ಚಾಮರಾಜನಗರ: ತಾಳಿ ಕಟ್ಟುವ ಮುನ್ನ ವರನೊಬ್ಬ ಮತದಾನಮಾಡಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.

ಅಂದ ಹಾಗೇ ಇಂದು ದೀಪಿಕಾ ಎಂಬ ವಧು ಜೊತೆ ವರ ಚೇತನ್ ಅವರ ವಿವಾಹ ನಿಗದಿಯಾಗಿತ್ತು. 9 ಗಂಟೆಗೆ ಧಾರಾ ಮುಹೂರ್ತ ಇದ್ದ ಹಿನ್ನೆಲೆ ಅದಕ್ಕೂ ಮೊದಲು ವರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಮತದಾನದ ಬಳಿಕ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚೇತನ್ ನನ್ನ ಹಕ್ಕನ್ನು ನಾನು ಚಲಾಯಿಸಲು ಬಂದಿದ್ದೇನೆ. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ಎಲ್ಲರೂ ಬಂದು ಮತದಾನ ಮಾಡಿ ಅಂತ ಮನವಿ ಮಾಡಿದರು.

Share.
Exit mobile version