ನವದೆಹಲಿ : ಫೆಬ್ರವರಿ 1ರಂದು ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಎರಡನೇ ದಿನದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣವನ್ನ ಮಾಡಿದರು. ಈ ಭಾಷಣದಲ್ಲಿ ಸರ್ಕಾರವು ರೈಲ್ವೆಗೆ 2.4 ಲಕ್ಷ ಕೋಟಿ ರೂ.ಗಳ ಬಜೆಟ್ ನಿಗದಿಪಡಿಸಿದೆ. ರೈಲ್ವೆಯ ಹೊಸ ಯೋಜನೆಗಳಿಗಾಗಿ ಬಜೆಟ್’ನಲ್ಲಿ 75,000 ಕೋಟಿ ರೂ.ಗಳ ನಿಧಿಯನ್ನ ಘೋಷಿಸಲಾಗಿದೆ. ಬಜೆಟ್ ಭಾಷಣದ ನಂತರ, ಪತ್ರಿಕಾಗೋಷ್ಠಿಯೂ ಪ್ರಾರಂಭವಾಗಿದೆ. ಸಮ್ಮೇಳನದಲ್ಲಿ ಬಜೆಟ್ ನಂತರ, ಹಣಕಾಸು ಸಚಿವರು ಮಾಧ್ಯಮಗಳ ಮೂಲಕ ಬಜೆಟ್ನ ಪ್ರಮುಖ ಅಂಶಗಳನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಇಲ್ಲಿಯವರೆಗೆ ವಂದೇ ಭಾರತ್ ಎಕ್ಸ್ಪ್ರೆಸ್’ನ್ನ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಅಂದರೆ ಐಸಿಎಫ್’ನಲ್ಲಿ ತಯಾರಿಸಲಾಗಿದೆ ಎಂದು ಹೇಳಿದರು. ಆದ್ರೆ, ಈಗ ಗುರಿಯನ್ನ ತಲುಪಲು, ವಂದೇ ಭಾರತ್ ಎಕ್ಸ್ ಪ್ರೆಸ್ ಬೋಗಿಗಳು ಇತರ ಕೋಚ್ ಕಾರ್ಖಾನೆಗಳಲ್ಲಿಯೂ ಸಿದ್ಧವಾಗಲಿವೆ.
ಅಮೃತ್ ಭಾರತ್ ಯೋಜನೆಯಡಿ ದೊಡ್ಡ ನಿಲ್ದಾಣಗಳು ಸೇರಿದಂತೆ ಒಟ್ಟು 1275 ನಿಲ್ದಾಣಗಳನ್ನ ಪುನರಾಭಿವೃದ್ಧಿ ಮಾಡಲಾಗುವುದು ಎಂದು ರೈಲ್ವೆ ಸಚಿವರು ಹೇಳಿದರು. ಗುಡ್ಡಗಾಡು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಇಂಧನ ಕಾರಿಡಾರ್ ಗಳಿಗಾಗಿ ಅಲ್ಟ್ರಾ ಮೆಗಾ ಸೌರ ಸ್ಥಾವರಗಳನ್ನು ನಿರ್ಮಿಸಲಾಗುವುದು.
ಹೈಡ್ರೋಜನ್ ರೈಲು ಈ ವರ್ಷ ಓಡಲಿದೆ.!
ಹೈಡ್ರೋಜನ್ ರೈಲುಗಳು 1950-60ರ ದಶಕದ ರೈಲುಗಳನ್ನ ಬದಲಾಯಿಸುತ್ತವೆ. ಹೈಡ್ರೋಜನ್ ರೈಲನ್ನ ಆರಂಭದಲ್ಲಿ ದೇಶದ 8 ವಿವಿಧ ಮಾರ್ಗಗಳಲ್ಲಿ ಓಡಿಸಲಾಗುವುದು ಎಂದು ರೈಲ್ವೆ ಸಚಿವರು ಸಮ್ಮೇಳನದಲ್ಲಿ ಹೇಳಿದರು. ಹಸಿರು ಬೆಳವಣಿಗೆಯ ಉಪಕ್ರಮದ ಅಡಿಯಲ್ಲಿ, ಹೈಡ್ರೋಜನ್ ರೈಲುಗಳು ಡಿಸೆಂಬರ್ 2023ರ ವೇಳೆಗೆ ಸಿದ್ಧವಾಗುತ್ತವೆ. ಇದನ್ನ ಹೆರಿಟೇಜ್ ಸರ್ಕ್ಯೂಟ್ ನಲ್ಲಿ ನಡೆಸಲಾಗುತ್ತದೆ. ಭಾರತಕ್ಕೆ ಮೊದಲು, ಚೀನಾ ಮತ್ತು ಜರ್ಮನಿಯಲ್ಲಿ ಹೈಡ್ರೋಜನ್ ರೈಲಿನ ಸೇವೆ ಪ್ರಾರಂಭವಾಗಿದೆ. 2018 ರಿಂದ ಜರ್ಮನಿಯಲ್ಲಿ ಹೈಡ್ರೋಜನ್ ರೈಲಿನ ಪರೀಕ್ಷೆ ನಡೆಯುತ್ತಿದೆ.
ನಾಲ್ಕು ಕಾರ್ಖಾನೆಗಳಲ್ಲಿ ‘ವಂದೇ ಭಾರತ್’ ನಿರ್ಮಾಣ
ಎಲ್ಲಾ ವಂದೇ ಭಾರತ್ ರೈಲುಗಳನ್ನು ರೈಲ್ವೆ ತನ್ನ ಕಾರ್ಖಾನೆಯಲ್ಲಿ ತಯಾರಿಸುತ್ತದೆ ಎಂದು ಅವರು ಹೇಳಿದರು. ವಂದೇ ಭಾರತ್ ರೈಲಿನ ಉತ್ಪಾದನೆ ಸೋನೆಪಥ್, ಲಾತೂರ್ ಮತ್ತು ರಾಯ್ ಬರೇಲಿಯಲ್ಲಿ ಪ್ರಾರಂಭವಾಗಲಿದೆ. ಮುಂದಿನ ಹಣಕಾಸು ವರ್ಷದ ವೇಳೆಗೆ, ವಾರಕ್ಕೆ ಎರಡರಿಂದ ಮೂರು ವಂದೇ ಭಾರತ್’ನ್ನ ಉತ್ಪಾದಿಸಲಾಗುವುದು. ಪ್ರಸ್ತುತ, ಮೆಟ್ರೋ ವಂದೇ ಭಾರತ್’ನ ವಿನ್ಯಾಸ ಮತ್ತು ಪರೀಕ್ಷೆ ನಡೆಯುತ್ತಿದೆ. ವಂದೇ ಭಾರತ್ ಮೆಟ್ರೋ ಉತ್ಪಾದನೆ 2024-25ರಲ್ಲಿ ಪ್ರಾರಂಭವಾಗಲಿದೆ.
ಕೇಂದ್ರ ಬಜೆಟ್ 2023 : ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಮಿತಿ 15 ರಿಂದ 30 ಲಕ್ಷಕ್ಕೆ ಹೆಚ್ಚಳ
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : 2 ಸಾವಿರ ಚಾಲಕ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ
ಜಾತಕದಿಂದಲ್ಲ ‘ಹೆಲ್ತ್ ಕಾರ್ಡ್’ ಮೂಲಕ ಮದುವೆ ನಡೆಯಲಿದೆ ; ಕೇಂದ್ರ ಸಚಿವರ ಮಹತ್ವದ ಘೋಷಣೆ, ‘ಹೊಸ ಕಾರ್ಡ್’ ವಿತರಣೆ