Kannada news now.com – Kannada News Now


India

ಮುಂಬೈ:  ಮುಂಬೈಯನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಆಡಳಿತಾರೂಢ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಮುಂಬೈನಲ್ಲಿರುವ ಕಂಗಾನ ಅವರ ಕಚೇರಿಯನ್ನು ಅನಧಿಕೃತ ಎಂದು ಹೇಳಿ ಮಹಾರಾಷ್ಟ್ರ ಸರ್ಕಾರ ಅದನ್ನು ನೆಲಸಮ ಮಾಡಿತ್ತು.

ಈ ವಿಚಾರವಾಗಿ ನೇರವಾಗಿಯೇ ಉದ್ಧವ್​ ಠಾಕ್ರೆಯವರಿಗೆ ಸವಾಲು ಹಾಕಿರುವ ಕಂಗನಾ  ಮುಂಬೈ ಬಿಟ್ಟ ಕೆಲವೇ ಕ್ಷಣದಲ್ಲಿ ಟ್ವೀಟ್ ಮೂಲಕ ಉದ್ಧವ್​ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಬಾಲಿವುಡ್​ ಮಾಫಿಯಾ, ಸುಶಾಂತ್​ ಸಿಂಗ್​ ಸಾವು, ಡ್ರಗ್ಸ್​ ದಂಧೆ ಬಗ್ಗೆ ತುಂಬ ವಿಚಾರಗಳನ್ನು ಮಾತನಾಡುತ್ತಿರುವುದೇ ಅವರಿಗೆ ಸಮಸ್ಯೆಯಾಗಿದೆ, ನನ್ನನ್ನು ಹತ್ತಿಕ್ಕಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ. ಎಲ್ಲದರ ಜತೆ ಉದ್ಧವ್ ಪ್ರೀತಿಯ ಪುತ್ರ ಆದಿತ್ಯ ಠಾಕ್ರೆಗೆ ಸಂಪರ್ಕವಿದೆ. ಕೆಟ್ಟದ್ದನ್ನು ಎತ್ತಿ ತೋರಿಸಿದ್ದಕ್ಕೆ ಅವರೆಲ್ಲ ಸೇರಿ ನನ್ನನ್ನು ಬಾಯಿಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಮುಂಬೈ -ಚೆನ್ನೈ ತಂಡಗಳ ಕಾದಾಟದೊಂದಿಗೆ ‘IPL’ ಟೂರ್ನಿಗೆ ಚಾಲನೆ : ಪಾಕ್ ಬಿಟ್ಟು 120 ದೇಶಗಳಲ್ಲಿ ನೇರಪ್ರಸಾರ

India Sports

ಮುಂಬೈ :  ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವಿನ ಕಾದಾಟದೊಂದಿಗೆ ಶನಿವಾರ IPL ಟೂರ್ನಿಗೆ ಚಾಲನೆ ಸಿಗಲಿದೆ.

ಭಾರತ ಮಾತ್ರವಲ್ಲದೆ ವಿಶ್ವದ 120 ದೇಶಗಳಲ್ಲಿ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದ್ದು,. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಪಂದ್ಯಗಳನ್ನು ನೇರಪ್ರಸಾರ ಮಾಡುವ ಹಕ್ಕು ಪಡೆದುಕೊಂಡಿದೆ. ಇನ್ನೂ, ವಿವಿಧ ರಾಷ್ಟ್ರಗಳ ಪ್ರಸಾರ ವಾಹಿನಿಗಳ ಜತೆಗೂ ಪಂದ್ಯದ ನೇರಪ್ರಸಾರವನ್ನು ಹಂಚಿಕೊಳ್ಳಲಿದೆ. ಆದರೆ ಪಾಕಿಸ್ತಾನದಲ್ಲೇ ಈ ಬಾರಿ ಐಪಿಎಲ್ ಪಂದ್ಯಗಳು ನೇರಪ್ರಸಾರ ಕಾಣುವುದಿಲ್ಲ. ಪಾಕಿಸ್ತಾನದ ಯಾವುದೇ ಚಾನಲ್‌ಗಳು ಪಂದ್ಯದ ನೇರಪ್ರಸಾರ ಹಕ್ಕು ಪಡೆದುಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಐಪಿಎಲ್ 13ನೇ ಆವೃತ್ತಿಗೆ ಇನ್ನು ಐದು ದಿನ ಮಾತ್ರ ಬಾಕಿಯಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಐಎಂಎ ವಂಚನೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್; ನಿಂಬಾಳ್ಕರ್, ಹಿಲೋರಿ ವಿಚಾರಣೆ ಗ್ರೀನ್‌ ಸಿಗ್ನಲ್..!‌

