ಬೆಂಗಳೂರು: ಮೀನುಗಾರಿಕೆ ಇಲಾಖೆ ವತಿಯಿಂದ 2024-25ನೇ ರಾಜ್ಯ ವಲಯ ವಿವಿಧ ಯೋಜನೆಗಳಿಗೆ ಸಹಾಯಧನ ನೀಡಲು ಅರ್ಹ ಮೀನುಗಾರ ಫಲಾನುಭವಿಗಳು, ಮೀನುಗಾರರ ಸಹಕಾರ ಸಂಘಗಳು, ನೋಂದಾಯಿತ ಖಾಸಗಿ ಮೀನುಮರಿ ಪಾಲನಾ ಕೇಂದ್ರಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

2024-25ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ ನದಿ, ಕೆರೆ, ಜಲಾಶಯಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಹರಿಗೋಲು ವಿತರಣೆ, ಸರ್ಕಾರಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ, ಖಾಸಗಿ ನೋಂದಾಯಿತ ಮೀನುಮರಿ ಕೇಂದ್ರಗಳಿAದ ಮೀನುಮರಿ ಖರೀದಿಸುವ ವ್ಯಕ್ತಿ, ಮೀನುಗಾರರ ಸಹಕಾರ ಸಂಘಗಳಿಗೆ, ನೋಂದಾಯಿತ ಖಾಸಗಿ ಮೀನುಮರಿ ಪಾಲನಾ ಕೇಂದ್ರಗಳಿಗೆ ಮೀನುಮರಿ ಖರೀದಿಸಲು ಸಹಾಯಧನ ಹಾಗೂ ಇಲಾಖಾ ಕೆರೆ, ಜಲಾಶಯ ಮತ್ತು ಗ್ರಾಮಪಂಚಾಯಿತಿ ಕೆರೆಗಳ ಅಂಚಿನಲ್ಲಿ ಕೊಳಗಳನ್ನು ನಿರ್ಮಿಸಿ ಮೀನುಮರಿ ಪಾಲನೆ ಮಾಡಲು ಕೆರೆ, ಜಲಾಶಯ ಗುತ್ತಿಗೆಗೆ ಪಡೆದ ಮೀನುಗಾರಿಕೆ ಸಹಕಾರ ಸಂಘ/ವ್ಯಕ್ತಿಗಳಿಗೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಮೀನುಗಾರ ಫಲಾನುಭವಿಗಳು, ಮೀನುಗಾರರ ಸಹಕಾರ ಸಂಘಗಳು, ನೋಂದಾಯಿತ ಖಾಸಗಿ ಮೀನುಮರಿ ಪಾಲನಾ ಕೇಂದ್ರದವರು ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳೊಂದಿಗೆ ಇದೇ ಜುಲೈ 20 ರೊಳಗೆ ಆನ್‌ಲೈನ್ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು.

Share.
Exit mobile version