ಬೆಳಗಾವಿ: ಆ ಗುತ್ತಿಗೆದಾರ ಹೆಂಡತಿಯ ಕಾಟದಿಂದ ಬೇಸತ್ತಿದ್ದನು. ಇದೇ ಕಾರಣದಿಂದಾಗಿ ಗೋವಾದ ಕ್ಯಾಸಿನೋಗೆ ತೆರಳೋ ಯೋಜನೆಯಲ್ಲಿ 26 ಲಕ್ಷ ಹಣವನ್ನು ಕಾರಿಗೆ ತುಂಬಿಕೊಂಡು ತೆರಳಿಯೇ ಬಿಟ್ಟಿದ್ದನು. ಆದ್ರೇ ದಾರಿ ಮಧ್ಯೆ ತಟ್ಟಿದ್ದು ಮಾತ್ರ ಚುನಾವಣಾ ನೀತಿ ಸಂಹಿತೆ ಬಿಸಿ. ಏನಾಯ್ತು ಅಂತ ಮುಂದೆ ಓದಿ.
ಮುಂಬೈನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದಂತ ವ್ಯಕ್ತಿಯೊಬ್ಬ, ಹೆಂಡತಿಯ ಕಾಟದಿಂದ ಬೇಸತ್ತಿದ್ದನು. ಈ ಕಾರಣದಿಂದಾಗಿಯೇ ಗೋವಾದಲ್ಲಿನ ಕ್ಯಾಸಿನೋಗೆ ತೆರಳೋ ಪ್ಲಾನ್ ಮಾಡಿದ್ದನು. ಅದಕ್ಕಾಗಿ ಗೂಗಲ್ ಮ್ಯಾಪ್ ಸರ್ಚ್ ಮಾಡಿ, ಮುಂಬೈನಿಂದ ಗೋವಾಗೆ ತನ್ನ ಕಾರಿನಲ್ಲಿ ಮನೆಯಿಂದ 26 ಲಕ್ಷ ಹಣ ತುಂಬಿಕೊಂಡು ತೆರಳಿದನು.
ಬೆಳಗಾವಿಯ ಕರ್ನಾಟಕ ಚೌಕ್ ಬಳಿಯಲ್ಲಿ ಮುಂಬೈನಿಂದ ಬರುತ್ತಿದ್ದಂತ ಕಾರುಗಳನ್ನು ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಚೆಕ್ ಮಾಡಲಾಗುತ್ತಿತ್ತು. ಮುಂಬೈನಿಂದ 26 ಲಕ್ಷ ಕಾರಿನಲ್ಲಿ ತುಂಬಿಕೊಂಡು ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದಂತ ಗುತ್ತಿಗೆದಾರನ ಕಾರು ಚೆಕ್ ಮಾಡಿದಾಗ ಹಣ ಪತ್ತೆಯಾಗಿದೆ.
ಈ ಬಗ್ಗೆ ಚೆಕ್ ಪೋಸ್ಟ್ ನಲ್ಲಿದ್ದಂತ ಸಿಬ್ಬಂದಿ ವಿಚಾರಣೆ ನಡೆಸಿದಾಗ, ತಾನು ಹೆಂಡತಿಯ ಕಾಟ ತಾಳಲಾರದೇ ನೆಮ್ಮದಿ ಅರಸಿ ಗೋವಾಕ್ಕೆ ತೆರಳುತ್ತಿದ್ದೆನು. ಮುಂಬೈನಲ್ಲಿ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿದ್ದೇನೆ. ಆನ್ ಲೈನ್ ಪೇಮೆಂಟ್ ಮಾಡಿದರೇ ಪತ್ನಿ ಚೆಕ್ ಮಾಡುತ್ತಾಳೆ ಎನ್ನುವ ಕಾರಣ ಕಾರಿನಲ್ಲಿ 26 ಲಕ್ಷ ಕ್ಯಾಶ್ ತುಂಬಿಕೊಂಡು ಬಂದಿದ್ದೆನು. ತಪ್ಪಾಗಿ ಸಿಟಿಗೆ ಬಂದು ಬಿಟ್ಟೆ. ಕ್ಷಮಿಸಿ ಎಂಬುದಾಗಿ ಹೇಳಿದ್ದಾನೆ.
ಆತನ ವಿಷಯ ಕೇಳಿದಂತೆ ಬೆಳಗಾವಿಯ ಚೆಕ್ ಪೋಸ್ಟ್ ಪೊಲೀಸರು, ಆತನ ಹಣದ ಬಗ್ಗೆ ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಈಗ ಹೆಂಡತಿಯ ಕಾಟಕ್ಕೆ ತಾಳಲಾರದೇ 26 ಲಕ್ಷ ಹಣ ತುಂಬಿಕೊಂಡು ಗೋವಾಗೆ ಹೊರಟಿದ್ದಂತ ಗುತ್ತಿಗೆದಾರನಿಗೆ ಐಟಿ ಅಧಿಕಾರಿಗಳ ಕಾಟ ಶುರುವಾಗಿದೆ.