State

ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ 5 ಡ್ರಗ್ಸ್ ಪೆಡ್ಲರ್ ಗೆ ಸೆಪ್ಟೆಂಬರ್ 28ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವಾಗಿದೆ. ಇನ್ನೂ, ಇದೇ ಪ್ರಕರಣದಲ್ಲಿ ನಟಿ ಸಂಜನಾ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸ್ ಕಸ್ಟಡಿಗೆ ನೀಡಿ 33ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಸಿಸಿಬಿಯಿಂದ ಬಂಧಿತರಾದ ನಂತರ ಇಷ್ಟು ದಿನಗಳ ಕಾಲ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಟ್ಟಿಗೆ ಇದ್ದ ಇಬ್ಬರು ನಟಿಯರು ಸೋಮವಾರ ಬೇರೆಯಾಗುವಾ ಪರಸ್ಪರ ತಬ್ಬಿಕೊಂಡು ಅತ್ತರು. ನಟಿ ರಾಗಿಣಿ ದ್ವಿವೇದಿ ಸೇರಿದಂತೆ 5 ಡ್ರಗ್ಸ್ ಪೆಡ್ಲರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

 ಅಲ್ಲದೇ ಇದೇ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ತಮ್ಮ ವಶಕ್ಕೆ ನಟಿ ಸಂಜನಾ ನೀಡುವಂತೆ ಕೋರಿಕೊಂಡ ಸಲುವಾಗಿ 3 ದಿನಗಳ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಹೀಗಾಗಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವುದು ಅನಿವಾರ್ಯವಾಗಿದೆ. ಸಂಜನಾ ಮತ್ತಷ್ಟು ದಿನಗಳ ಕಾಲ ಸಾಂತ್ವನ ಕೇಂದ್ರದಲ್ಲೇ ಇರುವುದು ಖಚಿತವಾಗಿದೆ. ಹೀಗಾಗಿ ಇಬ್ಬರು ನಟಿಯರು ಒಬ್ಬರನ್ನು ಒಬ್ಬರು ತಬ್ಬಿಕೊಂಡು ಅತ್ತರು.

BIG NEWS : IMA ವಂಚನೆ ಪ್ರಕರಣ : ರಾಜ್ಯ ಸರ್ಕಾರದಿಂದ IPS ಅಧಿಕಾರಿಗಳ ವಿರುದ್ಧದ ತನಿಖೆಗೆ ಅನುಮತಿ

State

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಸೇರಿ 5 ಆರೋಪಿಗಳ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ವಿಡಿಯೋ ಕಾನ್ಫರೇನ್ಸ್‌ ಮೂಲಕ ಜಡ್ಜ್‌ ಮುಂದೆ ಹಾಜರು ಪಡಿಸಲಾಗಿತ್ತು. ಸಧ್ಯ ಕೋರ್ಟ್‌ ತನ್ನ ಆದೇಶ ನೀಡಿದ್ದು, ಇಬ್ಬರು ನಟಿಯರು ಸೇರಿ 5 ಆರೋಪಿಗಳನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಅದ್ರಂತೆ, ಸಂಜನಾ ಸೇರಿ ಪ್ರಶಾಂತ್‌ ರಂಕ, ಲೂಮ್‌ ಪೆಪ್ಪರ್‌ , ರಾಹುಲ್‌ ಐವರು ಆರೋಪಿಗಳು ವಿಚಾರಣಾಧೀನ ಖೈದಿಗಳಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ.  ಹೌದು, ಇದೀಗ ರಾಗಿಣಿ ಟೀಮ್ ಪರಪ್ಪನ ಅಗ್ರಹಾರ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಟಿ ರಾಗಿಣಿ ಸೇರಿದಂತೆ ಐದು ಜನರನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕರೆ ತಂದಿದ್ದಾರೆ.

