Tag: kannada kannada kannada latest news kannada latest news kannada news kannada news kannada news live kannada news live | Page 3 | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath




India

ಡಿಜಿಟಲ್ ಡೆಸ್ಕ್ :  ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೆಲಿಕಾಪ್ಟರ್ ಅಪಘಾತದಿಂದ ಕೂದಲೆಳೆ ಅಂತದಲ್ಲಿ ಪಾರಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಸುದ್ದಿಯನ್ನು ಕೇಂದ್ರ ಸಚಿವರು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಟ್ಚೀಟ್ ಮಾಡಿರುವ ಕೇಂದ್ರ ಸಚಿವರ ಕಛೇರಿ ಕೇಂದ್ರ ಸಚಿವರನ್ನು ಹೊತ್ತ ಹೆಲಿಕಾಪ್ಟರ್ ಸುದ್ದಿ ಅಪಘಾತಕ್ಕೀಡಾದ ಸುದ್ದಿ ಸರಿಯಿಲ್ಲ, ಅವರು ಸುರಕ್ಷಿತವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿದ್ದ ಹೆಲಿಕಾಪ್ಟರ್ ನ  ಬ್ಲೇಡ್ ಗಳು ಮುರಿದುಹೋಗಿದ್ದು, ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಹೆಲಿಕಾಪ್ಟರ್ ಬ್ಲೇಡ್‌ಗಳು ಓವರ್‌ಹೆಡ್ ವೈರಿಂಗ್‌ಗೆ ಬಡಿದು ಅಪಘಾತ ಸಂಭವಿಸಿದೆ ಎಂದು ವರದಿಯಾಗಿತ್ತು.

ಮನೀಶ್ ಶೆಟ್ಟಿ ಕೊಲೆ ಪ್ರಕರಣ ; ಬೆಂಗಳೂರಿನಲ್ಲಿ ಪೊಲೀಸರಿಂದ ಫೈರಿಂಗ್ ; ನಾಲ್ವರು ಆರೋಪಿಗಳ ಬಂಧನ


State

ಬೆಂಗಳೂರು :   ಬ್ರಿಗೇಡ್ ರಸ್ತೆಯ ಡುಯೆಟ್ ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನ ಪೊಲೀಸರು ಇಂದು ಬಂಧಿಸಿದ್ದಾರೆ.

ಬಂಧಿತರನ್ನು ಅಲಿಯಾಸ್ ಮುನ್ನಾ (45), ಗಣೇಶ್ (39), ನಿತ್ಯ (29) ಮತ್ತು ಅಕ್ಷಯ್ (32 ಎಂದು ಗುರುತಿಸಲಾಗಿದೆ. ಈ ವೇಳೆ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿದ್ದಾರೆ.

ಮನೀಶ್ ಶೆಟ್ಟಿಯನ್ನು ಹತ್ಯೆಗೈಯಲು ಉಪಯೋಗಿಸಿದ್ದ ಮಾರಕಾಸ್ತ್ರಗಳನ್ನ ಜಫ್ತಿ ಮಾಡಲು ಹೊಸೂರು ರಸ್ತೆಯ ಬಾರ್ಲೆನ್ ಸ್ಮಶಾನ ಬಳಿ ಪೊಲೀಸರು ತಪಾಸಣೆ ಮಾಡುವಾಗ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆಗ ಆರೋಪಿ ಶಶಿಕಿರಣ್ ಹಾಗೂ ಆರೋಪಿ ಅಕ್ಷಯ್ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಅವರಿಬ್ಬರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಬಂಧಿತರಲ್ಲಿ ಶಶಿಕಿರಣ್ ಮತ್ತು ನಿತ್ಯ ಕೊಡಗಿನವರಾದರೆ, ಗಣೇಶ್ ಮತ್ತು ಅಕ್ಷಯ್ ಮಂಗಳೂರಿನವರಾಗಿದ್ದಾರೆ.

‘ಮೈಸೂರು ದಸರಾ’ಗೆ ತೆರಳುವ ‘ಪ್ರವಾಸಿಗರಿಗೆ ಬಹುಮುಖ್ಯ ಮಾಹಿತಿ’


India

ಡಿಜಿಟಲ್ ಡೆಸ್ಕ್ :  ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಇಂದು ದೊಡ್ಡ ಅವಘಡದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿದ್ದ ಹೆಲಿಕಾಪ್ಟರ್ ನ  ಬ್ಲೇಡ್ ಗಳು ಮುರಿದುಹೋಗಿದ್ದು, ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಕಟ್ಟಡ ನಿರ್ಮಾಣ ಸ್ಥಳದಲ್ಲಿ ಹೆಲಿಕಾಪ್ಟರ್ ಬ್ಲೇಡ್‌ಗಳು ಓವರ್‌ಹೆಡ್ ವೈರಿಂಗ್‌ಗೆ ಬಡಿದು ಅಪಘಾತ ಸಂಭವಿಸಿದೆ. ಮಂಗಲ್ ಪಾಂಡೆ ಮತ್ತು ಸಂಜಯ್ ಝಾ ಸೇರಿದಂತೆ BJP  ನಾಯಕರೊಂದಿಗೆ ಪ್ರಚಾರದಿಂದ ಸಚಿವರು ಹಿಂದಿರುಗುತ್ತಿದ್ದರು.

ಹಿಂದಿನ ದಿನ ರವಿಶಂಕರ್ ಪ್ರಸಾದ್ ಅವರು ಮಧುಬನಿ ಜಿಲ್ಲೆಯ ಲೌಖಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. “ಮತ್ತೊಮ್ಮೆ, ಬಿಹಾರದ ಜನರು ಅಧಿಕಾರಕ್ಕೆ ಎನ್‌ಡಿಎ ಸರ್ಕಾರವನ್ನು ಮತ ಚಲಾಯಿಸಲಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಸರ್ಕಾರಿ ಶಾಲೆ’ ಈಗ ಡಿಜಿಟಲ್ ಮಯ : ಡಿಜಿಟಲ್‌ ಕಡೆ ‌ಹೊರಳಿದ ಮಲ್ಲೇಶ್ವರ ಕ್ಷೇತ್ರದ ಸರಕಾರಿ ಶಾಲೆಗಳು


State

ಬೆಂಗಳೂರು :   ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 71 ಮಂದಿ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 10,427 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 14 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3500 ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದು 7184 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,51,848  ಕ್ಕೆ ಏರಿಕೆಯಾಗಿದೆ.. 64770 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು  3371 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 3,04,005  ಕ್ಕೆ ಏರಿಕೆಯಾಗಿದೆ..

ಹಸಿದವರಿಗೆ ಅನ್ನ ಹಾಕಲು ಆಗಾದ ಸರ್ಕಾರ ಇದ್ದರೆಷ್ಟು, ಹೋದರೆಷ್ಟು? – ಮಾಜಿ ಸಿಎಂ ಸಿದ್ದರಾಮಯ್ಯ


State

ಬೆಂಗಳೂರು :   ಕರ್ನಾಟಕದಲ್ಲಿ ಇಂದು 7184 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,51,032  ಕ್ಕೆ ಏರಿಕೆಯಾಗಿದೆ..

ಬೆಂಗಳೂರಿನಲ್ಲಿ ಇಂದು  3371 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 3,04,005  ಕ್ಕೆ ಏರಿಕೆಯಾಗಿದೆ.. ರಾಜ್ಯದಲ್ಲಿ ಇಂದು 71 ಮಂದಿ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 10,427 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 14 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3500 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 64770 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಸಿದವರಿಗೆ ಅನ್ನ ಹಾಕಲು ಆಗಾದ ಸರ್ಕಾರ ಇದ್ದರೆಷ್ಟು, ಹೋದರೆಷ್ಟು? – ಮಾಜಿ ಸಿಎಂ ಸಿದ್ದರಾಮಯ್ಯ

 


India Sports

ಡಿಜಿಟಲ್ ಡೆಸ್ಕ್ :  ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಎಯಾನ್ ಮಾರ್ಗನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.  

ಈ ಬಾರಿಯ ಐಪಿಎಲ್ ಮೊದಲ ಸುತ್ತಿನಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಜಯ ಸಾಧಿಸಿ ಹತ್ತು ಅಂಕಗಳನ್ನು ಗಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ.

ಗೆಲುವಿನ ಹಾದಿಯನ್ನು ಉಳಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಗೆ 149 ರನ್ ಅಗತ್ಯವಿದೆ.  ಮುಂಬೈ ಇಂಡಿಯನ್ಸ್ ಗೆಲ್ಲಲು 149 ರನ್ ಗಳಿಸಬೇಕಿದೆ. ಕೆಕೆಆರ್ 20 ಓವರ್‌ಗಳಲ್ಲಿ ಒಟ್ಟು 148/5 ರನ್ ಗಳಿಸಿದರು.

ಅ.19 ರಿಂದ ಅ.28ರವೆಗೆ ಹಣಕಾಸು ಸಚಿವಾಲಯದಿಂದ ʼಚುನಾವಣಾ ಬಾಂಡ್‌ʼಗಳ ಮಾರಾಟ..!


State

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಣವಾಗಿದ್ದು, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಸಿಎಂ ಯಡಿಯೂರಪ್ಪ ಇಂದು ಚರ್ಚೆ ನಡೆಸಿದ್ದಾರೆ. 

ಬಳಿಕ ಈ ಕುರಿತು ಟ್ವೀಟ್ ಮಾಡಿದ ನರೇಂದ್ರ ಮೋದಿ ನೆರೆ ಪರಿಸ್ಥಿತಿಯ ಕುರಿತು ಸಿಎಂ ಯಡಿಯೂರಪ್ಪ ಅವರ ಬಳಿ ಚರ್ಚೆ ಮಾಡಿದ್ದೇನೆ,  ಕರ್ನಾಟಕದಲ್ಲಿ ನೆರೆಯಿಂದ ತೊಂದರೆಗೊಳಗಾದ ಜನರ ಜೊತೆ ನಾವಿದ್ದೇವೆ, ಈಗಾಗಲೇ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದಿದ್ದಾರೆ.

BIGG NEWS ; ‘ಪದವಿ’ ಕೋರ್ಸ್ ಗಳ ಪ್ರವೇಶಾತಿಗೆ ದಿನಾಂಕ ವಿಸ್ತರಿಸಿ ಕುವೆಂಪು ವಿವಿ ಆದೇಶ


Cricket India Sports

ಡಿಜಿಟಲ್ ಡೆಸ್ಕ್ :  ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಎಯಾನ್ ಮಾರ್ಗನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.  

ಈ ಬಾರಿಯ ಐಪಿಎಲ್ ಮೊದಲ ಸುತ್ತಿನಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಜಯ ಸಾಧಿಸಿ ಹತ್ತು ಅಂಕಗಳನ್ನು ಗಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ.

ನಾಡಹಬ್ಬಕ್ಕೆ ಕ್ಷಣಗಣನೆ : ರಾಜ್ಯದ ಜನತೆಗೆ ‘ದಸರಾ’ ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ


State

ಶಿವಮೊಗ್ಗ :  ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಅ.18 ರಿಂದ ಮೂರು ದಿನ ಶಿಕಾರಿಪುರ ಪ್ರವಾಸ ಕೈಗೊಳ್ಳಲಿದ್ದಾರೆ.

ಅ.18 ರಂದು ಬೆಂಗಳೂರಿನಿಂದ ಹೊರಡುವ ಸಿಎಂ ಸಂಜೆ 4 ಗಂಟೆಗೆ ಶಿಕಾರಿಪುರ ತಲುಪಲಿದ್ದಾರೆ, ಬಳಿಕ ತಮ್ಮ ಮನೆಯಲ್ಲಿ ತಂಗಲಿರುವ ಸಿಎಂ 19 ರಂದು ಕಲ್ಲುವಡ್ಡು ಏತನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಬಳಿಕ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿರುವ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಉದ್ಘಾಟನೆ ನಡೆಸಲಿದ್ದಾರೆ.

‘ಮಹಾಮಳೆ’ ಆರ್ಭಟಕ್ಕೆ ಉತ್ತರ ಕರ್ನಾಟಕ ತತ್ತರ : ಡಿಸಿಗಳ ಜೊತೆ ಸಿಎಂ BSY ಸಭೆ : ಪ್ರವಾಹ ಪೀಡಿತ ಪ್ರದೇಶಕ್ಕೆ ಹೆಚ್ಚುವರಿ ಎರಡು NDRF ತಂಡ


Cricket India Sports

ಡಿಜಿಟಲ್ ಡೆಸ್ಕ್ : ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಆರ್ ಸಿ ಬಿ ( ರಾಯಲ್ ಚಾಲೆಂಜರ್ಸ್ ಬೆಂಗಳೂರು) ವಿರುದ್ಧ ಹಣಾಹಣಿ ನಡೆಸುತ್ತಿದೆ.

ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಅಂತೆಯೇ ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಈ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 172 ರನ್ ಗಳ ಗೆಲುವಿನ ಗುರಿ ನೀಡಿದೆ. ಆರ್ ಸಿ ಬಿ ಪರ ಅರೋನ್ ಫಿಂಚ್ 20 ರನ್ ಗಳಿಸಿದ್ರೆ, ಕೊಹ್ಲಿ 48 , ಸುಂದರಂ 13, ಶಿವಂ ದುವೆ 23, ರನ್ ಗಳಿಸಿದ್ದಾರೆ.

ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಮೌಲ್ಯ ಏರಿಕೆ, ಅಮಿತ್ ಶಾ ಆಸ್ತಿ ಮೌಲ್ಯ ಇಳಿಕೆ


State

ಬೆಂಗಳೂರು :   ಮಹಾರಾಷ್ಟ್ರ ಹಾಗೂ ತೆಲಂಗಾಣದ ಅಣೆಕಟ್ಟುಗಳಿಂದ ಅಧಿಕ ಪ್ರಮಾಣದ ನೀರು ಹೊರ ಬಿಟ್ಟಿರುವ ಪರಿಣಾಮ ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿಹರಿಯುತ್ತಿದೆ.

ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸ್ಥಿತಿಗತಿ ಕುರಿತು ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈಗಾಗಲೇ ಕಲಬುರಗಿಯಲ್ಲಿ ಎರಡು, ಯಾದಗಿರಿಯಲ್ಲಿ 2, ರಾಯಚೂರಿನಲ್ಲಿ 1 ಎನ್​ಡಿಆರ್​ಎಫ್​ ತಂಡ ಕಾರ್ಯನಿರ್ವಹಣೆ ಮಾಡುತ್ತಿದೆ. ಪ್ರವಾಹ ಹೆಚ್ಚಿರುವ ಕಲಬುರ್ಗಿ ಹಾಗೂ ಯಾದಗಿರಿಗೆ ಎರಡು ಹೆಚ್ಚುವರಿ ಎನ್​ಡಿಆರ್​ಎಫ್​​ ತಂಡವನ್ನು ಸರ್ಕಾರ ಕಳುಹಿಸಲಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ನಾಳೆ ಡಿಸಿಗಳ ಜೊತೆ ವೀಡಿಯೋ ಕಾನ್ಪೆರೆನ್ಸ್  ಜೊತೆ ಸಭೆ ನಡೆಸಲಿದ್ದು, ಮಳೆ ಹಾನಿ ಬಗ್ಗೆ ಸಮೀಕ್ಷೆ ಕೈಗೊಂಡು ಪರಿಹಾರ ನೀಡಲು ಕ್ರಮದ ಬಗ್ಗೆ ಚರ್ಚೆ ನಡೆಸುತ್ತೇವೆ. ಹೀಗಾಗಿ ಜನರು ಯಾವುದೇ ಆತಂಕ ಪಡುವ ಅಗತ್ಯ ವಿಲ್ಲ ಎಂದು ಸಿಎಂ ತಿಳಿಸಿದ್ದಾರೆ.

ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್​, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ದಾಖಲೆ ಮಳೆಯಾಗಿದ್ದು,. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕದಳ ಕಾರ್ಯನಡೆಸಿದೆ. ಈ ಹಿನ್ನೆಲೆ ಪ್ರವಾಹ ಪರಿಸ್ಥಿತಿ ಅವಲೋಕಿಸಲು ನಾಳೆ ರಾಜ್ಯ ಕಂದಾಯ ಸಚಿವರು ಪ್ರವಾಹ ಪೀಡಿತ ಪ್ರದೇಶಗಳ ಭೇಟಿಗೆ ಮುಂದಾಗಿದ್ದಾರೆ.

ಮತದಾನದ ದಿನದಂದು ರಜೆ ನೀಡಿ ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ : ಚುನಾವಣಾ ಆಯೋಗ ಎಚ್ಚರಿಕೆ


State

ಬೆಂಗಳೂರು :  ನವೆಂಬರ್ 3 ರಂದು ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ವ್ಯಾಪ್ತಿಯಲ್ಲಿ  ಉಪ ಚುನಾವಣೆ ನಡೆಯಲಿದ್ದು, ಅಂದು ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಲ್ಲ ಅರ್ಹ ಎಲ್ಲ ಕಾರ್ಮಿಕ ಮತದಾರರಿಗೆ ವೇತನ ಸಹಿತ ರಜೆಯನ್ನು ಚುನಾವಣಾ ಆಯೋಗ ಘೋಷಿಸಿದೆ.

ನವೆಂಬರ್ 3 ರಂದು ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆ ದಿನದಂದು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಇಲ್ಲದಿದ್ದರೆ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಎದುರಿಸಿ ಎಂದು ಕೇಂದ್ರ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕಾರ್ಖಾನೆಗಳು, ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಸಹಿತ ರಜೆಯನ್ನು ಆಯೋಗ ಘೋಷಿಸಿದೆ.ಒಂದು ವೇಳೆ ರಜೆ ನೀಡದಿದ್ದರೆ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಎದುರಿಸಿ ಎಂದು ಕೇಂದ್ರ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಹತ್ರಾಸ್ ಅತ್ಯಾಚಾರ ಪ್ರಕರಣ : ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್


India

ಚಂಡೀಗಢ :  ಪಂಜಾಬ್ ನಲ್ಲಿ 9-12 ತರಗತಿಗಳಿಗೆ ಮುಂದಿನ  ಸೋಮವಾರದಿಂದ ಶಾಲೆ ತೆರೆಯಲ್ಪಡುತ್ತವೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.

ಪಂಜಾಬ್‌ನ ಶಾಲಾ ಶಿಕ್ಷಣ ಸಚಿವ ವಿಜಯ್ ಇಂದರ್ ಸಿಂಗ್ಲಾ ಮಾತನಾಡಿ, ಕಂಟ್ರೋಲ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲು ಗೃಹ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿರುವುದರಿಂದ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಗಳನ್ನು ಸಹ ಬಿಡುಗಡೆ ಮಾಡಿದೆ.

ಪಂಜಾಬ್‌ನ ಹೊರಗಿನ ಕಂಟೈನ್‌ಮೆಂಟ್ ವಲಯಗಳನ್ನು ಸೋಮವಾರದಿಂದ ಮತ್ತೆ ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ಜಿಲ್ಲಾ ಶಿಕ್ಷಣ ಅಧಿಕಾರಿಗಳು ಮತ್ತು ಶಾಲಾ ಅಧಿಕಾರಿಗಳಿಗೆ ನಿಖರ ಅನುಷ್ಠಾನಕ್ಕಾಗಿ ಕಳುಹಿಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳಿಗೆ ಹಾಜರಾಗಲು ಅವಕಾಶವಿದೆ ಎಂದು ಅವರು ಹೇಳಿದರು. ಶಾಲೆಗಳನ್ನು ಪುನರಾರಂಭಿಸಿದ ನಂತರ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಸರ್ಕಾರದ ಸಂಪೂರ್ಣ ಕಾಳಜಿ ವಹಿಸಲಿದೆ.  ಮತ್ತು ಶಾಲೆಗಳಲ್ಲಿ ಎಸ್‌ಒಪಿಗಳನ್ನು ಜಾರಿಗೆ ತರಲು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.\

ಕಾಶ್ಮೀರದಲ್ಲಿ ಒಂದಾದ ಬದ್ಧ ಶತ್ರುಗಳು : ಮೆಹಬೂಬಾ ಮುಫ್ತಿ -ಫಾರೂಕ್ ಅಬ್ದುಲ್ಲಾ ಮೈತ್ರಿಕೂಟ ಘೋಷಣೆ

 


State

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಇಂದು ಕುಶಾಲತೋಪು ಸಿಡಿಸುವ ತಾಲೀಮು ನಡೆದಿದೆ.

ಮೈಸೂರು ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಕುಶಾಲತೋಪು ತಾಲೀಮು ನಡೆದಿದೆ. ವಿಜಯ ದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನಾ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಫಿರಂಗಿಗಾಡಿಗಳಿಂದ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು.

ಜಂಬೂ ಸವಾರಿಯ ದಿನ ಕುಶಾಲತೋಪು ಸಿಡಿಸುವ ವೇಳೆ ಆನೆಗಳು, ಕುದುರೆಗಳು ಬೆದರಂತೆ ನೋಡಿಕೊಳ್ಳುವುದು ಪೂರ್ವ ತಾಲೀಮಿನ ಉದ್ದೇಶವಾಗಿದೆ. ಆನೆಗಳು, ಕುದುರೆಗಳು ಫಿರಂಗಿ ಶಬ್ದಕ್ಕೆ ಹೊಂದಿಕೊಳ್ಳಲು ನಡೆಸುವ ಪೂರ್ವ ತಾಲೀಮು ಇದಾಗಿದೆ. ಮೈಸೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಿಂದ ತಾಲೀಮು ನಡೆದಿದೆ. ಸಿಎಆರ್‌ನ 30 ಸಿಬ್ಬಂದಿ ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ಭಾಗಿಯಾಗಿದ್ದರು. ಈ ಕುರಿತು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

ಕೊರೊನಾ ʼನಿರ್ಮೂಲನೆʼಯ ಭವಿಷ್ಯ ನುಡಿದಿದೆ ಆಗತಾನೆ ʼಹುಟ್ಟಿದ ಮಗುʼ..!


India

ನವದೆಹಲಿ : ಫ್ರಾನ್ಸ್ ನ ಭಾರತೀಯ ವಾಯುಪಡೆಯ ತಂಡವು ಮುಂದಿನ ಬ್ಯಾಚ್‌ನ ರಫೆಲ್ ಜೆಟ್‌ಗಳನ್ನು ತರಲು ಸಿದ್ಧತೆ ನಡೆಸಿದೆ.  ನಾಲ್ಕು ರಾಫೆಲ್ ಜೆಟ್‌ಗಳ ಎರಡನೇ ಬ್ಯಾಚ್ ಮುಂದಿನ ನಾಲ್ಕು ವಾರಗಳಲ್ಲಿ ಭಾರತಕ್ಕೆ ಬರುವ ನಿರೀಕ್ಷೆಯಿದೆ.

ಮುಂದಿನ ವಾರಗಳಲ್ಲಿ ನಾಲ್ಕು ರಫೇಲ್ ಜೆಟ್ ವಿಮಾನಗಳು ಭಾರತಕ್ಕೆ ಬರುವ ನಿರೀಕ್ಷೆಯಿದೆ. ಐದು ರಾಫೆಲ್ ಜೆಟ್‌ಗಳ ಮೊದಲ ಬ್ಯಾಚ್ ಜುಲೈ 29 ರಂದು ಭಾರತಕ್ಕೆ ಆಗಮಿಸಿತು, ಭಾರತವು ಫ್ರಾನ್ಸ್ ನೊಂದಿಗೆ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ನಾಲ್ಕು ವರ್ಷಗಳ ನಂತರ ಈ ವಿಮಾನಗಳಲ್ಲಿ 36 59,000 ಕೋಟಿ ವೆಚ್ಚದಲ್ಲಿ ಖರೀದಿಸಿತು.

 ಭಾರತ-ನಿರ್ದಿಷ್ಟ ವರ್ಧನೆಗಳು ಮತ್ತು ಶಸ್ತ್ರಾಸ್ತ್ರಗಳ ವ್ಯವಸ್ಥೆಗಳ ಏಕೀಕರಣ ಸೇರಿದಂತೆ ರಫೇಲ್ ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ವಾಯುಪಡೆಯ ಹಲವಾರು ತಂಡಗಳು ಜನವರಿಯಿಂದ ಫ್ರಾನ್ಸ್ ಗೆ ಭೇಟಿ ನೀಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿ ಜಿಲ್ಲೆಯಲ್ಲಿ ಇಂದು 121 ಜನರಿಗೆ ಕೊರೋನಾ ಪಾಸಿಟಿವ್


Cricket India

ಡಿಜಿಟಲ್ ಡೆಸ್ಕ್ : ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಆರ್ ಸಿ ಬಿ ( ರಾಯಲ್ ಚಾಲೆಂಜರ್ಸ್ ಬೆಂಗಳೂರು) ವಿರುದ್ಧ ಹಣಾಹಣಿ ನಡೆಸುತ್ತಿದೆ.

ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ʼಸಿ.ಟಿ.ರವಿʼಗಿರುವ ಅಲ್ಪಜ್ಞಾನ ಕಂಡು ಕನಿಕರ ಹುಟ್ಟುತ್ತಿದೆ: ಹೆಚ್‌.ಡಿ ಕುಮಾರಸ್ವಾಮಿ ಟಾಂಗ್..!‌


State

ಬೆಂಗಳೂರು :  ಸ್ಯಾಂಡಲ್ವುಡ್ ಖ್ಯಾತ ನಿರ್ಮಾಪಕ  ಹಾಗೂ ಉದ್ಯಮಿ ಬಸಂತ್ ಕುಮಾರ್ ಪಾಟೀಲ್ ವಿರುದ್ಧ ದೂರು ದಾಖಲಾಗಿದೆ. 

ಉದ್ಯಮಿ ಬಸಂತ್ ಕುಮಾರ್ ಪಾಟೀಲ್ ತಮ್ಮ ನೌಕರರ ಭವಿಷ್ಯ ನಿಧಿಗೆ ಹಣ ಹಾಕಿಲ್ಲ ಎಂದು ನೌಕರರು ಕಾರ್ಮಿಕ ಭವಿಷ್ಯ ನಿಧಿ ಇಲಾಖೆಗೆ ದೂರು ನೀಡಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಹೋಟೆಲ್ ಬಸಂತ್ ನಲ್ಲಿ ಕೆಲಸ ಮಾಡುತ್ತಿರುವ 80 ನೌಕರರಿಗೆ ಪಿಎಫ್ ಐ ಹಣವನ್ನು ಕಟ್ಟಿಲ್ಲ ಎಂದು ನೌಕರರು ದೂರು ನೀಡಿದ್ದಾರೆ. ಅಲ್ಲದೇ ಕೆಲವು ನೌಕರರಿಗೆ ಯುಎಎನ್ ನಂಬರ್ ಕೂಡ ಕೊಟ್ಟಿಲ್ಲ ಎಂಬ ಆರೋಪ ಮಾಡಲಾಗಿದೆ.

ಬಸಂತ್ ಕುಮಾರ್ ಖ್ಯಾತ ನಿರ್ಮಾಪಕರು ಕೂಡ ಆಗಿದ್ದು, ನಾಯಿಯ ನೆರಳು, ಗುಲಾಬಿ ಟಾಕೀಸ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ʼಸಿ.ಟಿ.ರವಿʼಗಿರುವ ಅಲ್ಪಜ್ಞಾನ ಕಂಡು ಕನಿಕರ ಹುಟ್ಟುತ್ತಿದೆ: ಹೆಚ್‌.ಡಿ ಕುಮಾರಸ್ವಾಮಿ ಟಾಂಗ್..!‌


Cricket India Sports

ಡಿಜಿಟಲ್ ಡೆಸ್ಕ್ :  ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2020 30 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ (ಡಿಸಿ) ರಾಜಸ್ಥಾನ್ ರಾಯಲ್ಸ್ (ಆರ್ಆರ್) ನಡುವೆ ಸೆಣಸಾಟ ನಡೆಯುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು, ಅಂತೆಯೇ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಶ್ರೇಯಸ್ ಅಯ್ಯರ್ ಬಳಗ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದೆ.

ಡೆಲ್ಲಿ ಪರ ಶಿಖರ್ ಧವಾನೆ 57, ರಹಾನೆ 2, ಶ್ರೇಯಸ್ ಅಯ್ಯರ್ 53, ಮಾರ್ಕಸ್ 14, ಅಕ್ಷರ್ ಪಾಟೀಲ್ 7 ರನ್ ಕಲೆ ಹಾಕಿದ್ದಾರೆ.

BREAKING : ಅ.15 ರಿಂದ ‘ಚಿತ್ರಮಂದಿರ’ ತೆರೆಯಲು ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ


State

ಬೆಂಗಳೂರು :  ‘ವಿಧಾನಸೌಧ’ದ ‘ಜಲ ಸಂಪನ್ಮೂಲ ಇಲಾಖೆ’ಯ 30 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದ್ದು, ಮೂರು ದಿನ ‘ಕಚೇರಿ ಸೀಲ್ ಡೌನ್ ಮಾಡಲಾಗಿದೆ.

 ‘ವಿಧಾನಸೌಧ’ದ ‘ಜಲ ಸಂಪನ್ಮೂಲ ಇಲಾಖೆ’ಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 30 ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ ಏಕಕಾಲಕ್ಕೆ ಕೊರೊನಾ ಸೋಂಕು ಧೃಡವಾಗಿದೆ. ಈ ಹಿನ್ನೆಲೆ ಇನ್ನುಳಿದ ಅಧಿಕಾರಿಗಳ ಸಿಬ್ಬಂದಿಗಳ ಹಿತದೃಷ್ಟಿಯಿಂದ ಕಛೇರಿಗೆ ಸ್ಯಾನಿಟೈಸರ್ ಸಿಂಪಡಿಸಿ ದಿನಾಂಕ 15:10:2020 ರಿಂದ 17:10:2020 ರವರೆಗೆ ಮೂರು ದಿನ ಕಛೇರಿಯನ್ನು ಸೀಲ್ ಡೌನ್ ಮಾಡಲಾಗುತ್ತಿದೆ.  ಈ ಸಂಬಂಧ ಸರ್ಕಾರದ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದು ವಿಷಯ ತಿಳಿಸಲಾಗಿದೆ.

ಹವಾಮಾನ ಇಲಾಖೆಯಿಂದ ಭಾರೀ ‘ಮಳೆ’ ಮುನ್ನೆಚ್ಚರಿಕೆ : ಕಲಬುರಗಿ ಜಿಲ್ಲೆಯಲ್ಲಿ ಎರಡು ದಿನ ‘ರೆಡ್ ಅಲರ್ಟ್’ ಘೋಷಣೆ


State

ಬೆಂಗಳೂರು : ದೀಪಾವಳಿ ಹಬ್ಬಗಳನ್ನು ಕೊರೋನಾ ಸೋಂಕಿನ ಸಂದರ್ಭದಲ್ಲಿ ಸರಳ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.  ಜೊತೆಗೆ ಕಡ್ಡಾಯವಾಗಿ ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಇಲಾಖೆಯಿಂದ ಪರವಾನಿಗೆ ಪಡೆದ ಮಾರಾಟಗಾರರಿಗೆ ಮಾತ್ರ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಮಳಿಗೆಗಳನ್ನು ನವೆಂಬರ್ 1 ರಿಂದ 17 ರವರೆಗೆ ಮಾತ್ರ ತೆರೆಯತಕ್ಕದ್ದು ಎಂದು ಹೇಳಿದೆ.

ಮಾರ್ಗಸೂಚಿಯ ಮುಖ್ಯಾಂಶಗಳು

ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು

-ಪಟಾಕಿಯನ್ನು ಸಂಬಂಧ ಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತವಾಗಿ ಪರವಾನಗಿಯನ್ನು ಪಡುದು, ಮಾರಾಟ ಮಾಡಬೇಕು.

-ಪಟಾಕಿ ಮಾರಾಟದ ಮಳಿಗೆಗಳನ್ನು ದಿನಾಂಕ 01-11-2020ರಿಂದ 17-11-2020ರವರೆಗೆ ಮಾತ್ರ ತೆರೆದಿರಬೇಕು.

-ಪಟಾಕಿ ಮಾರಾಟಕ್ಕಾಗಿ ಪರವಾನಿಗೆ ಪದದಂತವರು ಇಲಾಖೆ, ಪ್ರಾಧಿಕಾರದಿಂದ ಸೂಚಿಸಿದಂತ ಸ್ಥಳದಲ್ಲಿಯೇ ತಾತ್ಕಾಲಿಕ ಅಂಗಡಿಯನ್ನು ತೆರೆಯಬೇಕು.

-ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಸಂಬಂಧಿಸಿದ ಇಲಾಖೆ, ಪ್ರಾಧಿಕಾರಗಳು ಅನುಮತಿಸುವುದು

-ಒಂದು ಪಟಾಕಿ ಅಂಗಡಿಯಿಂದ ಮತ್ತೊಂದು ಮಳಿಗೆಗೆ 6 ಮೀಟರ್ ಅಂತರವಿರಬೇಕು

-ಪ್ರತಿದಿನ ಮಾರಾಟ ಮಳಿಗೆಯ ಸುತ್ತಾ ಮುತ್ತ ಸ್ಯಾನಿಟೈಸೇಷನ್ ಮಾಡಬೇಕು.

-ಪಟಾಕಿ ಖರೀದಿಸುವವರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಬೇಕು

-ಪಟಾಕಿ ಖರೀದಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕು

ನೀವು ‘ಯೂಟ್ಯೂಬ್ ಚಾನಲ್’ ಮಾಡಿದ್ದೀರಾ.? ‘ಈ ಸುದ್ದಿ’ ಹಾಕೋ ಮುನ್ನಾ ಎಚ್ಚರ.. ಎಚ್ಚರ.!


India

ಡಿಜಿಟಲ್ ಡೆಸ್ಕ್ :  ಮಹಾರಾಷ್ಟ್ರದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ನಿರ್ಮಾಣ ಹಂತದ ಕಟ್ಟಡ ಕುಸಿದು ಸ್ಥಳದಲ್ಲೇ ಆರು ಮಂದಿ ದುರ್ಮರಣಕ್ಕೀಡಾದ ಘಟನೆ ಇಂದು ನಡೆದಿದೆ.

ಭಾರಿ ಮಳೆಯಿಂದಾಗಿ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಚಂದ್ರಭಾಗ ನದಿಯ ದಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಆರು ಜನರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪುಣೆಯಿಂದ 200 ಕಿ.ಮೀ ದೂರದಲ್ಲಿರುವ ದೇವಾಲಯದ ಪಟ್ಟಣದ ಕುಂಭಾರ್ಘಾಟ್ ಬಳಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಈ ಸಂಬಂಧ ಸೋಲಾಪುರ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ರಸ್ತೆ-ಪಾರ್ಕ್ ಗಳಷ್ಟೇ ಅಲ್ಲ, ಮಾಲ್, ಹೋಟೆಲ್ ಗಳಲ್ಲೂ ಮಾಸ್ಕ್ ಧರಿಸದಿದ್ರೆ ಬೀಳಲಿದೆ ಭಾರೀ ದಂಡ : ‘ಬಿಬಿಎಂಪಿ’ ಆದೇಶ


India

ಡಿಜಿಟಲ್ ಡೆಸ್ಕ್ : ಪರಿಸರದ ಮೇಲೆ ವಾಯುಮಾಲಿನ್ಯ ಪ್ರಭಾವ ಬೀರುತ್ತಿರುವ ಹಿನ್ನೆಲೆ ಅಕ್ಟೋಬರ್ 15 ರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಡೀಸೆಲ್ ಜನರೇಟರ್‌ಗಳನ್ನು ನಿಷೇಧಿಸಲಾಗಿದೆ.

