ಬೆಂಗಳೂರು: ಟಿಇಟಿ-2022 ಪ್ರವೇಶ ಪತ್ರದಲ್ಲಿ ಅಶ್ಲೀಲ ಚಿತ್ರ ಎಂಬ ಸುದ್ದಿಯು ಮಾಧ್ಯ,ಮದಲ್ಲಿ ಬಿತ್ತರಗೊಳ್ಳುತ್ತಿದ್ದು ಇದು ಇಲಾಖೆ ಅಥವಾ ಸರ್ಕಾರದಿಂದ ಉಂಟಾಗಿರುವ ಲೋಪವಲ್ಲ ಎಂಬ ಬಗ್ಗೆ ಸೃಷ್ಟಿಕರಣ ಈ ಕೆಳಕಂಡಂತೆ ನೀಡಲಾಗಿದೆ.

ಪ್ರಸ್ತುತ 06-11-2022ರಂದು ನಡೆದ ಟಿಇಟಿ-2022 ರ ಪರೀಕ್ಷೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ 781 ಕೇಂದ್ರಗಳಲ್ಲಿ ನಡೆದಿದ್ದು 3,32,913 ಅಭ್ಯರ್ಥಿಗಳು ಹಾಜರಾಗಿದ್ದು, ಪರೀಕ್ಷಾ ಹಾಜರಾತಿ ಶೇಕಡ 92% ರಷ್ಟಿದೆ. ಪರೀಕ್ಷೆಯು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಲೋಪದೋಷಗಳಿಲ್ಲದೇ ಜಿಲ್ಲಾಧಿಕಾರಿಗಳ
ನೇತೃತ್ವದಲ್ಲಿ ನಡೆದಿರುತ್ತದೆ. ಪ್ರತಿ ಅಭ್ಯರ್ಥಿಯು ಟಿಇಟಿ-2022 ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಮುನ್ನ ತಾನೇ ತನ್ನ User ID ಮತ್ತು Password ನ್ನು ಸೃಷ್ಟಿಸಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಈ ರೀತಿಯಾಗಿ ಸೃಷ್ಟಿಸಿಕೊಂಡ User ID ಮತ್ತು Password ಮಾಹಿತಿಯು ಸಂಪೂರ್ಣ ಗೌಪ್ಯ ಹಾಗೂ ಅಭ್ಯರ್ಥಿಯ ಖಾಸಗಿ ಮಾಹಿತಿಯಾಗಿರುತ್ತದೆ. ಸದರಿ User ID ಮತ್ತು Password ನ್ನು ಬಳಸಿ ಲಾಗಿನ್ (Login) ಅಗುವುದರ ಮೂಲಕ ಅಭ್ಯರ್ಥಿಯು ತನ್ನ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಪೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ನಿಗಧಿತ ಅಂಕಣದಲ್ಲಿ ಅಪ್‌ಲೋಡ್ ಮಾಡಿದ ನಂತರ, ಅಭ್ಯರ್ಥಿಯು ತಾನು
ನೀಡಿರುವ ಮಾಹಿತಿಯು ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು ಅರ್ಜಿ Submit ಮಾಡಿದ ನಂತರವೇ ನಿಗದಿತ ಅರ್ಜಿ ಶುಲ್ಕ ಪಾವತಿಸಿ, ಅಭ್ಯರ್ಥಿಯು ತನ್ನ ಅನ್‌ಲೈನ್ ಅರ್ಜಿಯ ಪ್ರಿಂಟ್ ಅನ್ನು ಪಡೆಯುತ್ತಾರೆ.

ಅಭ್ಯರ್ಥಿಯು ತನ್ನ ಅರ್ಜಿಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ ತನ್ನ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಈ ತಂತ್ರಾಂಶವು KSWAN ಅಂತರ್ಜಾಲ ಸೌಲಭ್ಯವನ್ನು ಹೊಂದಿದ್ದು, ಸಂಪೂರ್ಣ ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯ State Data Center (SDC) ನಿಯಂತ್ರಣದ
ಸರ್ವ‌್ರನಲ್ಲಿ ಅಳವಡಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ನಮ್ಮ ಕಛೇರಿಯ ತಂತ್ರಾಂಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಅಭ್ಯರ್ಥಿಯನ್ನು ಹೊರತುಪಡಿಸಿ ಇತರರು ಅನ್ ಲೈನ್ ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ಅದ್ದರಿಂದ ಮಾಧ್ಯಮದಲ್ಲಿ ಬಿತ್ತರವಾಗಿರುವ ಸುದ್ದಿಯಲ್ಲಿ ಇಲಾಖೆಯ ಪಾತ್ರವಿರುವುದಿಲ್ಲ. ಅದಾಗ್ಯೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಾಡಿ, ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ ಅಂತ ತಿಳಿಸಿದೆ.

TET-2022 Admit Card: Education Department issues important clarification
Share.
Exit mobile version