇ ಹಂತದ ಪ್ರಯೋಗದಲ್ಲಿ ಇಬ್ಬರು ಉತ್ಪಾದಕರು ಪಾಲ್ಗೊಳ್ಳುತ್ತಿರುವುದರಿಂದ ಲಸಿಕೆಯ ಅಭಿವೃದ್ಧಿಯತ್ತ ಭಾರತ ವೇಗವಾಗಿ ಸಾಗುತ್ತಿದೆ’. ಇನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವು ಪ್ರತಿ ವರ್ಷ 700-800 ಮಿಲಿಯನ್ ಲಸಿಕೆ ಡೋಸೇಜ್ ಗಳನ್ನು ಉತ್ಪಾದಿಸಬಹುದು ಎಂದು ಎಂದು ಜಾಧವ್ ಹೇಳಿದರು.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಯನ್ನ ತಯಾರಿಸುವುದಕ್ಕಾಗಿ ಪುಣೆ ಮೂಲದ ಔಷಧ ತಯಾರಕರು ಬ್ರಿಟಿಷ್-ಸ್ವೀಡಿಷ್ ಕಂಪನಿ ಆಸ್ಟ್ರಾಜೆನೆಕಾ ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆಕ್ಸ್ ಫರ್ಡ್ ನ ಕೋವಿಡ್-19 ಪ್ರಾಯೋಗಿಕ ಲಸಿಕೆಯ ವೈದ್ಯಕೀಯ ಪ್ರಯೋಗದ ಅಂತಿಮ ಹಂತವು ಈಗಾಗಲೇ ದೇಶದಲ್ಲಿ ಆರಂಭವಾಗಿದೆ ಎಂದರು.

“ಸೀರಮ್ ಇನ್ಸ್ಟಿಟ್ಯೂಟ್ ಗೆ ಸಂಬಂಧಿಸಿದಂತೆ, 2020ರ ಡಿಸೆಂಬರ್ ವೇಳೆಗೆ 60-70 ದಶಲಕ್ಷ ಡೋಸೇಜ್ ಲಸಿಕೆಗಳನ್ನು ನಾವು ಸಿದ್ಧಗೊಳಿಸಲಿದ್ದೇವೆ, ಆದರೆ ಪರವಾನಗಿ ಅನುಮತಿಯ ನಂತರ 2021ರಲ್ಲಿ ಅದು ಮಾರುಕಟ್ಟೆಗೆ ಬರಲಿದೆ. ನಂತರ ಸರ್ಕಾರದ ಅನುಮತಿ ಪಡೆದು ಹೆಚ್ಚು ಹೆಚ್ಚು ಡೋಸೇಜ್ ಗಳನ್ನು ಉತ್ಪಾದಿಸುತ್ತೇವೆ’ ಎಂದರು ಜಾದವ್.
error: Content is protected !!