kannadanewsnowdotcom kannadanewsnowdotcom kanndanew newsnow dot com kanndanew newsnow dot com karnataka latest news karnataka latest news karnataka news karnataka news Karnataka. Karnataka. – Kannada News Now


State

ಬೆಂಗಳೂರು :  ರಾಜ್ಯ ಸರ್ಕಾರ ಇಂದು ಮೂವರು ‘IPS’ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.

1) ಲಾಬರಾಮ್, ಪೊಲೀಸ್ ಆಯುಕ್ತ ಹುಬ್ಬಳ್ಳಿ, ಧಾರವಾಡ

2) ಆರ್ ದಿಲೀಪ್ , ಡಿಐಜಿ. ಸಿಐಡಿ ಆರ್ಥಿಕ ಅಪರಾಧ ವಿಭಾಗ

3)  ಪಿ ಕೃಷ್ಣಕಾಂತ್, ಪೊಲೀಸ್ ವರಿಷ್ಟಾಧಿಕಾರಿ ಧಾರವಾಡ

ಈ ಮೂವರು ಐಪಿಎಸ್ ಅಧಿಕಾರಿಗಳನ್ನು  ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

BIGG NEWS ; ಕಿಲ್ಲರ್  ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 66 ಮಂದಿ ಬಲಿ ; 10,608  ಕ್ಕೇರಿದ ಸಾವಿನ ಸಂಖ್ಯೆ

 


State

ಬೆಂಗಳೂರು :   ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಮಾಸ್ಟರ್ ಫ್ಲಾನ್ ಮಾಡಿದ್ದು, ಗೆಲುವಿಗೆ ವಾರ್ಡ್ ಮಟ್ಟದ ಉಸ್ತುವಾರಿಗಳ ನೇಮಕಮಾಡಿದೆ.ರಾಜರಾಜೇಶ್ವರಿ ನಗರದ 9 ವಾರ್ಡ್ ಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ.

ಕೊಟ್ಟಿಗೆ ಪಾಳ್ಯ ವಾರ್ಡ್ – ಸಚಿವ ವಿ ಸೋಮಣ್ಣ

 ಲಗ್ಗೆರೆ ವಾರ್ಡ್ – ಸಚಿವ ಕೆ ಗೋಪಾಲಯ್ಯ, ಸಚಿವ ನಾರಾಯಣಗೌಡ, ಭೈರತಿ ಬಸವರಾಜು

 ಜ್ಞಾನಭಾರತಿ ವಾರ್ಡ್ – ಸಚಿವ ಎಸ್ ಟಿ ಸೋಮಶೇಖರ್

 ರಾಜರಾಜೇಶ್ವರಿ ನಗರ ವಾರ್ಡ್ – ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ

ಹೆಚ್ ಎಂ ಟಿ ವಾರ್ಡ್ – ಮಾಜಿ ಶಾಸಕ ಮುನಿರಾಜು

ಜಾಲಹಳ್ಳಿ ವಾರ್ಡ್  – ಎಸ್ ಆರ್ ವಿಶ್ವನಾಥ್

ಜೆ ಪಿ ಪಾರ್ಕ್ ವಾರ್ಡ್ – ನಂದೀಶ್ ರೆಡ್ಡಿ

ಯಶವಂತಪುರ ವಾರ್ಡ್ – ಶಾಸಕ ಸತೀಶ್ ರೆಡ್ಡಿ

BREAKING ; ಬೆಂಗಳೂರಿನಲ್ಲಿ ಮುಂದುವರೆದ ‘ಮಳೆರಾಯನ ಆರ್ಭಟ’ ; ಜನಜೀವನ ಅಸ್ತವ್ಯಸ್ತState

ಬೆಂಗಳೂರು : ಉಪನ್ಯಾಸಕರಾಗಿ ಆಯ್ಕೆಯಾಗಿರುವ ನೂರಾರು ಪಿಯುಸಿ ಉಪನ್ಯಾಸಕ ಅಭ್ಯರ್ಥಿಗಳು ನೇಮಕಾತಿ ಆದೇಶ ಹೊರಡಿಸುವಂತೆ ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ಸ್ಥಳಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿಯ ಮುಂದೆ ನೇಮಕಾತಿ ಆದೇಶಕ್ಕಾಗಿ ಪಿಯು ಉಪನ್ಯಾಸಕ ಅಭ್ಯರ್ಥಿಗಳು ಇಂದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡರು ಪ್ರತಿಭಟನಾ ಸ್ಥಳಕ್ಕೆ ಬಂದು ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರು.

ಜೊತೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ನಡೆದ ಮಾತುಕತೆಯಲ್ಲಿ ಸುರೇಶ್ ಕುಮಾರ್ ಅವರ ಕರೆಗೆ ಲೌಡ್ ಸ್ಪೀಕರ್ ಹಾಕಿ ಎಲ್ಲ ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡುವ ಭರವಸೆ ನೀಡಿದರು. ಕೊರೊನಾದ ಸಂದರ್ಭದಲ್ಲಿ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಿ, ಬಾಕಿ ಉಳಿದಿರುವುದೆಲ್ಲಾ ನನಗೆ ಬಿಡಿ ಎಂದು ಭರವಸೆ ನೀಡಿದರು. ಬಳಿಕ ಅಭ್ಯರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.

ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿIndia

ಡಿಜಿಟಲ್ ಡೆಸ್ಕ್ : ದೇಶದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದೆ.

ಆಂಧ್ರಪ್ರದೇಶದಲ್ಲಿ ಇಂದು 2,918 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 7,86,050 ಕ್ಕೆ ಏರಿದೆ. ಇಂದು ಕೊರೊನಾ ಸೋಂಕಿಗೆ ಆಂಧ್ರದಲ್ಲಿ 24 ಮಂದಿ ಬಲಿಯಾಗಿದ್ದಾರೆ.

24 ಗಂಟೆಗಳಲ್ಲಿ 4,303 ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.State

ಬೆಂಗಳೂರು :  ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 85 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 10283  ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು  3788 ಮಂದಿಗೆ ಸೋಂಕು ತಗುಲಿದ್ದು,  ಇಂದು 45 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3462 ಕ್ಕೆ ಏರಿಕೆಯಾಗಿದೆ.

 ಕರ್ನಾಟಕದಲ್ಲಿ ಇಂದು 8477 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,43,848  ಕ್ಕೆ ಏರಿಕೆಯಾಗಿದೆ..ರಾಜ್ಯದಲ್ಲಿ ಇಂದು 8841 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 620008 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಬಂದಿದ್ದಾರೆ.

ಕಾಶ್ಮೀರದಲ್ಲಿ ಒಂದಾದ ಬದ್ಧ ಶತ್ರುಗಳು : ಮೆಹಬೂಬಾ ಮುಫ್ತಿ -ಫಾರೂಕ್ ಅಬ್ದುಲ್ಲಾ ಮೈತ್ರಿಕೂಟ ಘೋಷಣೆIndia

ಡಿಜಿಟಲ್ ಡೆಸ್ಕ್ : ದೇಶದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಕೊರೊನಾ ಸೋಂಕಿನ  ಹಿನ್ನೆಲೆ ಜನರು ಮಾಸ್ಕ್ ಗಳ ಮೊರೆ ಹೋಗಿದ್ದಾರೆ. ಸರ್ಕಾರ ಕೂಡ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ.

ಇದೀಗ ಅಮೆರಿಕದ ಫಿಲಡೆಲ್ಪಿಯಾಕ್ಕೆ ಭಾರತ 18 ಲಕ್ಷ ಮಾಸ್ಲ್ ಗಳನ್ನು ದಾನ ಮಾಡಿದೆ. ಅಲ್ಲಿನ ಕೆಲಸಗಾರರು ಧರಿಸಲು ಮಾಸ್ಕ್ ನೀಡುವಂತೆ ಅಲ್ಲಿನ ಮೇಯರ್ ಭಾರತಕ್ಕೆ ಮನವಿ ಮಾಡಿದ್ದರು.  ಇದನ್ನು ಪರಿಗಣಿಸಿರುವ ಭಾರತ 18 ಲಕ್ಷ ಮಾಸ್ಕ್ ಗಳನ್ನು ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

BIGG NEWS : ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 102 ಬಲಿ : 9891 ಕ್ಕೇರಿದ ಸಾವಿನ ಸಂಖ್ಯೆ

 Cricket India Sports

ಡಿಜಿಟಲ್ ಡೆಸ್ಕ್ : ಅಬುಧಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ 202023 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದೆ.

ಮೊದಲು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ರಾಜಸ್ಥಾನ ರಾಯಲ್ಸ್ ಗೆ 185 ರನ್ ಗುರಿ ನೀಡಿದೆ.

ಟಾಸ್ ಸೋತರೂ ಕೂಡ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಗಿಟ್ಟಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 184 ರನ್ ಕಲೆ ಹಾಕಿದೆ.

