kannada kannada kannada latest news kannada latest news – Kannada News Now


State

ಬೆಂಗಳೂರು : ಈಗಾಗಲೇ ಹಲವರನ್ನು ಸಿಸಿಬಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟು, ವಿಚಾರಣೆಯನ್ನೂ ನಡೆಸುತ್ತಿದೆ. ಬೆನ್ನಲ್ಲೇ ಸಿಸಿಬಿ ಪೊಲೀಸರು ಕಾಂಗ್ರೆಸ್ ನ ಸುಧಾಮಮಗರ ಮಾಜಿ ಕಾರ್ಪೊರೇಟರ್ ಹಾಗೂ ಮಾಜಿ ಶಾಸಕ ಆರ್ ಬವಿ ದೇವರಾಜ್ ಪುತ್ರ ಯುವರಾಜ್ ಗೆ ಸಿಸಿಬಿ ನೋಟಿಸ್ ನೀಡಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಅನುಮಾನ ಇರುವವರಿಗೆ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆ ಮಾಡಬಹುದು ಎಂದಿದ್ದಾರೆ.

ಪೊಲೀಸರು ಸುಖಾಸುಮ್ಮನೆ ಯಾರಿಗೂ ನೋಟಿಸ್ ನೀಡಲ್ಲ, ಏನೋ ಒಂದು ಅನುಮಾನ ಇರುತ್ತದೆ.ಅದಕ್ಕೆ ನೋಟಿಸ್ ನೀಡಿರುತ್ತಾರೆ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಹಂಪಿ ವಿವಿಯಿಂದ ವಿವಿಧ ಕೋರ್ಸ್‍ಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

India

ನವದೆಹಲಿ :  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನ ಅಧಿವೇಶನಕ್ಕೂ ಮುನ್ನ ದೇಹದ ಸಂಪೂರ್ಣ ತಪಾಸಣೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು, ಚೇತರಿಕೆಯ ನಂತರ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ .

ಅಮಿತ್ ಶಾ ಅವರು ಉಸಿರಾಟದ ಸಮಸ್ಯೆಯಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಕೊರೊನಾ ವೈರಸ್ ಸೋಂಕಿಗೆ ಆರಂಭದಲ್ಲಿ ಒಳಗಾಗಿದ್ದ 55 ವರ್ಷದ ಅಮಿತ್ ಶಾ ಚಿಕಿತ್ಸೆ ನಂತರ ಪದೇಪದೆ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಸೆ.20ರಂದು ‘ನಾಗರಿಕ ಪೊಲೀಸ್ ಕಾನ್ಸ್‍ಸ್ಟೇಬಲ್ ಹುದ್ದೆ’ಗಳಿಗೆ ಲಿಖಿತ ಪರೀಕ್ಷೆ : ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

State

ಬೆಂಗಳೂರು : ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಸಂಬಂಧ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ.

ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಸಂಪತ್ ರಾಜ್ ಗೆ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಮಾಜಿ ಮೇಯರ್ ಸಂಪತ್ ರಾಜ್ ಐಸೋಲೇಷನ್ ನಲ್ಲಿದ್ದಾರೆ, ಆದ್ದರಿಂದ ಸಂಪತ್ ರಾಜ್ ಅವರು ಸಿಸಿಬಿ ವಿಚಾರಣೆಗೆ ಹಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಡಿ.ಜೆ.ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಬಳಿ ಸಂಪತ್ ರಾಜ್ ಇದ್ದರು ಎಂಬ ಆರೋಪವಿದೆ. ಹೀಗಾಗಿ ಅವರಿಗೆ ಸಿಸಿಬಿ ಮತ್ತೆ ವಿಚಾರಣೆಗೆ ಕರೆಯಲಾಗಿತ್ತು. ಸಂಪತ್ ರಾಜ್ ಅವರಿಗೆ ನೋಟಿಸ್ ನೀಡಲು ನಿನ್ನೆ ಪೊಲೀಸರು ಮನೆಗೆ  ತೆರಳಿದ್ದಾಗ ಅವರು ಇರಲಿಲ್ಲ. ಕಳೆದ 1 ತಿಂಗಳಿಂದ ಸಂಪತ್ ರಾಜ್ ಪೊಲೀಸರ ಕೈಗೆ ಸಿಕ್ಕಿಲ್ಲ ಎನ್ನಲಾಗಿದೆ. ಬಳಿಕ ಪೊಲೀಸರು ವಾಟ್ಸಪ್ ಮೂಲಕ ನೋಟಿಸ್ ರವಾನಿಸಿದ್ದರು.

