ಬೆಂಗಳೂರು: ಮಾರ್ಚ್ 2023ರಲ್ಲಿ ನಡೆಯಲಿರುವಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ( Second PUC Annual Examination 2023 ) ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಕಟಿಸಿದೆ.

BREAKING NEWS ; ‘SpiceJet’ ಮೇಲಿನ ನಿರ್ಬಂಧ ತೆರವು ; ಅ.30ರಿಂದ ‘ಪೂರ್ಣ ಸಾಮರ್ಥ್ಯ’ದಲ್ಲಿ ಕಾರ್ಯಾಚರಣೆ

ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ( Department of Pre-University Education ) ನಿರ್ದೇಶಕರು ಮಾಹಿತಿ ಬಿಡುಗಡೆ ಮಾಡಿದ್ದು ಮಾರ್ಚ್ 2023ರಲ್ಲಿ ನಡೆಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 10-03-2023ರಿಂದ 29-03-2023ರವರೆಗೆ ನಡೆಸಲು ತೀರ್ಮಾನಿಸಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ( Tentative Schedule ) ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದೆ.

‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಕ್ಷಣಗಣನೆ : ‘ಅಪ್ಪು’ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ರಾಘಣ್ಣ |Puneeth Parva

ಇನ್ನೂ ವಿದ್ಯಾರ್ಥಿಗಳು ಈ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದರೇ ದಿನಾಂಕ 21-11-2022ರ ಒಳಗಾಗಿ jdexam.dpue@gmail.com ಗೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಹೀಗಿದೆ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ

  • ದಿನಾಂಕ 10-03-2023 – ಕನ್ನಡ, ಅರೇಬಿಕ್
  • ದಿನಾಂಕ 11-03-2023 – ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
  • ದಿನಾಂಕ 13-03-2023 – ಅರ್ಥಶಾಸ್ತ್ರ
  • ದಿನಾಂಕ 14-03-2023- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ
  • ದಿನಾಂಕ 15-03-2023 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ದಿನಾಂಕ 16-03-2023 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
  • ದಿನಾಂಕ 17-03-2023 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
  • ದಿನಾಂಕ 18-03-2023 – ಭೂಗೋಳಶಾಸ್ತ್ರ, ಜೀವಶಾಸ್ತ್ರ
  • ದಿನಾಂಕ 20-03-2023 – ಇತಿಹಾಸ, ಭೌತಶಾಸ್ತ್ರ
  • ದಿನಾಂಕ 21-03-2023 – ಹಿಂದಿ
  • ದಿನಾಂಕ 23-03-2023 – ಇಂಗ್ಲೀಷ್
  • ದಿನಾಂಕ 25-03-2023 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
  • ದಿನಾಂಕ 27-03-2023 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
  • ದಿನಾಂಕ 29-03-2023 – ಸಮಾಜ ಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ವರದಿ: ವಸಂತ ಬಿ ಈಶ್ವರಗೆರೆ

Share.
Exit mobile version