ಎಸಿಎಂಎಂ ನ್ಯಾಯಾಲಯ ಈ ತೀರ್ಪು ನೀಡಿದ್ದು, 12 ದಿನಗಳ ಕಸ್ಟಡಿ ನಂತರ ನಟಿ ರಾಗಿಣಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಇನ್ನು ಈ ಆರೋಪಿಗಳು ವಿಚಾರಣಾಧೀನಾ ಖೈದಿಗಳಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ.

ಸುಶಾಂತ್ ಸಾವಿನ ಪ್ರಕರಣ: 6 ಡ್ರಗ್ ಪೆಡ್ಲರ್‌ಗಳಿಗೆ ಜಾಮೀನು ನಿರಾಕರಣೆ..!

State

ಬೆಂಗಳುರು :  ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ ಇಲ್ಲಿದೆ. ಸೆ.20 ರಂದು ಕಾನ್ ಸ್ಟೇಬಲ್ ಹುದ್ದೆಗೆ ನಗರದಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

ಸಿವಿಲ್ ಪೊಲೀಸ್ ಕಾನ್‍ಟೇಬಲ್ ಪುರುಷ ಮತ್ತು ಮಹಿಳಾ  ಹಾಗೂ ಸಿವಿಲ್ ಪೊಲೀಸ್ ಕಾನ್‍ಸ್ಟೆಬಲ್ ಪುರುಷ ಮತ್ತು ಮಹಿಳಾ)( ಕಲ್ಯಾಣ ಕರ್ನಾಟಕ) ಹುದ್ದೆಗಳ ಭರ್ತಿಯ ಸಂಬಂಧ ಸುಮಾರು 37,640 ಅಭ್ಯರ್ಥಿಗಳಿಗೆ ಸೆ.20ರಂದು ಪರೀಕ್ಷೆ ನಡೆಯಲಿದೆ. ನಗರದ 69 ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.ksp.gov.in ವೆಬ್ ಸೈಟ್ ವೀಕ್ಷಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಕರೆಪತ್ರವನ್ನು ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್ : ರಾಜ್ಯ ಸರ್ಕಾರದಿಂದ 2020-21ನೇ ಸಾಲಿನ ಎಲ್ಲಾ ನೇರ ನೇಮಕಾತಿ ಹುದ್ದೆಗಳ ಭರ್ತಿಗೆ ಬ್ರೇಕ್

ಮಹಾರಾಷ್ಟ್ರ ರಾಜ್ಯಪಾಲರ ಭೇಟಿಗೆ ಮುಂದಾದ ನಟಿ ಕಂಗನಾ ರಣಾವತ್

State

ಮೈಸೂರು : ಮೈಸೂರು ದಸರಾ ಮಹೋತ್ಸವ 2020ರ ಅಂಗವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್  ಅವರ ಅಧ್ಯಕ್ಷತೆಯಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ‌ ಸಿ.ಟಿ.ರವಿ ಅವರ ಉಪಸ್ಥಿತಿಯಲ್ಲಿ ಶನಿವಾರ ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ.

ದಸರಾ ಕಾರ್ಯಕಾರಿ ಸಮಿತಿ ಸಭೆಯ ಮುಖ್ಯಾಂಶಗಳು;

ಕೋವಿಡ್  ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಬರುವ ಅಕ್ಟೋಬರ್ 2 ರಂದು ಮಧ್ಯಾಹ್ನ 12:18 ಗಂಟೆಗೆ ದಸರಾ ಗಜಪಡೆ ಸ್ವಾಗತ ಕಾರ್ಯಕ್ರಮ ಮೈಸೂರು ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದೆ.

ಈ ಹಿಂದೆ ವೀರನ ಹೊಸಹಳ್ಳಿಯಲ್ಲಿ ಆಯೋಜಿಸುತ್ತಿದ್ದ ಗಜಪಯಣ ಸಮಾರಂಭ ಇರುವುದಿಲ್ಲ.

ನೇರವಾಗಿ ಮೈಸೂರು ಅರಮನೆ ಆವರಣಕ್ಕೆ ಗಜಪಡೆಯ ಆಗಮನವಾಗಲಿದೆ.

ಈ ಬಾರಿ‌ ಕೊರೊನಾ ವಾರಿಯರ್ಸ್ ಗಳಿಂದ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ.

