ಸುಭಾಷಿತ :

Monday, February 24 , 2020 1:23 AM

ಬಿಗ್ ನ್ಯೂಸ್ : ಇನ್ಮುಂದೆ ಮಾಟಮಂತ್ರ, ದೆವ್ವ ಬಿಡಿಸುವುದು, ಸಿಡಿ, ಮಡೆಸ್ನಾನ ನಿಷೇಧ


Thursday, January 23rd, 2020 8:16 am

ಬೆಂಗಳೂರು : ರಾಜ್ಯದಲ್ಲಿ ಮೂಢ ನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿ ರಾಜ್ಯ ಬಿಜೆಪಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಮಾಟ ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮಸೂದೆ 2017 ಕಾಯ್ದೆಯನ್ನು ಯಾವುದೇ ಬದಲಾವಣೆಯಿಲ್ಲದೇ 2020 ಜನವರಿ 4 ರಿಂದ ಜಾರಿಗೆ ಬರುವಂತೆ ರಾಜ್ಯ ಬಿಜೆಪಿ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಶೀಘ್ರವೇ ಕರ್ನಾಟಕ ರಾಜ್ಯಪತ್ರ ಹೊರಡಿಸಲಿದೆ.

ಎಂಜಲೆಲೆಯ ಮೇಲೆ ಉರುಳುವ ಮಡೆ ಸ್ನಾನ, ಸಿಡಿ ಹಾಯುವುದು, ಬೆತ್ತಲೆ ಸೇವೆ, ಋತುಮತಿಯಾದಾಗ ಮತ್ತು ಗರ್ಭಿಣಿಯನ್ನು ಊರ ಹೊರಗಿಡುವ ಪದ್ಧತಿ, ವಶೀಕರಣ, ವಾಮಾಚಾರ, ದೆವ್ವ ಬಿಡಿಸುವದು ಸೇರಿದಂತೆ ಹಲವು ಪದ್ಧತಿಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ. ನಿಯಮ ಉಲ್ಲಂಘಿಸಿದ ಅಪರಾಧಿಗಳಿಗೆ ಒಂದು ವರ್ಷದಿಂದ 7 ವರ್ಷದವರೆಗೆ ಜೈಲು ಶಿಕ್ಷೆ, 5 ರಿಂದ 50 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions