kannada news breaking – Kannada News Now


State

ಬೆಂಗಳುರು :  ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ ಇಲ್ಲಿದೆ. ಸೆ.20 ರಂದು ಕಾನ್ ಸ್ಟೇಬಲ್ ಹುದ್ದೆಗೆ ನಗರದಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

ಸಿವಿಲ್ ಪೊಲೀಸ್ ಕಾನ್‍ಟೇಬಲ್ ಪುರುಷ ಮತ್ತು ಮಹಿಳಾ  ಹಾಗೂ ಸಿವಿಲ್ ಪೊಲೀಸ್ ಕಾನ್‍ಸ್ಟೆಬಲ್ ಪುರುಷ ಮತ್ತು ಮಹಿಳಾ)( ಕಲ್ಯಾಣ ಕರ್ನಾಟಕ) ಹುದ್ದೆಗಳ ಭರ್ತಿಯ ಸಂಬಂಧ ಸುಮಾರು 37,640 ಅಭ್ಯರ್ಥಿಗಳಿಗೆ ಸೆ.20ರಂದು ಪರೀಕ್ಷೆ ನಡೆಯಲಿದೆ. ನಗರದ 69 ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.ksp.gov.in ವೆಬ್ ಸೈಟ್ ವೀಕ್ಷಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಕರೆಪತ್ರವನ್ನು ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್ : ರಾಜ್ಯ ಸರ್ಕಾರದಿಂದ 2020-21ನೇ ಸಾಲಿನ ಎಲ್ಲಾ ನೇರ ನೇಮಕಾತಿ ಹುದ್ದೆಗಳ ಭರ್ತಿಗೆ ಬ್ರೇಕ್

ಮಹಾರಾಷ್ಟ್ರ ರಾಜ್ಯಪಾಲರ ಭೇಟಿಗೆ ಮುಂದಾದ ನಟಿ ಕಂಗನಾ ರಣಾವತ್

State

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ನಟಿ ಸಂಜನಾ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇದ್ದಾರೆ. ಡ್ರಗ್ಸ್ ಮಾಫಿಯಾದಲ್ಲಿ ಹಲವು ನಟ ನಟಿಯರು ಭಾಗಿಯಾಗಿದ್ದಾರೆ, ಈ ಬಗ್ಗೆ ದಾಖಲೆಗಳನ್ನು ನೀಡುವುದಾಗಿ ಸಂಬರಗಿ ಹೇಳಿದ್ದರು. ಆದರೆ ಇದೀಗ ನನ್ನ ಬಳಿ ಯಾವುದೇ ದಾಖಲೆ ಇಲ್ಲ ಎಂದು ಪ್ರಶಾಂತ್ ಸಂಬರಗಿ ಪೊಲೀಸರಿಗೆ ಕಾಗೆ ಹಾರಿಸಿದ್ದಾರೆ.

ಸದ್ಯಕ್ಕೆ ನನ್ನ ಹತ್ರ ಯಾವುದೇ ದಾಖಲೆ ಇಲ್ಲ ಎಂದು ಸಿಸಿಬಿ ಪೊಲೀಸರ ‌ಮುಂದೆ ಪ್ರಶಾಂತ್ ಸಂಬರಗಿ ಸೈಲೆಂಟ್ ಆಗಿದ್ದಾರೆ. ಸಂಜನಾ ಸಿನಿಮಾ ಲಿಸ್ಟ್, ಇಡ್ಕೊಂಡು ಸಂಬರ್ಗಿ ಬಂದಿದ್ದು, ಬರೇ ಖಾಲಿ ಫೈಲ್ ಇಡ್ಕೊಂಡು ಬಂದಿದ್ದನ್ನು ನೋಡಿ ಪೊಲೀಸರು ಗರಂ ಆಗಿದ್ದಾರೆ.

ನೀನು ತೋರಿಸಿದ ಎಲ್ಲಾ ದಾಖಲೆಗಳು ನಮ್ಮ ಹತ್ರ ಕೂಡ ಇದಾವೆ..ಇದನ್ನು ಬಿಟ್ಟು ಬೇರೆ ಏನಿದೆ ಹೇಳಿ ಎಂದು ಮಾಧ್ಯಮಗಳ ಮುಂದೆ ಪೋಸ್ ಕೊಡೋದಲ್ಲ ಅಂತಾ ಗರಂ ಪೊಲೀಸರು ಗರಂ ಆಗಿದ್ದಾರೆ. ಬಳಿಕ ದಾಖಲೆ ಸಮೇತ ಶುಕ್ರವಾರ ಬರ್ತಿನಿ ಹೋದ ಸಂಬರ್ಗಿ ಎದ್ದುಹೋಗಿದ್ದಾರೆ. ಶುಕ್ರವಾರ ಬರೋಕೆ ನಾವು ಯಾವುದೇ ನೋಟಿಸ್ ಕೊಟ್ಟಿಲ್ಲ, ಕೊಡೋದು ಇಲ್ಲ.. ಸಿಸಿಬಿ ಪೊಲೀಸರ ಪ್ರಶ್ನೆ ಗೆ ಗಲಿಬಿಲಿಗೊಂಡ ಸಂಬರ್ಗಿ ಸೈಲೆಂಟ್ ಆಗಿ ಎದ್ದು ಬಂದಿದ್ದಾರೆ.

ನಾಳೆ NEET ಪರೀಕ್ಷೆ: ಕೊರೊನಾ ಕಟ್ಟುನಿಟ್ಟಿನ ಕ್ರಮಗಳ ನಡುವೆ ಪರೀಕ್ಷೆ ಬರೆಯಲಿದ್ದಾರೆ 15 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು..!

India

ನವದೆಹಲಿ : ಕೇಂದ್ರ ಸಚಿವ ಸುರೇಶ್ ಅಂಗಡಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸುರೇಶ್ ಅಂಗಡಿಯವರೇ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ನಾನು ಕೊರೊನಾ ಪರೀಕ್ಷೆ ಒಳಗಾಗಿದ್ದು, ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.  ನನಗೆ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಕೂಡ ನಾನು ಸಲಹೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

State

ಬೆಂಗಳೂರು : ಬೆಂಗಳೂರು ನಗರದಲ್ಲಿ ಇಂದು 3426 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 163631 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 3426 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಇದುವರೆಗೆ 163631 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 30 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 2370 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 9,464 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,40,411ಕ್ಕೆ ಏರಿಕೆಯಾಗಿದೆ. ಇವರಲ್ಲಿ 3,34,99 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದರಿಂದ ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 98,326 ಆಗಿದೆ.

ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ : ಸಂಜನಾಗಿಲ್ಲ ರಿಲೀಫ್ ; ಮೂರು ದಿನ ಸಿಸಿಬಿ ವಶಕ್ಕೆ ‘ಗಂಡ ಹೆಂಡತಿ’ ಬೆಡಗಿ

State

ಮಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 22 ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.

2019 ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಸಿಎಎ ವಿರೋಧಿಸಿ ಪ್ರತಿಭಟನೆ, ಹಿಂಸಾಚಾರ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಾಕಷ್ಟು ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಕೃತ್ಯಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಅಧಿಕ ಸಿಸಿಟಿವಿ ಫೂಟೇಜ್‌ ಮೂಲಕ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು, ಸೈಬರ್‌ ಕ್ರೈಂ ಅಪರಾಧ ವಿಭಾಗ ತಂಡ, ಇಂಟೆಲಿಜೆನ್ಸ್‌ ತಂಡ, ತಾಂತ್ರಿಕ ತಂಡಗಳು, ಸಿಸಿಆರ್‌ಬಿ, ಸಿಸಿಬಿ ತಂಡಗಳು ಮಂಗಳೂರು ಗಲಭೆಕೋರರ ಬಂಧನಕ್ಕೆ ಕಾರ್ಯಾಚರಣೆ ನಡೆಸಿತ್ತು,

ಇದೀಗ ಈ ಪ್ರಕರಣದಡಿ ಬಂಧಿತರಾಗಿದ್ದ  22 ಆರೋಪಿಗಳಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ನೀಡಿ ಆದೇಶ ಹೊರಡಿಸಿದೆ.

ಎಂ.ಬಿ.ಬಿ.ಎಸ್, ಬಿ.ಇ ವಿದ್ಯಾರ್ಥಿಗಳೇ ಗಮನಿಸಿ : ಲ್ಯಾಪ್‍ಟಾಪ್ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

.

India

ನವದೆಹಲಿ : ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದೀಪಕ್ ಕೊಚ್ಚರ್ ಅವರನ್ನು ಇಂದು ಬಂಧಿಸಿದ್ದಾರೆ.

2009ರ ಜೂನ್‌ನಿಂದ 2011ರ ಅಕ್ಟೋಬರ್ ನಡುವಿನ ಅವಧಿಯಲ್ಲಿ ವೀಡಿಯೋಕಾನ್ ಅವ್ಯವಹಾರ ನಡೆದಿತ್ತು. ವೀಡಿಯೋಕಾನ್ ಸಂಸ್ಥೆಗೆ ರೂ. 1,875 ಕೋಟಿ ಮೌಲ್ಯದ ಆರು ಸಾಲಗಳನ್ನು ಅಕ್ರಮವಾಗಿ ವಿತರಿಸಿದ ಪ್ರಕರಣದಲ್ಲಿ ಚಂದಾ ಕೊಚ್ಚಾರ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ  ಐಸಿಐಸಿಐ ಬ್ಯಾಂಕ್‌ನಿಂದ ಕಾರ್ಪೊರೇಟ್‌ ಗ್ರೂಪ್‌ಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮಂಜೂರು ಮಾಡುವಾಗ ಅಕ್ರಮ ನಡೆದಿದೆ ಎನ್ನಲಾಗಿದೆ.

ಇತ್ತೀಚೆಗೆ ಚಂದಾ ಕೊಚ್ಚಾರ್‌, ದೀಪಕ್ ಕೊಚ್ಚಾರ್ ಮತ್ತು ವಿಡಿಯೊಕಾನ್‌ ಗ್ರೂಪ್‌ನ ವೇಣುಗೋಪಾಲ್‌ ಧೂತ್‌ಗೆ ಸೇರಿದ ಸ್ಥಳಗಳ ಮೇಲೆ ಇ.ಡಿ ದಾಳಿ ಮಾಡಿತ್ತು.

ತಿರುಪತಿ ತಿಮ್ಮಪ್ಪನ ಭರ್ಜರಿ ಕಲೆಕ್ಷನ್ : ಒಂದೇ ದಿನದಲ್ಲಿ ದೇವಾಲಯಕ್ಕೆ ಹರಿದು ಬಂದ ಆದಾಯವೆಷ್ಟು ಗೊತ್ತೇ..?

State

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಇಂದು ಬೆಂಗಳೂರಿನಲ್ಲಿ 2932 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ಹೌದು. ಬೆಂಗಳೂರಿನಲ್ಲಿ ಇಂದು 2942 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 150523 ಕ್ಕೆ ಏರಿಕೆಯಾಗಿದೆ, ಇಂದು ಆಸ್ಪತ್ರೆಯಿಂದ 2935 ಮಂದಿ ಬಿಡುಗಡೆಯಾಗಿದ್ದು, ಇದುವರೆಗೆ 108642 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಬೆಂಗಳೂರಿನಲ್ಲಿ ಇಂದು 48 ಜನರು ಬಲಿಯಾಗಿದ್ದು, ಈ ಮೂಲಕ ಕೊರೊನಾ ಸಾವಿನ ಸಂಖ್ಯೆ 2211 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 5773 ಜನರಿಗೆ ಸೋಂಕು ತಗುಲಿದ್ದು, ಬೆಂಗಳೂರಿನಲ್ಲಿ ಇಂದು 2942 ಜನರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 141 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 6534 ಕ್ಕೇರಿದೆ.

BIGG NEWS : ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 141 ಮಂದಿ ಬಲಿ : 6534 ಕ್ಕೇರಿದ ಸಾವಿನ ಸಂಖ್ಯೆ

State

ರಾಯಚೂರು : ಕುಡಿಯಲು ಮದ್ಯ ನೀಡಲು ನಿರಾಕರಿಸಿದ ಬಾರ್ ಮಾಲೀಕನ ಮೇಲೆ ಮೂವರು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದೇವದುರ್ಗದಲ್ಲಿ ನಡೆದಿದೆ. ಇಲ್ಲಿನ ಜಾಲಹಳ್ಳಿ ರಸ್ತೆಯಲ್ಲಿರುವ ಕ್ಷೀರಸಾಗರ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕ ರವೀಂದ್ರ ಅವರ ಮೇಲೆ ಮೂವರು ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿರುವ ಬಾರ್ ಮಾಲೀಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವದುರ್ಗದ ಅಂಜಳ ಗ್ರಾಮದ ಮೂವರು ಮದ್ಯವ್ಯಸನಿಗಳು, ನಿನ್ನೆ ಮದ್ಯ ಮಾರಾಟದ ಅವಧಿ ಮುಗಿದ ಬಳಿಕವೂ ಬಾರ್ ಮುಂದೆ ಜಮಾಯಿಸಿ ಮದ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಬಾರ್ ಪರವಾನಗಿ ಸಿಎಲ್-7 ಹೊಂದಿದ್ದು, ಸರ್ಕಾರ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿಲ್ಲ. ಹೀಗಾಗಿ ಬಾರ್ ಅಂಗಡಿ ತೆರೆಯುವುದಿಲ್ಲ ಎಂದು ಮಾಲೀಕ ರವೀಂದ್ರ ಹೇಳಿದ್ದಾರೆ. ಆದರೆ, ಈ ವೇಳೆಗಾಗಲೇ ಕಂಠ ಪೂರ್ತಿ ಕುಡಿದು ಬಂದ ಮೂವರು, ರವೀಂದ್ರ ಜೊತೆ ಮದ್ಯ ನೀಡುವಂತೆ ವಾಗ್ವಾದಕ್ಕೆ ಇಳಿದಿದ್ದಾರೆ. ಮದ್ಯ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಅಬಕಾರಿ ಇಲಾಖೆ ಬಾರ್‌ಗೆ ಸೀಲ್ ಹಾಕಿದೆ. ಹೀಗಾಗಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ರವೀಂದ್ರ ತಿಳಿಸಿದ್ದಾರೆ. ಆದರೆ, ಕಂಠಪೂರ್ತಿ ಕುಡಿದಿದ್ದ ಮೂವರು, ಮಾಲೀಕ ರವೀಂದ್ರಗೆ ಕಲ್ಲಿನಿಂದ ಹೊಡೆದಿದ್ದಾರೆ. ಹೀಗಾಗಿ ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ರವೀಂದ್ರರನ್ನು  ಆಸ್ಪತ್ರೆಗೆ ದಾಖಲಿಸಿದ್ದು,  ಘಟನೆ ಹಿನ್ನೆಲೆಯಲ್ಲಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

