BIG BREAKING : ಇನ್ಮುಂದೆ ರಾಜ್ಯದಲ್ಲಿ ‘ಯಾರು ಬೇಕಾದ್ರೂ ಭೂಮಿ ಖರೀದಿ’ಸಬಹುದು – ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ – Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada languageState

BIG BREAKING : ಇನ್ಮುಂದೆ ರಾಜ್ಯದಲ್ಲಿ ‘ಯಾರು ಬೇಕಾದ್ರೂ ಭೂಮಿ ಖರೀದಿ’ಸಬಹುದು – ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ

ಬೆಂಗಳೂರು : ರಾಜ್ಯದ ರೈತರ ವಿರೋಧದ ನಡುವೆಯೂ ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಮೂರು ಮಹತ್ವದ ತಿದ್ದುಪಡಿ ಕಾಯ್ದೆಗಳಿಗೆ ಕಲಾಪದಲ್ಲಿ ಸಮ್ಮತಿ ಸೂಚಿಸಲಾಗಿತ್ತು. ಅದರಲ್ಲಿ ಭೂ ತಿದ್ದುಪಡಿ ವಿದೇಯಕ ಕೂಡ ಒಂದಾಗಿತ್ತು. ಇಂತಹ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಜಾರಿಗೆ ತಂದಿದೆ. ಹೀಗಾಗಿ ರಾಜ್ಯದಲ್ಲಿ ಇನ್ಮುಂದೆ ಯಾರು ಬೇಕಾದ್ರೂ ಭೂಮಿಯನ್ನು ಖರೀದಿಸಬಹುದಾಗಿದೆ.

ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ ಅನುಮೋಧಿಸಿದ್ದಂತ ಕರ್ನಾಟಕ ಭೂ ಕಂದಾಯ(2ನೇ ತಿದ್ದುಪಡಿ) ಅಧಿನಿಯಮ-2020ಕ್ಕೆ ರಾಜ್ಯಪಾಲರ ಸಮ್ಮತಿಗಾಗಿ ಕಳುಹಿಸಿಕೊಡಲಾಗಿತ್ತು. ಇಂತಹ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ್ಕೆ ಅಕ್ಟೋಬರ್ ನಲ್ಲಿ ರಾಜ್ಯಪಾಲರು ಒಪ್ಪಿಗೆ ಕೂಡ ಸೂಚಿಸಿದ್ದರು.

ಇಂತಹ ಕರ್ನಾಟಕ ಭೂ ಕಂದಾಯ ಅಧಿನಿಯಮ-2020 ಅನ್ನು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಜಾರಿಗೆ ತಂದಿದೆ. ಇದರಿಂದಾಗಿ ಭೂ ಬಂಧಿತ ಸರ್ಕಾರಿ ಭೂಮಿ ಎಂದರೆ ಖಾಸಗಿ ವ್ಯಕ್ತಿ ಅಥವಾ ರಾಜ್ಯ ಸರ್ಕಾರದ ಇಲಾಖೆಗಳ ಅಥವಾ ಕೇಂದ್ರ ಸರ್ಕಾರದ ಇಲಾಖೆಗಳ ಅಥವಾ ಸ್ವಾಯತ್ತ ನಿಕಾಯಗಳ ಅಥವಾ ಶಾಸನ ಬದ್ಧ ಸಂಸ್ಥೆಗಳ ಮಾಲೀಕತ್ವದ ಭೂಮಿಯ ಗಡಿಯೊಳಗಿರುವ, ರಸ್ತೆಯ ಮೂಲಕ ಅಥವಾ ಕಾಲುಹಾದಿಯ ಮೂಲಕ ಅಥವಾ ಬಂಡಿಹಾದಿಯ ಮೂಲಕ ಸಾರ್ವಜನಿಕ ಪ್ರವೇಶವಿಲ್ಲದ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಉಪಯೋಗವಿಲ್ಲದ ಭೂಮಿಯನ್ನು ಖರೀದಿಸಬಹುದಾಗಿ ಎಂಬುದಾಗಿ ತಿಳಿಸಿದೆ.

