ಪ್ರಿನ್ಸ್ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ಸಿನಿಮಾ ಸರ್ಕಾರು ವಾರಿ ಪಾಟ ಈ ವಾರ ತೆರೆಗಪ್ಪಳಿಸಿದೆ. ಒಂದಷ್ಟು ಸ್ಯಾಂಪಲ್ಸ್ ನಿಂದಲೇ ಚಿತ್ರಪ್ರೇಮಿಗಳಲ್ಲಿ ಕ್ರೇಜಿ ಹೆಚ್ಚಿಸಿದ್ದ ಪ್ರಿನ್ಸ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸೌಂಡ್ ಮಾಡಿದೆ. ಆದ್ರೆ ಕೆಜಿಎಫ್ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ವಿಫಲವಾಗಿದೆ.
ಮೇ 13ರಂದು ಸರ್ಕಾರು ವಾರಿ ಪಾಟ ವಿಶ್ವಾದ್ಯಂತ ರಿಲೀಸ್ ಆಗಿತ್ತು. ವರ್ಲ್ಡ್ ವೈಡ್ ತೆರೆಗೆ ಎಂಟ್ರಿ ಕೊಟ್ಟಿದ್ದ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂಬ ಕ್ಯೂರಿಯಾಸಿಟಿಯಂತೂ ಪ್ರಿನ್ಸ್ ಅಭಿಮಾನಿಗಣದಲ್ಲಿತ್ತು. ಆದ್ರೆ ಸರ್ಕಾರು ವಾರಿ ಪಾಟ ಆ ನಿರೀಕ್ಷೆಯನ್ನು ಹುಸಿ ಮಾಡಿದೆ. ಮೊದಲ ದಿನವೇ ಸಿನಿಮಾ 100 ಕೋಟಿ ಲೂಟಿ ಮಾಡಿದೆ. ಆದ್ರೆ ಕೆಜಿಎಫ್ ಮೊದಲ ದಿನವೇ 200 ಕೋಟೆಯನ್ನು ತನ್ನ ಜೇಬಿಗೆ ಇಳಿಸಿಕೊಂಡಿತ್ತು.
ಗೀತ ಗೋವಿಂದಂ ನಿರ್ದೇಶಕ ಪರಶುರಾಮ್ ಆಕ್ಷನ್ ಕಟ್ ಹೇಳಿದ್ದ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ. ತಮನ್ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ.