kannada kannada kannada latest news kannada latest news kannada news kannada news – Kannada News Now


State

ಡಿಜಿಟಲ್ ಡೆಸ್ಕ್ : ರಾಜ್ಯದಾದ್ಯಂತ ನವರಾತ್ರಿ ಹಬ್ಬವನ್ನು ಸಡಗರ, ಭಕ್ತಿಯಿಂದ ಭಕ್ತರು ಆಚರಿಸುತ್ತಿದ್ದಾರೆ. ನವರಾತ್ರಿಯ ಶುಭ ಸಂದರ್ಭದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿದೆ.

ಆದರೆ , ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋ ಕಾಲ್ಡ್ ಸ್ವಾಮೀಜಿಯೋರ್ವ ಅಸಭ್ಯವಾಗಿ ನೃತ್ಯ ಮಾಡಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು. ಧಾರವಾಡ ತಾಲೂಕಿನ ನಿಗದಿ ಬಳಿ ಇರುವ ಅಂಬಾವನ ಮಠದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಠದ ಸ್ವಾಮೀಜಿ ತನ್ನನ್ನು ತಾನು ಮೈ ಮರೆತು ವೇದಿಕೆ ಮೇಲೆ ಹುಚ್ಚೆದ್ದು ಕುಣಿದಿದ್ದಾನೆ, ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು” ಎಂದು ಸಿನಿಮಾದ ಹಾಡಿಗೆ ಮೈ ಮರೆತು ಕುಣಿದಿದ್ದಾನೆ. ನವರಾತ್ರಿಯಂತಹ ಕಾರ್ಯಕ್ರಮದಲ್ಲಿ ಭಕ್ತರಿಗೆ ಪ್ರವಚನ ನೀಡಬೇಕಿದ್ದ ಸ್ವಾಮೀಜಿಯೇ ಈ ರೀತಿಯಾಗಿ ಅಸಭ್ಯ ವರ್ತನೆ ತೋರಿದ್ದಾನೆ.

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ, ಬಹಿರಂಗ ಪ್ರಚಾರಕ್ಕೆ ತೆರೆ, ಬುಧವಾರ ಮತದಾನ


India

ಡಿಜಿಟಲ್ ಡೆಸ್ಕ್ :  ಹತ್ರಾಸ್ ಅತ್ಯಾಚಾರ ಪ್ರಕರಣ ಸಂಬಂಧ ಸಿಸಿಬಿ ತನಿಖೆ ಆರಂಭಿಸಿದ್ದು, ಇದೀಗ ಸಿಸಿಬಿ ಮಹತ್ವದ ಸಾಕ್ಷ ಕಲೆಹಾಕಿದೆ .

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ ಆರೋಪಿಗಳಲ್ಲಿ ಒಬ್ಬನಾಗಿರುವ ಲವಕುಶ್ ಸಿಕರ್ವರ್ ಎಂಬಾತನ ಮನೆಗೆ ತೆರಳಿ ಪರಿಶೀಲನೆ ನಡೆಸಿದೆ.

ಈ ಸಂದರ್ಭದಲ್ಲಿ ಅಲ್ಲಿ ಕೆಂಪು ಕಲೆಗಳಿರುವ ಅಂಗಿಯೊಂದು ಸಿಕ್ಕಿದ್ದು, ಇದನ್ನು ಪೊರೆನ್ಸಿಕ್ ಸೈನ್ಸ್ ವಿಭಾಗಕ್ಕೆ ಕಳುಹಿಸಲಿರುವ ತಂಡ ಈ ಬಗ್ಗೆ ಮಾಹಿತಿ ಕಲೆಹಾಕಲಿದೆ. ಆದರೆ ಆರೋಪಿ ಮನೆಯವರು ಮಾತ್ರ ಇದನ್ನು ಅಲ್ಲಗೆಳೆದಿದ್ದು. ಲವಕುಶ್ ಪೇಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅದು ಪೇಟಿಂಗ್ ಕಲೆ ಎಂದು ಹೇಳಿದ್ದಾರೆ. ಪರೀಕ್ಷೆ ಬಳಿಕವೇ ಇದರ ಸತ್ಯಾನುಸತ್ಯತೆ ತಿಳಿಯಲಿದೆ.

ಇನ್ನೂ. ಉತ್ತರಪ್ರದೇಶದಲ್ಲಿ ನಡೆದ ಹತ್ರಾಸ್ ಅತ್ಯಾಚಾರ -ಸಾವು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.‘ಸೂಕ್ತ ಸಮಯದಲ್ಲಿ ತೀರ್ಪು ನೀಡುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠ ಹೇಳಿದೆ.

ಹತ್ರಾಸ್ ಸಂತ್ರಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಳಿಕ ಅಂತ್ಯಸಂಸ್ಕಾರವನ್ನೂ ಪೊಲೀಸರೇ ತರಾತುರಿಯಲ್ಲಿ ನೆರವೇರಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

‘ರಾಜ್ಯದ ನೆರೆ ಪರಿಸ್ಥಿತಿ’ ಕುರಿತು ಸಿಎಂ ಯಡಿಯೂರಪ್ಪ ಜೊತೆ ಪ್ರಧಾನಿ ಮೋದಿ ಚರ್ಚೆIndia

ಡಿಜಿಟಲ್ ಡೆಸ್ಕ್ :   ದಿಶಾ ಸಾಲಿಯನ್ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಪುನೀತ್ ಕೌರ್ ದಂಡಾ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಸೋಮವಾರ, ಮನವಿಗೆ ವಿಚಾರಣೆಯ ಅಧಿವೇಶನವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಿಗದಿಪಡಿಸಲಾಗಿತ್ತು.  ಆದರೆ, ವಕೀಲ ವಿನೀತ್ ದಂಡಾ ಸುಪ್ರೀಂ ಕೋರ್ಟ್ ವಿಚಾರಣಾ ಅಧಿವೇಶನದಲ್ಲಿ ಹಾಜರಿರಲಿಲ್ಲ, ಈ ಹಿನ್ನೆಲೆ ವಿಚಾರಣೆಯನ್ನು ಮುಂದಿನ ವಾರದವರೆಗೆ ಮುಂದೂಡಲಾಯಿತು.

ಅರ್ಜಿದಾರರಾದ ಪುನೀತ್ ಕೌರ್ ದಂಡಾ ಅವರ ವಕೀಲರ ಪ್ರಕಾರ, ವಿನೀತ್ ದಂಡಾ ನ್ಯಾಯಾಲಯಕ್ಕೆ ಹಾಜರಾದರು, ಆದರೆ ಅವರ ಧ್ವನಿ ಮ್ಯೂಟ್ ಆಗಿತ್ತು. ಧ್ವನಿ ಮ್ಯೂಟ್ ಆಗಿ ಹೇಗೆ ಹೋಯಿತು ಎಂಬುದು ನಿಗೂ ಢವಾಗಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

BREAKING ; ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಕೇಸ್ : ಆರೋಪಿ ‘ಅಶ್ವಿನ್ ಭೋಗಿ’ 7 ದಿನ ಸಿಸಿಬಿ ಕಸ್ಟಡಿಗೆ

 State

ಬೆಳಗಾವಿ : ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಸುಖಾಂತ್ಯಗೊಂಡಿದ್ದು, ವೈಮನಸ್ಸು ಮರೆತು ಮತ್ತೆ ಒಂದಾಗಲು ಕಲ್ಯಾಣ್ ಪತ್ನಿ ಅಶ್ವಿನಿ ಹೇಳಿದ್ದಾರೆ. 

ಹೌದು. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಕೆ ಕಲ್ಯಾಣ್ ಪತ್ನಿ ಅಶ್ವಿನಿ ವಿಚ್ಚೇದನಕ್ಕೆ ಸಲ್ಲಿಸಿದ ಅರ್ಜಿಯನ್ನು ಶೀಘ್ರದಲ್ಲೇ ವಾಪಸ್ ಪಡೆಯುತ್ತೇನೆ ಎಂದಿದ್ದಾರೆ.

ಆವೇಶದಲ್ಲಿ ಕೆ ಕಲ್ಯಾಣ್ ಅವರ ಬಗ್ಗೆ ಆರೋಪ ಮಾಡಿದ್ದೆ, ಸದ್ಯ ಪೊಲೀಸರ ಕೌನ್ಸೆಲಿಂಗ್ ನಿಂದ ನಾನು ಮಾಡಿದ್ದು, ತಪ್ಪು ಎಂದು ಗೊತ್ತಾಗಿದೆ. ನಾವಿಬ್ಬರು ಕುಳಿತು ನಮ್ಮಿಬ್ಬರ ನಡುವಿನ ವೈಮನಸ್ಸು ಬಗೆಹರಿಸಿಕೊಳ್ಳುತ್ತೇವೆ, ಶಿವಾನಂದ ವಾಲಿ ಮೋಸದಿಂದ ಹಣ ಲಪಟಾಯಿಸಿದ್ದಾರೆ. ಕೆಲಸಕ್ಕೆ ಯಾರನ್ನಾದರೂ ತೆಗೆದುಕೊಳ್ಳುವಾಗ ಎಚ್ಚರದಿಂದಿರಿ ಎಂದು ಅಶ್ವಿನಿ ಹೇಳಿದ್ದಾರೆ.

‘ಪ್ರಾಥಮಿಕ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್ : DSERTಯಿಂದ ಮಧ್ಯಂತರ ರಜೆ ಮುಗಿಯುವವರೆಗೆ ‘ಮುಖಾಮುಖಿ’ ತರಬೇತಿ ಸ್ಥಗಿತ

 

 State

ಬೆಂಗಳೂರು :  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ರಾಜ್ಯದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಬೆಂಗಳೂರಿನಲ್ಲಿ ಮಳೆರಾಯ ಆರ್ಭಟಿಸಿದ್ದು, ಮುಂದಿನ 2 ದಿನ  ರಾಜ್ಯದ ಹಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನ ರಿಚ್ ಮಂಡಗ ಸರ್ಕಲ್, ಶಾಂತಿ ನಗರ, ಟೌನ್ ಹಾಲ್ , ಜಯನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ.

ಮುಂದಿನ 2 ದಿನ ಮಳೆ ;

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಅ.10 ರಿಂದ ಮುಂದಿನ 2 ದಿನ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಮುಂದಿನ 24 ಗಂಟೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.State

ಬೆಂಗಳೂರು :  ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 102 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 9891  ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು  4563  ಮಂದಿಗೆ ಸೋಂಕು ತಗುಲಿದ್ದು,  ಇಂದು 30 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3320 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 10517 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 700786 ಕ್ಕೆ ಏರಿಕೆಯಾಗಿದೆ.  ರಾಜ್ಯದಲ್ಲಿ ಇಂದು 8337 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.India

ಪಾಟ್ನಾ : ಸಕಲ ಸರ್ಕಾರಿ ಗೌರವಗಳೊಂದಿಗೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್  ಅಂತ್ಯಕ್ರಿಯೆ ಪಾಟ್ನಾದ ಜನಾರ್ಧನ ಘಾಟ್ ನಲ್ಲಿ ಇಂದು ನೆರವೇರಿದೆ.