BREAKING : ಸಂಪತ್ ರಾಜ್ ಗೆ ‘ಕೊರೊನಾ ಪಾಸಿಟಿವ್’ ಧೃಡ : ನಾಳೆ CCB ವಿಚಾರಣೆಗೆ ಹಾಜರಾಗಲ್ಲ BBMP ಮಾಜಿ ಮೇಯರ್

State

ಬೆಂಗಳೂರು : ರಾಜ್ಯ ಸಚಿವ ಸಂಪುಟ ಚರ್ಚೆ ಬೆನ್ನಲ್ಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ದಿಢೀರ್ ದೆಹಲಿಗೆ ತೆರಳಿದ್ದು,  ಇಂದು ಮಧ್ಯಾಹ್ನವೇ ವಿಶೇಷ ವಿಮಾನದ ಮೂಲಕ ಕಲಬುರ್ಗಿಯಿಂದ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ.

ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ  ನಾನು ದೆಹಲಿಗೆ ಬಂದಿರುವುದು ಅಭಿವೃದ್ಧಿ ಕೆಲಸಗಳು ಮತ್ತು ಯೋಜನೆಗಳ ಕುರಿತು ಮಾತುಕತೆ ನಡೆಸುವುದಕ್ಕೆ, ಸಂಪುಟ ವಿಸ್ತರಣೆ ಸಂಬಂಧ ಕೇಂದ್ರದ ನಾಯಕರ ಅನುಮತಿ ಪಡೆಯುವುದಕ್ಕೆ ಎಂದು ಸಿಎಂ ಹೇಳಿದ್ದಾರೆ.

ಸಂಪುಟ ವಿಸ್ತರಣೆ ವಿಚಾರ ಸಂಬಂಧ ಕೇಂದ್ರದ ನಾಯಕರನ್ನು ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಮಾಹಿತಿಗಳ ಪ್ರಕಾರ ಹೈಕಮಾಂಡ್ ನಾಯಕರಿಂದ ಸಂಪುಟ ಪುನಾರಚನೆ ಆಗಲಿದೆ ಎನ್ನಲಾಗಿದೆ. ಈ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ದೇವರ ಅನಗ್ರಹ ಇದ್ದರೆ ಮಂತ್ರಿಯಾಗುವೆ : ಶಾಸಕ ಸೋಮಶೇಖರ್ ರೆಡ್ಡಿ

State

ಬೆಂಗಳೂರು : ರಾಜ್ಯದಲ್ಲಿ ಇಂದು 70 ಮಂದಿ ಕಿಲ್ಲರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಇದುವರೆಗೆ 7536 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕಿಗೆ ಇಂದು 27 ಮಂದಿ ಸೋಂಕಿತರು ಬಲಿಯಾಗಿದ್ದು, ಇದುವರೆಗೆ ಬೆಂಗಳೂರಿನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 2521 ಕ್ಕೆ ಏರಿಕೆಯಾಗಿದೆ

ರಾಜ್ಯದಲ್ಲಿ ಇಂದು 9725 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,84,990 ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ 375809 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 1,01,626 ಮಂದಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಸೆ. 26 ರಂದು ರಾಮನಗರದಲ್ಲಿ ಬೃಹತ್ ಪ್ರತಿಭಟನೆ

Film State

ಬೆಂಗಳೂರು:  ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ನಟಿ ಸಂಜನಾ ಗಲ್ರಾನಿಯನ್ನು 1 ನೇ ಎಸಿಎಂಎಂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈಗಾಗಲೇ ನಟಿ ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ, ಇದರ ನಡುವೆಯೇ ಸಂಜನಾ ಪೊಲೀಸ್ ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. ‘ಜೈಲಿಗೆ ಎಂಟ್ರಿಕೊಡುವ ವೇಳೆ ಚಿಕ್ಕ ಗೇಟ್ ನಲ್ಲಿ ಹೋಗಲ್ಲ ಎಂದು ನಟಿ ಸಂಜನಾ ಪೊಲೀಸ್ ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ.

ಸದ್ಯ, ಕ್ವಾರಂಟೈನ್ ಸೆಲ್ ಗೆ ಸಂಜನಾರನ್ನು ಶಿಫ್ಟ್ ‘ಮಾಡಲಾಗಿದ್ದು, ಜೈಲಿನಲ್ಲಿಯೇ ಸಂಜನಾಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕೆಲಹೊತ್ತು ಸಂಜನಾ ಹೈಡ್ರಾಮಾ ನಡೆದಿದೆ ಎನ್ನಲಾಗಿದೆ.   ಅದೇನೆ ಇರಲಿ ಗಂಡ ಹೆಂಡತಿ ಸಿನಿಮಾದ ಮೂಲಕ ಕಿಚ್ಚು ಹಚ್ಚಿಸಿದ್ದ ಮಾದಕ ನಟಿಗೆ ಜೈಲೂಟ ಗ್ಯಾರೆಂಟಿಯಾಗಿದೆ.