ಏರುತ್ತಿರುವ ವಾಯುಮಾಲಿನ್ಯವನ್ನು ತಡೆಯಲು ವಿದ್ಯುತ್ ಉತ್ಪಾದಕಗಳ ಬಳಕೆಯನ್ನು ಗುರುವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ನಿಷೇಧಿಸಲಾಗಿದೆ. ಬುಧವಾರ, ದೆಹಲಿಯು ಸಂಜೆ 5 ಗಂಟೆಗೆ 282 ರ ವಾಯು ಗುಣಮಟ್ಟದ ಸೂಚ್ಯಂಕವನ್ನು (ಎಕ್ಯೂಐ) ದಾಖಲಿಸಿದೆ.  ವಾಯು ಗುಣಮಟ್ಟವನ್ನು ನಿಯಂತ್ರಿಸಲು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಬುಧವಾರ ಗ್ರೇಡೆಡ್ ರೆಸ್ಪಾನ್ಸ್ ಕ್ರಿಯಾ ಯೋಜನೆ (ಜಿಆರ್‌ಪಿ) ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಜನರೇಟರ್‌ಗಳ ಬಳಕೆಯನ್ನು ನಿಷೇಧಿಸುವ ನಿರ್ದೇಶನಗಳನ್ನು ಹೊರಡಿಸಿದೆ.

ದ್ವಿತೀಯ ಪಿಯು ವಿದ್ಯಾರ್ಥಿಗಳೇ ಗಮನಿಸಿ : ಅ.20ರವರೆಗೆ ‘ಡಿಪ್ಲೋಮಾ ಇನ್ ನರ್ಸಿಂಗ್’ ಕೋರ್ಸ್ ಗೆ ಅರ್ಜಿಸಲ್ಲಿಸಲು ಅವದಿ ವಿಸ್ತರಣೆ


State

ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದಂತ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ರಾಜರಾಜೇಶ್ವರಿಗೆ ನಗರಕ್ಕೆ ಮುನಿರತ್ನಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಅಭ್ಯರ್ಥಿ ಮುನಿರತ್ನ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.

ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಂದೇಶ್ ಬಂಡಪ್ಪ ರಾಜೀನಾಮೆ ನೀಡಿದ್ದಾರೆ.

ಕಳೆದ 12 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ, ಪಕ್ಷದ ನಿಷ್ಟಾವಂತರಾಗಿದ್ದ ತುಳಸಿ ಮುನಿರಾಜು ಗೌಡರಿಗೆ ಟಿಕೆಟ್ ಸಿಗದ ಹಿನ್ನೆಲೆ ನಾನು ಮನನೊಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಂದೇಶ್ ಬಂಡಪ್ಪ ರಾಜೀನಾಮೆ ಪತ್ರವನ್ನು ಕ್ಷೇತ್ರದ ಅಧ್ಯಕ್ಷ ಶಿವಣ್ಣ ಗೌಡರಿಗೆ ರವಾನೆ ಮಾಡಿದ್ದಾರೆ.

ಕೋವಿಡ್ ಎಫೆಕ್ಟ್ : ಈ ಬಾರಿ ಸಾರ್ವಜನಿಕರಿಗಿಲ್ಲ ‘ಹಾಸನಾಂಬೆ ದೇವಿ’ ದರ್ಶನ ಭಾಗ್ಯ

 

 

 


State

ಹಾಸನ : ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನಕ್ಕೆ ಈ ಬಾರಿ ಕೊರೊನಾ ಅಡ್ಡಿಯಾಗಿದ್ದು, ಜಿಲ್ಲೆಯಲ್ಲಿ ಕೋವಿಡ್- 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಬಾರಿ ಜನರಿಗೆ ಹಾಸನಾಂಬ ದೇವಿಯ ನೇರ ದರ್ಶನ ಸಿಗುವುದಿಲ್ಲ.

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ದಿನ ನಿಗದಿಯಾಗಿದೆ. ನವೆಂಬರ್ 5 ರಿಂದ 16 ರವರೆಗೆ ಹಾಸನಾಂಬೆ ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ.ಹಲವು ಕಡೆ ಎಲ್ ಇ ಡಿ ಪರದೆ ಹಾಕಿ ಸಾಮಾಜಿಕ ಅಂತರದೊಂದಿಗೆ ದೇವಿಯ ದರ್ಶನಕ್ಕೆ ನೇರ ವ್ಯವಸ್ಥೆ ಮಾಡಲಾಗುತ್ತದೆ .

ಮೊದಲ ದಿನ ಬಾಗಿಲು ತೆಗೆಯುವ ವೇಳೆ ಉದ್ಘಾಟನೆಗೆ  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದೇವೆ.  ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.

 

 


State

ಬೆಂಗಳೂರು :  ಶೀಘ್ರದಲ್ಲೇ ‘ಗ್ರಾಮ ಪಂಚಾಯತಿ ಚುನಾವಣೆ’ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಚುನಾವಣಾ ಆಯೋಗ ಪತ್ರ ಬರೆದಿದೆ.

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ನಡೆಸಲು ವೇಳಾಪಟ್ಟಿ ಹೊರಡಿಸಿದ್ದು. ಅದರಂತೆ ಚುನಾವಣಾ ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ. ಅದರಂತೆ ಸ್ಥಳೀತ ಸಂಸ್ಥೆಗಳ ಚುನಾವಣೆಯನ್ನು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಚುನಾವಣೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಈ ಹಿನ್ನೆಲೆ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯನ್ನು ಶೀಘ್ರದಲ್ಲೇ ನಡೆಸುವುದು ಅನಿವಾರ್ಯವಾಗಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಪತ್ರ ಬರೆದಿದೆ.

 


State

ಬೆಂಗಳೂರು :   ಬೆಂಗಳೂರಿನಲ್ಲಿ ಇಂದು 3776 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 288831 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 8191 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,26,106 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 4529 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಇದುವರೆಗೆ 221651 ಮಂದಿ ಗುಣಮುಖರಾಗಿದ್ದಾರೆ. ಕಿಲ್ಲರ್ ಕೊರೊನಾ ಸೋಂಕಿಗೆ ಬೆಂಗಳೂರಿನಲ್ಲಿ 28 ಜನರು ಮೃತಪಟ್ಟಿದ್ದು, ಕೊರೊನಾ ಸಾವಿನ ಸಂಖ್ಯೆ 3390 ಕ್ಕೆ ಏರಿಕೆಯಾಗಿದೆ.

