ಅಫ್ಘಾನಿಸ್ತಾನ : ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಹಿಸಿಕೊಂಡ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಮುಂದುವರೆಸಿದ್ದಾರೆ. ಮೊದಲಿಗೆ ಕೆಲಸಕ್ಕೆ ಹೋಗದಂತೆ ತಡೆದರು. ನಂತರ ಶಿಕ್ಷಣವನ್ನು ಮೊಟಕುಗೊಳಿಸಿದರು. ಇದೀಗ ಮಹಿಳೆಯರು ನಡೆಸುತ್ತಿದ್ದ ರೇಡಿಯೊ ಕೇಂದ್ರವನ್ನು ಬಂದ್ ಮಾಡಲಾಗಿದೆ. ಈ ಕುರಿತಂತೆ ತಾಲಿಬಾನ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಂಜಾನ್ ಸಮಯದಲ್ಲಿ ಹಾಡುಗಳು ಮತ್ತು ಸಂಗೀತವನ್ನು ಪ್ರಸಾರ ಮಾಡುವ ಮೂಲಕ ರೇಡಿಯೊ ಕೇಂದ್ರ ಇಸ್ಲಾಮಿಕ್ ಎಮಿರೇಟ್‌ನ ಕಾನೂನುಗಳು ಮತ್ತು ನಿಬಂಧನೆಗಳನ್ನು ಹಲವು ಬಾರಿ ಉಲ್ಲಂಘಿಸಿದೆ. ಈ ಕಾರಣದಿಂದ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಬಡಾಕ್ಷನ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ಮೊಯೆಜುದ್ದೀನ್ ಅಹ್ಮದಿ ಹೇಳಿದ್ದಾರೆ.
ಈ ರೇಡಿಯೋ ಕೇಂದ್ರ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ನೀತಿಯನ್ನು ಒಪ್ಪಿಕೊಂಡರೆ, ಅದು ಮತ್ತೆ ಅಂತಹ ವಿಷಯವನ್ನು ಪುನರಾವರ್ತಿಸುವುದಿಲ್ಲ ಎಂದು ಖಾತರಿ ನೀಡಿದರೆ, ನಾವು ಅದನ್ನು ಮತ್ತೆ ಕಾರ್ಯ ನಿರ್ವಹಿಸಲು ಅನುಮತಿಸುತ್ತೇವೆ ಎಂದು ಅಹ್ಮದಿ ತಿಳಿಸಿದ್ದಾರೆ.
‘ಸದೈ ಬನೋವನ್’ ಎಂಬೆಸರಿನ ರೇಡಿಯೋ ಕೇಂದ್ರವು ಅಫ್ಘಾನಿಸ್ತಾನದ ಏಕೈಕ ಮಹಿಳಾ ಚಾಲಿತ ಕೇಂದ್ರವಾಗಿದೆ. ಇದು 10 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಇಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದರು.
ಆದರೆ ರೇಡಿಯೋ ಕೇಂದ್ರದ ಮುಖ್ಯಸ್ಥ ನಜಿಯಾ ಸೊರೋಶ್ ಪ್ರತಿಕ್ರಿಯಿಸಿದ್ದು, ಕೇಂದ್ರದಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಯಾವುದೇ ರೀತಿಯ ಸಂಗೀತವನ್ನು ಪ್ರಸಾರ ಮಾಡಿ, ಇದೊಂದು ಪಿತೂರಿ ಎಂದು ಹೇಳಿದ್ದಾರೆ.
ಆಗಸ್ಟ್ 2021 ರಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ಅನೇಕ ಪತ್ರಕರ್ತರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ತಾಲಿಬಾನ್‌ಗಳು ವಿಶ್ವವಿದ್ಯಾನಿಲಯ ಸೇರಿದಂತೆ ಆರನೇ ತರಗತಿಯ ನಂತರ ಹೆಚ್ಚಿನ ಉದ್ಯೋಗ ಮತ್ತು ಶಿಕ್ಷಣದಿಂದ ಮಹಿಳೆಯರನ್ನು ನಿರ್ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 32.42 ಲಕ್ಷ ಹಣ ಸೀಜ್
BIGG NEWS : ದೇಶದ ‘ನಿರುದ್ಯೋಗ’ ದರ ಮಾರ್ಚ್ ನಲ್ಲಿ 3 ತಿಂಗಳ ಗರಿಷ್ಠ 7.8ರಷ್ಟು ಏರಿಕೆ ; CMIE ಮಾಹಿತಿ