ಸಂಜನಾ ಜೊತೆಗೆ, ಆರೋಪಿ ವಿರೇನ್ ಖನ್ನಾ, ರವಿಶಂಕರ್ ಮತ್ತು ಇತರರನ್ನು ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಸೆಪ್ಟೆಂಬರ್ 16 ರಂದು ಸಂಜನಾ ಮತ್ತು ಇತರ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸ್ಯಾಂಡಲ್ ವುಡ್ ಡ್ರಗ್ ರಾಕೆಟ್ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ.

ಡ್ರಗ್ಸ್ ಲಿಂಕ್  ಆರೋಪ : ವಿಚಾರಣೆ ಮುಗಿಸಿ ಸ್ಟಾರ್ ದಂಪತಿ ಮನೆಗೆ ವಾಪಸ್ : ಮನಸಾರೆ ಜೋಡಿಯ ಮೊಬೈಲ್ ಸಿಸಿಬಿ ವಶಕ್ಕೆ

State

ಬೆಂಗಳೂರು: ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿರುವ ಸಿಬಿಬಿ, ನಾಳೆ(ಬುಧವಾರ) ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಲು ತಿಳಿಸಿದೆ.

ಹೌದು,ನಟಿ ರಾಗಿಣಿ , ಸಂಜನಾ ಬಳಿಕ ಇದೀಗ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ಸಂಕಷ್ಟಎದುರಾಗಿದೆ. ಪಾರ್ಟಿಯಲ್ಲಿ ನಟಿ ರಾಗಿಣಿ, ಸಂಜನಾ ಜೊತೆ ಐಂದ್ರಿತಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿರೇನ್ ಖನ್ನಾ ಹೇಳಿಕೆಯಲ್ಲೂ ಐಂದ್ರಿತಾ ರೈ ಹೆಸರು ಕೇಳಿಬಂದಿದ್ದು, ಈ ಹಿನ್ನೆಲೆ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿದ್ದು, ನಾಳೆ ಸ್ಟಾರ್ ದಂಪತಿ 11 ಗಂಟೆಗೆ ಸಿಸಿಬಿ ವಿಚಾರಣೆ ಎದುರಿಸಲಿದ್ದಾರೆ. ಇನ್ನೂ, ಮನಸಾರೆ ಜೋಡಿಗೆ ಮಾದಕ ಶಾಕ್ ತಗುಲಿದ್ದು, ನಾಳೆ ವಿಚಾರಣೆ ಎದುರಿಸಲಿದ್ದಾರೆ.

ಈಗಾಗಲೇ ಈ ಬಗ್ಗೆ ಸ್ಟಾರ್ ದಂಪತಿ ಪ್ರತಿಕ್ರಿಯೆ ನೀಡಿದ್ದು, ವಿಚಾರಣೆಗೆ ಹಾಜರಾಗುವುದಾಗಿ ದಂಪತಿ ತಿಳಿಸಿದೆ.  ನೋಟಿಸ್ ಬೆನ್ನಲ್ಲೇ ಟ್ವೀಟ್ ಮಾಡಿರುವ ದಿಗಂತ್ ಹಾಗೂ ಐಂದ್ರಿತಾ ‘ ಟೆಲಿಫೋನ್ ಮೂಲಕ ನಮಗೆ ನೋಟಿಸ್ ಸಿಕ್ಕಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲಿದ್ದೇವೆ , ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

‘ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್’ : ಸಂಜನಾ ಸಿಸಿಬಿ ಕಸ್ಟಡಿ ಇಂದಿಗೆ ಅಂತ್ಯ : ನಾಳೆ ಪರಪ್ಪನ ಅಗ್ರಹಾರಕ್ಕೆ ‘ಮಾದಕ ನಟಿ’ ಶಿಫ್ಟ್..?

State

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಅರೆಸ್ಟ್ ಆಗಿರುವ ನಟಿ ಸಂಜನಾಗೆ ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಿಸಿಬಿಯಿಂದ ವಿಚಾರಣೆ ನಡೆಯುತ್ತಿದೆ.

