ಮೈಸೂರು : ಗ್ಯಾರಂಟಿ ಯೋಜನೆಯಿಂದ ಖಜಾನೆ ಖಾಲಿ ಆಗಿದೆ ಎಂದರು. ಖಜಾನೆ ಖಾಲಿಯಾಗಿದ್ದಾರೆ 2578 ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಉದ್ಘಾಟನೆ ಆಗುತ್ತಿರಲಿಲ್ಲ. ಮೈಸೂರಿನ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಭಿವೃದ್ಧಿ ಕೆಲಸವನ್ನು ನೋಡಲಿ. ಬಿಜೆಪಿ ಮತ್ತು ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಿಮಗೆ ಸತ್ಯ ಗೊತ್ತಾಗಬೇಕಾದರೆ ಒಂದೇ ವೇದಿಕೆಗೆ ಬನ್ನಿ. ಒಂದೇ ವೇದಿಕೆಯಲ್ಲಿ ನಿಮ್ಮ ನಮ್ಮ ಕೆಲಸ ಬಗ್ಗೆ ಚರ್ಚೆ ಮಾಡೋಣ ಎಂದು ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು ಈ ಒಂದು ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಒಂದು ತಿಂಗಳಾಯಿತು ಎರಡು ವರ್ಷದಲ್ಲಿ ನಾವು ಏನೇನು ಮಾಡಿದ್ದೇವೆ ಅನ್ನೋದನ್ನ ಜನರ ಮುಂದೆ ಇಡಬೇಕು ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೋಸ್ಕರವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ನವರು ಹೇಳುತ್ತಾರೆ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಈ ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ಇದು ಶಕ್ತಿ ಪ್ರದರ್ಶನವಲ್ಲ ಅಭಿವೃದ್ಧಿಯ ಶಕ್ತಿ ನಿಮ್ಮೆದುರಿಗೆ ಇಡಲು ಈ ಒಂದು ಕಾರ್ಯಕ್ರಮ ಮಾಡಲಾಗಿದೆ. ಮಚ್ಚರ ಇರಬೇಕು ಆದರೆ ಈ ಮಟ್ಟದಲ್ಲಿ ಮತ್ಸರ ಇರಬಾರದು. ಅಭಿವೃದ್ಧಿಯನ್ನು ಸಹಿಸೋಕೆ ಆಗದೆ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನೀವು 5 ವರ್ಷ ಅಧಿಕಾರದಲ್ಲಿ ಇದ್ರಿ 2008 ರಿಂದ 2013ರ ವರೆಗೆ 2018 ರಿಂದ 2023ರ ವರೆಗೆ ಅಧಿಕಾರದಲ್ಲಿ ಇದ್ರಿ. ಮೈಸೂರಿನ ಗಾಗಿ ನೀವು ಏನು ಅಭಿವೃದ್ಧಿ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ನೀವು ಏನಾದರೂ ಅಭಿವೃದ್ಧಿ ಮಾಡಿದ್ದರೆ ಹೇಳಿ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ರಿ ಅದು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ 2008ರಲ್ಲಿ ಅಧಿಕಾರಕ್ಕೆ ಬಂದದ್ದು 2018ರಲ್ಲಿ ಅಧಿಕಾರಕ್ಕೆ ಬಂದದ್ದು ನೀವು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದೀರಾ ಹೊರತು ಜನರ ಆಶೀರ್ವಾದದಿಂದ ಪಡೆದುಕೊಂಡು ಅಧಿಕಾರಕ್ಕೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.