ಬೈರುತ್ (ಲೆಬನಾನ್): ಇಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬು ಹಸನ್ ಅಲ್-ಹಶಿಮಿ ಅಲ್-ಖುರಾಶಿ ಹತ್ಯೆಗೀಡಾಗಿದ್ದು, ಗುಂಪಿನ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.

ಆಡಿಯೋ ಸಂದೇಶದಲ್ಲಿ ಮಾತನಾಡುತ್ತಾ ಗುಂಪಿನ ವಕ್ತಾರರು, ಹಶಿಮಿ ಸಾವಿನ ದಿನಾಂಕದ ಬಗ್ಗೆ ತಿಳಿಸದೇ, ಹಶಿಮಿ ಶತ್ರುಗಳೊಂದಿಗಿನ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಇದೀಗ ಗುಂಪಿನ ಹೊಸ ನಾಯಕನನ್ನು ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರಾಶಿ ಎಂಬುವವರನ್ನು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಆದ್ರೆ, ವಕ್ತಾರರು ಹೊಸ ನಾಯಕನ ಬಗ್ಗೆ ಇನ್ನೂ ಯಾವುದೇ ವಿವರಗಳನ್ನು ನೀಡಿಲ್ಲ.

ಐಎಸ್‌ನ ಹಿಂದಿನ ನಾಯಕ ಅಬು ಇಬ್ರಾಹಿಂ ಅಲ್-ಖುರಾಶಿ ಈ ವರ್ಷದ ಫೆಬ್ರವರಿಯಲ್ಲಿ ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಯುಎಸ್ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಅವರ ಹಿಂದಿನ ಅಬು ಬಕರ್ ಅಲ್-ಬಾಗ್ದಾದಿಯನ್ನು ಅಕ್ಟೋಬರ್ 2019 ರಲ್ಲಿ ಇಡ್ಲಿಬ್‌ನಲ್ಲಿ ಕೊಲ್ಲಲಾಯಿತು.

ಸಿರಿಯಾದಲ್ಲಿ ಐಎಸ್ ವಿರುದ್ಧ ಹೋರಾಡುತ್ತಿರುವ ಮಿಲಿಟರಿ ಒಕ್ಕೂಟವನ್ನು ಯುಎಸ್ ಮುನ್ನಡೆಸುತ್ತಿದೆ.

LPG ಸಿಲಿಂಡರ್ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಕಂಪನಿಗಳು, ನಿಟ್ಟಿಸಿರು ಬಿಟ್ಟ ಗ್ರಾಹಕರು

BIGG NEWS : ಮಂಗಳೂರು ಬಾಂಬ್ ಸ್ಫೋಟ ಪ್ರಕರಣ : ಎನ್​ಐಎ ಅಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರ | Mangaluru Blast

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ವಾಹನ ಮಾಲೀಕರಿಗೆ ಸಿಹಿ ಸುದ್ದಿ: ಶೀಘ್ರದಲ್ಲಿ ಬೆಲೆ ಇಳಿಕೆ…!?

LPG ಸಿಲಿಂಡರ್ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಕಂಪನಿಗಳು, ನಿಟ್ಟಿಸಿರು ಬಿಟ್ಟ ಗ್ರಾಹಕರು

Share.
Exit mobile version