ತೆಲಂಗಾಣದಲ್ಲಿ ಮತ್ತೆ ಮಹಾಮಳೆ : ಮೂವರು ಸಾವು, ಹಲವೆಡೆ ಪ್ರವಾಹ ಪರಿಸ್ಥಿತಿ – Kannada News Now


India

ತೆಲಂಗಾಣದಲ್ಲಿ ಮತ್ತೆ ಮಹಾಮಳೆ : ಮೂವರು ಸಾವು, ಹಲವೆಡೆ ಪ್ರವಾಹ ಪರಿಸ್ಥಿತಿ

ಹೈದರಾಬಾದ್: ಎರಡು ದಿನಗಳ ಹಿಂದೆ ತೆಲಂಗಾಣದಲ್ಲಿ 50 ಜನರನ್ನು ಬಲಿ ಪಡೆದ ಮಹಾಮಳೆ ಇದೀಗ ಮತ್ತೆ ಅಬ್ಬರಿಸಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹೈದರಾಬಾದ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ವನಸ್ಥಲಿಪುರಂ, ಎಲ್​.ಬಿ ನಗರ್​, ಉಪ್ಪಲ್​​, ಸಿಕಿಂದರಾಬಾದ್​, ಖೈರತಾಬಾದ್​, ಕುಕಟ್​ಪಲ್ಲಿ, ಹೈ-ಟೆಕ್​ ಸಿಟಿ, ಮೆಹದಿಪಟ್ಟಣಂ, ಆರಂ​ಘರ್​​, ಗೋಲ್ಕೊಂಡ, ನಾಗೋಲ್​​, ಸರೂರ್​ ನಗರ್​ ಸೇರಿದಂತೆ ಹೈದರಾಬಾದ್​ನ ಅನೇಕ ಪ್ರದೇಶಗಳು ಜಲಾವೃತವಾಗಿವೆ.

ಮಲಕ್​ಪೇಟ್​, ಅರುಂಧತಿ ನಗರ್​ ಹಾಗೂ ಉಪ್ಪಲ್​​​ನಲ್ಲಿ ವಿದ್ಯುತ್​ ಶಾಕ್​ನಿಂದಾಗಿ ಮೂವರು ಮೃತಪಟ್ಟಿದ್ದಾರೆ. ಮಜೀದ್​ಪುರ್​ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳಿದ್ದ ಕಾರೊಂದು ಕೊಚ್ಚಿ ಹೋಗಿದ್ದು, ಅವರ ಕುರಿತು ಮಾಹಿತಿ ತಿಳಿದು ಬಂದಿಲ್ಲ.
error: Content is protected !!