ಬೆಂಗಳೂರು: ಕೆಲ ದಿನಗಳ ಹಿಂದೆ ನಡೆದಿದ್ದಂತ ಶಿಕ್ಷಕರ ನೇಮಕಾತಿಯ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ( Karnataka Teacher Eligibility Test Results ) ಮುಂದಿನ ವಾರ ಪ್ರಕಟವಾಗಲಿದೆ.

ಪ. ಬಂಗಾಳ: ಮಾತನಾಡುತ್ತಾ ನಿಂತಿದ್ದ ಟಿಟಿಇ ತಲೆಗೆ ತಾಗಿದ ವಿದ್ಯುತ್‌ ತಂತಿ… ಮುಂದೇನಾಯ್ತು ನೋಡಿ | WATCH VIDEO

ಈ ಬಗ್ಗೆ ಅಧಿಕೃತವಾಗಿ ಟ್ವಿಟ್ ( Twitter ) ಮಾಡಿ ತಿಳಿಸಿರುವಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Education Minister BC Nagesh ) ಅವರು, ಶಿಕ್ಷಕರ ಅರ್ಹತಾ ಪರೀಕ್ಷೆಯ( TET) ಫಲಿತಾಂಶವನ್ನು ಮುಂದಿನ ವಾರಾಂತ್ಯದೊಳಗೆ ಪ್ರಕಟಿಸುವುದಾಗಿ ಘೋಷಿಸಿದ್ದಾರೆ.

ಅಂದಹಾಗೇ ದಿನಾಂಕ 06-11-2022ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( Karnataka Teacher Eligibility Test – TET ) ನಡೆದಿತ್ತು. ಈ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ( Key Answer )  ದಿನಾಂಕ 09-11-2022ರಂದು ಪ್ರಕಟಿಸಲಾಗಿತ್ತು. ಇದೀಗ ಈ ಪರೀಕ್ಷೆಯ ಫಲಿತಾಂಶವು ಮುಂದಿನ ವಾರಾಂತ್ಯ ಪ್ರಕಟವಾಗಲಿದೆ.

Share.
Exit mobile version