karnataka latest news karnataka latest news karnataka news karnataka news Karnataka. Karnataka. – Kannada News Now


India

ಹೈದರಾಬಾದ್: ಎರಡು ದಿನಗಳ ಹಿಂದೆ ತೆಲಂಗಾಣದಲ್ಲಿ 50 ಜನರನ್ನು ಬಲಿ ಪಡೆದ ಮಹಾಮಳೆ ಇದೀಗ ಮತ್ತೆ ಅಬ್ಬರಿಸಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹೈದರಾಬಾದ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ವನಸ್ಥಲಿಪುರಂ, ಎಲ್​.ಬಿ ನಗರ್​, ಉಪ್ಪಲ್​​, ಸಿಕಿಂದರಾಬಾದ್​, ಖೈರತಾಬಾದ್​, ಕುಕಟ್​ಪಲ್ಲಿ, ಹೈ-ಟೆಕ್​ ಸಿಟಿ, ಮೆಹದಿಪಟ್ಟಣಂ, ಆರಂ​ಘರ್​​, ಗೋಲ್ಕೊಂಡ, ನಾಗೋಲ್​​, ಸರೂರ್​ ನಗರ್​ ಸೇರಿದಂತೆ ಹೈದರಾಬಾದ್​ನ ಅನೇಕ ಪ್ರದೇಶಗಳು ಜಲಾವೃತವಾಗಿವೆ.

ಈ ಹಿನ್ನೆಲೆ ನಿರಾಶ್ರಿತ ಕುಟುಂಬಗಳಿಗೆ, ವಿಶೇಷವಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಇತ್ತೀಚಿನ ಭಾರಿ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ಸಂಪೂರ್ಣವಾಗಿ ಮುಳುಗಿರುವ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ತಲಾ  10,000 ರೂ. ಹಣಕಾಸಿನ ನೆರವು ನೀಡುವ ನಿರ್ಧಾರವನ್ನು ತೆಲಂಗಾಣ ಸರ್ಕಾರ ಪ್ರಕಟಿಸಿದೆ.

ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಸರ್ಕಾರವು ತಲಾ ₹ 1 ಲಕ್ಷ ಮತ್ತು ಭಾಗಶಃ ಹಾನಿಗೊಳಗಾದವರಿಗೆ ತಲಾ ₹ 50,000 ನೆರವು ನೀಡುತ್ತದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ತಕ್ಷಣದಿಂದ ಜಾರಿಗೆ ಬರುವಂತೆ ₹ 550 ಕೋಟಿ ಹಣವನ್ನು ಪುರಸಭೆ ಆಡಳಿತ ಇಲಾಖೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಆರ್ಥಿಕ ನೆರವು ವಿತರಣೆ ಮಂಗಳವಾರದಿಂದ ಪ್ರಾರಂಭವಾಗಲಿದೆ.

ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಹರಿಯುವ ನೀರು ಜನರಿಗೆ ಭಾರಿ ನಷ್ಟವನ್ನುಂಟುಮಾಡಿದೆ ಮತ್ತು ಅವುಗಳಲ್ಲಿ ಸಂಗ್ರಹವಾಗಿರುವ ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳು ಹಾನಿಗೊಳಗಾಗುತ್ತವೆ ಎಂದು ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದ್ದು, ಮಳೆ / ಪ್ರವಾಹದಿಂದಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡಲು ಸರ್ಕಾರ ಬದ್ಧವಾಗಿದೆ.

ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಸೌಲಭ್ಯಗಳ ರಿಪೇರಿ ಮತ್ತು ಜೀರ್ಣೋದ್ಧಾರವನ್ನು ಯುದ್ಧದ ಹೆಜ್ಜೆಯಲ್ಲಿ ಕೈಗೊಳ್ಳಲು ಮತ್ತು ಸಾಮಾನ್ಯ ಸ್ಥಿತಿಯು ಶೀಘ್ರವಾಗಿ ಮರಳುವಂತೆ ನೋಡಿಕೊಳ್ಳಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರವು ಕಳೆದ 100 ವರ್ಷಗಳಲ್ಲಿ ಅನುಭವಿಸದಂತಹ ಭಾರೀ ಮಳೆಯನ್ನು ಅನುಭವಿಸಿದೆ. ಜನರು, ವಿಶೇಷವಾಗಿ ಕೊಳೆಗೇರಿಗಳು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ದೊಡ್ಡ ಸಮಸ್ಯೆಗಳನ್ನು ಅನುಭವಿಸಿದರು ಮತ್ತು ಅವರಿಗೆ ಸಹಾಯ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. “ಆದ್ದರಿಂದ, ತಗ್ಗು ಪ್ರದೇಶಗಳಲ್ಲಿನ ಬಡವರ ಪೀಡಿತ ಮನೆಗೆ ತಲಾ  10,000 ರೂ. ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.

