Tag: kanndanew newsnow dot com kanndanew newsnow dot com karnataka latest news karnataka latest news karnataka news karnataka news Karnataka. Karnataka. | Page 3 | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
State

ಬೆಂಗಳೂರು :  ರಾಜ್ಯದಲ್ಲಿ ಇಂದು ನಿನ್ನೆಗಿಂತ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲಿ ಇಂದು 2362 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 851212 ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಇಂದು 20 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 11430 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 8 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 3969 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 1176 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 351481 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 4215 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 808700 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ರಾಜ್ಯದಲ್ಲಿ 31063 ಸಕ್ರಿಯ ಪ್ರಕರಗಳಿದೆ.


State

ಬೆಂಗಳೂರು : ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ, ಚುನಾವಣಾ ಕಣಕ್ಕೆ ಇಳಿಯಲು ಅವಕಾಶ ನೀಡಿದ ರಾಷ್ಟ್ರೀಯ ನಾಯಕರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ.

ಉಪಚುನಾವಣೆ ಫಲಿತಾಂಶದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮನೆ ಮನೆಗೆ ಹೋದಾಗ ಮತದಾರರು ಅರಿಶಿನ ಕುಂಕು ಇಟ್ಟು ಆಶೀರ್ವದಿಸಿದ್ದಾರೆ. ಇವರಿಗೆಲ್ಲಾ ಧನ್ಯವಾಗಳು…ಪ್ರಚಾರದಲ್ಲಿ ಭಾಗಿಯಾದ ಮುಖಂಡರಿಗೆ, ಕಾರ್ಯಕರ್ತರಿಗೆ, ಬೆಂಬಲರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ.

‘ಕನಕಪುರ ಬಂಡೆ’ಯನ್ನು ಡೈನಾಮೆಟ್ ಇಟ್ಟು ಸ್ಪೋಟಿಸಲಾಗಿದೆ : ಆರ್ ಅಶೋಕ್ ಲೇವಡಿ


State

ಬೆಂಗಳೂರು : ಉಪಚುನಾವಣೆಯ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಹೇಳಿದರು.

ಆರ್ ಆರ್ ನಗರ ಉಪಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮತದಾರರು ತೀರ್ಪು ನೀಡಿದಾಗಿದೆ, ಅದನ್ನು ನಾವೆಲ್ಲರೂ ಸ್ವೀಕಾರ ಮಾಡಬೇಕು, ಪ್ರತಿ ಹಂತದಲ್ಲೂ ಬೆಂಬಲ ನೀಡಿದ ಕಾರ್ಯಕರ್ತರು. ಬೆಂಬಲಿಗರು, ಮತದಾರರಿಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ.

ಹೆಚ್ಚು ದಿನ ಹಣಬಲದ ಆಟ ನಡೆಯೋಲ್ಲ, ಇಷ್ಟು ಮತ ಬಿಜೆಪಿಗೆ ಬರಲು ಸಾಧ್ಯವಿಲ್ಲ,,ಸ್ವತಹ ಬಿಜೆಪಿ ಅಭ್ಯರ್ಥಿಗೆ ಇದು ಶಾಕ್ ಆಗಿರಬೇಕು ಎಂದಿದ್ದಾರೆ.

BIG BREAKING : ‘ಕರ್ನಾಟಕ ಪಶ್ಚಿಮ ಪದವೀಧರ ಪರಿಷತ್ ಚುನಾವಣೆ’ಯಲ್ಲಿ ‘ಬಿಜೆಪಿ ಅಭ್ಯರ್ಥಿ ಸಂಕನೂರ್’ ಭರ್ಜರಿ ಗೆಲುವು


State

ಬೆಂಗಳೂರು : ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 19 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ11, 410 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 5 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 3961 ಕ್ಕೆ ಏರಿಕೆಯಾಗಿದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೊರೊನಾ ಆತಂಕದಲ್ಲಿದ್ದ ರಾಜ್ಯದ ಜನತೆಗೆ ಕೊಂಚ ರಿಲೀಫ್ ಸಿಕ್ಕಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಇಂದು 1963 ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ.  ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,48,850 ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಇಂದು 2686  ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ 804485 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ರಾಜ್ಯದಲ್ಲಿ 32,936 ಸಕ್ರಿಯ ಪ್ರಕರಣಗಳಿದ್ದು, 876 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.


State

ತುಮಕೂರು : ನವೆಂಬರ್ 3ರಂದು ನಡೆದಂತ ಶಿರಾ ಉಪ ಚುನಾವಣೆಯ ಮತ ಏಣಿಕೆ ಕಾರ್ಯ ನಾಳೆ ಬೆಳಿಗ್ಗೆ ನಡೆಯಲಿದೆ. ಇದರೊಂದಿಗೆ ಕೈ ಅಭ್ಯರ್ಥಿ ಟಿ.ಬಿ ಜಯಚಂದ್ರ ಹಾಗೂ ಅವರ ಪತ್ನಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. 

ಹೌದು.. ಶಿರಾ ಉಪ ಚುನಾವಣೆಯ ಕೈ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಅವರ ಪತ್ನಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ದಂಪತಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಳೆ ನಡೆಯಲಿರುವ ಶಿರಾ ಉಪಚುನಾವಣೆಯ ಮತ ಎಣಿಕೆ ನಡೆಯುವ ಹಿನ್ನೆಲೆ ಆಸ್ಪತ್ರೆಯಿಂದಲೇ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿರುವ ಜಯಚಂದ್ರ ಗೆಲುವು ನಮ್ಮದೇ ಎಂಬ ಸಂದೇಶ ಹಂಚಿಕೊಂಡಿದ್ದಾರೆ.

ವಿಡಿಯೋ ಸಂದೇಶ ಕಳುಹಿಸಿರುವ ಟಿ ಬಿ ಜಯಚಂದ್ರ ನಾಳೆ ನಮಗೆ ಜಯ ಕಟ್ಟಿಟ್ಟ ಬುತ್ತಿ, ಕಾರ್ಯಕರ್ತರು ಎದೆಗುಂದಬೇಡಿ, ಕೊರೊನಾ ಸೋಂಕು ಧೃಡವಾದ ಹಿನ್ನೆಲೆ ನಾನು ಮತ ಎಣಿಕೆಗೆ ಬರಲಾಗುತ್ತಿಲ್ಲ, ನಿಮ್ಮೆಲ್ಲರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ, ಸಂತೋಷದಿಂದ ಮತ ಎಣಿಕೆಯಲ್ಲಿ ಪಾಲ್ಗೊಳ್ಳಿ,,ಜಯ ನಮ್ಮದೇ ಎಂಬ ಸಂದೇಶ ಹಂಚಿಕೊಂಡಿದ್ದಾರೆ.

ರಾಜ್ಯದ ಜನತೆಗೆ ‘ಖುಷಿ ಸುದ್ದಿ’ : ಇಳಿಮುಖವಾದ ಕೊರೊನಾ ಪ್ರಕರಣಗಳ ಸಂಖ್ಯೆ: ಇಂದು 1963 ಪಾಸಿಟಿವ್ ಕೇಸ್ ಪತ್ತೆ


State

ಬೆಂಗಳೂರು : ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್) (ಪುರುಷ ಮತ್ತು ಮಹಿಳಾ)-2007 ಮತ್ತು ಪೊಲೀಸ್ ಕಾನ್ ಸ್ಟೇಬಲ್ (ಸಿವಿಲ್) (ಕಲ್ಯಾಣ ಕರ್ನಾಟಕ) (ಪುರುಷ ಮತ್ತು ಮಹಿಳಾ)-358 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ನಡೆಸುವ ಪರೀಕ್ಷೆಯನ್ನು ಮುಂದೂಡಲಾಗಿದೆ.

ಕಾರಣಾಂತರಗಳಿಂದ ಪಿಎಸ್ ಟಿ /ಇಟಿ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಮುಂದಿನ ಆದೇಶದವರೆಗೂ ಸದರಿ ಪರೀಕ್ಷೆಗಳನ್ನು ಮುಂದೂಡಲಾಗಿದೆ, ಹಾಗೂ ಈ ವಿಷಯದ ಕುರಿತು ಅಭ್ಯರ್ಥಿಗಳಿಗೆ ಮೊಬೈಲ್ ಸಂದೇಶವನ್ನು ಕಳುಹಿಸಲಾಗುವೆಂದು ಪ್ರಕಟಣೆ ಹೊರಡಿಸಲಾಗಿದೆ.

 

 


State

ಬೆಂಗಳೂರು : ನವೆಂಬರ್ 17 ರಿಂದ ರಾಜ್ಯದಲ್ಲಿ  ಕಾಲೇಜು ಆರಂಭವಾಗಲಿದ್ದು, ಈ ಸಂಬಂಧ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಿದೆ. ಇದರ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳನ್ನು ಆರಂಭಿಸಲು ಮಹೂರ್ತ ಫಿಕ್ಸ್ ಮಾಡಿದೆ ಎನ್ನಲಾಗಿದೆ.

ಹೌದು, ಡಿಸೆಂಬರ್ ಮೊದಲ ವಾರದಲ್ಲಿ ಶಾಲೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಹಂತ ಹಂತವಾಗಿ 8-9-10-11-12 ತರಗತಿಗಳಿಗೆ ಶಾಲೆ ಆರಂಭಿಸಲು ನಿರ್ಧರಿಸಿದೆ.

ಇದಕ್ಕೂ ಮುನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಪೋಷಕರು, ಎಸ್ ಡಿ ಎಂಸಿ, ಶಿಕ್ಷಣ ಸಂಸ್ಥೆ, ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿತ್ತು, ಇದೀಗ  ಶಾಲೆ ಆರಂಭಿಸುವ ಬಗೆಗಿನ ಸಂಪೂರ್ಣ ವರದಿಯನ್ನು ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಗೆ ಸಲ್ಲಿಕೆ ಮಾಡಿದೆ.


State

ಬೆಂಗಳೂರು :  ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮಾಸ್ಕ್ ಧರಿಸದೇ ರಸ್ತೆಗಿಳಿಯುವವರಿಂದ ದಂಡ ವಸೂಲಿ ಮಾಡಲಾಗುತ್ತಿದೆ.

