ಹುಬ್ಬಳ್ಳಿ : ಟಿಪ್ಪು ಪ್ರತಿಮೆ ನಿರ್ಮಿಸಿ ಊದುಬತ್ತಿ ಹಚ್ಚಿ ಆರತಿ ಬೆಳಗುತ್ತಾರಾ ನೋಡೋಣ ಎಂದು ಶಾಸಕ ತನ್ವೀರ್ ಸೇಠ್ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನರು ಅವರನ್ನು ಮನೆಗೆ ಕಳುಹಿಸುತ್ತಾರೆ, ಈಗಲೂ ಟಿಪ್ಪು ಜಯಂತಿಗೆ ವಿರೋಧವಿದೆ. ಟಿಪ್ಪು ಒಬ್ಬ ಮತಾಂದರ, ಇದು ನನ್ನ ವೈಯಕ್ತಿಕ ನಿಲುವು ಎಂದರು.

ಯಾವುದೇ ಮೂರ್ತಿ ನಿಲ್ಲಿಸಲು ಸರ್ಕಾರದ ಅನುಮತಿ ಬೇಕು, ಜನರು ಇದಕ್ಕೆಲ್ಲಾ ಉತ್ತರ ಕೊಡಲಿದ್ದಾರೆ ಎಂದು ಕಿಡಿಕಾರಿದರು. ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ಗೆ ನಿಜವಾದ ಬದ್ಧತೆ ಇದ್ದರೆ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ( Union Minister Pralhad Joshi ) ಹೇಳಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ಗೆ ನಿಜವಾದ ಬದ್ಧತೆ ಇದ್ದರೆ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಲಿ ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮದ ಬಗ್ಗೆ ಮಾತಾಡುವ ಚಾಳಿ ಬಿಡಲಿ, ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಬಗ್ಗೆ ನಿಜವಾದ ಬದ್ಧತೆ ಇದ್ದರೆ ಸತೀಶ್ ಜಾರಕಿಹೊಳಿವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಪ್ರಲ್ಹಾದ್ ಜೋಶಿ ಸವಾಲ್ ಎಸೆದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದಿಲ್ಲ. ಸಿಎಂ ಆಗಬೇಕೆಂದು ಸಿದ್ಧರಾಮಯ್ಯ( Siddaramaiah ), ಡಿಕೆ ಶಿವಕುಮಾರ್ ( DK Shivakumar ) ಬಡಿದಾಡುತ್ತಿದ್ದಾರೆ. ಪಾಪ ಅದನ್ನು ಸರಿ ಮಾಡೋದಕ್ಕೆ ರಾಹುಲ್ ಗಾಂಧಿ ಬರುತ್ತಿದ್ದಾರೆ ಎಂದರು.ನೀವು ಬರೆದಿಟ್ಟುಕೊಳ್ಳಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದಿಲ್ಲ. ನಿನ್ನೆ ಮೋದಿ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಬಂದಿದ್ದಾರೆ. ಇದನ್ನು ನೋಡಿ ಕಾಂಗ್ರೆಸ್ ಥಂಡಾ ಹೊಡೆದಿದೆ. ಕೈಯಲ್ಲಿ ಆಗದವರು ಮೈ ಪರಚಿಕೊಂಡರು ಅನ್ನೋ ಹಾಗೇ, ಸಿದ್ಧರಾಮಯ್ಯ ಟ್ವಿಟ್ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಯಾರಿಗೆ ಏನು ಹೇಳುತ್ತಾರೋ ಒಂದು ತಿಳಿಯೋದಿಲ್ಲ ಎಂದು ಹೇಳಿದರು.

BIGG NEWS : ದತ್ತಮಾಲಾ ಅಭಿಯಾನ : ನಾಳೆ ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ ; ಪ್ರವಾಸಿಗರಿಗೆ ನಿರ್ಬಂಧ |Datta Peeta

BIGG BREAKING NEWS: ದೆಹಲಿಯಾದ್ಯಂತ ಭೂಕಂಪನದ ಅನುಭವ: ಒಂದು ವಾರದಲ್ಲಿ 2ನೇ ಬಾರಿ ಕಂಪಿಸಿದ ಭೂಮಿ | Earthquake in Delhi

Share.
Exit mobile version