ಬಿಗ್ ನ್ಯೂಸ್ : ರಾಜ್ಯದಲ್ಲಿ ಮುಂದಿನ ಮೂರು ತಿಂಗಳು ಕೊರೋನಾಘಾತ – ಸಚಿವ ಡಾ.ಕೆ.ಸುಧಾಕರ್


State

ಬೆಂಗಳೂರು :  ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿರುವ ನಟಿ ರಾಗಿಣಿ ಹಾಗೂ ನಟಿ ಸಂಜನಾರನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಹಾಕ್ತೀವಿ ಎಂದು ಎನ್ ಡಿ ಪಿ ಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಕರೆ ಬಂದಿದೆ .

ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಜೈಲಿನಲ್ಲಿರುವ ಮಾದಕ ನಟಿ ರಾಗಿಣಿ ಹಾಗೂ ಸಂಜನಾಗೆ ಜಾಮೀನು ನೀಡುವಂತೆ ಹಾಗೂ ಕೆಜಿ ಹಳ್ಳಿ ಡಿಜೆ ಹಳ್ಳಿ ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಕೆ ಪತ್ರ ಬಂದಿದೆ.  ಇಂದು ಸಂಜೆ 5 ಗಂಟೆಯಿಂದ ತುಮಕೂರಿನಿಂದ ಸಿಸಿಹೆಚ್ ನ್ಯಾಯಾಲಯಕ್ಕೆ ಪತ್ರ ಬರೆದಿದ್ದು, ಪತ್ರದಲ್ಲಿ ಕವರ್ ನ ಒಳಗೆ ಬಾಂಬ್ ಇಟ್ಟಿದ್ದೇವೆ ಎಂದು ಬರೆದಿದ್ದಾರೆ,

ಕೂಡಲೇ ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ಡಿಟೆಕ್ಟಿವ್ ತಂಡ ಪರಿಶೀಲನೆ ನಡೆಸಿದಾಗ ಕವರ್ ನಲ್ಲಿ ಡಿಟೋನೇಟರ್ ಪತ್ತೆಯಾಗಿದೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪತ್ರದಲ್ಲಿ ಡಿಸಿಪಿ ರವಿಕುಮಾರ್ ಅವರ ಹೆಸರಿಗೆ ಪತ್ರ ಬಂದಿದ್ದು, ರಾಗಿಣಿ ಸಂಜನಾಗೆ ಬೇಲ್ ಸಿಗದಿದ್ರೆ , ನೀವು ಹಾಗೂ ನಿಮ್ಮ ಸಂದೀಪ್ ಪಾಟೀಲ್ ಸುಮ್ಮನಿರದಿದ್ರೆ ಕಮಿಷನರ್ ಕಛೇರಿ ಸ್ಪೋಟಿಸುತ್ತೇವೆ ಎಂದು ಪತ್ರ ಬರೆಯಲಾಗಿದೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ಬಗ್ಗೆ ಸ್ಪೋಟಕ ಬಾಂಬ್ ಸಿಡಿಸಿದ, ಜೆಡಿಎಸ್ ಅಭ್ಯರ್ಥಿ.!

 

 India

ಅಸ್ಸಾಂ: ಕೊರೊನಾ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಬುಧವಾರದಿಂದ ತೆರೆಯಲ್ಪಡುತ್ತದೆ.

ಹೌದು, ಅಕ್ಟೋಬರ್ 21 ರಿಂದ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಪ್ರವಾಸಿಗರಿಗೆ ತೆರೆಯಲ್ಪಡುತ್ತದೆ, ಆದರೆ ಜೀಪ್ ಸಫಾರಿಗೆ ಮಾತ್ರ ಅನುಮತಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೊನಾ ಸೋಂಕಿನ ಹಿನ್ನೆಲೆ ಕೆಲವು ತಿಂಗಳಿನಿಂದ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವನ್ನು ಮುಚ್ಚಲಾಗಿತ್ತು,ಇದೀಗ ಪ್ರವಾಸಿಗರಿಗೆ ಪ್ರವೇಶ ಮುಕ್ತವಾಗಿದೆ.

