ಮಡಿಕೇರಿ: ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ತಲಕಾವೇರಿಯೂ ಒಂದಾಗಿದೆ. ಇಂತಹ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್.17ರಂದು ಮಧ್ಯರಾತ್ರಿ 1.27ಕ್ಕೆ ತಿರ್ಥೋದ್ಭವ ಆಗಲಿದೆ.
ಈ ಬಗ್ಗೆ ಭಾಗಮಂಡಲದ ತಲಕಾವೇರಿ ದೇವಾಲಯ ಸಮಿತಿಯಿಂದ ಮಾಹಿತಿ ನೀಡಲಾಗಿದ್ದು, ತಲಕಾವೇರಿಯ ಕಾವೇರಿ ಉಗಮ ಸ್ಥಾನದಲ್ಲಿ ಅಕ್ಟೋಬರ್ 17ರಂದು ಮಧ್ಯರಾತ್ರಿ 1.27ಕ್ಕೆ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ಉಂಟಾಗಲಿದೆ ಎಂದು ಹೇಳಿದೆ.
ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು ‘ತೀರ್ಥೋದ್ಭವ‘ ಎನ್ನುವರು.
ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರು ತ್ತಾರೆ. ಈ ಸ್ಥಳವನ್ನು ಶರಪಂಜರ, ಹುಲಿಯ ಹಾಲಿನ ಮೇವು ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ.
‘ಭಾರತ ಚಂದ್ರನಲ್ಲಿ ಹೋಗಿದೆ, ಆದ್ರೆ ನಾವು ಪೈಸೆ ಪೈಸೆಗೂ ಭಿಕ್ಷೆ ಬೇಡ್ತಿದ್ದೇವೆ’ ; ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್