India

ನವದೆಹಲಿ :  ಮಾರಕ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ಆನ್-ಆಫ್ ಸ್ವಿಚ್ ಅಲ್ಲ. ಈಗಾಗಲೇ ಲಕ್ಷಾಂತರ ಮಂದಿ ತೊಂದರೆಗೆ ಸಿಲುಕಿದ್ದು, ಮೇ.17ರ ಬಳಿಕ ಮುಂದೇನು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಇಂದು ಡಿಜಿಟಲ್ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಉದ್ಯೋಗವಿಲ್ಲದೆ, ಹಣವಿಲ್ಲದೆ, ಊಟವಿಲ್ಲದೆ ಲಕ್ಷಾಂತರ ಮಂದಿ ತೊಂದರೆಗೀಡಾಗಿದ್ದಾರೆ. ಇಂತಹವರ ನೆರವಿಗೆ ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕಿದೆ. ಅದಕ್ಕಾಗಿ 65 ಸಾವಿರ ಕೋಟಿ ರೂ. ಅಗತ್ಯವಿದೆ. ಬಡವರು, ವಲಸಿಗರು, ಕೂಲಿ ಕಾರ್ಮಿಕರಿಗೆ ತುರ್ತಾಗಿ ನೆರವು ನೀಡಲು ಕೂಡಲೇ ಕೇಂದ್ರ ಸರ್ಕಾರ ಈ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.  ಸದ್ಯದ ಪರಿಸ್ಥಿತಿಯಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿದ್ದು, ಮುಂದೆ ಇದರ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ದೇಶಿಯ ವಸ್ತುಗಳ ಬಳಕೆ ಹೆಚ್ಚು ಮಾಡುವುದರಿಂದ ದೇಶದ ಆರ್ಥಿಕತೆ ಸದೃಢವಾಗಲಿದೆ. ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಗಮನ ಹರಿಸಬೇಕೆಂದು ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ರೆಡ್, ಆರೇಂಜ್, ಗ್ರೀನ್ ಝೋನ್ ಗಳನ್ನು ನಿರ್ಧರಿಸುವುದು ಬೇಡ. ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ‌ನಿರ್ಧರಿಸಲಿ. ಕೇಂದ್ರ ಸರ್ಕಾರ ಕೊರೋನಾ ಪರಿಸ್ಥಿತಿಯನ್ನು ಜಿಲ್ಲೆಗಳ ಮಟ್ಟದಲ್ಲೇ ನಿಭಾಯಿಸಬೇಕು. ಪ್ರಧಾನ ಮಂತ್ರಿಗಳ ಕಚೇರಿಯಿಂದ ಕೊರೊನಾ ‌ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ಮುಖ್ಯಮಂತ್ರಿಗಳ ಮೇಲೆ, ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಮೇಲೆ‌ ಭರವಸೆ ಇಡಬೇಕು.‌ ಇಲ್ಲದಿದ್ದರೆ ಕೊರೊನಾ ವಿರುದ್ಧ ಹೋರಾಟದಲ್ಲಿ ಸೋಲಲಿದ್ದೇವೆ ಎಂದರು. ಇನ್ನು ಕೇಂದ್ರ ಸರ್ಕಾರ ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಏನು ಮಾಡಬೇಕು ಎಂಬ ಯೋಜನೆ ರೂಪಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿ ಮುಂದಿನ ಕ್ರಮಗಳೇನು ಎಂಬ ಬಗ್ಗೆ ನಿರ್ಧರಿಸಬೇಕು. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳು ಪಾರದರ್ಶಕವಾಗಿರಬೇಕು. ಆದರೆ ಸದ್ಯ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳನ್ನು ಪರಿಗಣಿಸುತ್ತಿಲ್ಲ ಎಂದು ಕಿಡಿಕಾರಿದರು. ಇನ್ನು ಆರೋಗ್ಯ ಸೇತು ಅ್ಯಪ್ ವಿಚಾರದಲ್ಲಿ ಪಾರದರ್ಶಕತೆ ಇರಬೇಕು. ಆ್ಯಪ್ ಅನ್ನು ಹ್ಯಾಕ್ ಮಾಡುವ ಸಾಧ್ಯತೆಗಳು ಈಗಾಗಲೇ ಸ್ಪಷ್ಟವಾಗಿವೆ. ಸಿಂಗಾಪುರ್ ದಲ್ಲೂ ಆ್ಯಪ್ ಬಳಸಲಾಗುತ್ತಿದೆ. ಭಾರತ ಅದೇ ಮಾದರಿಯಲ್ಲಿ ಪಾರದರ್ಶಕವಾಗಿರಬೇಕು ಎಂದು ಹೇಳಿದರು….