BREAKING : ಅ.30ರವರೆಗೆ ‘ಪದವಿ ಪೂರ್ವ ಕಾಲೇಜು’ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ರಜೆ – ಸಿಎಂ ಯಡಿಯೂರಪ್ಪ ಘೋಷಣೆState

ಡಿಜಿಟಲ್ ಡೆಸ್ಕ್ :  ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು ,ಜೈನರು, ಬೌದ್ದ, ಪಾರ್ಸಿ) ವರ್ಗದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕಾಗಿ  ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ ಅಕ್ಟೋಬರ್ 30 ರೊಳಗಾಗಿ www.scholarships.gov.in ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅಲ್ಪಸಂಖ್ಯಾತರ ಇಲಾಖೆ ಪ್ರಕಟಣೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಆಯಾ ತಾಲೂಕಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಬಹುದಾಗಿದೆ.

ರಾಜ್ಯದಲ್ಲಿ ದಿನನಿತ್ಯ 1 ಲಕ್ಷಕ್ಕೂ ಅಧಿಕ ಕೊರೊನಾ ಟೆಸ್ಟ್‌: ವಾರದಿಂದ ಸೋಂಕಿನ ಪ್ರಮಾಣದಲ್ಲಿ ಇಳಿಕೆ..!India

ನವದೆಹಲಿ: ಐಎಂಎ ಕಂಪನಿಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ತನಿಖೆಗಿಳಿದಿರುವ ಸಿಬಿಐ ಅಧಿಕಾರಿಗಳು 28 ಮಂದಿ ವಿರುದ್ಧ ಪೂರಕ ಚಾರ್ಜ್​​ಶೀಟ್​ ದಾಖಲಿಸಿದ್ದಾರೆ.

ಕಂಪನಿಯ ಎಂಡಿ ಹಾಗೂ ಸಿಇಒ ಮೊಹಮದ್​ ಮನ್ಸೂರ್ ಖಾನ್​ ಸೇರಿ ಅನೇಕ ಹಿರಿಯ ಅಧಿಕಾರಿಗಳೂ ಆರೋಪಿಗಳಾಗಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಂಬಂಧಿತ ನ್ಯಾಯಾಲಯದಲ್ಲಿ ಪೂರಕ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ.

ಐಜಿಪಿ ಹೇಮಂತ್ ನಿಂಬಾಳ್ಕರ್​, ಎಸ್​ಪಿ ಅಜಯ್​ ಹಿಲೊರಿ, ಡಿವೈಎಸ್​ಪಿ ಇ.ಬಿ. ಶ್ರೀಧರ, ಇನ್​ಸ್ಪೆಕ್ಟರ್ ಎಂ. ರಮೇಶ್​, ಎಸ್​ಐ ಪಿ.ಗೌರಿಶಂಕರ್​ ಸೇರಿದಂತೆ ಹಲವರ ಹೆಸರನ್ನು ಸಿಬಿಐ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಕೊರೊನಾ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಡಿಸೆಂಬರ್ ವೇಳೆಗೆ ಲಸಿಕೆ ಸಿದ್ಧ..!State

ಬೆಂಗಳೂರು :   ಬ್ರಿಗೇಡ್ ರಸ್ತೆಯ ಡುಯೆಟ್ ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನ ಪೊಲೀಸರು ಇಂದು ಬಂಧಿಸಿದ್ದಾರೆ.

ಬಂಧಿತರನ್ನು ಅಲಿಯಾಸ್ ಮುನ್ನಾ (45), ಗಣೇಶ್ (39), ನಿತ್ಯ (29) ಮತ್ತು ಅಕ್ಷಯ್ (32 ಎಂದು ಗುರುತಿಸಲಾಗಿದೆ. ಈ ವೇಳೆ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿದ್ದಾರೆ.