BIGG NEWS ; ದಸರಾ ಸಂಭ್ರಮಕ್ಕೆ ‘ಕೊರೊನಾ’ ಕೊಕ್ಕೆ : ‘ಜಂಬೂ ಸವಾರಿ’ಯಲ್ಲಿ 300 ಮಂದಿಗೆ ಮಾತ್ರ ಅವಕಾಶ ; ಮಾರ್ಗಸೂಚಿ ಪ್ರಕಟIndia

ನವದೆಹಲಿ : ಉತ್ತರ ಪ್ರದೇಶದ ಹತ್ರಾಸ್ ಗೆ ರಾಹುಲ್ ಗಾಂಧಿ ಭೇಟಿ ನೀಡಿರುವ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ರಾಹುಲ್ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

 ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿರುವ ಅವರು  ಭಾರತ ದರ್ಶನ ಮಾಡುವ ಬದಲು ರಾಜಸ್ಥಾನಕ್ಕೆ ಭೇಟಿ ನೀಡಬೇಕು ಎಂದಿದ್ದಾರೆ.

 ರಾಜಸ್ಥಾನದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕರೌಲಿಯ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಅಕ್ರಮಿಸಿಕೊಳ್ಳಲು ಯತ್ನಿಸಿದ ಕೆಲವು ಗೂಂಡಾಗಳು ಅರ್ಚಕನನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಅಲ್ಲದೇ ರಾಜಸ್ಥಾನದ ಹಲವು ಕಡೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಏನನ್ನೂ ಮಾಡಲು ಆಗುತ್ತಿಲ್ಲ, ರಾಹುಲ್ ಅವರು  ಭಾರತ ದರ್ಶನ ಮಾಡುವ ಬದಲು ರಾಜಸ್ಥಾನಕ್ಕೆ ಭೇಟಿ ನೀಡಬೇಕು ಎಂದಿದ್ದಾರೆ.

BIGG NEWS : ‘ಗಂಧದ ಗುಡಿ’, ‘ಭಕ್ತ ಪ್ರಹ್ಲಾದ’ ಸಿನಿಮಾ ಖ್ಯಾತಿಯ ನಿರ್ದೇಶಕ ವಿಜಯ ರೆಡ್ಡಿ ಇನ್ನಿಲ್ಲ State

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿದರು.

ನಿನ್ನೆ ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ.

ಅಂತೆಯೇ ಇಂದು ಸಂಜೆ ನಿರ್ಮಲಾನಂದನಾಥ ಸ್ವಾಮೀಜಿಗಳು ಸದಾಶಿವನಗರದಲ್ಲಿರುವ ಡಿಕೆಎಸ್ ನಿವಾಸಕ್ಕೆ ಭೇಟಿ ನೀಡಿದರು. ಶ್ರೀಗಳ ಜೊತೆ ಮಾಜಿ ಸಚಿವ ಚಲುವರಾಯಸ್ವಾಮಿ ಇದ್ದರು.

ರಾಜ್ಯದ ‘ಅನುದಾನಿತ ಶಿಕ್ಷಣ ಸಂಸ್ಥೆ’ಗಳ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ‘ಗಳಿಕೆ ರಜೆ ನಗಧೀಕರಣ’ಕ್ಕೆ ಅನುಮತಿState

ಉಡುಪಿ : ‘ಯಕ್ಷಗಾನ ಪ್ರೇಮಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ನವೆಂಬರ್ ಅಂತ್ಯದಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು ಈ ಬಗ್ಗೆ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಂಗಳೂರಿನಲ್ಲಿ ಸಭೆ ನಡೆಸಿದ್ದು, ಯಕ್ಷಗಾನ ಮೇಳಗಳು ಕೊರೊನಾ ನಿಯಮಗಳನ್ನು ಅಳವಡಿಸಿಕೊಂಡು ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ದತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳು. ಹಾಗೂ ಕಲಾವಿದರು ಹಾಗೂ ಮೇಳಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಯಿತು.

ನವೆಂಬರ್ ಅಂತ್ಯದಲ್ಲಿ ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಸಿದ್ದತೆ ನಡೆಸಲು ಸೂಚಿಸಲಾಗಿದೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ( ಎಸ್ ಒ ಪಿ ) ಸಿದ್ದಪಡಿಸಿ ನೀಡಲಾಗುತ್ತದೆ ಎಂದರು.

ಭೂಪಿಂದರ್ ಸಿಂಗ್ ಕುಟುಂಬವನ್ನು ಭೇಟಿಯಾದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

error: Content is protected !!