ಚೆನ್ನೈ: ಮಕ್ಕಳಿಗೆ ಪ್ರಿಯವಾದ ತಿನಿಸುಗಳಲ್ಲಿ ಒಂದಾದ ಕಾಟನ್ ಕ್ಯಾಂಡಿ (ಸಕ್ಕರೆ ಮಿಠಾಯಿ, ಬಾಂಬೆ ಮಿಠಾಯಿ) ಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳ ಮಾರಾಟಕ್ಕೆ ತಮಿಳು ನಾಡು ಸರ್ಕಾರ ನಿಷೇಧ ಹೇರಿದೆ.

ಆರೋಗ್ಯಕ್ಕೆ ಮಾರಕವಾಗುವ ವಸ್ತುಗಳನ್ನು ಬಳಸಿ ಕಾಟನ್ ಕ್ಯಾಂಡಿ ತಯಾರಿ ಆರೋಪ ಬಂದ ಹಿನ್ನೆಲೆಯಲ್ಲಿ ತ.ನಾಡಿನಲ್ಲಿ ವಿವಿಧೆಡೆ ಮಾರಾಟವಾಗುವ ಕಾಟನ್‌ ಕ್ಯಾಂಡಿ ಪರೀಕ್ಷೆ ನಡೆಸಲಾಗಿತ್ತು.ಕ್ಯಾಂಡಿಗೆ ಬಣ್ಣ ನೀಡಲು ಬಳಸುವ ರಾಸಾಯನಿಕದಲ್ಲಿ ಕ್ಯಾನ್ಸ‌ರ್ ತರುವ ಅಂಶ ದೃಢ ವಾಗಿದೆ. ಇದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಎಂದ ಸರ್ಕಾರ ಹೀಗಾಗಿ ರಾಜ್ಯಾದ್ಯಂತ ಕಾಟನ್ ಕ್ಯಾಂಡಿ ನಿಷೇಧಿಸಿ ತ.ನಾಡು ಸರ್ಕಾರ ಆದೇಶ ಹೊರಡಿಸಿದೆ.

BJP convention meet: ನಾವು ರಾಮಮಂದಿರ, ಅಯೋಧ್ಯೆ ಭರವಸೆಯನ್ನು ಈಡೇರಿಸಿದ್ದೇವೆ:ಜೆಪಿ ನಡ್ಡಾ

ಇತ್ತೀಚೆಗಷ್ಟೇ ಗೋವಾದ ಮಾಪುಸಾ ನಗರದಲ್ಲಿ ಸೋಪ್ ಪೌಡರ್ ಬಳಸಿ ತಯಾರಿಸಿದ ಸಾಸ್‌ಗಳನ್ನು ಬಳಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಗೋಬಿ ಮಂಚೂರಿ ಮಾರಾಟ ನಿಷೇಧಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಜನಪ್ರಿಯ ತಿನಿಸಿಗೆ ನಿಷೇಧ ಹೇರಲಾಗಿದೆ.

ರಾಜ್ಯದಲ್ಲಿ ಇರುವ ಶೇ.14 ರಷ್ಟು ಅಲ್ಪಸಂಖ್ಯಾತರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಶೇಕಡಾ 0.8ರಷ್ಟು ಮಾತ್ರ: ಸಿಎಂ

ನಾನು ಕಾಂಗ್ರೆಸ್-ಬಿಜೆಪಿ ಪಕ್ಷಕ್ಕೆ ಸೇರುವ ಮಾತೆ ಇಲ್ಲ : ಸ್ಪಷ್ಟನೆ ನೀಡಿದ ಜನಾರ್ಧನ್ ರೆಡ್ಡಿ

 

 

Share.
Exit mobile version