ಮನೀಶ್ ಶೆಟ್ಟಿಯನ್ನು ಹತ್ಯೆಗೈಯಲು ಉಪಯೋಗಿಸಿದ್ದ ಮಾರಕಾಸ್ತ್ರಗಳನ್ನ ಜಫ್ತಿ ಮಾಡಲು ಹೊಸೂರು ರಸ್ತೆಯ ಬಾರ್ಲೆನ್ ಸ್ಮಶಾನ ಬಳಿ ಪೊಲೀಸರು ತಪಾಸಣೆ ಮಾಡುವಾಗ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆಗ ಆರೋಪಿ ಶಶಿಕಿರಣ್ ಹಾಗೂ ಆರೋಪಿ ಅಕ್ಷಯ್ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಅವರಿಬ್ಬರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಬಂಧಿತರಲ್ಲಿ ಶಶಿಕಿರಣ್ ಮತ್ತು ನಿತ್ಯ ಕೊಡಗಿನವರಾದರೆ, ಗಣೇಶ್ ಮತ್ತು ಅಕ್ಷಯ್ ಮಂಗಳೂರಿನವರಾಗಿದ್ದಾರೆ.

‘ಮೈಸೂರು ದಸರಾ’ಗೆ ತೆರಳುವ ‘ಪ್ರವಾಸಿಗರಿಗೆ ಬಹುಮುಖ್ಯ ಮಾಹಿತಿ’India

ಡಿಜಿಟಲ್ ಡೆಸ್ಕ್ :  ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಇಂದು ದೊಡ್ಡ ಅವಘಡದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿದ್ದ ಹೆಲಿಕಾಪ್ಟರ್ ನ  ಬ್ಲೇಡ್ ಗಳು ಮುರಿದುಹೋಗಿದ್ದು, ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಕಟ್ಟಡ ನಿರ್ಮಾಣ ಸ್ಥಳದಲ್ಲಿ ಹೆಲಿಕಾಪ್ಟರ್ ಬ್ಲೇಡ್‌ಗಳು ಓವರ್‌ಹೆಡ್ ವೈರಿಂಗ್‌ಗೆ ಬಡಿದು ಅಪಘಾತ ಸಂಭವಿಸಿದೆ. ಮಂಗಲ್ ಪಾಂಡೆ ಮತ್ತು ಸಂಜಯ್ ಝಾ ಸೇರಿದಂತೆ BJP  ನಾಯಕರೊಂದಿಗೆ ಪ್ರಚಾರದಿಂದ ಸಚಿವರು ಹಿಂದಿರುಗುತ್ತಿದ್ದರು.

ಹಿಂದಿನ ದಿನ ರವಿಶಂಕರ್ ಪ್ರಸಾದ್ ಅವರು ಮಧುಬನಿ ಜಿಲ್ಲೆಯ ಲೌಖಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. “ಮತ್ತೊಮ್ಮೆ, ಬಿಹಾರದ ಜನರು ಅಧಿಕಾರಕ್ಕೆ ಎನ್‌ಡಿಎ ಸರ್ಕಾರವನ್ನು ಮತ ಚಲಾಯಿಸಲಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಸರ್ಕಾರಿ ಶಾಲೆ’ ಈಗ ಡಿಜಿಟಲ್ ಮಯ : ಡಿಜಿಟಲ್‌ ಕಡೆ ‌ಹೊರಳಿದ ಮಲ್ಲೇಶ್ವರ ಕ್ಷೇತ್ರದ ಸರಕಾರಿ ಶಾಲೆಗಳುIndia

ಪೋರ್ಚುಗಲ್ : ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಮತ್ತು ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ತಗುಲಿರುವುದು ನಿಮಗೆ ಗೊತ್ತಿದೆ.

ಇದೀಗ ಈ ಆಟಗಾರ ಕೊರೊನಾ ನಿಯಮಾವಳಿಯನ್ನು ಉಲ್ಲಂಘಿಸಿ ಸುದ್ದಿಯಾಗಿದ್ದಾರೆ.  ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು, ಅವರು ಪ್ರತ್ಯೇಕವಾಗಿ ಕ್ವಾರಂಟೈನ್ ಗೆ ಒಳಗಾಗಿದ್ದರು. ಇದೀಗ ಹಠಾತ್ ಆಗಿ ನಿಯಮ ಉಲ್ಲಂಘಿಸಿ ಪೋರ್ಚುಗಲ್ ನಿಂದ ಇಟಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

‘SSLC ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆನ್ ಲೈನ್’ ಮೂಲಕ ‘ಡೂಪ್ಲಿಕೇಟ್ ಅಂಕಪಟ್ಟಿ’ಗೆ ಅರ್ಜಿ ಸಲ್ಲಿಕೆಗೆ ಅವಕಾಶState

ಬೆಂಗಳೂರು : ಕೊರೊನಾ ಸೋಂಕಿನಿಂದ ಇದುವರೆಗೆ ಮುಚ್ಚಲ್ಪಟ್ಟ ಚಿತ್ರಮಂದಿರಗಳು ನಾಳೆಯಿಂದ ತೆರೆಯಲಿವೆ.  ಹಿನ್ನೆಲೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ಚಿತ್ರಮಂದಿರಗಳು ಅರ್ಧ ಮಾತ್ರ ಭರ್ತಿ ಆಗಬೇಕು. ಕಂಟೈನ್ಮೆಂಟ್ ವಲಯಗಳಲ್ಲಿ ಚಿತ್ರಮಂದಿರ ತೆರೆಯುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. . ಈ ಮಾರ್ಗಸೂಚಿಗಳು ಚಿತ್ರಮಂದಿರಗಳು, ರಂಗಮಂದಿರಗಳು, ಮಲ್ಟಿ ಪ್ಲೆಕ್ಸ್​ಗಳಿಗೆ ಅನ್ವಯವಾಗುತ್ತವೆ.

ಮಾರ್ಗಸೂಚಿಯ ಮುಖ್ಯಾಂಶಗಳು :

ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಡ್ಡಾಯ
ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ
ಮಂದಿರದ ಒಳಗೆ ಉಗುಳುವುದು ನಿಷಿದ್ಧ

ಸಿನಿಮಾ ಹಾಲ್ ಒಳಗೆ ಆಹಾರ ಸೇವನೆ ನಿಷಿದ್ಧ

ವೀಕ್ಷಕರಿಗೆ ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯ
ಪ್ಯಾಕ್ ಆಗಿರುವ ಆಹಾರ, ಸ್ನ್ಯಾಕ್ಸ್ ಗಳ ಮಾರಾಟ
ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
ರೋಗಲಕ್ಷಣ ರಹಿತ ವ್ಯಕ್ತಿಗಳಿಗೆ ಮಾತ್ರ ಮಂದಿರದ ಒಳಗೆ ಪ್ರವೇಶ
ಟಿಕೆಟ್​ಗೆ ಹಣಪಾವತಿಗೆ ಡಿಜಿಟಲ್ ಪೇಮೆಂಟ್​ಗೆ ಆದ್ಯತೆ
ಟಿಕೆಟ್ ವಿತರಿಸುವಾಗ ವೀಕ್ಷಕರ ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಬೇಕು

ಹವಾಮಾನ ಇಲಾಖೆಯಿಂದ ಭಾರೀ ‘ಮಳೆ’ ಮುನ್ನೆಚ್ಚರಿಕೆ : ಕಲಬುರಗಿ ಜಿಲ್ಲೆಯಲ್ಲಿ ಎರಡು ದಿನ ‘ರೆಡ್ ಅಲರ್ಟ್’ ಘೋಷಣೆIndia

ನವದೆಹಲಿ: ಯುಪಿಎಸ್‌ಇಇ  ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದ್ದು, ನಾಳೆ UPSEE ಫಲಿತಾಂಶ ಪ್ರಕಟವಾಗಲಿದೆ.

ಹೌದು. ಅಕ್ಟೋಬರ್ 15 ರಂದು UPSEE ಫಲಿತಾಂಶ 2020  ಪ್ರಕಟಿಸಲಾಗುವುದು ಎಂದು ಡಾ.ಪಿ.ಜೆ.ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ (ಎಕೆಟಿಯು) ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ – upsee.nic.in ನಲ್ಲಿ ನೋಡಬಹುದಾಗಿದೆ.

ರಾಜ್ಯದಲ್ಲಿ ‘ಕೊರೋನಾ ನಿಯಂತ್ರಣ’ಕ್ಕೆ ಸಿಎಂ ಯಡಿಯೂರಪ್ಪ ಮತ್ತೊಂದು ಮಹತ್ವದ ಕ್ರಮ

 

 

error: Content is protected !!