ಅಂತೆಯೇ ರಾಜ್ಯ ಸರ್ಕಾರ ಮಾಸ್ಕ್ ಹಾಕದಿದ್ದಕ್ಕೆ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 250 ರೂ ದಂಡ ವಿಧಿಸಲಾಗಿದೆ,

ಆರ್ ಆರ್ ನಗರ  ಚುನಾವಣೆ ಪ್ರಚಾರದ ವೇಳೆ ಮಾಸ್ಕ್ ಧರಿಸದ ಹಿನ್ನೆಲೆ ಎನ್ ಡಿ ಎಮ್ ಎ ಕೇಸ್ ನಡಿ 250 ರೂ ದಂಡ ವಿಧಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ನ್ನೂ. ಚುನಾವಣಾ ರ್ಯಾಲಿ ಆಯೋಜಕರ ಮೇಲೂ ಕೇಸ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

BREAKING : 2020-21ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ ಅರ್ಜಿ ಆಹ್ವಾನ : ನ.30 ಅರ್ಜಿ ಸಲ್ಲಿಸಲು ಕೊನೆಯ ದಿನ


State

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು  ತಾಲೂಕಿನ ಪ್ರಸಿದ್ದ ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಲ್ಕು ದಿನ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

ದೀಪಾವಳಿ ಹಬ್ಬದ ಹಿನ್ನೆಲೆ ಪ್ರತಿವರ್ಷ ಲಕ್ಷಾಂತರ ಜನರು ಬೆಟ್ಟಕ್ಕೆ ಆಗಮಿಸುತ್ತಿದ್ದರು, ಆದರೆ ಈ ವರ್ಷ ಕೊರೊನಾ ಸೋಂಕಿನ ಹಿನ್ನೆಲೆ ಹೆಚ್ಚು ಜನರು ಸೇರುವ ಹಾಗಿಲ್ಲ, ಭಕ್ತರ ಸುರಕ್ಷತೆ ದೃಷ್ಟಿ ಹಿನ್ನೆಲೆ ನಾಲ್ಕು ದಿನ ಭಕ್ತರಿಗೆ ಮಾದಪ್ಪನ ದರ್ಶನಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಆದೇಶಿಸಿದೆ.

ಬಿಗ್ ನ್ಯೂಸ್ : ನಾಳೆ ಉಪ ಚುನಾವಣೆ ಫಲಿತಾಂಶ : ಶಿರಾ ಕೈ ಅಭ್ಯರ್ಥಿಗೆ ಡಬ್ಬಲ್ ಟೆನ್ಷನ್

 


State

ಬೆಂಗಳೂರು :   ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರಗೆ ‘ಕೊರೊನಾ ಪಾಸಿಟಿವ್’ ಧೃಡವಾಗಿದೆ.

ಅಂತೆಯೇ ಜಯಚಂದ್ರ ಪತ್ನಿ ನಿರ್ಮಲಾಗೂ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಇಬ್ಬರನ್ನು ವಿಕ್ರಮ  ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ, ನಾಳೆ ಶಿರಾ ಉಪಚುನಾವಣೆಯ ಪಲಿತಾಂಶ ನಡೆಯಲಿದ್ದು,  ಮತ ಎಣಿಕೆ ಕೇಂದ್ರಕ್ಕೆ ಜಯಚಂದ್ರ ಗೈರಾಗಲಿದ್ದಾರೆ.

ಬ್ರೇಕಿಂಗ್ : ರಾಜ್ಯದಲ್ಲಿ ನ.17ರಿಂದ ಕಾಲೇಜು ಆರಂಭ : ಉನ್ನತ ಶಿಕ್ಷಣ ಇಲಾಖೆಯಿಂದ ‘ಮಾರ್ಗಸೂಚಿ ಬಿಡುಗಡೆ’


State

ಬೆಂಗಳೂರು :  ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮಾಸ್ಕ್ ಧರಿಸದೇ ರಸ್ತೆಗಿಳಿಯುವವರಿಂದ ದಂಡ ವಸೂಲಿ ಮಾಡಲಾಗುತ್ತಿದೆ.

ಅಂತೆಯೇ ರಾಜ್ಯ ಸರ್ಕಾರ ಮಾಸ್ಕ್ ಹಾಕದಿದ್ದಕ್ಕೆ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಂದಲೇ ದಂಡ ವಿಧಿಸಲಾಗಿದೆ ಎಂದು ಹೈಕೋರ್ಟ್ ಗೆ ಹೇಳಿದೆ. ತೇಜಸ್ವಿ ಸೂರ್ಯ ಅವರು ಸೆ.30 ರಂದು ನಡೆದ ರ್ಯಾಲಿಯಲ್ಲಿ ಮಾಸ್ಕ್ ಧರಿಸದೇ ಭಾಗಿಯಾಗಿದ್ದರು. ಈ ಹಿನ್ನೆಲೆ ಅವರಿಗೆ 250 ರೂ ದಂಡ ವಿಧಿಸಲಾಗಿದೆ.

BIGG NEWS : ‘ಯೋಗೇಶ್ ಗೌಡ’ ಹತ್ಯೆ ಕೇಸ್ : ಹಿಂಡಲಗಾ ಜೈಲಿಗೆ ಮಾಜಿ ಸಚಿವ ‘ವಿನಯ್ ಕುಲಕರ್ಣಿ’ ಶಿಫ್ಟ್


State

ಧಾರವಾಡ : ಯೋಗೀಶ್ ಗೌಡ ಕೊಲೆ ಪ್ರಕಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿದ್ದಂತ ಮಾಜಿ ಸಚಿವ ವಿನಯ್ ಕುಲಕರ್ಣಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿ ಧಾರವಾಢದ 3ನೇ ಹೆಚ್ಚುವರಿ ಕೋರ್ಟ್ ಆದೇಶಿಸಿದೆ.

ಈ ಹಿನ್ನೆಲೆ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಜೈಲಿಗೆ ಆಗಮಿಸಿದ 8 ಮಂದಿ ಸಿಬಿಐ ಅಧಿಕಾರಿಗಳು ಮೊದಲಿಗೆ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶದ ಪ್ರತಿ ನೀಡಿದ್ದಾರೆ. ಪ್ರಕ್ರಿಯೆ ನಂತರ ಸಿಬಿಐ ಅಧಿಕಾರಿಗಳು ವಾಪಸ್ ಆಗಿದ್ದಾರೆ.

ಇಂದು ಸಿಬಿಐನಿಂದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಂತ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡಿತ್ತು. ಹೀಗಾಗಿ ಅವರನ್ನು ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಧಾರವಾಡದ ಮೂರನೇ ಹೆಚ್ಚುವರಿ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು.

ಈ ಪ್ರಕರಣದ ಕುರಿತಂತೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸಿದಂತ ಧಾರವಾಡದ 3ನೇ ಹೆಚ್ಚುವರಿ ಕೋರ್ಟ್, ನವೆಂಬರ್ 23ರವರೆಗೆ 14 ದಿನಗಳ ಕಾಲ ಮತ್ತೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಹಾಸನ ಜಿಲ್ಲೆಯಲ್ಲಿ ಇಂದು 47 ಜನರಿಗೆ ಹೊಸದಾಗಿ ಕೊರೋನಾ ದೃಢ


State

ಬೆಂಗಳೂರು : ಕೊರೊನಾ ಭೀತಿಯ ನಡುವೆ ನವೆಂಬರ್ 17 ರಿಂದ ರಾಜ್ಯದಲ್ಲಿ ಕಾಲೇಜು ಆರಂಭವಾಗಲಿದ್ದು, ಈ ಹಿನ್ನೆಲೆ ಉನ್ನತ  ರಾಜ್ಯ ಶಿಕ್ಷಣ ಇಲಾಖೆ ಮಾರ್ಗಸೂಚಿ  ಬಿಡುಗಡೆ ಮಾಡಿದೆ. ನವೆಂಬರ್ 17 ರಿಂದ ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳು ಆರಂಭವಾಗಲಿದೆ.

ಮಾರ್ಗಸೂಚಿಯಲ್ಲಿ ಏನಿದೆ..?

1) ಮುಖ್ಯವಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಫೋಷಕರ ಒಪ್ಪಿಗೆ ಬೇಕು

2) ಕಾಲೇಜುಗಳಲ್ಲಿ ಕ್ಯಾಂಟೀನ್ ತೆರೆಯುವಂತಿಲ್ಲ

3) ವಿದ್ಯಾರ್ಥಿಗಳಿಗೆ ಅಧ್ಯಾಪಕರುಗಳಿಗೆ ಕಾಲೇಜು ಆರಂಭಕ್ಕೂ 3 ದಿನದ ಮುನ್ನ  ಕೊರೊನಾ ಟೆಸ್ಟ್ ಕಡ್ಡಾಯ

4) ಕಾಲೇಜುಗಳಲ್ಲಿ ಲೈಬ್ರರಿ ತೆರೆಯುವಂತಿಲ್ಲ

5) ಕಾಲೇಜುಗಳಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಅವಕಾಶ ಇರುವುದಿಲ್ಲ

6) ಕಾಲೇಜು ಬಾರದವರಿಗೆ ಆನ್ ಲೈನ್ ಕ್ಲಾಸ್ ಇರಲಿದೆ.

7) ಕಾಲೇಜು ಸಿಬ್ಬಂದಿಗಳಿಗೂ ಕೊರೊನಾ ಟೆಸ್ಟ್ ಕಡ್ಡಾಯ

8) ತರಗತಿಗಳಲ್ಲಿ ಸಾಮಾಜಿಕ ಅಂತರ ಮಾಸ್ಕ್ ಕಡ್ಡಾಯ, ಸ್ಯಾನಿಟೈಸ್ ಬಳಕೆ ಕಡ್ಡಾಯವಾಗಿರಲಿದೆ.

9) ಕಾಲೇಜುಗಳಲ್ಲಿ ಕ್ಯಾಂಟೀನ್ ತೆರೆಯುವಂತಿಲ್ಲ, ವಿದ್ಯಾರ್ಥಿಗಳು ಮನೆಯಿಂದ ಊಟ ನೀರು ತರಬೇಕು.

10) ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು

ಮುಂದುವರೆದು  *ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲಾ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯಸಾಮಾಗ್ರಿಗಳನ್ನು ಸ್ಯಾನಿಟೈಸ್ ಮಾಡಿಸುವುದು.

*ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚೆ ಕೋವಿಡ್-19 (RTPCR)‌ ಪರೀಕ್ಷೆಯನ್ನು ಮಾಡಿಕೊಂಡು Test Report Negative ಇದ್ದಲ್ಲಿ ಮಾತ್ರ ವಿ‍ಶ್ವವಿದ್ಯಾಲಯ / ಕಾಲೇಜುಗಳಿಗೆ ಹಾಜರಾಗುವುದು.

*ಎಲ್ಲಾ ಕಾಲೇಜುಗಳು ತಮ್ಮ ತಮ್ಮ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗೊಂದಿಗೆ Mapping ಮಾಡಿಕೊಳ್ಳವುದು.

*ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ ತನ್ನ ಸಹಪಾಠಿಗಳಲ್ಲೇನಾದರು ಕೋವಿಡ್‌ ಗೆ ಸಂಬಂಧಿಸಿದ ಲಕ್ಷಗಳನ್ನು ಕಂಡುಬಂದಲ್ಲಿ ಅದನ್ನು ಕೋವಿಡ್‌ ಕಾರ್ಯಪಡೆ / ಸೆಲ್‌ ಗಮನಕ್ಕೆ ತರುವಂತೆ ಸೂಚಿಸುವುದು.

*ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ಸ್ವತ: ತಂದು ಅವರೇ ಉಪಯೋಗಿಸುವುದು.

*ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್‌ ಮತ್ತು Face Shield/ Visor ಅನ್ನು ಧರಿಸುವುದು. ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್‌ಗಳನ್ನು ತೆರೆಯುವಂತಿಲ್ಲ. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎನ್‌.ಸಿ.ಸಿ ಹಾಗೂ ಎನ್‌.ಎಸ್‌.ಎಸ್‌ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ.

ರಂಜಿತ್ ಶೃಂಗೇರಿ

 

 


Cricket India Sports

ಅಬುಧಾಬಿ : ಜಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ ನಡೆಸಲಿದೆ. ಗೆದ್ದ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿದೆ.

ಟಾಸ್ ಗೆದ್ದು ಮೊದಲಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡು 189 ರನ್ ಕಲೆಹಾಕಿದೆ.  ರೈಸರ್ಸ್ ಗೆಲುವಿಗೆ 190 ರನ್ ಗುರಿ ನೀಡಿದೆ.

ಪಂದ್ಯದಲ್ಲಿ ಅಜಿಂಕ್ಯ ರಹಾನೆ ಬದಲು ಶಿಖರ್ ಧವನ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಮಾರ್ಕಸ್ ಸ್ಟೋಯಿನಸ್ ಉತ್ತಮ ಬ್ಯಾಟಿಂಗ್ ನಡೆಸಿದರು. ಮೊದಲ ಜೊತೆಯಾಟದಲ್ಲಿ ಕೇವಲ 8.2 ಓವರ್ ನಲ್ಲಿ 82 ರನ್ ಗಳಿಸಿತು.  ಧವನ್ ಹಾಗೂ ಶಿಮ್ರೋನ್ ಹೆಟ್ಮೆಯರ್ ಮೂರನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 28 ಎಸೆತದಲ್ಲಿ 52 ರನ್ ಕಲೆ ಹಾಕಿದರು.

 ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಲ್ಲಿ ಎದುರಿಸುವ ತಂಡ ಯಾವುದು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ತಂಡಗಳ ವಿವರ’

ಸನ್‌ರೈಸರ್ಸ್ ಹೈದರಾಬಾದ್: ಡಿ ವಾರ್ನರ್, ಎಸ್ ಗೋಸ್ವಾಮಿ, ಎಂ ಪಾಂಡೆ, ಕೆ ವಿಲಿಯಮ್ಸನ್, ಪಿ ಗರ್ಗ್, ಜೆ ಹೋಲ್ಡರ್, ಎ ಸಮದ್, ಆರ್ ಖಾನ್, ಎಸ್ ನದೀಮ್, ಎಸ್ ಶರ್ಮಾ, ಟಿ ನಟರಾಜನ್.

ದೆಹಲಿ ಕ್ಯಾಪಿಟಲ್ಸ್ : ಎಸ್ ಧವನ್, ಎ ರಹಾನೆ, ಎಸ್ ಅಯ್ಯರ್, ಎಂ ಸ್ಟೊಯಿನಿಸ್, ಆರ್ ಪಂತ್, ಎಸ್ ಹೆಟ್ಮಿಯರ್, ಪಿ ದುಬೆ, ಎ ಪಟೇಲ್, ಆರ್ ಅಶ್ವಿನ್, ಕೆ ರಬಾಡಾ, ಎ ನಾರ್ಟ್ಜೆ.

ಮತ್ತೆ ಮುರಿದುಬಿದ್ದ ‘ಅಧಿದೇವತೆ ಹಾಸನಾಂಬ’ ದೇವಾಲಯದ ಸ್ವಾಗತ ಕಮಾನು


State

ಹಾಸನ :   ಅಧಿ ದೇವತೆ ಹಾಸನಾಂಬೆ ದೇವಾಲಯ ಮತ್ತು ಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಹಿನ್ನೆಲೆ ನಗರದ ಹೊರ ವಲಯದಲ್ಲಿ ಹಾಕಲಾಗಿರುವ ಸ್ವಾಗತ ಕಮಾನು ಮುರಿದು ಬಿದ್ದಿದೆ.

ಹಾಸನದ ಹೊರವಲಯದ ಬೂವನಹಳ್ಳಿ ಬೈಪಾಸ್ ಬಳಿ ಹಾಕಲಾಗಿರುವ ಸ್ವಾಗತ ಕಮಾನು ಒಂದು ದಿವಸಕ್ಕೆ ಅರ್ಧಕ್ಕೆ ಮುರಿದು ಬಿದ್ದಿತ್ತು. ಅದನ್ನು ಸರಿಪಡಿಸಲಾಗಿತ್ತು. ಆದರೆ, ಮಾರನೇ ದಿನದಲ್ಲಿ ಮತ್ತೆ ಕುಸಿದು ಬಿದ್ದಿದೆ.ಹಾಸನ ನಗರಕ್ಕೆ ಪ್ರವೇಶಿಸುವ ಪ್ರಮುಖ ದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿತ್ತು. ಆದರೆ, ಈಗ ಮತ್ತೆ ಮುರಿದು ಬಿದ್ದಿದೆ.

​ಕೊರೊನಾ ಹಿನ್ನಲೆಯಲ್ಲಿ ಇತಿಹಾಸನದಲ್ಲಿ ಇದೇ ಮೊದಲ ಬಾರಿ ಹಾಸನಾಂಬ ದೇವಿ ದರ್ಶನಕ್ಕೆ​ ಸಾರ್ವಜನಿಕರಿಗೆ ನಿಷೇಧ ಮಾಡಿದೆ. ಎಲ್.ಇ.ಡಿ. ಪರದೆ ಹಾಗೂ ಆನ್ ಲೈನ್ ಮೂಲಕ ಹಾಸನಾಂಬ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ,

‘ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಾಮರಸ್ಯದ ಸೇತುವೆ’ಯಂತಿದ್ದ ‘ಕೆ.ಆರ್.ಕೃಷ್ಣರಾಜು’ ನಿಧನ


India

ಮಧ್ಯಪ್ರದೇಶ :   ಮಧ್ಯಪ್ರದೇಶದ ಇಂದೋರ್ ಆಡಳಿತವು ‘ಕಂಪ್ಯೂಟರ್ ಬಾಬಾ’  ನಾಮದೇವ್ ದಾಸ್ ತ್ಯಾಗಿ ಅವರ ಅಕ್ರಮ ‘ಆಶ್ರಮ’ ನಿರ್ಮಾಣವನ್ನು ನೆಲಸಮ ಮಾಡಿ ಅವರನ್ನು ಬಂಧಿಸಿದೆ.  

ಭಾರಿ ಪೊಲೀಸ್ ಉಪಸ್ಥಿತಿಯಲ್ಲಿ ಕಲೆಕ್ಟರ್ ಮನೀಶ್ ಸಿಂಗ್ ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅಜಯ್ ದೇವ್ ಶರ್ಮಾ ಅವರ ಸೂಚನೆಯ ಮೇರೆಗೆ ಭಾನುವಾರ ಕಾರ್ಯಾಚರಣೆ ನಡೆಸಲಾಯಿತು. ಇಂದೋರ್‌ನಲ್ಲಿ ಈ ಅಕ್ರಮ ‘ಆಶ್ರಮ’ ನಿರ್ಮಿಸಿದ ಪ್ರದೇಶವು ಗಾಂಧಿನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ‘ಕಂಪ್ಯೂಟರ್ ಬಾಬಾ’ ಎಂದೂ ಕರೆಯಲ್ಪಡುವ ನಾಮದೇವ್ ದಾಸ್ ತ್ಯಾಗಿ ಅವರಿಗೆ 2018 ರಲ್ಲಿ ಅಂದಿನ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರದಲ್ಲಿ ರಾಜ್ಯ ಸಚಿವರ ಸ್ಥಾನಮಾನವನ್ನು ನೀಡಲಾಯಿತು. ಆದಾಗ್ಯೂ, 2018 ರ ಮಧ್ಯಪ್ರದೇಶ ವಿಧಾನಸಭೆಗೆ ಸ್ವಲ್ಪ ಮೊದಲು ಕಾಂಗ್ರೆಸ್ಗೆ ತಮ್ಮ ಬೆಂಬಲವನ್ನು ನೀಡಲು ತ್ಯಾಗಿ ನಿರ್ಧರಿಸಿದರು ಸಿಎಂ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ರಾಜೀನಾಮೆ ನೀಡಿದ ನಂತರ ಚುನಾವಣೆ ಮತ್ತು ಪಕ್ಷದ ಪರವಾಗಿ ಪ್ರಚಾರ ನಡೆಸಿದರು. ಕಮಲ್ ನಾಥ್ ಅವರೊಂದಿಗೆ ಮುಖ್ಯಮಂತ್ರಿಯಾಗಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ನಾಮದೇವ್ ದಾಸ್ ತ್ಯಾಗಿ ‘ಕಂಪ್ಯೂಟರ್ ಬಾಬಾ’ ಅವರನ್ನು ನರ್ಮದಾ-ಕ್ಷಿಪ್ರ ರಿವರ್ ಟ್ರಸ್ಟ್ನ ಅಧ್ಯಕ್ಷರನ್ನಾಗಿ ಮಾಡಲಾಯಿತು. ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ‘ಕಂಪ್ಯೂಟರ್ ಬಾಬಾ’ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು.

ಯೋಗೇಶ್ ಗೌಡ ಹತ್ಯೆ ಕೇಸ್ : ಸಿಬಿಐ ವಿಚಾರಣೆಗೆ ಹಾಜರಾದ ವಿನಯ್ ಕುಲಕರ್ಣಿ ಆಪ್ತ ‘ನಾಗರಾಜ್ ಗೌರಿ’


State

ಹುಬ್ಬಳ್ಳಿ :  ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ನಾಗರಾಜ್ ಗೌರಿಯನ್ನು ಸಿಬಿಐ ವಿಚಾರಣೆ ನಡೆಸಿದೆ.

ವಿನಯ್ ಕುಲಕರ್ಣಿ ವಿಚಾರಣೆಯು ಸಿ ಎ ಆರ್ ಮೈದಾನದಲ್ಲಿ ನಡೆಯುತ್ತಿದ್ದು, ಅಲ್ಲಿಗೆ ನಾಗರಾಜ್ ಗೌರಿಯನ್ನು ಕರೆಸಿಕೊಳ್ಳಲಾಗಿದೆ, ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದು, ಸಿಬಿಐ ಕಸ್ಟಡಿಗೆ ಪಡೆದುಕೊಂಡಿದೆ.

ನಡು ರಸ್ತೆಯಲ್ಲೇ ಇಬ್ಬರಿಗೆ ಮನಬಂಧಂತೆ ಥಳಿಸಿದ ‘ಟ್ರಾಫಿಕ್ ಪೊಲೀಸ್’ : ‘ಗೂಂಡಾಗಿರಿ ವೀಡಿಯೋ’ ವೈರಲ್.!

 


State

ಶಿವಮೊಗ್ಗ :  2020-21 ನೇ ಶೈಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ತರಗತಿಗಳ ಪ್ರವೇಶಾತಿ ದಿನಾಂಕವನ್ನು 13:11:2020 ರವರೆಗೆ ವಿಸ್ತರಿಸಿ ಕುವೆಂಪು ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.

ನವೆಂಬರ್ 17 ರಿಂದ ಆನ್ ಲೈನ್ /ಆಫ್ ಲೈನ್ ಮೂಲಕ ಪುನಾರಂಭಿಸಲು ಕುವೆಂಪು ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಿಗೆ ಕುವೆಂಪು ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದ್ದು,  ತರಗತಿ ಆರಂಭದ ಜೊತೆಗೆ  2020-21 ನೇ ಶೈಕ್ಷಣಿಕ ಸಾಲಿನ  ಸ್ನಾತಕ ಪದವಿ ಗಳ ಪ್ರವೇಶಾತಿ ದಿನಾಂಕವನ್ನು ಯಾವುದೇ ದಂಡ ಶುಲ್ಕವಿಲ್ಲದೇ ದಿನಾಂಕ  ನ.13 ರವರೆಗೆ ವಿಸ್ತರಿಸಲಾಗಿದೆ.

ಮಾನ್ಯ ಕುಲಪತಿಯವರ ಅನುಮೋದನೆ ಅನ್ವಯ ಪ್ರವೇಶಾತಿ ಹಾಗೂ ತರಗತಿ ಪ್ರಾರಂಭದ ದಿನಾಂಕವನ್ನು ಘೋಷಿಸಿದ್ದು, ಅದರನ್ವಯ ಕ್ರಮ ಕೈಗೊಳ್ಳಲು ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

 

 


India

ಚೆನ್ನೈ: ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ನಾಳೆ (ನವೆಂಬರ್ 9) ಅಧಿಕೃತವಾಗಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಈ ಬಗ್ಗೆ ಸೆಂಥಿಲ್ ಅವರೇ ಟ್ವಿಟರ್ ಮೂಲಕ ಘೋಷಿಸಿದ್ದು, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ನವೆಂಬರ್ 9ರಂದು ತಮಿಳುನಾಡಿನ ಚೆನ್ನೈನಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಿದ್ದಾರೆ. .

ಎಲ್ಲಿದ್ದರೂ ನನ್ನ ಜೀವನದುದ್ದಕ್ಕೂ ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಧ್ವನಿಯಾಗಲು ಪ್ರಯತ್ನಿಸುತ್ತಿರುವ ಕಾರ್ಯಕರ್ತನಾಗಿದ್ದೇನೆ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ಅದೇ ರೀತಿ ಮುಂದುವರಿಯುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. 2009ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ 2017ರ ಅಕ್ಟೋಬರ್ 10ರಿಂದ ದ‌.ಕ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತ್ರ 2019ರ ಸೆ.6 ರಂದು ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಸೆಂಥಿಲ್ ಆ ಬಳಿಕ ಸಿಎಎ ಸೇರಿ ರಾಜ್ಯದಲ್ಲಿ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು.

ಕೆಎಎಸ್ ಅಧಿಕಾರಿ ಆಪ್ತೆ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ, ಬೆಳ್ಳಿ.! ನೋಡಿ ದಂಗಾದ ಅಧಿಕಾರಿಗಳು.!


India

ಡಿಜಿಟಲ್ ಡೆಸ್ಕ್ :   ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಇಂದು ನಿರ್ಮಾಪಕ ಫಿರೋಜ್ ನಾಡಿಯಾಡ್‌ವಾಲಾ ಅವರ ಮನೆಯಲ್ಲಿ ದಾಳಿ ನಡೆಸಿದ್ದಾರೆ. 

 ಅಧಿಕಾರಿಗಳು ನಿರ್ಮಾಪಕರ ಮನೆಯಿಂದ ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ದಾಳಿಯ ಸಮಯದಲ್ಲಿ ನಿರ್ಮಾಪಕ ಮನೆಯಲ್ಲಿ ಇರಲಿಲ್ಲ. ಅವರ ಪತ್ನಿ ಶಬಾನಾ ಸಯೀದ್ ಅವರನ್ನು ಎನ್‌ಸಿಬಿ ಕಚೇರಿಗೆ ವಿಚಾರಣೆಗೆ ಕರೆದೊಯ್ಯಲಾಯಿತು. ಫಿರೋಜ್ ನಾಡಿಯಾಡ್ವಾಲಾ ಅವರ ಮನೆಯಲ್ಲಿ ನಡೆಸಿದ ಶೋಧದ ವೇಳೆ ಎನ್‌ಸಿಬಿ 10 ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ.

ನವೆಂಬರ್ 6 ರಂದು ಎನ್‌ಸಿಬಿಯಿಂದ ಬಂಧಿಸಲ್ಪಟ್ಟ ವಾಹಿದ್ ಅಬ್ದುಲ್ ಕದಿರ್ ಶೇಖ್ ಅಕಾ ಸುಲ್ತಾನ್ ಅವರಿಂದ ಇದನ್ನು ಸಂಗ್ರಹಿಸಲಾಗಿದೆ. ಶಬಾನಾ ಅವರನ್ನು ಎನ್‌ಸಿಬಿ ಕಚೇರಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ತಮ್ಮ ಹೇಳಿಕೆಯನ್ನು ದಾಖಲಿಸಿದರು ಮತ್ತು ನಂತರ ಅಧಿಕಾರಿಗಳು ಅವರನ್ನು ಬಂಧಿಸಿದರು. ಬಂಧನಕ್ಕೊಳಗಾದ ಕೆಲವು ಶಂಕಿತರ ವಿಚಾರಣೆಯಲ್ಲಿ ನಿರ್ಮಾಪಕರ ಹೆಸರು ಬಂದ ನಂತರ ಎನ್‌ಸಿಬಿ ಫಿರೋಜ್ ನಾಡಿಯಾಡ್ವಾಲಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.ಶಬಾನಾ ಸಯೀದ್ ಸೇರಿದಂತೆ ಎನ್‌ಸಿಬಿ ಡ್ರಗ್ಸ್ ತನಿಖೆಯಲ್ಲಿ ಐದು ಜನರನ್ನು ಬಂಧಿಸಿದೆ.

3 ದಿನ ಪಟಾಕಿ ಹೊಡೆದರೆ ಬೆಂಗಳೂರು ಏನು ಹಾಳಾಗಿ ಹೋಗಲ್ಲ – ವಾಟಾಳ್ ನಾಗರಾಜ್


State

ಡಿಜಿಟಲ್ ಡೆಸ್ಕ್ :  ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್  ಇಲ್ಲಿದೆ. ಹೌದು, ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗಿದೆ.

ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು ,ಜೈನರು, ಬೌದ್ದ, ಪಾರ್ಸಿ) ವರ್ಗದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕಾಗಿ  ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 30:11:2020 ರವರೆಗೆ ವಿಸ್ತರಣೆ ಮಾಡಿ ಅಲ್ಪಸಂಖ್ಯಾತರ ಇಲಾಖೆ ಆದೇಶ ಹೊರಡಿಸಿದೆ.

ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ ನವೆಂಬರ್ 30 ರೊಳಗಾಗಿ www.scholarships.gov.in ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಆಯಾ ತಾಲೂಕಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಬಹುದಾಗಿದೆ.

ರಂಜಿತ್ ಶೃಂಗೇರಿ


Film Other Film

ಡಿಜಿಟಲ್ ಡೆಸ್ಕ್ : ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ತಮ್ಮ ಮಧುಚಂದ್ರಕ್ಕಾಗಿ ಮಾಲ್ಡೀವ್ಸ್ ಸ್ಥಳಕ್ಕೆ ತೆರಳಿದ್ದಾರೆ. 

ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಮಾಲ್ಡೀವ್ಸ್ನಲ್ಲಿ ತಮ್ಮ ಮಧುಚಂದ್ರವನ್ನು ಆನಂದಿಸುತ್ತಿದ್ದಾರೆ. ತಮ್ಮ ಮಧುಚಂದ್ರದಿಂದ ಪತಿ ಗೌತಮ್ ಅವರೊಂದಿಗೆ ಕೆಲವು ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಅಕ್ಟೋಬರ್ 30 ರಂದು ಮುಂಬೈನ ತಾಜ್ ಕೊಲಾಬಾದಲ್ಲಿ ವಿವಾಹವಾಗಿದ್ದರು. ಕಾಜಲ್ ಅಗರ್ವಾಲ್ ಅವರು ತಮ್ಮ ಬಹುಕಾಲದ ಗೆಳೆಯ ಗೌತಮ್ ಕಿಚ್ಲು ಅವರನ್ನು ಅಕ್ಟೋಬರ್ 30 ರಂದು ಮದುವೆಯಾಗಿದ್ದರು.

ಚುನಾವಣಾ ಫಲಿತಾಂಶದ ವೇಳೆ ಟ್ರಂಪ್‌ ಏನು ಮಾಡ್ತಾ ಇದ್ದರು ಗೊತ್ತಾ?


Cricket India Sports

ಅಬುಧಾಬಿ : ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಲ್ಲಿ ಎದುರಿಸುವ ತಂಡ ಯಾವುದು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ಜಯೇದ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ ನಡೆಸಲಿದೆ. ಗೆದ್ದ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿದೆ.

ಸನ್ ರೈಸರ್ಸ್  ಹೈದರಾಬಾದ್ ವಿರುದ್ಧದ ಕ್ವಾಲಿಫೈಯರ್ -2 ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದ್ದಾರೆ.

ತಂಡಗಳ ವಿವರ’

ಸನ್‌ರೈಸರ್ಸ್ ಹೈದರಾಬಾದ್: ಡಿ ವಾರ್ನರ್, ಎಸ್ ಗೋಸ್ವಾಮಿ, ಎಂ ಪಾಂಡೆ, ಕೆ ವಿಲಿಯಮ್ಸನ್, ಪಿ ಗರ್ಗ್, ಜೆ ಹೋಲ್ಡರ್, ಎ ಸಮದ್, ಆರ್ ಖಾನ್, ಎಸ್ ನದೀಮ್, ಎಸ್ ಶರ್ಮಾ, ಟಿ ನಟರಾಜನ್.

ದೆಹಲಿ ಕ್ಯಾಪಿಟಲ್ಸ್ : ಎಸ್ ಧವನ್, ಎ ರಹಾನೆ, ಎಸ್ ಅಯ್ಯರ್, ಎಂ ಸ್ಟೊಯಿನಿಸ್, ಆರ್ ಪಂತ್, ಎಸ್ ಹೆಟ್ಮಿಯರ್, ಪಿ ದುಬೆ, ಎ ಪಟೇಲ್, ಆರ್ ಅಶ್ವಿನ್, ಕೆ ರಬಾಡಾ, ಎ ನಾರ್ಟ್ಜೆ.

ʼಬಕ್ರೀದ್ʼಗೆ ಕುರಿ ಬಲಿ ನಿಲ್ಲಿಸೋದಾದ್ರೆ, ನಾವು ದೀಪಾವಳಿಗೆ ಪಟಾಕಿ ಸಿಡಿಸೋಲ್ಲ: ಸಾಕ್ಷಿ ಮಹರಾಜ್..!


India State

ನವದೆಹಲಿ: ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಮರು ಆರಂಭಕ್ಕೆ ಯುಜಿಸಿ ಮತ್ತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರನ್ವಯ ಕಾಲೇಶುರು ಮಾಡಿ, ಆದ್ರೆ ಅರ್ಧಕ್ಕಿಂತ ಜಾಸ್ತಿ ವಿದ್ಯಾರ್ಥಿಗಳು ಬೇಡ ಎಂದಿದೆ.

ಹೌದು, ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​, ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳನ್ನ ಮರು ಆರಂಭಿಸಬಹುದು. ಆದರೆ ಶೇ. 50ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಇರಬಾರದು ಎಂಬ ಯುಜಿಸಿ ಮಾರ್ಗಸೂಚಿಯನ್ನ ಪಾಲಿಸಲೇಬೇಕು. ಕೋವಿಡ್​-19 ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ.

ಹಾಸ್ಟೆಲ್​ಗಳನ್ನ ಮತ್ತೆ ತೆರೆಯುವ ಸಾಧ್ಯತೆ ಇದೆ. ಆದ್ರೆ, ಒಂದು ಕೊಠಡಿಯಲ್ಲಿ ಒಬ್ಬನಿಗಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು. ಇನ್ನು ಸೋಂಕಿತ ವಿದ್ಯಾರ್ಥಿಗೆ ಯಾವುದೇ ಕಾರಣಕ್ಕೂ ಹಾಸ್ಟೆಲ್​ನಲ್ಲಿ ಉಳಿಯಲು ಅವಕಾಶವಿಲ್ಲ ಎಂದವರು ತಿಳಿಸಿದ್ದಾರೆ.

ಇನ್ನು ವಿದ್ಯಾರ್ಥಿಗಳಿಗೆ ಆನ್ಲೈನ್​ ಕ್ಲಾಸ್​ ಮೂಲಕ ಅಭ್ಯಾಸ ಮಾಡುವ ಅವಕಾಶವಿದ್ದು, ವಿಜ್ಞಾನ, ತಂತ್ರಜ್ಞಾನ ಹೊರತಾದ ಇತರ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಶಿಕ್ಷಣ ಇರಲಿದೆ ಎಂದರು.

‘ನಿನ್ನೆಗಿಂತ ಇಂದು ಚೆನ್ನ’ : ರಾಜ್ಯಾದ್ಯಂತ ‘ಕೊರೊನಾ’ ಸೋಂಕಿತರ ಸಂಖ್ಯೆ ಇಳಿಮುಖ : ‘2258’ ಪಾಸಿಟಿವ್ ಕೇಸ್ ಪತ್ತೆ


State

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಇಂದು 2258 ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ.  ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,44,147 ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 22 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ11369 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 2235 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ 7994435 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ರಾಜ್ಯದಲ್ಲಿ 33,320 ಸಕ್ರಿಯ ಪ್ರಕರಣಗಳಿದ್ದು, 887 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.


India

ಡಿಜಿಟಲ್ ಡೆಸ್ಕ್ :  ಬಿಹಾರ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಯಲ್ಲಿ ಟುಡೇ ಚಾಣಾಕ್ಯ ಪ್ರಕಟಿಸಿದ ಫಲಿತಾಂಶ ಅಚ್ಚರಿಗೆ ಕಾರಣವಾಗಿದೆ.

ಟುಡೇ ಚಾಣಾಕ್ಯ ಪ್ರಕಾರ ಬಿಹಾರದಲ್ಲಿ ಲಾಲೂ ಪ್ರಸಾದ್ ನೇತೃತ್ವದ ಆರ್ ಜೆ ಡಿ ಅಧಿಕಾರಕ್ಕೆ ಬರುವುದು ಖಚಿತ ಎನ್ನಲಾಗಿದೆ. ಟುಡೇ ಚಾಣಾಕ್ಯ ಮಹಾಘಟಬಂಧನ್ ಗೆ ಬರೋಬ್ಬರಿ 180 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ. ಇನ್ನೂ ಎನ್ ಡಿ ಎ ಒಕ್ಕೂಟ 55 ಕ್ಷೇತ್ರಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದರೆ. ಎಲ್ ಜೆ ಪಿ 0, ಇತರೆ ಕ್ಷೇತ್ರಗಳು ಕೇವಲ 8 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

‘KAS’ ಅಧಿಕಾರಿ ಡಾ.ಸುಧಾ ನಿವಾಸದ ಮೇಲೆ ದಾಳಿ : ಮಹತ್ವದ ದಾಖಲೆಗಳು ವಶಕ್ಕೆ


State

ಬೆಂಗಳೂರು : ಕೆ ಎಎಸ್ ಅಧಿಕಾರಿ ಡಾ. ಸುಧಾ ಅವರ ನಿವಾಸ ಹಾಗೂ ವಿವಿಧ ಸ್ಥಳಗಳ ಮೇಲೆ ನಡೆಸಿದ ಎಸಿಬಿ ದಾಳಿ ಇದೀಗ ಅಂತ್ಯವಾಗಿದೆ.

ಸತತ 12 ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಎಸಿಬಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಎಸಿಬಿ  ದಾಖಲೆ ಸಮೇತ ಹೊರಟಿದೆ.

 ಸುಧಾ ನಿವಾಸದಿಂದ ಚಿನ್ನ, ಆಸ್ತಿ ಪತ್ರ ಸೇರಿದಂತೆ ಮಹತ್ವದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುಧಾ ಅವರ ಸಂಬಂಧಪಟ್ಟ ಸ್ಥಳಗಳಲ್ಲಿ ಬೆಳಗ್ಗೆಯಿಂದ ಎಸಿಬಿ ಶೋಧ ಕಾರ್ಯ ನಡೆಸುತ್ತಿದ್ದರು.

ಜನಸಾಮಾನ್ಯರು ʼಕೊರೊನಾ ಲಸಿಕೆʼ ಪಡೆಯಲು ʼ2022ʼರವರೆಗೆ ಕಾಯಲೇಬೇಕು: ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ


India

ಡಿಜಿಟಲ್ ಡೆಸ್ಕ್ :  ಒಮನಿಗೆ ತೆರಳುವ ಪ್ರಯಾಣಿಕರಿಗೆ ಕೊರೊನಾ ನೆಗೇಟಿವ್ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. 

ಹೌದು. ನವೆಂಬರ್ ಹನ್ನೊಂದರ ಬಳಿಕ ಒಮನಿಗೆ ಪ್ರಯಾಣಿಸುವ ಎಲ್ಲಾ ಯಾತ್ರಿಕರಿಗೂ ಈ ಷರತ್ತು ಅನ್ವಯವಾಗಲಿದೆ. ಪ್ರಯಾಣಿಕರು ಕೊರೋನಾ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.

ಇದರ ಜೊತೆಗೆ ಯಾವುದೇ ದೇಶಗಳಿಂದ ಒಮನ್ ತಲುಪಿದ ಪ್ರಯಾಣಿಕರು ಏಳು ದಿನಗಳ ಕ್ವಾರೈಂಟೈನ್ ಅವಧಿಯನ್ನೂ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಜನಸಾಮಾನ್ಯರು ʼಕೊರೊನಾ ಲಸಿಕೆʼ ಪಡೆಯಲು ʼ2022ʼರವರೆಗೆ ಕಾಯಲೇಬೇಕು: ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ


Film India

ನವದೆಹಲಿ : ಕಣ್ಸನ್ನೆಯಿಂದಲೇ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸ್ಟಾರ್ ಆಗಿ ಸಂಚಲನ ಮೂಡಿಸಿದ್ದ ನಟಿ ಪ್ರಿಯಾ ಪ್ರಕಾಶ್ ಇದೀಗ ಮತ್ತೊಂದಷ್ಟು ಹಾಟ್ ಫೋಟೋಗಳನ್ನು ಹಂಚಿಕೊಂಡು ಸದ್ದು ಮಾಡಿದ್ದಾರೆ.

ಎದೆ ಸೀಳು ಕಾಣುವಂತೆ ವಸ್ತ್ರ ಧರಿಸಿ ಕ್ಯಾಮೆರಾಗೆ ಫೋಸ್ ನೀಡಿರುವ ನಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದ್ದಾರೆ. ಸದ್ಯ ಪ್ರಿಯಾ ಪ್ರಕಾಶ್ ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲಕ್ಷಗಟ್ಟಲೇ ಲೈಕ್ಸ್ ಗಿಟ್ಟಿಸಿಕೊಂಡಿದೆ.

ರಾಜ್ಯದಲ್ಲಿ ಮುಂದಿನ ಎರಡು ದಿನ ಭಾರೀ ‘ಮಳೆ’ ಸಾಧ್ಯತೆ : ‘ಹವಾಮಾನ ಇಲಾಖೆ’ ಮುನ್ನೆಚ್ಚರಿಕೆ


State

ಬೆಂಗಳೂರು:  ಆಲ್ ಇಂಡಿಯಾ ರೇಡಿಯೋ (ಎಐಆರ್) ನ ಭಾಗವಾಗಿರುವ ಆಕಾಶವಾಣಿ ಬೆಂಗಳೂರು ಇತ್ತೀಚೆಗೆ ಕನ್ನಡದಲ್ಲಿ 11 ನರ್ಸರಿ ಪ್ರಾಸಗಳನ್ನು ಪ್ರಸಾರ ಮಾಡಿದೆ.

ಕರ್ನಾಟಕದಲ್ಲಿ 65,000 ಅಂಗನವಾಡಿಗಳಿದ್ದು, ಸುಮಾರು 16 ಲಕ್ಷ ಮಕ್ಕಳಿದ್ದಾರೆ. “ಪೂರ್ವ ಶಾಲೆಗಳನ್ನು ಕಲಿಕೆಗೆ ಪರಿಚಯಿಸಲು ಕನ್ನಡ ಪ್ರಾಸಗಳು ಉತ್ತಮ ಮಾರ್ಗವೆಂದು ನಾವು ಭಾವಿಸಿದ್ದೇವೆ” ಎಂದು ಆಕಾಶವಾಣಿ ಕಾರ್ಯಕ್ರಮಗಳ ಸಹಾಯಕ ನಿರ್ದೇಶಕ ಎನ್ ರಘು ಹೇಳಿದ್ದಾರೆ.

ಆಕಾಶವಾಣಿಯ ವಿವಿಧ ರೇಡಿಯೊ ಕೇಂದ್ರಗಳಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ರಘು ಚಿತ್ರಕಥೆ ಮತ್ತು ಪ್ರಸ್ತುತಪಡಿಸಿದರು. . ಇದು 120 ಪ್ರಾಸಗಳನ್ನು ಹೊಂದಿತ್ತು, ಮತ್ತು ಅವುಗಳಲ್ಲಿ ಯಾವುದನ್ನೂ ಶಾಲೆಗಳಲ್ಲಿ ಕಲಿಸಲಾಗುತ್ತಿಲ್ಲ. ಪ್ರಾಸಗಳು ಸರಳವಾಗಿದ್ದವು ಎಂದಿದ್ದಾರೆ.


State

ಬೆಂಗಳೂರು : ಕೆ ಎಎಸ್ ಅಧಿಕಾರಿ ಡಾ. ಸುಧಾ ಅವರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಬೆಳಗ್ಗೆಯಿಂದ ಪೊಲೀಸರಯ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದಿಗ ಈ ಬಗ್ಗೆ ಎಸಿಪಿ ಐಜಿಪಿ ಚಂದ್ರಶೇಖರ್ ಮಾಹಿತಿ ನೀಡಿದ್ದು, ಇದುವರೆಗೆ ನಮಗೆ ಸಾಕಷ್ಟು ದಾಖಲೆಗಳು ಸಿಕ್ಕಿದೆ. ಶೋಧ ಕಾರ್ಯ ಮುಗಿದ ಮೇಲೆ ಏನೆಲ್ಲಾ ಸಿಕ್ಕಿದೆ ಎಂಬುದನ್ನು ತಿಳಿಸುತ್ತೇವೆ, ಸದ್ಯ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದೇವೆ ಎಂದರು.

ಸದ್ಯ ಐದು ಸ್ಥಳಗಳಲ್ಲಿ ಶೋಧಕಾರ್ಯ ಮುಗಿದಿದೆ. ಬೆಂಗಳೂರಿನ ನಾಲ್ಕು ಸ್ಥಳದಲ್ಲಿ ದಾಳಿ ಮಾಡಲಾಗಿತ್ತು. ಮೈಸೂರು, ಉಡುಪಿಯಲ್ಲಿ ದಾಳಿ ನಡೆಸಲಾಗಿತ್ತು. ಸದ್ಯ ಸರ್ಚಿಂಗ್ ಕೆಲಸ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.


State

ಬೆಂಗಳೂರು : ರಾಜ್ಯದ ಹಲವು ಭಾಗಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ಇನ್ನೆರಡು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವುದರಿಂದ ನ. 9 ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ.  ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಇಂದು ಮತ್ತು ನಾಳೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

BIGGNEWS: ಬಿಹಾರದಲ್ಲಿ ಈ ಬಾರಿ ‘ಅತಂತ್ರ ವಿಧಾನಸಭೆ’- ಇಲ್ಲಿದೆ Exit Pollನ ಮಾಹಿತಿ


India

ಡಿಜಿಟಲ್ ಡೆಸ್ಕ್ :  ಪಾನಿಪುರಿ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ಸುದ್ದಿ. ಕಂಡ ಕಂಡಲೆಲ್ಲಾ ಪಾನಿಪುರಿ ಚಪ್ಪರಿಸುವವರು ಎಚ್ಚರದಿಂದಿರಿ.

ಹೌದು. ಮಹಾರಾಷ್ಟ್ರದ ಕೊಲ್ಹಾಪುರದ ವ್ಯಾಪಾರಿಯೊಬ್ಬ ಪಾನಿಪುರಿ ತಯಾರಿಕೆಗೆ ಶೌಚಾಲಯದ ನೀರು ಬಳಕೆ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,

ತಳ್ಳು ಗಾಡಿ ವ್ಯಾಪಾರಿಯೊಬ್ಬ ಪಾನಿಪುರಿ ತಯಾರಿಕೆಗೆ ಶೌಚಾಲಯದ ನೀರು ಬಳಸುತ್ತಿದ್ದನ್ನು ಗ್ರಾಹಕರೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಳಿಕ ರೊಚ್ಚಿಗೆದ್ದ ಜನರು ಆತನ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಘಟನೆ ನಡೆದಿದೆ.

BIGNEWS: ಆರ್ ಆರ್ ನಗರ ಹಾಗೂ ಶಿರಾದಲ್ಲೂ ಬಿಜೆಪಿ ಗೆಲುವಿನ ‘ಕಮಲ್‌’-ಸಿ ವೋಟರ್ ಸಮೀಕ್ಷೆಯಲ್ಲಿ ಬಹಿರಂಗ

 


State

ಬೆಂಗಳೂರು : ರಾಜ್ಯದಲ್ಲಿ ಇಂದು 2960 ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,41,889 ಕ್ಕೆ ಏರಿಕೆಯಾಗಿದೆ.

ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 35 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ11247 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 2701 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ 797204 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 33,319 ಸಕ್ರಿಯ ಪ್ರಕರಣಗಳಿದ್ದು, 901 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

BIGG NEWS : ‘UG’, ‘PG’ ಪ್ರಾಧ್ಯಾಪಕರಿಗೆ ಕುವೆಂಪು ವಿವಿಯಿಂದ ಮಹತ್ವದ ಸೂಚನೆ


State

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ 2020-21 ನೇ ಸಾಲಿನ ಎಲ್ಲಾ ಸ್ನಾತಕ/ಸ್ನಾತಕೋತ್ತರ/ಬಿ.ಪಿ.ಇ.ಡಿ/ಪಿಜಿ ಡಿಪ್ಲೋಮಾ ಪದವಿ ತರಗತಿಗಳ ಪ್ರಾರಂಭಕ್ಕೆ ಪೂರ್ವಸಿದ್ದತೆ ಮಾಡಿಕೊಳ್ಳಲು ವಿಶ್ವವಿದ್ಯಾಲಯ ಅಧಿಸೂಚನೆ ಹೊರಡಿಸಿದೆ.

ವಿಶ್ವವಿದ್ಯಾಲಯದ ಹಾಗೂ  ಘಟಕ/ನೇರ ಆಡಳಿತದ/ಸಂಯೋಜಿತ ಕಾಲೇಜುಗಳ ಎಲ್ಲಾ ಅಧ್ಯಾಪಕರುಗಳಿಗೆ 04:11:2020 ರಿಂದ 11:11:2020 ರವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚಿಸಿದೆ.

ಇನ್ನೂ, ವಿಭಾಗಗಳ ಅಧ್ಯಕ್ಷರುಗಳು /ಪ್ರಾಂಶುಪಾಲರು ಸೂಚಿಸುವ ಕಾಲೇಜುಗಳಲ್ಲಿನ ತುರ್ತು ಕೆಲಸ ಮತ್ತು ಪರೀಕ್ಷಾ ಕಾರ್ಯಗಳಿದ್ದಲ್ಲಿ ಕಡ್ಡಾಯವಾಗಿ ಅಧ್ಯಾಪಕರು ಹಾಜರಾಗುವಂತೆ ಸೂಚನೆ ನೀಡಲಾಗಿದೆ.

2020-21 ನೇ ಶೈಕ್ಷಣಿಕ ಸಾಲಿನ ಸ್ನಾತಕ/ಸ್ನಾತಕೋತ್ತರ/ ಪದವಿ ಹಾಗೂ ಡಿಪ್ಲೋಮಾ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ತರಗತಿಗಳನ್ನು ನವೆಂಬರ್ 17 ರಿಂದ ಆನ್ ಲೈನ್ /ಆಫ್ ಲೈನ್ ಮೂಲಕ ಪುನಾರಂಭಿಸಲು ಕುವೆಂಪು ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಿಗೆ ಕುವೆಂಪು ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.

ರಂಜಿತ್ ಶೃಂಗೇರಿ


State

ಬೆಂಗಳೂರು :  ಕೆಲಸಮಯಗಳ ಹಿಂದಷ್ಟೇ ರಾಜ್ಯದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ ಸಿಎಂ ಯಡಿಯೂರಪ್ಪ ಇದೀಗ ಯೂ ಟರ್ನ್ ಹೊಡೆದಿದ್ದಾರೆ.

ಹೌದು. ಇದೀಗ ಮತ್ತೊಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಯಡಿಯೂರಪ್ಪ  ಹಸಿರು ಪಟಾಕಿ ಮಾತ್ರ ಬಳಸಿ ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ದೀಪಾವಳಿಗೆ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಲು ಹಲವರು ಸಲಹೆ ನೀಡಿದ್ದಾರೆ, ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಈಗಾಗಲೇ ಎಲ್ಲಾ ಕ್ರಮ ಕೈಗೊಂಡಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರಳವಾಗಿ ದೀಪಾವಳಿ ಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ. ಹಾಗೂ ಹಸಿರು ಪಟಾಕಿಯನ್ನು ಮಾತ್ರ ಬಳಸುವಂತೆ ಸಿಎಂ ಮನವಿ ಮಾಡಿದ್ದಾರೆ .


State

ಬೆಂಗಳೂರು :  ಕೆಲಸಮಯಗಳ ಹಿಂದಷ್ಟೇ ರಾಜ್ಯದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ ಸಿಎಂ ಯಡಿಯೂರಪ್ಪ ಇದೀಗ ಹಸಿರು ಪಟಾಕಿ ಮಾತ್ರ ಬಳಸಿ ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

ದೀಪಾವಳಿಗೆ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ನಿಷೇಧಿಸಲು ಹಲವರು ಸಲಹೆ ನೀಡಿದ್ದಾರೆ, ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಈಗಾಗಲೇ ಎಲ್ಲಾ ಕ್ರಮ ಕೈಗೊಂಡಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರಳವಾಗಿ ದೀಪಾವಳಿ ಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ. ಹಾಗೂ ಹಸಿರು ಪಟಾಕಿಯನ್ನು ಮಾತ್ರ ಬಳಸುವಂತೆ ಸಿಎಂ ಮನವಿ ಮಾಡಿದ್ದಾರೆ .

ರಾಜ್ಯದ ‘ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌’ : ರಾಜ್ಯ ಸರ್ಕಾರದಿಂದ ʼ108 ದಿನʼಗಳ ʼಆಹಾರ ಧಾನ್ಯʼ ವಿತರಿಸಲು ಸರ್ಕಾರದ ಆದೇಶ.!


State

ಬೆಂಗಳೂರು : 2010 ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ಗೋಹತ್ಯೆ ವಿರೋಧಿ ಕಾನೂನನ್ನು ರಾಜ್ಯ ಸರ್ಕಾರ ಮರಳಿ ತರಬೇಕು ಎಂದು ರಾಜ್ಯ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ  ಗೋವು ಹತ್ಯೆ ವಿರೋಧಿ ಕಾನೂನಿನ ಕಠಿಣ ಆವೃತ್ತಿಯನ್ನು ಪುನಃ ಪರಿಚಯಿಸಲು ಸರಕಾರ ಮುಂದಾಗಿದೆ ಎಂದು 2008ರಲ್ಲಿ, ಯಡಿಯೂರಪ್ಪ ನೇತೃತ್ವದ-ಬಿಜೆಪಿ ಸರ್ಕಾರವು ಗೋಹತ್ಯೆ ವಿರೋಧಿ ಮಸೂದೆಯನ್ನು ಮಂಡಿಸಿದೆ. ಆದರೆ ನಂತರ ಸಿದ್ದರಾಮಯ್ಯ ನೇತೃತ್ವದ-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಅವರು ಹೇಳಿದರು.

ಈ ಹಿಂದೆ ಜಾರಿಗೆ ತಂದಿದ್ದ ಕರ್ನಾಟಕ ಗೋ ಹತ್ಯೆ ಮತ್ತು ದನಗಳ ಸಂರಕ್ಷಣೆ ಮಸೂದೆ-2010ರ ಪ್ರಕಾರ ರಾಜ್ಯದಲ್ಲಿ ಗೋಹತ್ಯೆ, ಮಾರಾಟ ಮತ್ತು ಗೋಮಾಂಸ ಸಾಗಣೆಗೆ ನಿಷೇಧ ವಿಧಿಸಿದೆ. ತಪ್ಪಿದ್ದಲ್ಲಿ ಅಪರಾಧಿಗಳಿಗೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದರು.

BIGG NEWS : ಕೊರೊನಾ ಸೋಂಕಿತ ಕಾರ್ಮಿಕ/ನೌಕರರಿಗೆ ‘ಕ್ವಾರಂಟೈನ್ ರಜೆ’ ನೀಡುವಂತೆ ರಾಜ್ಯ ಸರ್ಕಾರ ಆದೇಶ

 

 


India

ಕೋಲ್ಕತಾ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತ ಕೊನೆಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಸಂಜೆ ಹೇಳಿದರು.

 ರಾಜ್ಯ ಚುನಾವಣೆಗೆ ಮುನ್ನ ಪಕ್ಷವನ್ನು ಉತ್ತೇಜಿಸುವ ಎರಡು ದಿನಗಳ ಭೇಟಿಯ ಕೊನೆಯಲ್ಲಿ ಹೇಳಿದರು. “ಅಭಿವೃದ್ಧಿಗಾಗಿ ಮೋದಿ ಸರ್ಕಾರಕ್ಕೆ ಒಂದು ಅವಕಾಶ” ನೀಡುವಂತೆ ರಾಜ್ಯದ ಮತದಾರರಿಗೆ ಶಾ ಮನವಿ ಮಾಡಿದರು.

“ನಾವು ಬಂಗಾಳದಲ್ಲಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿರುವ ಸರ್ಕಾರವನ್ನು ರಚಿಸುತ್ತೇವೆ. ಇದು ನಗುವ ಸಮಯ, ಏಕೆಂದರೆ ತೃಣಮೂಲ ಕಾಂಗ್ರೆಸ್ ಆಡಳಿತ ಕೊನೆಗೊಳ್ಳುತ್ತದೆ ಮತ್ತು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಎಂದು ಅವರು ಹೇಳಿದರು. ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರದ ಮೇಲೆ ಶ್ರೀ ಷಾ ಅವರು ಬಂಗಾಳಿ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದರು.

ಲೆಕ್ಕಪರಿಶೋಧಕರ ನೇಮಕ ಮಾಡಲು ಅರ್ಜಿ ಆಹ್ವಾನ


Cricket India Sports

ಬೆಂಗಳೂರು : ರಾಯಲ್ ಚಾಲೆಂಜರಸ್ ಬೆಂಗಳೂರು ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿ ಬಿ ವಿರುದ್ಧ ಟಾಸ್ ಗೆದ್ದಿರುವ ಸನ್ ರೈಸರ್ಸ್ ಬೌಲಿಂಗ್ ಆಯ್ಕೆಮಾಡಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು : ಡಿ ಪಡಿಕ್ಕಲ್, ಎ ಫಿಂಚ್, ವಿ ಕೊಹ್ಲಿ, ಎಬಿ ಡಿವಿಲಿಯರ್ಸ್, ಎಸ್ ಡ್ಯೂಬ್, ಎಂ ಅಲಿ, ಡಬ್ಲ್ಯೂ ಸುಂದರ್, ಎನ್ ಸೈನಿ, ಎಂ ಸಿರಾಜ್, ಎ ಜಂಪಾ, ವೈ ಚಹಲ್.

ಸನ್‌ರೈಸರ್ಸ್ ಹೈದರಾಬಾದ್  ಡಿ ವಾರ್ನರ್, ಎಸ್ ಗೋಸ್ವಾಮಿ, ಎಂ ಪಾಂಡೆ, ಕೆ ವಿಲಿಯಮ್ಸನ್, ಪಿ ಗರ್ಗ್, ಎ ಸಮದ್, ಜೆ ಹೋಲ್ಡರ್, ಆರ್ ಖಾನ್, ಎಸ್ ನದೀಮ್, ಎಸ್ ಶರ್ಮಾ, ಟಿ ನಟರಾಜನ್.

ಮಾಜಿ ಸಚಿವ ವಿನಯ ಕುಲಕರ್ಣಿ ಮೂರು ದಿನ ʼಸಿಬಿಐ ವಶʼಕ್ಕೆ ನೀಡಿ, ಕೋರ್ಟ್‌ ಆದೇಶ..!

 

 


State

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.

ಸದ್ಯ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಫ್ಟ್ ಮಾಡಲಾಗಿದ್ದು,  ನಾಳೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಬೆಳಗಾವಿಯ ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿ ಅವರನ್ನು ಪೊಲೀಸರು ಕರೆತಂದಿದ್ದು, ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ವಿನಯ್ ಕುಲಕರ್ಣಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೇನು ಮಾತನಾಡುವುದಿದೇ ‘ನೋ ಕಮೆಂಟ್ಸ್’ ಎಂದು ಹೋಗಿದ್ದಾರೆ.

ಹಾಜರುಪಡಿಸಿದ್ದರು. ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಕೋರ್ಟ್ ವಿನಯ್ ಕುಲಕರ್ಣಿಯನ್ನು ನಾಳೆವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ಯೋಗಿಶ್ ಗೌಡ ಹತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಬರಕೊಟ್ರಿಯಲ್ಲಿರುವ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಯೋಗಿಶ್ ಗೌಡ ಹತ್ಯೆ ಪ್ರಕರಣ : ಮಾಜಿ ಸಚಿವ ‘ವಿನಯ್ ಕುಲಕರ್ಣಿ’ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್


India

ಡಿಜಿಟಲ್ ಡೆಸ್ಕ್ :  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಲು ವಿಫಲವಾದದ್ದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಮತ್ತು ಕರೋನವೈರಸ್‌ನಿಂದ “ದೇಶವನ್ನು ಉಳಿಸಿದ್ದಾರೆ” ಎಂದು ದರ್ಬಂಗದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಗುರುವಾರ ಹೇಳಿದ್ದಾರೆ.

ಇದುವರೆಗೆ ಸುಮಾರು 84 ಲಕ್ಷ ಜನರಿಗೆ ಸೋಂಕು ತಗುಲಿದೆ ಮತ್ತು ದೇಶದಲ್ಲಿ 1.24 ಲಕ್ಷಕ್ಕೂ ಹೆಚ್ಚು ಜನರನ್ನು ಕೊಂದ ಸಾಂಕ್ರಾಮಿಕ ರೋಗದ ವಿರುದ್ಧ ಕೇಂದ್ರದ  ಹೋರಾಡುತ್ತಿರುವುದನ್ನು ಶ್ಲಾಘಿಸಿದ ಶ್ರೀ ನಡ್ಡಾ, ನಡೆಯುತ್ತಿರುವ ಯುಎಸ್ ಅಧ್ಯಕ್ಷೀಯ ಚುನಾವಣೆ ಮತ್ತು ಶ್ರೀ ಟ್ರಂಪ್ ಅವರು ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಿದ ಬಗ್ಗೆ ಅನೇಕ ಟೀಕೆಗಳನ್ನು ಉಲ್ಲೇಖಿಸಿದ್ದಾರೆ. ಅವರು COVID-19 ಅನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಆದರೆ ಮೋದಿಜಿ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ 130 ಕೋಟಿ ಜನಸಂಖ್ಯೆಯನ್ನು ಉಳಿಸಿದ್ದಾರೆ” ಎಂದು ನಡ್ಡಾ ಹೇಳಿದರು.

ಯೋಗಿಶ್ ಗೌಡ ಹತ್ಯೆ ಪ್ರಕರಣ : ಮಾಜಿ ಸಚಿವ ‘ವಿನಯ್ ಕುಲಕರ್ಣಿ’ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್

 


Cricket India Sports

ಡಿಜಿಟಲ್ ಡೆಸ್ಕ್ : ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಂಡಿದೆ.

ಅಂತೆಯೇ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 200 ರನ್‌ಗಳನ್ನು ಗಳಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಗೆ ಮುಂಬೈ 201 ರನ್ ಟಾರ್ಗೆಟ್ ನೀಡಿದೆ.,  ಇಶಾನ್ ಕಿಶನ್ ಇನ್ನಿಂಗ್ಸ್ ಅಂತಿಮ ಎಸೆತದಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಮುಂಬೈ ಇಂಡಿಯನ್ಸ್ ಈಗಾಗಲೇ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದ್ದು, ಡೆಲ್ಲಿ ಮೊದಲ ಪ್ರಶಸ್ತಿ ಪಡೆಯುವ ತವಕದಲ್ಲಿದೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ಪ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.

ದೆಹಲಿ ಕ್ಯಾಪಿಟಲ್ಸ್ :   ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ಸಿ), ರಿಷಭ್ ಪಂತ್ (ಪ), ಮಾರ್ಕಸ್ ಸ್ಟೊಯಿನಿಸ್, ಡೇನಿಯಲ್ ಸ್ಯಾಮ್ಸ್, ಆಕ್ಸಾರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ.

ಯೋಗಿಶ್ ಗೌಡ ಹತ್ಯೆ ಪ್ರಕರಣ : ಮಾಜಿ ಸಚಿವ ‘ವಿನಯ್ ಕುಲಕರ್ಣಿ’ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್


State

ಬೆಂಗಳೂರು : ರಾಜ್ಯದಲ್ಲಿ ಇಂದು 3156 ಜನರಿಗೆ ಕೊರೋನಾ ಪಾಸಿಟಿವ್  ಧೃಡವಾಗಿದ್ದು, ಈ ಮೂಲಕ  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,38, 929 ಕ್ಕೆ ಏರಿಕೆಯಾಗಿದೆ.

ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 31 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ11312  ಕ್ಕೆ ಏರಿಕೆಯಾಗಿದೆ.  ಬೆಂಗಳೂರಿನಲ್ಲಿ ಇಂದು 9 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ ಬೆಂಗಳೂರಿನಲ್ಲಿ  3926 ಮಂದಿ  ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇಂದು 5723  ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ  790502 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

BREAKING : ಬೆಂಗಳೂರಿನಲ್ಲಿ ‘ಗುಡುಗು’, ‘ಮಿಂಚು’ ಸಹಿತ ಮಳೆರಾಯನ ಆರ್ಭಟ


India

ಚೆನ್ನೈ: ದೀಪಾವಳಿ ಹಬ್ಬಕ್ಕೆ  ಪಟಾಕಿ ನಿಷೇಧಿಸದಂತೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ರಾಜಸ್ಥಾನ ಹಾಗೂ ಒಡಿಶಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡಿನಲ್ಲಿ 8 ಲಕ್ಷ ಕಾರ್ಮಿಕರು ಪಟಾಕಿ ಕಾರ್ಖಾನೆಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ, ಪಟಾಕಿ ಉದ್ಯಮವನ್ನು ನೆಚ್ಚಿಕೊಂಡು ಹಲವರು ಜೀವನ ನಡೆಸುತ್ತಿದ್ದಾರೆ. ಪಟಾಕಿ ಕಾರ್ಖಾನೆಗಳ ಮೇಲೆ ಸುಮಾರು 8 ಲಕ್ಷಕ್ಕೂ ಅಧಿಕ ಮಂದಿ ಅವಲಂಬಿತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ ಪಟಾಕಿ ಬಳಕೆಯ ನಿಷೇಧ ಮಾಡಬಾರದು. ಪಟಾಕಿ ನಿಷೇಧ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

ಹರಿಯಾಣ : ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ 75% ಮೀಸಲಾತಿ


India

ಚಂಡೀಘರ್ :  ಹರಿಯಾಣದಲ್ಲಿ ಖಾಸಗಿ ವಲಯದ ಉದ್ಯೋಗಗಳಿಗೆ ಶೇಕಡಾ 75 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ರಾಜ್ಯ ವಿಧಾನಸಭೆ ಅಂಗೀಕರಿಸಿದೆ.

ಸ್ಥಳೀಯ ಅಭ್ಯರ್ಥಿಗಳ ಹರಿಯಾಣ ರಾಜ್ಯ ಉದ್ಯೋಗ ಮಸೂದೆ ರಾಜ್ಯದಲ್ಲಿ ನೆಲೆಗೊಂಡಿರುವ ಖಾಸಗಿ ಕಂಪನಿಗಳು, ಪಾಲುದಾರಿಕೆ ಸಂಸ್ಥೆಗಳು, ಸಂಘಗಳು, ಟ್ರಸ್ಟ್‌ಗಳು ಮತ್ತು ಇತರ ಸಂಸ್ಥೆಗಳಿಗೆ ತಿಂಗಳಿಗೆ 50,000 ರೂ.ಗಿಂತ ಕಡಿಮೆ ಸಂಬಳ ಹೊಂದಿರುವ ಮೂರನೇ ನಾಲ್ಕನೇ ಉದ್ಯೋಗವನ್ನು ಕಾಯ್ದಿರಿಸುವಂತೆ ಸೂಚಿಸುತ್ತದೆ.

ರಾಜ್ಯದ ಖಾಸಗಿ ವಲಯದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಸ್ಥಳೀಯ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 50,000 ಕ್ಕಿಂತ ಕಡಿಮೆ ಸಂಬಳ ನೀಡುವ ಮಸೂದೆಯನ್ನು ಹರಿಯಾಣ ಸರ್ಕಾರ ಗುರುವಾರ ಅಂಗೀಕರಿಸಿದೆಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ (ರಾಜ್ಯದ ಕಾರ್ಮಿಕ ಮಂತ್ರಿ ಕೂಡ) ಮಂಡಿಸಿದ ಈ ಮಸೂದೆಯಲ್ಲಿ ಸೂಕ್ತವಾದ ಸ್ಥಳೀಯ ಅಭ್ಯರ್ಥಿಗಳನ್ನು ಕಂಡುಹಿಡಿಯಲಾಗದಿದ್ದರೆ ಕಂಪೆನಿಗಳು ಆಹ್ವಾನಿಸಬಹುದಾದ ಷರತ್ತು ಸಹ ಒಳಗೊಂಡಿದೆ. ಅಂತಹ ಸಂದರ್ಭಗಳಲ್ಲಿ ಅವರು ಅಂತಹ ಹೆಜ್ಜೆಯನ್ನು ಸರ್ಕಾರಕ್ಕೆ ತಿಳಿಸುವವರೆಗೂ ಅವರು ಹೊರಗಿನಿಂದ ನೇಮಿಸಿಕೊಳ್ಳಬಹುದು. ಮಸೂದೆಯ ಪ್ರಕಾರ ಈ ಅಧಿಕಾರಿ “ಅಪೇಕ್ಷಿತ ಕೌಶಲ್ಯ, ಅರ್ಹತೆ ಅಥವಾ ಪ್ರಾವೀಣ್ಯತೆಯನ್ನು ಸಾಧಿಸಲು ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಲು” ಸಂಬಂಧಪಟ್ಟ ಕಂಪನಿಗೆ ನಿರ್ದೇಶಿಸುವ ಮೂಲಕ ವಿನಾಯಿತಿ ಹಕ್ಕನ್ನು ರದ್ದುಗೊಳಿಸಬಹುದು.

BIG BREAKING : ‘UGC’ಯಿಂದ ಕಾಲೇಜುಗಳನ್ನು ತೆರೆಯಲು ‘ಮಾರ್ಗಸೂಚಿ ಬಿಡುಗಡೆ’ : ಈ ನಿಮಯ ಪಾಲನೆ ಕಡ್ಡಾಯ


State

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸದ್ಯ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದಾರೆ.

ಇಂದು ಸಂಜೆ ವೇಳೆಗೆ ವಿನಯ್ ಕುಲಕರ್ಣಿ ಬಂಧಿಸಿದ ಸಿಸಿಬಿ ಅಧಿಕಾರಿಗಳು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಕೋರ್ಟ್ ವಿನಯ್ ಕುಲಕರ್ಣಿಯನ್ನು ನಾಳೆವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ಇಂದು ರಾತ್ರಿ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಉಪನಗರ ಪೊಲೀಸರು ಅವರನ್ನು ಜೈಲಿಗೆ ಕರೆದುಕೊಂಡು ಹೋಗಿದ್ದಾರೆ, ಹಾಗಾಗಿಯೇ ಇಂದು ರಾತ್ರಿ ಅವರು ಇಲ್ಲಿಯೇ ತಂಗಲಿದ್ದಾರೆ.

ನಾಳೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಯೋಗಿಶ್ ಗೌಡ ಹತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಬರಕೊಟ್ರಿಯಲ್ಲಿರುವ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

BREAKING : ಬೆಂಗಳೂರಿನಲ್ಲಿ ‘ಗುಡುಗು’, ‘ಮಿಂಚು’ ಸಹಿತ ಮಳೆರಾಯನ ಆರ್ಭಟ

 


State

ಬೆಂಗಳೂರು  : ಕಳೆದ ವಾರದಿಂದ ಬಿಡುವು ನೀಡಿದ್ದ ಮಳೆರಾಯ ಇಂದು ಬೆಂಗಳೂರಿನಲ್ಲಿ ಮತ್ತೆ ಆರ್ಭಟಿಸಿದ್ದಾನೆ.

 ಬೆಂಗಳೂರಿನಲ್ಲಿ ಭಾರೀ ಗುಡುಗು ಮಿಂಚಿನಿಂದ ಮಳೆಯಾಗುತ್ತಿದ್ದು, ಸಿಲಿಕಾನ್​ ಸಿಟಿಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ.

ವಿಧಾನಸೌಧ , ರೇಸ್ ಕೋರ್ಸ್ ರೋಡ್ , ಕೆಆರ್ ಸರ್ಕಲ್, ಮಲ್ಲೇಶ್ವರಂ, ಜೆಪಿನಗರ ಬಸವನಗುಡಿ, ಜಯನಗರ, ಬನಶಂಕರಿ, ಶೇಷಾದ್ರಿಪುರಂ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ.  ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ.  ವಾಹನ ಸವಾರರು ಪರದಾಡುತ್ತಿದ್ದಾರೆ.

ನಾಳೆವರೆಗೆ ‘ವಿನಯ್ ಕುಲಕರ್ಣಿ’ಗೆ ನ್ಯಾಯಾಂಗ ಬಂಧನ : ಕೆಲವೇ ಗಂಟೆಗಳಲ್ಲಿ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್


Cricket India Sports

ಡಿಜಿಟಲ್ ಡೆಸ್ಕ್ : ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಂಡಿದೆ.

ಮುಂಬೈ ಇಂಡಿಯನ್ಸ್ ಈಗಾಗಲೇ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದ್ದು, ಡೆಲ್ಲಿ ಮೊದಲ ಪ್ರಶಸ್ತಿ ಪಡೆಯುವ ತವಕದಲ್ಲಿದೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ಪ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.

ದೆಹಲಿ ಕ್ಯಾಪಿಟಲ್ಸ್ :   ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ಸಿ), ರಿಷಭ್ ಪಂತ್ (ಪ), ಮಾರ್ಕಸ್ ಸ್ಟೊಯಿನಿಸ್, ಡೇನಿಯಲ್ ಸ್ಯಾಮ್ಸ್, ಆಕ್ಸಾರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ.


State

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.

 ಇಂದು ಸಂಜೆ ವೇಳೆಗೆ ವಿನಯ್ ಕುಲಕರ್ಣಿ ಬಂಧಿಸಿದ ಸಿಸಿಬಿ ಅಧಿಕಾರಿಗಳು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಕೋರ್ಟ್ ವಿನಯ್ ಕುಲಕರ್ಣಿಯನ್ನು ನಾಳೆವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ಇಂದು ರಾತ್ರಿ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಉಳಿದುಕೊಳ್ಳಲಿದ್ದಾರೆ. ನಾಳೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಯೋಗಿಶ್ ಗೌಡ ಹತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಬರಕೊಟ್ರಿಯಲ್ಲಿರುವ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ರಾಜ್ಯದ ‘ನೊಂದಾಯಿತ ಕಾರ್ಮಿಕರ ಮಕ್ಕಳಿ’ಗೆ ಬಹುಮುಖ್ಯ ಮಾಹಿತಿ