ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಹೆಚ್ಚಿನ ಯುವ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಕಾರ್ಯಕ್ರಮ ತನ್ನ ಗುರಿಯನ್ನು ವಿಸ್ತರಿಸಿದೆ. ಎಲ್ಲರೂ ಈ ಕಾರ್ಯಕ್ರಮದ ಪ್ರಯೋಜನ ಪಡೆದು ಸ್ವಂತ ಉದ್ಯೋಗ ಶುರು ಮಾಡಬಹುದು. ಈ ಯೋಜನೆಯಡಿ ಬ್ಯಾಂಕ್ ಯಾವುದೇ ಭದ್ರತೆ ಇಲ್ಲದೆ ಸುಲಭವಾಗಿ ನಿಮಗೆ ಸಾಲ ನೀಡುತ್ತದೆ.
ಎಲ್ಲ ಬ್ಯಾಂಕ್ ಗಳು ಈ ಯೋಜನೆಯಡಿ ಸುಲಭವಾಗಿ ಸಾಲ ನೀಡುವುದಿಲ್ಲ. ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಯಾವ ಬ್ಯಾಂಕ್ ಸುಲಭವಾಗಿ ಸಾಲ ನೀಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳುವುದು ಒಳ್ಳೆಯದು. ಪ್ರಧಾನಮಂತ್ರಿ ಎಂಪ್ಲಾಯ್ಮೆಂಟ್ ಜನರೇಷನ್ ಕಾರ್ಯಕ್ರಮದಡಿ ಉದ್ಯೋಗ ಶುರು ಮಾಡುವ ಮುನ್ನ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಅರ್ಜಿಯಲ್ಲಿ ಯಾವ ಬ್ಯಾಂಕ್ ನಿಂದ ಸಾಲ ಪಡೆಯುತ್ತೀರೋ ಎಂಬುದನ್ನು ನೀವು ನಮೂದಿಸಬೇಕಾಗುತ್ತದೆ.
ನೀವು ಬ್ಯಾಂಕ್ ಆಫ್ ಮಹಾರಾಷ್ಟ್ರ ಗೆ ಮೊದಲು ಆದ್ಯತೆ ನೀಡುವುದು ಒಳ್ಳೆಯದು. ಈ ಯೋಜನೆಯಡಿಯಲ್ಲಿ ಸಾಲ ನೀಡುವ ಉಳಿದ ಬ್ಯಾಂಕ್ ಗಳಿಗೆ ಹೋಲಿಸಿದರೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ. ಎಲ್ಲವನ್ನೂ ಪರಿಗಣಿಸಿದರೆ ಬ್ಯಾಂಕ್ ಆಫ್ ಮಹಾರಾಷ್ಟ್ರ ದಾಖಲೆ ಚೆನ್ನಾಗಿಲ್ಲ. ಆದರೆ ಯುವಕರಿಗೆ ಸಾಲ ನೀಡುವ ವಿಷಯದಲ್ಲಿ ಒಳ್ಳೆ ಕೆಲಸ ಮಾಡ್ತಿದೆ. ವಿಜಯ ಬ್ಯಾಂಕ್ ನಲ್ಲಿ ಕೂಡ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಈ ಬ್ಯಾಂಕ್ ಶೇ7.21 ರಷ್ಟು ತನ್ನ ಗುರಿ ತಲುಪಿದೆ.
ಸಾಲ ಪಡೆಯುವ ವೇಳೆ ಸಾಮಾನ್ಯವಾಗಿ ಎಲ್ಲರೂ ರಾಷ್ಟ್ರೀಕೃತ ಬ್ಯಾಂಕ್ ಮೇಲೆ ಹೆಚ್ಚಿನ ಗಮನ ನೀಡ್ತಾರೆ. ಆದರೆ ಸ್ಥಳೀಯ ಬ್ಯಾಂಕ್ ಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕಾಗುತ್ತದೆ. ಗ್ರಾಮೀಣ ಹಾಗೂ ಪ್ರಾದೇಶಿಕ ಬ್ಯಾಂಕ್ ಗಳು ಈ ಯೋಜನೆಯಡಿ ಸಾಲ ನೀಡುವ ಅಂಕಿ ಅಂಶದಲ್ಲಿ ಮುಂದಿದೆ. ತ್ರಿಪುರ ಗ್ರಾಮೀಣ ಬ್ಯಾಂಕ್, ಒರಿಸ್ಸಾ ಗ್ರಾಮೀಣ ಬ್ಯಾಂಕ್, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಮಿಜೋರಾಂ ಗ್ರಾಮೀಣ ಬ್ಯಾಂಕ್ ಗಳು ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿದೆ.
ಗ್ರಾಮ ಪಂಚಾಯಿತಿಗಳ ಸಬಲೀಕರಣವೇ ರಾಜ್ಯ ಸರ್ಕಾರದ ಗುರಿ : ಮುಖ್ಯಮಂತ್ರಿ ಬೊಮ್ಮಾಯಿ
ಇಂದು, ನಾಳೆ ರಾಜ್ಯದಲ್ಲಿ ಸಾಧಾರಣ ಮಳೆ ಮುನ್ಸೂಚನೆ : ಹವಾಮಾನ ಇಲಾಖೆಯಿಂದ ಮುನ್ಸೂಚನೆ