ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ

ಚಾಮರಾಜನಗರ : ಹುಟ್ಟುಹಬ್ಬದ ದಿನವೇ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟನೆ ಚಾಮರಾಜನಗರದ ಜೆಎಸ್ ಎಸ್ ಕಾಲೇಜಿನ ಹಾಸ್ಟೇಲ್​ನಲ್ಲಿ ನಡೆದಿದೆ. ಯಳಂದೂರು ತಾಲ್ಲೂಕಿನ ಅಂಬ್ಲೆ ಗ್ರಾಮದ ಚಂದನಾ(26) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದು, ಚಂದನಾ ಜೆಎಸ್ ಎಸ್ ಕಾಲೇಜ್ ನಲ್ಲಿ ಪದವಿ ವ್ಯಾಸಂಗ ಮುಗಿಸಿ ಅದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.