ಐವರು ಕೊರೊನಾ ವಾರಿಯರ್ಸ್ ಗಳ ಪೈಕಿ ಒಬ್ಬರು ದಸರಾ ಉದ್ಘಾಟನೆ ಮಾಡಲಿದ್ದು, ಉಳಿದವರಿಗೆ ಸನ್ಮಾನ ಮಾಡಲಾಗುತ್ತದೆ. ಈ ಸನ್ಮಾನಿತರ ಪಟ್ಟಿಯಲ್ಲಿ ಕೋವಿಡ್ ಶವ ಸಂಸ್ಕಾರ ಮಾಡಿದ ವ್ಯಕ್ತಿಯನ್ನು ಸೇರಿಸಿಕೊಳ್ಳುವ ಬಗ್ಗೆ ಪ್ರಸ್ತಾಪ‌ಬಂದಿದೆ.

2020ರ ಅಕ್ಟೋಬರ್ 17 ರಂದು  ಬೆಳಿಗ್ಗೆ 7:45 ರಿಂದ 8:15 ರೊಳಗಿನ ಶುಭ ಮುಹೂರ್ತದಲ್ಲಿ ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ.

ದಸರಾ ದೀಪಾಲಂಕಾರ ಪ್ರತಿ ಬಾರಿಯಂತೆಯೇ ವಿದ್ಯುತ್ ನಿಗಮದ ವತಿಯಿಂದ ಇರಲಿದೆ.

ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಲಿದೆ.

ಅರಮನೆ ಆವರಣದೊಳಗೆ ನಡೆಯುವ ಜಂಬೂ ಸವಾರಿಗೆ ಎರಡು ಸಾವಿರ ಮಂದಿಗೆ ಅವಕಾಶ ಸಾಮರ್ಥ್ಯವಿದೆ.  ಆದರೆ ಎಷ್ಟು ಜನರ ಸೇರಿಸಲು ಅನುಮತಿ‌ ಸಿಗುತ್ತದೋ ನೋಡಿ, ಆಹ್ವಾನಿತರ ಸಂಖ್ಯೆಯನ್ನು ನಿರ್ಧರಿಸಲಾಗುವುದು.

ಕೇಂದ್ರ ಸರ್ಕಾರದ ಮಾರ್ಗ ಸೂಚಿ ಪ್ರಕಾರವೇ ಮೆರವಣಿಗೆ ನಡೆಸಲಾಗುವುದು.

ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ.

ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಅರ್ಜುನನಿಗೆ 60 ವರ್ಷ ಮೀರಿರುವುದರಿಂದ ಅಂಬಾರಿ ಹೊರುವ ಅವಕಾಶವಿಲ್ಲ.

ಅಭಿಮನ್ಯು ಜೊತೆಗೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿವೆ‌.

ನವರಾತ್ರಿಯ ಎಲ್ಲಾ ದಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಲಾಗುವುದು.

ಎಲ್ಲಾ ಕಾರ್ಯಕ್ರಮಗಳನ್ನು ಸಾಮಾಜಿಕ‌ ಜಾಲ ತಾಣದಲ್ಲಿ ನೇರ ಪ್ರಸಾರ ಮಾಡಲಾಗುವುದು.‌

ಸಭೆಯಲ್ಲಿ ಶಾಸಕರಾದ ಎಸ್.ಎ. ರಾಮದಾಸ್, ತನ್ವೀರ್ ಸೇಠ್, ಎಲ್.‌ನಾಗೇಂದ್ರ, ಆರ್. ಧರ್ಮಸೇನ, ಕೆ.ಟಿ.ಶ್ರೀಕಂಠೇಗೌಡ, ಕೆ. ಮಹದೇವ, ಅಶ್ವಿನ್ ಕುಮಾರ್, ಹರ್ಷವರ್ಧನ್, ಮೇಯರ್ ತಸ್ನೀಂ, ಮುಡಾ ಅಧ್ಯಕ್ಷರಾದ ಹೆಚ್.ವಿ. ರಾಜೀವ್, ಜಿಲ್ಲಾಧಿಕಾರಿ ಬಿ.ಶರತ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಶ್ಯಂತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಚಾಮುಂಡಿಬೆಟ್ಟದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ‌ ಎಸ್. ರಂಗಪ್ಪ, ಯುವ ಸಬಲೀಕರಣ ಇಲಾಖೆ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಕೊರೊನಾ ಸಂಕಷ್ಟ : ಶಾಲಾ-ಕಾಲೇಜು ಶುಲ್ಕ ಮನ್ನಾ ಮಾಡುವಂತೆ ಕೇಂದ್ರಕ್ಕೆ ಮಾಯಾವತಿ ಮನವಿ