ಸಿಸಿಬಿ ಅಧಿಕಾರಿ ಅಂಜುಮಾಲಾ ನೇತೃತ್ವದಲ್ಲಿ ಸಂಜನಾ ವಿಚಾರಣೆ ನಡೆಯುತ್ತಿದ್ದು, ಇಂದಿಗೆ ಸಂಜನಾ ಸಿಸಿಬಿ ಕಸ್ಡಡಿ ಅಂತ್ಯವಾಗಲಿದೆ. ನಾಳೆ ಸಂಜನಾ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನೂ, ಸಿಸಿಬಿ ಕಚೇರಿಯಲ್ಲಿ ಇನ್ಸ್ ಪೆಕ್ಟರ್ ಶ್ರೀಧರ್ ಪೂಜಾರ್ ರಿಂದ ಖನ್ನಾ ವಿಚಾರಣೆ ಹಾಗೂ ಮಹಮದ್ ಸಿರಾಜ್ ರಿಂದ ರವಿಶಂಕರ್ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ಬಳಿಕ ಮೂವರು ಆರೋಪಿಗಳು ನಾಳೆ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ.

‘ಪಂಜರದ ಗಿಣಿ’ ರಾಗಿಣಿಗೆ ಜೈಲಿನ ವೈದ್ಯರಿಂದಲೇ ಬೆನ್ನು ನೋವಿಗೆ ಚಿಕಿತ್ಸೆ..!  

https://kannadanewsnow.com/kannada/ragini-in-jail-treatement-by-

State

ಬೆಂಗಳೂರು :  ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಅರುಣ್, ಸಂತೋಷ್ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ.

 ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಆರೋಪಿ ಅರುಣ್, ಸಂತೋಷ್ ಅರ್ಜಿಯನ್ನು ಸೆಷನ್ ಕೋರ್ಟ್ ವಜಾಗೊಳಿಸಿದೆ.

ಗಲಭೆಯಲ್ಲಿ 36 ಸರ್ಕಾರಿ ವಾಹನಗಳು, 300 ಖಾಸಗಿ ವಾಹನಗಳು ಮತ್ತು ಅನೇಕ ಮನೆಗಳು ನಾಶವಾಗಿವೆ. ಒಟ್ಟಾರೆಯಾಗಿ ಸುಮಾರು 10 ರಿಂದ 15 ಕೋಟಿ ರೂಪಾಯಿಯಷ್ಟು ಗಲಭೆಯಿಂದಾಗಿ ನಷ್ಟ ಉಂಟಾಗಿದೆ. ಈ ದಾಳಿಯಲ್ಲಿ ಅಖಂಡ ಶ್ರೀನಿವಾಸ್‌ ಮನೆ ಮತ್ತು ಕಚೇರಿಗೆ ಬೆಂಕಿ ಹಚ್ಚಲಾಗಿತ್ತು. ಬೆಂಕಿಯ ಕೆನ್ನಾಲಗೆಗೆ ಶಾಸಕಕ ಮನೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದಲ್ಲದೆ ಗಲಭೆಕೋರರು ಅಪಾರ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. ಈ ಗಲಭೆಯಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿತ್ತು.

BIGG NEWS : ಕಿಲ್ಲರ್ ಕೊರೊನಾಗೆ ರಾಜ್ಯದಲ್ಲಿ ಇಂದು 97 ಬಲಿ : 7481 ಕ್ಕೇರಿದ ಕೋವಿಡ್ ಸಾವಿನ ಸಂಖ್ಯೆ

State

ಬೆಂಗಳೂರು: ರಾಜ್ಯದಲ್ಲಿ ಇಂದು 7576 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,75,265 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು  97 ಜನ ಸೋಂಕಿತರು ಮೃತಪಟ್ಟಿದ್ದು , ಈ ಮೂಲಕ ಇದುವರೆಗೆ 7481 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸದ್ಯ 98,536 ಸಕ್ರಿಯ ಪ್ರಕರಣಗಳಿದ್ದು 794 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 7406 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 3,69,229 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನೂ,  ಬೆಂಗಳೂರಿನಲ್ಲಿ ಇಂದು 3084 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,76,712 ಕ್ಕೆ ಏರಿಕೆಯಾಗಿದೆ . ಒಟ್ಟಾರೆ ಇದುವರೆಗೆ 1,34,516 ಜನ ಡಿಸ್ಚಾರ್ಜ್ ಆಗಿದ್ದಾರೆ. 39,681 ಸಕ್ರಿಯ ಪ್ರಕರಣಗಳಿದೆ.  ಕೊರೊನ  ಸೋಂಕಿಗೆ ಇಂದು 41 ಮಂದಿ ಸೋಂಕಿತರು ಬಲಿಯಾಗಿದ್ದು, ಇದುವರೆಗೆ ಬೆಂಗಳೂರಿನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 2514 ಕ್ಕೆ ಏರಿಕೆಯಾಗಿದೆ.

ಮದ್ಯಪ್ರಿಯರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ: ಯುಕೆ ನಿಂದ ಬರಲಿದೆ ಸ್ಕಾಚ್ ವಿಸ್ಕಿ