ನವದೆಹಲಿ : ಸಾಂಪ್ರದಾಯಿಕವಾಗಿ ನಮ್ಮ ಸಮಾಜದಲ್ಲಿ ಮದುವೆಯ ಸಮಯದಲ್ಲಿ ಹುಡುಗ ಮತ್ತು ಹುಡುಗಿಯ ಜಾತಕಗಳು ಹೊಂದಾಣಿಕೆಯಾಗುತ್ತವೆ. ಹೆಚ್ಚಿನ ಗುಣಗಳನ್ನ ಪಡೆದ ನಂತರವೇ ಮದುವೆ ಮಾಡಲಾಗುತ್ತದೆ. ಆದ್ರೆ, ಕೇಂದ್ರ ಆರೋಗ್ಯ ಸಚಿವಾಲಯವು ಜಾತಕದ ಬದಲು ಹೆಲ್ತ್ ಕಾರ್ಡ್’ಗಳನ್ನ ತಯಾರಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯ ಈ ಬಗ್ಗೆ ಮಾಹಿತಿ ನೀಡಿದ್ದು, ಪುರುಷ ಮತ್ತು ಮಹಿಳೆ ಸೋಂಕಿಗೆ ಒಳಗಾಗಿದ್ರೆ, ಅದು ಅವರ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಈ ಕಾರ್ಡ್ ಮೂಲಕ ಅದನ್ನ ತಪ್ಪಿಸಬೋದು ಎಂದರು.
ಡಾ.ಮನ್ಸುಖ್ ಮಾಂಡವಿಯಾ ಮಾತನಾಡಿ, ಸಿಕಲ್ ಸೆಲ್ ಅನೀಮಿಯಾ ಇದೇ ರೀತಿಯ ಕಾಯಿಲೆಯಾಗಿದ್ದು, ಕುಡಗೋಲು-ಕಣ ರಕ್ತಹೀನತೆಯನ್ನ ಗಮನದಲ್ಲಿಟ್ಟುಕೊಂಡು ಬುಡಕಟ್ಟು ಜನರಿಗೆ ವಿಶೇಷ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ. ಇದಕ್ಕಾಗಿ, 2047ರ ಗಡುವನ್ನ ನಿಗದಿಪಡಿಸಲಾಗಿದೆ.
ಈ ಕಾಯಿಲೆ ಏನು.?
ಸಿಕಲ್ ಸೆಲ್ ಅನೀಮಿಯಾ ರೋಗವು ವಿಶೇಷವಾಗಿ ಬುಡಕಟ್ಟು ಮಕ್ಕಳಲ್ಲಿ ಸಾಮಾನ್ಯವಾಗಿದೆ. ಈ ರೋಗದ ಪರಿಣಾಮವು ಮಗು ಒಂದು ವಯಸ್ಸಿನ ಮಿತಿಯನ್ನ ದಾಟಿದ ನಂತ್ರ ಅವನ ಜೀವನದ ಸಾಧ್ಯತೆಗಳು ತುಂಬಾ ಕಡಿಮೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಪರೀಕ್ಷೆ ಮತ್ತು ಕಾರ್ಡ್ ಪರಿಚಯಿಸಲಾಗುತ್ತಿದೆ. ಇದರಿಂದ ಈ ರೀತಿಯ ಕಾಯಿಲೆ ಪತ್ತೆ ಹಚ್ಚಲು ಮತ್ತು ಬಾಲಕಿಯರ ಆರೋಗ್ಯ ಕಾರ್ಡ್ ಮಾಡಲಾಗುತ್ತಿದೆ
ಗಂಡ ಹೆಂಡತಿ ಪರೀಕ್ಷೆ ಮಾಡಿಸಿಕೊಳ್ಳಬೇಕು.!
ಹೆಚ್ಚಾಗಿ ಬುಡಕಟ್ಟು ಪ್ರದೇಶದ ಜನರು ಈ ರೋಗವನ್ನ ಹೊಂದಿದ್ದಾರೆ ಎಂದು ಡಾ.ಮನ್ಸುಖ್ ಮಾಂಡವಿಯಾ ಹೇಳಿದರು. ಹೀಗಾಗಿ, ಬುಡಕಟ್ಟು ಜನರಲ್ಲಿ ಈ ಪರೀಕ್ಷೆಯನ್ನ ಮೊದಲು ಪ್ರಾರಂಭಿಸಲಾಗುತ್ತದೆ. ಇಬ್ಬರ ವರದಿಗಳು ಪಾಸಿಟಿವ್ ಬಂದರೆ ಮಕ್ಕಳಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗುವುದು ಎಂದರು.
ಶೀಘ್ರದಲ್ಲೇ ಪರೀಕ್ಷಾ ವರದಿ.!
ಈ ಹಿಂದೆ ಸಿಕಲ್ ಸೆಲ್ ಅನೀಮಿಯಾ ಪರೀಕ್ಷೆಗೆ ಸಮಯ ಹಿಡಿಯುತ್ತಿತ್ತು. ಆದ್ರೆ, ಈಗ ತಕ್ಷಣದಿಂದಲೇ ಪರೀಕ್ಷೆ ನಡೆಯಲಿದ್ದು, ಫಲಿತಾಂಶ ಕೂಡ ಶೀಘ್ರದಲ್ಲೇ ಬರಲಿದೆ. ಇದರಿಂದ ವ್ಯಕ್ತಿ ಕುಡಗೋಲು-ಕಣ ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿದ್ದಾನೋ ಇಲ್ಲವೋ ಎಂಬುದು ತಿಳಿಯಲಿದೆ. ದೇಶದಲ್ಲಿ ಇಂತಹ 200 ಜಿಲ್ಲೆಗಳಲ್ಲಿ ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಹೆಚ್ಚು. ಇದರಲ್ಲಿ ಮಧ್ಯಪ್ರದೇಶ, ಗುಜರಾತ್, ಜಾರ್ಖಂಡ್, ಒಡಿಶಾ, ರಾಜಸ್ಥಾನ ಮತ್ತು ಛತ್ತೀಸ್ಗಢ ಸೇರಿವೆ.
BREAKING NEWS : ದಕ್ಷಿಣ ಫಿಲಿಪೈನ್ಸ್ ನಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ | Earthquake hits Philippines
ಪ್ರೀತಿಸಿ ಮದ್ವೆ ಆಗುವವರಿಗೆ ಅಡ್ಡಿ ಮಾಡಿದ್ದೇ ‘ಬಿಜೆಪಿ’ ಸಾಧನೆ : ರಮೇಶ್ ಕುಮಾರ್ ಕಿಡಿ
ಕೇಂದ್ರ ಬಜೆಟ್ 2023 : ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಮಿತಿ 15 ರಿಂದ 30 ಲಕ್ಷಕ್ಕೆ ಹೆಚ್ಚಳ