State

ಬೆಂಗಳೂರು : ಡ್ರಗ್ಸ್​ ದಂಧೆಯ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್​ವುಡ್ ನಟಿ ರಾಗಿಣಿ, ಸಂಜನಾರನ್ನ ಮತ್ತೆ ಮೂರು ದಿನಗಳ ಕಾಲ ಪೊಲೀಸ್​​ ಕಸ್ಟಡಿಗೆ ನೀಡಲಾಗಿದ್ದು. ವಿಚಾರಣೆ ನಡೆಯುತ್ತಿದೆ.

ಇಂದು ನಟಿ ಸಂಜನಾ ಹಾಗೂ ರಾಗಿಣಿ ದ್ವಿವೇದಿಗೆ ಬೆಳಗ್ಗೆಯಿಂದಲೂ ವಿಚಾರಣೆ ನಡೆಸಿರಲಿಲ್ಲ, ಆದರೆ ಸಂಜೆಯಾಗುತ್ತಲೇ ಇನ್ ಸ್ಪೆಕ್ಟರ್ ಅಂಜುಮಾಲ ತಂಡ ಆರೋಪಿಗಳ ಹೇಳಿಕೆ ಆಧರಿಸಿ ವಿಚಾರಣೆ ನಡೆಸಿದೆ.

ಆದಿತ್ಯ ಅಗರ್ವಾಲ್ ಹೇಳಿಕೆ ಆಧಾರಿತ  ರಾಗಿಣಿಗೆ ಪ್ರಶ್ನೆ ಮಾಡಲಾಗಿದ್ದು. ಪ್ರಶಾಂತ್ ಸಂಬರಗಿ ಹೇ:ಳಿಕೆ ಮೇರೆಗೆ ಸಂಜನಾ ಗಲ್ರಾನಿಯನ್ನು ಪ್ರತ್ಯೇಕವಾಗಿ ಕೂರಿಸಿ ವಿಚಾರಣೆ ನಡೆಸಲಾಗುತ್ತಿದೆ. ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿಯ ಜೊತೆಗೆ ನಟಿ ಸಂಜನಾ, ರಾಹುಲ್, ಲೂಮ್, ಪ್ರಶಾಂತ್ ರಂಕಾ , ರವಿ ಶಂಕರ್, ನಿಯಾಜ್ ಆರು ಮಂದಿಯನ್ನು ನ್ಯಾಯಾದೀಶರು ಪೊಲೀಸ್​​ ಕಸ್ಟಡಿಗೆ ನೀಡಲಾಗಿದೆ.

ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಕೇಸ್ : ದಾಖಲೆ ಕೊಡ್ತೀನಿ ಎಂದು ಪೊಲೀಸರಿಗೆ ಪ್ರಶಾಂತ್ ಸಂಬರಗಿ ಹಾರಿಸಿದ್ರಾ ಕಾಗೆ..?

India State

ನವದೆಹಲಿ : ಕಾಂಗ್ರೆಸ್ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಎಐಸಿಸಿ ಭರ್ಜರಿ ಆಪರೇಷನ್ ನಡೆಸಿದೆ.  ಹೌದು, ಎಐಸಿಸಿ ಇಂದು ಹಲವು ವಿಭಾಗಗಳು ಹಾಗೂ ಸಂಘಟನಾ ಸಮಿತಿಗಳಿಗೆ ಮೇಜರ್ ಸರ್ಜರಿ ಮಾಡಿದೆ.

 ವಿಶೇಷವಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ರಾಜ್ಯದ ಐವರಿಗೆ ಸ್ಥಾನ ನೀಡಿದೆ.ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ. ಕೆ ಹೆಚ್ ಮುನಿಯಪ್ಪ, ಹೆಚ್ ಕೆ ಪಾಟೀಲ್, ದಿನೇಶ್ ಗುಂಡೂರಾವ್, ಬಿ ವಿ ಶ್ರೀನಿವಾಸ್ ಗೆ ಸ್ಥಾನ ನೀಡಲಾಗಿದೆ.

