ತೈವಾನ್‌ :  ತೈವಾನ್‍ನಲ್ಲಿ ಇಂದು ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಷರ್‍ ಮಾಪನದಲ್ಲಿ 6.8 ತೀವ್ರತೆ ದಾಖಲಾಗಿದೆ. ಈ ಕುರಿತಂತೆ ತೈವಾನ್‌ನ ಹವಾಮಾನ ಬ್ಯೂರೋ ತಿಳಿಸಿದೆ. ಭೂಕಂಪನದಿಂದಾಗಿ ರೈಲು ಬೋಗಿಗಳು ಹಳಿತಪ್ಪಿದ್ದು, ಕೆಲವು ಅಂಗಡಿಗಳು  ಕುಸಿದಿವೆ ಎನ್ನಲಾಗುತ್ತಿದೆ.

ಭೂಕಂಪನದ ತೀವ್ರತೆ 7.2 ರಷ್ಟಿದ್ದು, ಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭಿವಿಸಿದ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ತಿಳಿಸಿದೆ

ಶನಿವಾರ(ನಿನ್ನೆ) 6.4 ತೀವ್ರತೆಯ ಕಂಪನವನ್ನು ಕಂಡ ತೈಟುಂಗ್ ಕೌಂಟಿಯಲ್ಲಿ ಭೂಕಂಪದ ಕೇಂದ್ರಬಿಂದು ಮತ್ತು ನಂತರ ಹಲವಾರು ಭೂಕಂಪಗಳು ಸಂಭವಿಸಿವೆ ಎಂದು ಬ್ಯೂರೋ ಹೇಳಿದೆ.

BIGG NEWS : ‘ಚೀತಾ’ ನೋಡೋಕೆ ನನ್ನ ಸಂಬಂಧಿಕರು ಬಂದ್ರೂ ಉದ್ಯಾನವನ ಪ್ರವೇಶಕ್ಕೆ ಅವಕಾಶ ನೀಡ್ಬೇಡಿ ; ‘ಪ್ರಧಾನಿ ಮೋದಿ’ ಹೀಗೆ ಹೇಳಿದ್ದೇಕೆ ಗೊತ್ತಾ?

ಭೂಕಂಪನದಿಂದಾಗಿ ಟೈಟಂಗ್‍ನಲ್ಲಿ ಕಟ್ಟಡವೊಂದು ಕುಸಿದು ಬಿದ್ದಿದ್ದು, ಅಂಗಡಿಯ ಕಟ್ಟಡದಲ್ಲಿ ಇಬ್ಬರು ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ. ಇತ್ತ ಹಾನಿಗೊಳಗಾದ ಸೇತುವೆಯಿಂದ ಬಿದ್ದ ಮೂವರಿಗಾಗಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, ಪೂರ್ವ ತೈವಾನ್‌ನ ಡೋಂಗ್ಲಿ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಮೇಲಾವರಣದ ಒಂದು ಭಾಗ ಕುಸಿದ ನಂತರ ಮೂರು ಗಾಡಿಗಳು ಹಳಿಗಳಿಂದ ಹೊರಬಂದಿವೆ ಎನ್ನಲಾಗುತ್ತಿದೆ. ಇತ್ತ ಹಡಗಿನಲ್ಲಿದ್ದ ಸುಮಾರು 20 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದು ಹಾನಿ ಸಂಭಿಸಿಲ್ಲ ೆನ್ನಲಾಗುತ್ತಿದೆ.

ಜಪಾನ್ ಹವಾಮಾನ ಸಂಸ್ಥೆ ತೈವಾನ್ ಬಳಿಯ ಹಲವಾರು ದಕ್ಷಿಣ ಜಪಾನೀಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ. ತೈವಾನ್‌ನಾದ್ಯಂತ ಭೂಕಂಪದ ಅನುಭವವಾಗಿದ್ದರೂ, ದೇಶದ ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ಸ್ವಲ್ಪ ಸಮಯದವರೆಗೆ ಕಂಪಿಸಿದವು ಎಂದು ಹವಾಮಾನ ಬ್ಯೂರೋ ಹೇಳಿದೆ.

ಪ್ರಮುಖ ಸೆಮಿಕಂಡಕ್ಟರ್ ಕಾರ್ಖಾನೆಗಳಿಗೆ ನೆಲೆಯಾಗಿರುವ ದಕ್ಷಿಣದ ನಗರಗಳಾದ ಟೈನಾನ್ ಮತ್ತು ಕಾಹ್ಸಿಯುಂಗ್‌ನಲ್ಲಿನ ವಿಜ್ಞಾನ ಉದ್ಯಾನವನಗಳು ಇತ್ತೀಚಿನ ನಡುಕಗಳಿಂದಾಗಿ ಅವುಗಳ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವರದಿ ಮಾಡಿದೆ.

Good News : WhatsApp ಹೊಸ ವೈಶಿಷ್ಟ್ಯ ; ಈಗ ನೀವು ‘ಆನ್ಲೈನ್’ನಲ್ಲಿದ್ರೂ ಬೇರೆಯವ್ರಿಗೆ ಗೊತ್ತೇ ಆಗೋಲ್ಲ

Share.
Exit mobile version