ಆದ್ರೇ ನಗರ ಪ್ರದೇಶಗಳಲ್ಲಿನ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗಳಿಂದ 18 ಕಿಲೋಮೀಟರ್ ಗಳವರೆಗೆ, ಇತರ ನಗರ ಪಾಲಿಕೆಗಳ ವ್ಯಾಪ್ತಿಗಳಿಂದ 5 ಕಿಲೋ ಮೀಟರುಗಳವರೆಗಿನ ಭೂ ಬಂಧಿತ ಸರ್ಕಾರಿ ಖರಾಬು ಭೂಮಿಯನ್ನು 68ನೇ ಪ್ರಕರಣದ ಅಡಿಯಲ್ಲಿ ಸಾರ್ವಜನಿಕ ಹಕ್ಕನ್ನು ಅಂತ್ಯಗೊಳಿಸುವಿಕೆಯ ತರುವಾಯ ಸರ್ಕಾರವು ನಿಯಮಿಸಬಹುದಾದ ಅಂಥ ವಿಧಾನದಲಲ್ಲಿ ಆದ್ರೇ, ಚಾಲ್ತಿಯಲ್ಲಿರುವ ಮಾರುಕಟ್ಟೆ ಮಾರ್ಗಸೂಚಿ ಮೌಲ್ಯಕ್ಕೆ ಕಡಿಮೆಯಿಲ್ಲದ ಅಂಥ ದರಗಳಲ್ಲಿ ವಿಲೇವಾರಿ ಮಾಡಬಹುದಾಗಿದೆ.

ಇನ್ನೂ ಕರ್ನಾಟಕ ಭೂ ಕಂದಾಯ(ಎರಡನೇ ತಿದ್ದುಪಡಿ) ಅಧಿನಿಯಮ, 2020ರ ಪ್ರಾರಂಭಕ್ಕೆ ಮೊದಲು, ಸೊಸೈಟಿಗಳಿಗೆ, ಧರ್ಮಾರ್ಥ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ಅಥವಾ ಶೈಕ್ಷಣಿಕ ಸಂಸ್ಥೆಗಳಿಗೆ ಅಥವಾ ಕೃಷಿ ಅಥವಾ ಇತರ ಉದ್ದೇಶಗಳಿಗೆ ಹದಿನೈದು ವರ್ಷಗಳಿಗಿಂತ ಹೆಚ್ಚಿಗೆ ಗುತ್ತಿಗೆ ನೀಡಿದ ಸರ್ಕಾರಿ ಭೂಮಿಗಳ ಮಂಜೂರಾತಿಯನ್ನು ಸರ್ಕಾರಕ್ಕೆ ಅಗತ್ಯವಿಲ್ಲವೆಂದು ಖಚಿತಪಡಿಸಿಕೊಂಡ ತರುವಾಯ ಏಕಕಾಲ ಕ್ರಮಜರುಗಿಸುವಿಕೆಯಂತೆ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಅಂಥ ದರಗಳಲ್ಲಿ ಅದೇ ಉದ್ದೇಶಕ್ಕಾಗಿಯಾದಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಗಳಿಗೆ ಕಡಿಮೆಯಿಲ್ಲದ ದರದಲ್ಲಿ ಇತರ ಉದ್ದೇಶಕ್ಕಾಗಿಯಾದಲ್ಲಿ, ಚಾಲ್ತಿಯಲ್ಲಿರುವ ಮಾರುಕಟ್ಟೆ ಮಾರ್ಗಸೂಚಿ ಮೌಲ್ಯಕ್ಕೆ ಕಡಿಮೆಯಿಲ್ಲದ ದುಪ್ಪಟ್ಟು ದರದಲ್ಲಿ ಸರ್ಕಾರವು ವಿಲೇವಾರಿ ಮಾಡತಕ್ಕದ್ದು ಎಂಬುದಾಗಿ ತಿಳಿಸಿದೆ.

ವರದಿ : ವಸಂತ ಬಿ ಈಶ್ವರಗೆರೆerror: ಕದಿಯೋದು ಬಿಟ್ಟು ಸ್ವಂತವಾಗಿ ಬರೆಯೋದು ಕಲಿಯಿರಿ