ಮಹತ್ವದ ಬೆಳವಣಿಗೆಯಲ್ಲಿ ಎಐಸಿಸಿ  ಪುನರ್ ರಚನೆಗೊಂಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸಿಂಗ್ ನೇಮಕಗೊಂಡಿದ್ದು, ವೇಣುಗೋಪಾಲ್ ಸ್ಥಾನಕ್ಕೆ ರಣದೀಪ್ ಸಿಂಗ್ ನೇಮಕವಾಗಿದ್ದಾರೆ.ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಂ ನಬಿ ಅಜಾದ್ ಔಟ್ ಆಗಿದ್ದಾರೆ. ಹೆಚ್ ಕೆ ಪಾಟೀಲ್ ಗೆ ಮಹಾರಾಷ್ಟ್ರ ಉಸ್ತುವಾರಿ ಜವಾಬ್ದಾರಿ ನೀಡಿದ್ರೆ, ದಿನೇಶ್ ಗುಂಡೂರಾವ್ ಗೆ ಪುದುಚೇರಿ, ತಮಿಳುನಾಡು ಹಾಗೂ ಗೋವಾ ರಾಜ್ಯಗಳ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

BIGG NEWS -ಪ್ರಯಾಣಿಕರಿಗೆ ಬಿಗ್ ಶಾಕ್ : ಕೇಂದ್ರದಿಂದ ರೈಲ್ವೆ ಪ್ಲಾಟ್‌ಫಾರ್ಮ್‌ ಟಿಕೆಟ್ ದರ ಐದು ಪಟ್ಟು ಹೆಚ್ಚಳ

 

India State

ನವದೆಹಲಿ:  ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿಯೊಂದನ್ನು ರೈಲ್ವೆ ಇಲಾಖೆ ನೀಡಿದೆ. ಕೋವಿಡ್ ಸೋಂಕಿನ ಹಿನ್ನೆಲೆ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್ ದರವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಿದೆ. 

ಹೌದು, ಕೇಂದ್ರ ಸರ್ಕಾರ ಬೆಂಗಳೂರು ಸೇರಿದಂತೆ ದೇಶದ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್ ದರವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಿದೆ.

ಕೆಎಸ್ ಆರ್, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ದರವನ್ನು 10 ರಿಂದ 50 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ದರ ಏರಿಕೆ ಇಂದಿನಿಂದ ಜಾರಿಗೆ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಕೋವಿಡ್ ಸೋಂಕಿನ ಹಿನ್ನೆಲೆ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್ ದರವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಿದೆ, ಆದರೆ ಇದು ತಾತ್ಕಾಲಿಕ ಎಂದಷ್ಟೇ ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.

BREAKING : ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ‘ರಣದೀಪ್ ಸಿಂಗ್ ಸುರ್ಜೇವಾಲ’ ನೇಮಕ

State

ಬೆಂಗಳೂರು : ನೂತನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆಯಾಗಿದ್ದು, ನೂತನ ಉಸ್ತುವಾರಿಯಾಗಿ ‘ರಣದೀಪ್ ಸಿಂಗ್ ಸುರ್ಜೇವಾಲ’ ರನ್ನು ನೇಮಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ಹೌದು. ಮಹತ್ವದ ಬೆಳವಣಿಗೆಯಲ್ಲಿ ಎಐಸಿಸಿ  ಪುನರ್ ರಚನೆಗೊಂಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸಿಂಗ್ ನೇಮಕಗೊಂಡಿದ್ದು, ವೇಣುಗೋಪಾಲ್ ಸ್ಥಾನಕ್ಕೆ ರಣದೀಪ್ ಸಿಂಗ್ ನೇಮಕವಾಗಿದ್ದಾರೆ.

ಇನ್ನೂ, ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಂ ನಬಿ ಅಜಾದ್ ಔಟ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ, ಮಹಾರಾಷ್ಟ್ರ ಉಸ್ತುವಾರಿಯಾಗಿ  ಹೆಚ್ ಕೆ  ಪಾಟೀಲ್ ನೇಮಕಗೊಂಡಿದ್ದರೆ, ತಮಿಳುನಾಡು  ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

BREAKING : ನಾಳೆಯಿಂದ ‘ಸಾರ್ವಜನಿಕ ಗ್ರಂಥಾಲಯ’ ತೆರೆಯಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್