ಕೆಎನ್ಎನ್ಡಿಜಿಟಲ್ಡೆಸ್ಕ್: ಬಣ್ಣದ ಲೋಕಕ್ಕೆ ಕಾಸ್ಟಿಂಗ್ ಕೌಚ್ ಎಂಬ ಪೆಡಂಭೂತ ವಕ್ಕರಿಸಿರುವುದು ಹಳೆಯ ವಿಷ್ಯ. ನಟಿಯರು ಅವಕಾಶಕ್ಕಾಗಿ ಮಂಚ ಏರಲೇಬೇಕು ಎಂಬ ವಿಷ್ಯ ಈಗಾಗಲೇ ಜಗತ್ ಜಾಹೀರಾತಾಗಿದೆ. ಆದ್ರೆ ನಿರ್ದೇಶಕನೊಬ್ಬ ಕನ್ನಡದ ಖ್ಯಾತ ನಟಿಯೇ ನನ್ನನ್ನು ಮಂಚಕ್ಕೆ ಕರೆದಿದ್ಲು ಎಂದು ನಾಲಿಗೆ ಹರಿಗೆ ಹರಿಬಿಟ್ಟಿದ್ದಾನೆ.
ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ, ನಾಲ್ಕೈದು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಗೀತ ಕೃಷ್ಣ ಎಂಬ ವ್ಯಕ್ತಿ, ಕನ್ನಡ ಚಿತ್ರರಂಗದ ಬಗ್ಗೆ ಬಾಯಿಗೆ ಬಂದ ರೀತಿ ಮಾತಾನಾಡಿದ್ದಾನೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ, ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿರುವ ಈತ, ತಮಿಳುಚಿತ್ರರಂಗದವರು ತುಂಬಾ ಅಸಹ್ಯ, ಕನ್ನಡದವರು ಇನ್ನೂ ಅಸಹ್ಯ ಎಂದಿದ್ದಾನೆ.
ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತೆಮಿಳು ಚಿತ್ರರಂಗದಲ್ಲಿ. ಕನ್ನಡದ ಖ್ಯಾತ ನಟಿಯಿಂದ ತಮಗೆ ಈ ಅನುಭವ ಆಗಿದೆ. ನನ್ನನ್ನು ಆಕೆ ಮಂಚಕ್ಕೆ ಕರೆದಿದ್ಲು. ಅವಕಾಶಕ್ಕಾಗಿ ಕನ್ನಡದಲ್ಲಿ ಮಂಚ ಏರಲೇಬೇಕು. ಆದ್ರೆ ನಾನು ಕನ್ನಡದ ಸಹವಾಸ ಬೇಡ ಎಂದು ಓಡಿ ಬಂದೆ ಎಂದು ಕನ್ನಡ ಚಿತ್ರರಂಗದ ಬಗ್ಗೆ ತುಚ್ಚವಾಗಿ ಹೇಳಿದ್ದಾನೆ.
ಈ ಹಿಂದೊಮ್ಮೆ ಇದೇ ತೆಲುಗು ಚಿತ್ರರಂಗದ ಪೋಷಕ ನಟ ಡಾ.ಸಾಹಸಿಂಹನ ವಿಷ್ಣುವರ್ಧನ್ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ. ಆ ಬಳಿಕ ಕನ್ನಡಿಗರ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ್ದ. ಈ ವಿಷ್ಯ ಇನ್ನೂ ಹಸಿರಿರುವಾಗಲೇ ಈ ರೀತಿ ಹೇಳಿಕೆ ನೀಡಿರುವುದು ಕನ್ನಡಿಗರ ಕಣ್ಣನ್ನು ಕೆಂಪಾಗಿಸಿದೆ.