ಹಾಸನ: ಜಿಲ್ಲೆಯ ಹೊಳೇನರಸೀಪುರ ತಾಲೂಕಿನಲ್ಲಿ ಅತೀ ಹೆಚ್ಚು ಮದ್ಯವನ್ನು ಕುಡಿಯೋ ಬಾಜಿಯನ್ನು ಇಬ್ಬರು ವ್ಯಕ್ತಿಗಳು ಕಟ್ಟಿದ್ದಾರೆ. ಅದರಂತೆ ಕೇವಲ 30 ನಿಮಿಷದಲ್ಲೇ 90ಟಿ ಬರೋಬ್ಬರಿ 10 ಪ್ಯಾಕೇಟ್ ಕುಡಿದಿದ್ದಾರೆ. ಆದ್ರೇ ಮುಂದೆ ಏನಾಯ್ತು ಅಂತ ಮುಂದೆ ಸುದ್ದಿ ಓದಿ.
ಹಾಸನ ಜಿಲ್ಲೆಯ ಹೊಳೇನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಕ್ಕೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಂಬಂಧಿಕರ ಮನೆಗೆ ತಿಮ್ಮೇಗೌಡ(60) ತೆರಳಿದ್ದಾರೆ. ಹಬ್ಬಕ್ಕೆ ತೆರಳಿದ್ದಂತ ಅವರೊಂದಿಗೆ ದೇವರಾಜ್ ಹಾಗೂ ಕೃಷ್ಣೇಗೌಡ ಎಂಬುವರು ಮದ್ಯ ಕುಡಿಯೋ ಬಾಜಿಯನ್ನು ಕಟ್ಟಿದ್ದಾರೆ. ಯಾರು ಹೆಚ್ಚು ಕುಡಿಯುತ್ತಾರೋ ಅಂತ ಛಾಲೆಂಜ್ ಹಾಕಿಕೊಂಡಿದ್ದಾರೆ.
ಇಂತಹ ಬಾಜಿಯಲ್ಲಿ ತಾನೇ ಗೆಲ್ಲಬೇಕು ಅಂತ ತಿಮ್ಮೇಗೌಡ(60) ಅವರು ಅರ್ಧ ಗಂಟೆಯಲ್ಲಿ 90 ಎಂ.ಎಲ್ ನ 10 ಪ್ಯಾಕೇಟ್ ಮದ್ಯವನ್ನು ಸೇವಿಸಿದ್ದಾರೆ. ಹೀಗೆ 30 ನಿಮಿಷದಲ್ಲೇ 10 ಪ್ಯಾಕೇಟ್ ಎಣ್ಣೆ ಕುಡಿಯುತ್ತಿದ್ದಂತೇ, ತಿಮ್ಮೇಗೌಡ ಅಸ್ವಸ್ಥರಾಗಿದ್ದಾರೆ.
ಇದಷ್ಟೇ ಅಲ್ಲದೇ ಮದ್ಯದ ಕಿಕ್ ಹೆಚ್ಚಾಗಿ, ಆರೋಗ್ಯದ ಮೇಲೆ ಪರಿಣಾಮ ಬೀರಿದ ಕಾರಣ, ರಕ್ತದ ವಾಂತಿ ಕೂಡ ಮಾಡಿಕೊಂಡು ತೀವ್ರ ಅಸ್ವಸ್ಥರಾಗಿದ್ದಾರೆ. ಅವರನ್ನು ಹೇಗೋ ಅವರ ಮನೆಗೆ ಸ್ಥಳೀಯರು ತಲುಪಿಸಿದ್ದಾರೆ. ಆದ್ರೇ ತೀವ್ರ ಅಸ್ವಸ್ಥಗೊಂಡಿದ್ದಂತ ತಿಮ್ಮೇಗೌಡ ಸಾವನ್ನಪ್ಪಿದ್ದಾರೆ.
ಇನ್ನೂ ತಿಮ್ಮೇಗೌಡ ರಕ್ತವಾಂತಿಯನ್ನು ಮಾಡಿಕೊಂಡು ಅಸ್ವಸ್ಥರಾಗುತ್ತಿದ್ದಂತೆ, ಬಾಜಿ ಕಟ್ಟಿದ್ದಂತ ದೇವರಾಜ್ ಹಾಗೂ ಕೃಷ್ಣೇಗೌಡ ಎನ್ನುವರು ಅಲ್ಲಿಂದ ಪಾರಾರಿಯಾಗಿದ್ದಾರೆ.
ತಿಮ್ಮೇಗೌಡ ಸಾವನ್ನಪ್ಪಿದ ನಂತ್ರ ಅವರ ಸಾವಿಗೆ ದೇವರಾಜ್ ಕಾರಣ ಎಂಬುದನ್ನು ತಿಳಿದಂತ ಅವರ ಪುತ್ರಿ ಹೊಳೇನರಸೀಪುರ ಪೊಲೀಸ್ ಠಾಣೆಗೆ ತೆರಳಿ, ತಮ್ಮ ತಂದೆಯ ಸಾವಿಗೆ ದೇವರಾಜ್, ಕೃಷ್ಣೇಗೇಡ ಅವರೇ ಕಾರಣ ಅಂತ ದೂರು ನೀಡಿದ್ದಾರೆ. ಈ ದೂರುನ್ನು ಆಧರಿಸಿ ಹೊಳೇನರಸೀಪುರ ನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
‘ಭಾರತ ಚಂದ್ರನಲ್ಲಿ ಹೋಗಿದೆ, ಆದ್ರೆ ನಾವು ಪೈಸೆ ಪೈಸೆಗೂ ಭಿಕ್ಷೆ ಬೇಡ್ತಿದ್ದೇವೆ’ ; ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್
BREAKING: ತಲಕಾವೇರಿ ‘ತೀರ್ಥೋದ್ಭವ’ಕ್ಕೆ ಮುಹೂರ್ತ ನಿಗದಿ: ಅ.17ರಂದು ಮಧ್ಯರಾತ್ರಿ 1.27ಕ್ಕೆ ತಿರ್ಥೋದ್ಭವ