India

ಭೋಪಾಲ್ : ಮಹಾರಾಷ್ಟ್ರದ ಔರಂಗಬಾದ್ ಬಳಿ ರೈಲ್ವೆ ಹಳಿ ಮೇಲೆ ಮಲಗಿದ್ದ ಮಧ್ಯಪ್ರದೇಶದ  ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ದುರ್ಘಟನೆ ಸಂಭವಿಸಿದೆ. ದುರಂತದಲ್ಲಿ ಸಾವನ್ನಪ್ಪಿದ ದುರ್ದೈವಿಗಳ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. 

ಲಾಕ್​ಡೌನ್​ನಿಂದ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಮಧ್ಯಪ್ರದೇಶದ ಕಾರ್ಮಿಕರು  ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ನಡೆದು ನಡೆದು ಸುಸ್ತಾಗಿದ್ದ ಕಾರ್ಮಿಕರು ವಿಶ್ರಾಂತಿಗಾಗಿ ಕಳೆದ ರಾತ್ರಿ ರೈಲು ಹಳಿಯ ಮೇಲೆ ಮಲಗಿದ್ದರು. ಆರೆ, ಇಂದು ಮುಂಜಾನೆ 5 ಗಂಟೆ ವೇಳೆಗೆ ಜಾಲ್ನಾದಿಂದ ಔರಂಗಾಬಾದ್​ನತ್ತ ತೆರಳುತ್ತಿದ್ದ ಗೂಡ್ಸ್​ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿದ್ದು, ಪರಿಣಾಮ 17 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಐವರ ಸ್ಥಿತಿ ಚಿಂತಾಜನಕವಾಗಿದೆ.
ಜಾಲ್ನಾದಿಂದ 170 ಕಿ.ಮೀ. ದೂರದ ಭುವಸಾಲ್​ಗೆ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರು ಇನ್ನು 45 ಕಿ.ಮೀ. ನಡೆದರೆ ಊರು ಸೇರುತ್ತಿದ್ದರು. ಆದರೆ, ಅಷ್ಟರಲ್ಲೇ ಗೂಡ್ಸ್ ರೈಲು ರೂಪದಲ್ಲಿ ಬಂದಿರುವ ಜವರಾಯ 17 ಮಂದಿಯ ಪ್ರಾಣವನ್ನು ಬಲಿಪಡೆದಿದ್ದಾನೆ. ಘಟನೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ. ದುರಂತದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ರೈಲ್ವೆ ಇಲಾಖೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಇಂದು ಮುಂಜಾನೆ, ಗೂಡ್ಸ್ ರೈಲಿನ ಹಳಿಯ ಮೇಲೆ ಜನರು ಮಲಗಿರುವುದು ರೈಲಿನ ಲೋಕೋ ಪೈಲಟ್ ಗಮನಕ್ಕೆ ಬಂದಿತ್ತು. ತಕ್ಷಣ ಅವರು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗದೆ ರೈಲು ಜನರ ಮೇಲೆ ಹರಿದಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ…