ಮೆಟ್ರೋ ಪ್ರಯಾಣಿಕರಿಗೆ ʼಸಿಹಿ ಸುದ್ಧಿʼ: ʼಸ್ಮಾರ್ಟ್ ಕಾರ್ಡ್‌ʼಗಳ ಅವಧಿ 10 ವರ್ಷ ಹೆಚ್ಚಳ..! – Kannada News Now


State

ಮೆಟ್ರೋ ಪ್ರಯಾಣಿಕರಿಗೆ ʼಸಿಹಿ ಸುದ್ಧಿʼ: ʼಸ್ಮಾರ್ಟ್ ಕಾರ್ಡ್‌ʼಗಳ ಅವಧಿ 10 ವರ್ಷ ಹೆಚ್ಚಳ..!

ಬೆಂಗಳೂರು: ಮೆಟ್ರೋ ನಿಗಮ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನ ನೀಡಿದ್ದು, ಈ ಮೊದಲು ಒಂದು ವರ್ಷಕ್ಕೆ ಸೀಮಿತವಾಗಿದ್ದ ಸ್ಮಾರ್ಟ್ ಕಾರ್ಡ್ ಗಳ ಅವಧಿಯನ್ನ 10 ವರ್ಷಗಳಿಗೆ ವಿಸ್ತರಿಸಿದೆ.

ಹೌದು, ಈ ಬಗ್ಗೆ ಮೆಟ್ರೋ ನಿಗಮ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಮೊದಲು ಸ್ಮಾರ್ಟ್ ಕಾರ್ಡ್ ಗಳ ಅವಧಿ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿತ್ತು. ಇದೀಗ ಈ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ಪಡೆದ ಹಳೆ ಕಾರ್ಡ್ ಗಳಿಗೂ ಇದು ಅನ್ವಯವಾಗಲಿದ್ದು, ಹಳೆಯ ಹಾಗೂ ಹೊಸ ಕಾರ್ಡ್‌ ಅಷ್ಟೇ ಅಲ್ಲ ಇನ್ಮುಂದೆ ಪಡೆಯುವ ಹೊಸ ಸ್ಮಾರ್ಟ್ ಕಾರ್ಡ್‌ಗಳಿಗೂ ಇದು ಅನ್ವಯವಾಗಲಿದೆ. ಅದ್ರಂತೆ, ಸ್ಮಾರ್ಟ್ ಕಾರ್ಡ್‍ಗಳನ್ನ 2030ರವರೆಗೂ ಬಳಸಲು ಅನುಮತಿ ನೀಡಲಾಗಿದೆ ಎಂದಿದೆ.

ರಾಷ್ಟ್ರ ರಾಜಧಾನಿ ಫುಲ್‌ ಟೈಟ್‌: ಸೆ.30ರವರೆಗೆ ಸಮಾವೇಶಗಳೊಂದಿಗೆ ಸಭೆ-ಸಮಾರಂಭಗಳಿಗೆ

ಅಂದ್ಹಾಗೆ, ಕೊರೊನಾ ಲಾಕ್‍ಡೌನ್ ಕೊಂಡುಕೊಂಡಿದ್ದ ಸಾವಿರಾರು ಪ್ರಯಾಣಿಕರ ಕಾರ್ಡ್ ಗಳ ಅವಧಿ ಮುಗಿದಿದೆ. ಹೀಗಾಗಿ ಹೊಸ ಸ್ಮಾರ್ಟ್ ಕಾರ್ಡ್ ಖರೀದಿಸಿ ಪ್ರಯಾಣ ಮಾಡಬೇಕಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಈ ಹಿನ್ನೆಲೆ ಹಳೆಯ ಸ್ಮಾರ್ಟ್ ಕಾರ್ಡ್ ಗಳನ್ನೂ ಒಳಗೊಂಡಂತೆ ಎಲ್ಲ ಕಾರ್ಡ್‍ಗಳ ಅವಧಿಯನ್ನು 10 ವರ್ಷಕ್ಕೆ ವಿಸ್ತರಿಸಲಾಗಿದೆ.

ರೈತರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ʼಗುಡ್‌ ನ್ಯೂಸ್‌ʼ: ಗೋಧಿ ಸೇರಿ ಐದು ಹಿಂಗಾರು ಬೆಳೆಗಳ ʼಬೆಂಬಲ ಬೆಲೆʼ ಹೆಚ್ಚಳ..!

 
error: Content is protected !!