ಬೆಂಗಳೂರು: ರಾಜ್ಯದ ಜನರ ಉತ್ತಮ ಆರೋಗ್ಯಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರೂ ಆದ ಮಲ್ಲೇಶ್ವರ ಶಾಸಕ ಡಾ ಸಿ ಎನ್ ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.
ಮತ್ತೀಕೆರೆ ವಾರ್ಡ್ ನ ಎ.ಕೆ. ಕಾಲೊನಿಯಲ್ಲಿ ಸ್ಥಾಪಿಸಿರುವ “ನಮ್ಮ ಕ್ಲಿನಿಕ್” ಉದ್ಘಾಟನೆ ಮಾಡಿ ಅವರು ಮಾತನಾಡಿ, ನಗರದಲ್ಲಿ ಜನರಿಗೆ ಆರೋಗ್ಯ ಸೌಲಭ್ಯ ಒದಗಿಸುವುದಕ್ಕಾಗಿ ಪ್ರತಿ ವಾರ್ಡ್ ನಲ್ಲೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಒಂದು “ನಮ್ಮ ಕ್ಲಿನಿಕ್” ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಮಲ್ಲೇಶ್ವರ ಕ್ಷೇತ್ರದಲ್ಲಿ 5 ವಾರ್ಡ್ ಗಳಲ್ಲಿ “ನಮ್ಮ ಕ್ಲಿನಿಕ್” ಗಳು ಇಷ್ಟರಲ್ಲೇ ಕಾರ್ಯಾರಂಭವಾಗಲಿವೆ. ಉಳಿದ ಎರಡು ವಾರ್ಡ್ ಗಳಲ್ಲಿ “ನಮ್ಮ ಕ್ಲಿನಿಕ್” ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ನಾರಾಯಣ ತಿಳಿಸಿದರು.
ಆರೋಗ್ಯ ಸಮಸ್ಯೆಗಳು ಗಂಭೀರವಾದಾಗ ಆಸ್ಪತ್ರೆಗೆ ಹೋಗುವುದಕ್ಕಿಂತ ಆರಂಭದ ಹಂತದಲ್ಲೇ ಎಚ್ಚರಿಕೆ ವಹಿಸುವುದು ಸೂಕ್ತ. ಇದಕ್ಕೆ ಪೂರಕವಾಗಿ ಆಯಾಯ ವಾರ್ಡ್ ನಲ್ಲೇ ಗುಣಮಟ್ಟದ ಆರೋಗ್ಯ ಸೇವೆಯನ್ನು ಜನರಿಗೆ ಲಭ್ಯವಾಗಿಸಲು “ನಮ್ಮ ಕ್ಲಿನಿಕ್” ವ್ಯವಸ್ಥೆ ಅನುಕೂಲ ಮಾಡಿಕೊಡುತ್ತದೆ ಎಂದರು.
ಮಾಜಿ ಪಾಲಿಕೆ ಸದಸ್ಯರಾದ ಜಯಪ್ರಕಾಶ, ಜಯಪಾಲ್, ವೇಲು, ಮುನಿಸ್ವಾಮಿಗೌಡ ಮತ್ತಿತರರು ಇದ್ದರು.
ಬ್ರಾಂಡ್ ಬೆಂಗಳೂರಿಗಾಗಿ ಬಿಜೆಪಿ ಸರ್ಕಾರ ಬದ್ಧ: ಸಚಿವ ಡಾ.ಕೆ.ಸುಧಾಕರ್