ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ( Mysore Dasara 2022 ) ಗೆ ತೆರಳುವಂತ ಹೊರ ರಾಜ್ಯದ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ವಾಹನ ತೆರಿಗೆಯಿಂದ ವಿನಾಯ್ತಿಯನ್ನು ಘೋಷಣೆ ಮಾಡಿದೆ.

ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ, ಕರ್ನಾಟಕ ಹೊರತುಪಡಿಸಿ, ಇತರೆ ರಾಜ್ಯಗಳಲ್ಲಿ ನೋಂದಾಯಿಸಲ್ಪಟ್ಟ ಮತ್ತು ಆ ರಾಜ್ಯದಲ್ಲಿ ತೆರಿಗೆ ಪಾವತಿಸಿರುವ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಲು ಸರ್ಕಾರವು ತೀರ್ಮಾನಿಸಿದೆ ಎಂದಿದ್ದಾರೆ.

ಸರ್ಕಾರದ ತೀರ್ಮಾನದಂತೆ ವಿಶೇಷ ರಹದಾರಿ ಪಡೆದು ದಿನಾಂಕ 29-09-2022ರಿಂದ ದಿನಾಂಕ 06-10-2022ರ ( 2 ದಿನಗಳು ಸೇರಿದಂತೆ) ನಡೆಯಲಿರುವ ದಸರಾ ಮಹೋತ್ಸವಕ್ಕೆ ಅಂತರ ರಾಜ್ಯದಿಂದ ಮೈಸೂರು ನಗರಕ್ಕೆ ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯ ಕೃಷ್ಣರಾಜ್ಯ ಸಾಗರ ಜಲಾಶಯ ವೀಕ್ಷಿಸಲು ಆಗಮಿಸುವ ಪ್ರವಾಸಿ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಿ ಆದೇಶಿಸಿದ್ದಾರೆ.

BIG NEWS: ಸಚಿವ ಅಶ್ವತ್ಥನಾರಾಯಣ ಅಕ್ರಮದ ಬಗ್ಗೆ ಮಾಜಿ ಸಿಎಂ ದಾಖಲೆ ಬಿಡುಗಡೆ: ಹೀಗಿದೆ ‘BMS ಶಿಕ್ಷಣ ದತ್ತಿ ಟ್ರಸ್ಟ್’ ಅಕ್ರಮಗಳ ನೋಟ

BIG NEWS: ಸಚಿವ ಅಶ್ವತ್ಥನಾರಾಯಣ ಅಕ್ರಮದ ಬಗ್ಗೆ ಮಾಜಿ ಸಿಎಂ ದಾಖಲೆ ಬಿಡುಗಡೆ: ಹೀಗಿದೆ ‘BMS ಶಿಕ್ಷಣ ದತ್ತಿ ಟ್ರಸ್ಟ್’ ಅಕ್ರಮಗಳ ನೋಟ

Share.
Exit mobile version