‘ಕಾಂಗ್ರೆಸ್ ಪಕ್ಷದ ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದವರಿಗೆ ಯಾರಿಗೆ ನೀಡಿದರೂ ಒಟ್ಟಾಗಿ ಕೆಲಸ – ಡಾ.ಯೋಗೀಶ್ ಬಾಬು
ಚಿತ್ರದುರ್ಗ: ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ಟಿಕೆಟ್ ನೀಡಲು ಕರೆದಿದ್ದಂತ ಸಂದರ್ಭದಲ್ಲಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದಂತ ಮೊಳಕಾಲ್ಮೂರು ಕ್ಷೇತ್ರದ ಯಾರಿಗಾದರೂ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಆದ್ರೇ ಈಗ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಿದರೇ ಆಗ ಉತ್ತರಿಸುವೆ ಎಂಬುದಾಗಿ ಮೊಳಕಾಲ್ಮೂರು ಕಾಂಗ್ರೆಸ್ ಪಕ್ಷದ ( Congress Party ) ಟಿಕೆಟ್ ಆಕಾಂಕ್ಷಿ ಡಾ.ಯೋಗೀಶ್ ಬಾಬು ( Dr.Yogish Babu ) ಪರೋಕ್ಷವಾಗಿ ಎನ್ ವೈ ಗೋಪಾಲಕೃಷ್ಣ ವಿರುದ್ಧ ಗುಡುಗಿದ್ದಾರೆ.
ಇಂದು ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಭಾರತ್ ಜೋಡೋ ಯಾತ್ರೆಯ ವೇಳೆಯಲ್ಲಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಯಾತ್ರೆ ಬಂದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನನ್ನ ಹಾಗೂ ತಿಪ್ಪೇಸ್ವಾಮಿಯನ್ನು ಕೈ ಹಿಡಿದು ಎತ್ತಿ ಇಬ್ಬರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸುವಂತೆ ಹೇಳಿದ್ದರು ಎಂದರು.
ಬದಲಾದ ಸನ್ನಿವೇಶದಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಪಕ್ಷ ತೊರೆದಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ಡಾ.ತಿಪ್ಪೇಸ್ವಾಮಿ, ಸೋಮಣ್ಣ, ನಾನು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದೇವೆ. ಇವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಮುಂದುವರೆದು ಮಾತನಾಡಿದಂತ ಅವರು ಈಗ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಿದರೇ ಅವಾಗ ಉತ್ತರಿಸುವೆ ಎಂಬುದಾಗಿ ಪರೋಕ್ಷವಾಗಿ ಬಿಜೆಪಿ ತೊರೆದು, ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂಬುದಾಗಿ ಹೇಳುತ್ತಿರುವಂತ ಎನ್ ವೈ ಗೋಪಾಲಕೃಷ್ಣ ವಿರುದ್ಧ ಮೊಳಕಾಲ್ಮೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವಂತ ಡಾ.ಯೋಗೀಶ್ ಬಾಬು ಗುಡುಗಿದರು.
ಅಂದಹಾಗೇ ಮೊಳಕಾಲ್ಮೂರು ಕ್ಷೇತ್ರದಲ್ಲಿ ( Molakalmuru Assembly Constituency ) ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಡಾ.ಯೋಗೀಶ್ ಬಾಬುಗೆ ಫಿಕ್ಸ್ ಎಂಬುದಾಗಿ ತಿಳಿದಂತ ಮಾಜಿ ಶಾಸಕ ತಿಪ್ಪೇಸ್ವಾಮಿ ಕೈಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದರು. ಅವರು ಬಿಜೆಪಿಯಿಂದ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಬಿಜೆಪಿ ಸೇರಿದ್ದಂತ ಶಾಸಕ ಎನ್ ವೈ ಗೋಪಾಲಕೃಷ್ಣ, ಮರಳಿ ಗೂಡಿಗೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣದಿಂದ ಬಿಜೆಪಿಯಿಂದ ಟಿಕೆಟ್ ಸಿಗೋ ಡೌಟ್ ನಲ್ಲಿರುವಂತ ಅವರು, ಕಮಲಕ್ಕೆ ಗುಡ್ ಬೈ ಹೇಳಿದ್ದರು.
ಆದ್ರೇ ಕಾಂಗ್ರೆಸ್ ಪಕ್ಷದಿಂದ ಎನ್ ವೈ ಗೋಪಾಲಕೃಷ್ಣ ಸೇರ್ಪಡೆಗೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಮೊಳಕಾಲ್ಮೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯೋ ಯೋಚನೆಯಲ್ಲಿರುವಂತ ಅವರಿಗೆ, ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯೋಗೀಶ್ ಬಾಬು ಮುಳ್ಳಾಗಿದ್ದಾರೆ. ಅಲ್ಲದೇ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಡಾ.ಯೋಗೀಶ್ ಬಾಬುಗೆ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ನೀಡುವ ಅಭಯವನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ
ರಾಯಚೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 32.42 ಲಕ್ಷ ಹಣ ಸೀಜ್
BIGG NEWS : “ಹೊಸ ಬೆದರಿಕೆಗಳನ್ನ ಎದುರಿಸಲು ಸಿದ್ಧರಾಗಿರಿ” ; ಕಮಾಂಡರ್’ಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