ಪಾಸ್ವಾನ್ ಅವರ ಪುತ್ರ ಎಲ್ ಜೆ ಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಇಂದು ಅಂತಿಮ ವಿಧಿ ವಿಧಾನ ನೆರವೇರಿಸಿದರು.  ಅಂತ್ಯಕ್ರಿಯೆ ವೇಳೆ ಬಿಹಾರದ ಚೀಫ್ ಮಿನಿಸ್ಟರ್ ನಿತೀಶ್ ಕುಮಾರ್, ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್  ಮತ್ತಿತರರಿದ್ದರು;.

ಕೆಲವು ದಿನಗಳ ಹಿಂದೆ ದೆಹಲಿಯ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಾಸ್ವಾನ್ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದರು.

ಇನ್ನೆರಡು ದಿನಗಳಲ್ಲಿಯೇ ಶಿರಾ, ರಾಜರಾಜೇಶ್ವರಿನಗರ ಉಪ ಚುನಾವಣೆ ಅಭ್ಯರ್ಥಿಗಳ ಹೆಸರು ಘೋಷಣೆ – ನಳೀನ್ ಕುಮಾರ್ ಕಟೀಲ್State

ಕಲಬುರಗಿ : ಸಿಎಂ ಯಡಿಯೂರಪ್ಪಗೆ ಗೌರವ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕನ್ನಡ ಪರ ಹೋರಾಟ ಗಾರ ವಾಟಾಳ್ ನಾಗರಾಜ್ ಹೇಳಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು ಕೊರೊನಾ ಸೋಂಕಿನಿಂದ ರಾಜ್ಯ ತತ್ತರಿಸಿ ಹೋಗಿದೆ. ಅದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಸಾಯುವವರು ಸಾಯಲಿ, ನಾನು ನನ್ನ ಪಾಡಿಗೆ ಆರಾಮಾಗಿರ್ತೀನಿ ಅನ್ನೋದಾದ್ರೆ ಅವರು ರಾಜೀನಾಮೆ ನೀಡಲಿ, ಇಂದು ಚುನಾವಣೆಯೇ ಭ್ರಷ್ಟಾಚಾರವಾಗಿದೆ. 2000 ಕೋಟಿ ಇದ್ರೆ ಯಾರೂ ಬೇಕಾದ್ರೂ ಸಿಎಂ ಆಗಬಹುದು ಎಂದಿದ್ದಾರೆ.

ಸದ್ಯಕ್ಕೆ ಶಾಲಾ ಕಾಲೇಜು ಆರಂಭ ಬೇಡ, ದಿನದಿಂದ ದಿನಕ್ಕೆ ಕೊರೊನಾ ಕೇಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದರು. ವಿದ್ಯೆ ಬೇಕು, ಆದರೆ ಪ್ರಾಣ ಅದಕ್ಕಿಂತ ಮುಖ್ಯ. ಸರ್ಕಾರ ಅವಸರವಾಗಿ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.

KSOU ಪ್ರಾದೇಶಿಕ ಕೇಂದ್ರ ಪ್ರವೇಶಾತಿಗೆ ಅರ್ಜಿ ಆಹ್ವಾನIndia World

ನ್ಯೂಯಾರ್ಕ್ : ವಿಶ್ವದ ದೊಡ್ಡಣ್ಣ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಗೆ ಕೊರೊನಾ ಸೋಂಕು ಧೃಡವಾದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರ ಟ್ರಂಪ್ ಡಿಸ್ಚಾರ್ಜ್ ಆಗಲಿದ್ದಾರೆ.

ಇಂದು ಟ್ರಂಪ್ ಆರೋಗ್ಯದ ಬಗ್ಗೆ ವೈದ್ಯರು ಪ್ರಕಟಣೆ ಹೊರಡಿಸಿದ್ದು, ಅವರ ಆಕ್ಸಿಜನ್ ಮಟ್ಟದಲ್ಲಿ ಕೊಂಚ ಕುಸಿತ ಕಂಡಿದೆ ಈಗ ಚೇತರಿಕೆ ಕಂಡು ಬಂದಿದೆ. ಟ್ರಂಪ್ ಸೋಮವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.

