ಮೈಸೂರು: ರಾಜ್ಯದಲ್ಲಿ ದಿನಕ್ಕೊಂದು ತಿರುವನ್ನು ಪಠ್ಯಪುಸ್ತಕ ಪರಿಷ್ಕರಣೆ ವಿವಾದ ( Textbook revision controversy ) ಪಡೆಯುತ್ತಿದೆ. ಈಗಾಗಲೇ ಸಾಲು ಸಾಲು ಸಾಹಿತಿಗಳು ತಮ್ಮ ಕತೆ, ಕವಿತೆ, ಗದ್ಯ, ಲೇಖನಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ನೀಡಲಾಗಿದ್ದಂತ ಅನುಮತಿಯನ್ನು ಹಿಂಪಡೆದಿರೋದಾಗಿ ಪತ್ರದಲ್ಲಿ ಶಿಕ್ಷಣ ಸಚಿವರಿಗೆ ತಿಳಿಸಿದ್ದಾರೆ. ಈ ಬೆನ್ನಲ್ಲೇ ಸಾಹಿತಿ ಎಸ್ ಎಲ್ ಭೈರಪ್ಪ ( S L Byrappa ) ಕೂಡ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ಅವರೇನ್ ಮಾತನಾಡಿದ್ದಾರೆ ಅಂತ ಮುಂದೆ ಓದಿ..
ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಸಿದ್ದು: ಬಿಜೆಪಿ ಜಾಹೀರಾತು ರಾಜ್ಯಕ್ಕೆ ಅವಮಾನವೆಂದು ಕಿಡಿ
ನಗರದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತಂತೆ ಮಾತನಾಡಿದಂತ ಅವರು, ಈ ಹಿಂದೆ ವಾಟಪೇಯಿ ಬಂದಾಗ ತಿದ್ದಲು ಪ್ರಯತ್ನ ನಡೆಸಲಾಗಿತ್ತು. ಆದ್ರೇ.. ಆಗ ಗಲಾಟೆ ಆರಂಭಿಸಿದ್ದರಿಂದ ತಿದ್ದುವ ಕೆಲಸ ಕೈಬಿಡಲಾಯಿತು. ಪಠ್ಯದಲ್ಲಿ ಸತ್ಯ ಇರಬೇಕೇ ಹೊರತು ಯಾವುದೇ ಐಡಿಯಾಲಜಿ ಇರಬಾರದು ಎಂದು ಹೇಳಿದರು.
ಟಿಪ್ಪು ಕೊಡಗಿನಲ್ಲಿ ಏನ್ ಮಾಡಿದ್ರು ಎನ್ನುವ ಬಗ್ಗೆ ಅಡ್ಡಂಡ ಕಾರ್ಯಪ್ಪ ಅವರಿಗೆ ಗೊತ್ತಿದೆ. ಎಷ್ಟು ಕೊಡವರನ್ನು ಸಾಯಿಸಿದ ನಂತ್ರ ಮತಾಂತರ ಮಾಡಿದ್ರು ಎನ್ನುವುದು ಅವರಿಗೆ ಗೊತ್ತಿದೆ. ಅದನ್ನೇ ಒಮ್ಮೆ ತಮ್ಮ ಭಾಷಣದಲ್ಲಿಯೂ ಹೊರ ಹಾಕಿದ್ದರು. ಆದ್ರೇ ಅವರ ವಿರುದ್ಧವೇ ತಿರುಗಿ ಬಿದ್ದರು. ಅಡ್ಡಂಡ ಕಾರ್ಯಪ್ಪ ಅವರನ್ನು ತೆಗೆಯಲು ತುಂಬಾ ಪ್ರಯತ್ನ ನಡೆಸಲಾಯಿತು. ಆದ್ರೇ ಸರ್ಕಾರ ಗಟ್ಟಿ ಇದ್ದದ್ದರಿಂದ ಅದು ಆಗಲಿಲ್ಲ ಎಂದು ಹೇಳಿದರು.