ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಸದ ʼಸುರೇಶ್‌ ಅಂಗಡಿʼ ಅಂತ್ಯಕ್ರಿಯೆ..! – Kannada News Now


India

ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಸದ ʼಸುರೇಶ್‌ ಅಂಗಡಿʼ ಅಂತ್ಯಕ್ರಿಯೆ..!

ನವದೆಹಲಿ: ಕೋವಿಡ್‌ನಿಂದ ನವದೆಹಲಿಯ ಏಮ್ಸ್‌ ಅಸ್ಪತ್ರೆಯಲ್ಲಿ ಬುಧವಾರ ನಿಧನರಾದ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯ್ತು.

ಲಿಂಗಾಯಿತ ವೀರಶೈವ ಸಂಪ್ರದಾಯದಂತೆ ಸಂಸದರ ಅಂತ್ಯಕ್ರಿಯೆ ನಡೆದಿದ್ದು, ಅಂತ್ಯ ಸಂಸ್ಕಾರದಲ್ಲಿ ಕುಟುಂಬಸ್ಥರು ಸೇರಿ ಆಪ್ತರು ಭಾಗಿಯಾಗಿದ್ರು.

ಅಂದ್ಹಾಗೆ, ಮೃತರಾಗಿರುವ ಸಚಿವರ ದೇಹವನ್ನ ಬೆಳಗಾವಿಗೆ ತರಲು ಈಗ ಕೊರೊನಾ ನಿಯಮಗಳು ಅಡ್ಡಿಯಾಗಿದೆ. ಸೋಂಕಿತರು ಎಲ್ಲಿ ಸಾವನ್ನಪ್ಪುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ನಿಯಮವಿರುವ ಹಿನ್ನೆಲೆ ಅವರ ಶರೀರವನ್ನು ಹುಟ್ಟೂರಿಗೆ ತರಲು ಸಾಧ್ಯವಾಗಿಲ್ಲ.
error: Content is protected !!