“ಈಗ ನನಗೆ ತುಂಬಾ ನೆಮ್ಮದಿ ಇದೆ. ನಾನು ಎಲ್ಲ ಕೆಲಸಗಳನ್ನೂ ಮಾಡಿ, ವಾಪಸ್ ಬರಲು ಪ್ರಯತ್ನಿಸುತ್ತೇವೆ. ನಾನು ಮತ್ತೆ ಹಿಂದಿರುಗಬೇಕು, ಏಕೆಂದರೆ ನಾವು ಈಗಲೂ ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವನ್ನಾಗಿ ಮಾಡಬೇಕು” ಎಂದು ಟ್ರಂಪ್ ಹೇಳಿದ್ದರು.

ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಅನಿರ್ಧಿಷ್ಟಾವಧಿಯ ಮುಷ್ಕರ ಹಿನ್ನಲೆ : ನಾಳೆ ನೌಕರರ ಜೊತೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಸಭೆ

 State

ಬೆಂಗಳೂರು : ಅಕ್ಟೋಬರ್ 28ರಂದು ನಡೆಯಲಿರುವ ರಾಜ್ಯದ ಎರಡು ಶಿಕ್ಷಕರ, ಎರಡು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಜೊತೆಗೆ ಆರ್ ಆರ್ ನಗರ ಹಾಗೂ ವಿಧಾನಸಭೆ ಕ್ಷೇತ್ರಕ್ಕೆ ನವೆಂಬರ್ 3 ರಂದು ಚುನಾವಣೆ ನಿಗದಿಯಾಗಿದೆ.

ಈ ಹಿನ್ನೆಲೆ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಘಟಕ ಆದೇಸ ಹೊರಡಿಸಿದೆ.  ಕೋರ್ ಕಮಿಟಿ ಸಭೆ ಬಳಿಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾಹಿತಿ ನೀಡಿದ್ದಾರೆ.

ಯಾರಿಗೆ ಯಾವ ಜವಾಬ್ದಾರಿ..?

ಶಿರಾ ಕ್ಷೇತ್ರ : ಗೋವಿಂದ ಕಾರಜೋಳ, ಡಾ ಸಿ ಎನ್ ಅಶ್ವಥ್ ನಾರಾಯಣ್, ಬಿ ವೈ ವಿಜಯೇಂದ್ರ, ಎನ್ ರವಿಕುಮಾರ್. ಪಿಸಿ ಮೋಹನ್, ಪೂರ್ಣಿಮಾ ಶ್ರೀನಿವಾಸ್

ಆರ್ ಆರ್ ನಗರ ಕ್ಷೇತ್ರ : ಅರವಿಂದ ಲಿಂಬಾವಳಿ. ಆರ್ ಅಶೋಕ್, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜು, ಎಸ್ ಆರ್ ವಿಶ್ವನಾಥ್

ಶಿಕ್ಷಕರ ಆಗ್ನೇಯ ಕ್ಷೇತ್ರ : ಡಾ.ಕೆ ಸುಧಾಕರ್ ಹಾಗೂ ಜೆಸಿ ಮಾಧುಸ್ವಾಮಿ

ಡಾ ವೈ ಎ ನಾರಾಯಣಸ್ವಾಮಿ, ಶಿವಯೋಗಿಸ್ವಾಮಿ

ಪಶ್ಚಿಮ ಪದವೀಧರ ಕ್ಷೇತ್ರ : ಜಗದೀಶ್ ಶೆಟ್ಟರ್, ಅರೆಬೈಲು ಶಿವರಾಂ ಹೆಬ್ಬಾರ್

ಅ. 3 ರಂದು ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಉದ್ದದ ‘ಅಟಲ್ ಸುರಂಗ ಮಾರ್ಗ’ ಲೋಕಾರ್ಪಣೆ

 

 

error: Content is protected !!