BREAKING : ನಾಳೆ ರಾಜರಾಜೇಶ್ವರಿನಗರ ‘ಕೈ ಅಭ್ಯರ್ಥಿ ಕುಸುಮಾ’ ಉಮೇದುವಾರಿಕೆ ಸಲ್ಲಿಕೆ


India

ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಟೀಕಿಸಿದ್ದಕ್ಕೆ ಶರದ್ ಪವಾರ್ ಗರಂ  ಆಗಿದ್ದಾರೆ. ಈ ಸಂಬಂಧ ರಾಜ್ಯಪಾಲರ ವಿರುದ್ಧ ಪ್ರಧಾನಿ ಮೋದಿಗೆ ಪತ್ರ  ಶರದ್ ಪವಾರ್ ಪತ್ರ ಬರೆದಿದ್ದಾರೆ.

ಉದ್ದವ್ ಠಾಕ್ರೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಬರೆದ ಪತ್ರಕ್ಕೆ ಶರದ್ ಪವಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಬಗ್ಗೆ ಮಹಾರಾಷ್ಟ್ರ ಗವರ್ನರ್ ಭಗತ್ ಸಿಂಗ್ ಕೊಶ್ಯರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಗೌರವಾನ್ವಿತ ರಾಜ್ಯಪಾಲರು ಬಳಸಿರುವ ವಿಡಂಬನೆ ಮತ್ತು ಪದಗಳು ಅವರ ವೈಯಕ್ತಿಕ ಅಭಿಪ್ರಾಯಗಳಂತೆ ಇದೆ ಎಂದು ಶರದ್ ಪವಾರ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ದೇವಾಲಯಗಳನ್ನ ತೆರೆಯಲು ಅನುಮತಿ ನೀಡದ ಹಿನ್ನೆಲೆ ಅಲ್ಲಿನ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದು ನೀವು ಹಿಂದುತ್ವದ ಗಟ್ಟಿ ಉಪಾಸಕರು, ನೀವೇನಾದ್ರೂ ಜಾತ್ಯಾತೀಕತೆ ಕಡೆಗೆ ಹೊರಳಿಕೊಂಡಿದ್ದೀರ ಎಂದು ಪ್ರಶ್ನಿಸಿದ್ದಾರೆ.

‘ಕಸದ ಮಾಫಿಯಾ’ಕ್ಕೆ ಬಿಬಿಎಂಪಿ ತಲೆ ಬಾಗಿದೆ – AAP ಮೋಹನ್ ದಾಸರಿ ಆರೋಪ


State

ಬೆಂಗಳೂರು :  ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 87 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 10,123  ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು 28 ಮಂದಿ ಸಾವನ್ನಪ್ಪಿದ್ದು,. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3390 ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದು 8191 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,26,106 ಕ್ಕೆ ಏರಿಕೆಯಾಗಿದೆ.  ಬೆಂಗಳೂರಿನಲ್ಲಿ ಇಂದು  3776 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಇಂದು 10421 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 6,02,505 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಬಂದಿದ್ದಾರೆ.

BREAKING ; ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಕೇಸ್ : ಆರೋಪಿ ‘ಅಶ್ವಿನ್ ಭೋಗಿ’ 7 ದಿನ ಸಿಸಿಬಿ ಕಸ್ಟಡಿಗೆ


State

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಬಂಧನಕ್ಕಳಗಾಗಿರುವ ಅಶ್ವಿನ್ ಭೋಗಿಯನ್ನು 7 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ NDPS ಕೋರ್ಟ್ ಆದೇಶ ಹೊರಡಿಸಿದೆ.

ಪ್ರಕರಣದ ಎ9 ಆರೋಪಿಯಾದ ಅಶ್ವಿನ್ ಭೋಗಿಯನ್ನು ಇಂದು  ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು.  ವಿಚಾರಣೆ ನಡೆಸಿದ ಕೋರ್ಟ್ ಅಶ್ವಿನ್ ಭೋಗಿಯನ್ನು 7 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

BIGG NEWS : ಬೆಂಗಳೂರು ವಿವಿ ಬಿ.ಕಾಂ ಅಂತಿಮ ಪರೀಕ್ಷೆ ಅ.17 ಕ್ಕೆ ನಿಗದಿ


State

ಬೆಂಗಳೂರು :  ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ನಗರ ಟ್ರಾಫಿಕ್​ ಪೊಲೀಸರು ಒಂದೇ ವಾರದಲ್ಲಿ ದಾಖಲೆ ಮೊತ್ತದ ದಂಡ ಕಲೆಕ್ಷನ್ ಮಾಡಿದ್ದಾರೆ.

 ಹೌದು,  ಅ.4 ರಿಂದ ಅ.10ರವರೆಗೆ ಬರೋಬ್ಬರಿ ನಾಲ್ಕು ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ಇನ್ನು ಇದರಲ್ಲಿ ಸುಮಾರು ಒಂದು ಕಾಲು ಕೋಟಿಯಷ್ಟು ಹಣ ಹೆಲ್ಮೆಟ್​ ರಹಿತ ಬೈಕ್​ ಚಾಲನೆಯಿಂದ ಸಂಗ್ರಹಿಸಲಾಗಿದೆ. ಈ ವೇಳೆ 97,213 ಕೇಸ್ ದಾಖಲಾಗಿದ್ದು,  4.02 ಕೋಟಿ ದಂಡ ವಸೂಲಿಯಾಗಿದೆ.

ದಾಖಲಾದ ಪ್ರಕರಣ ಹಾಗೂ ಸಂಗ್ರಹಿಸಿದ ದಂಡದ ವಿವರ;

ಸಿಗ್ನಲ್ ಜಂಪ್ 10, 538 ಪ್ರಕರಣ 38.43 ಲಕ್ಷ ದಂಡ

ಹೆಲ್ಮೆಟ್ ರಹಿತ ಬೈಕ್ ಚಾಲನೆ 30712 ಕೇಸ್ 1.14 ಕೋಟಿ ದಂಡ,

ಹೆಲ್ಮೆಟ್ ಇಲ್ಲದ ಹಿಂಬದಿ ಸವಾರ 19,403 ಕೇಸ್ 72 ಲಕ್ಷ ದಂಡ,

ನೋ ಎಂಟ್ರಿಯಲ್ಲಿ ವಾಹನ ಚಾಲನೆ 4,154 ಕೇಸ್ 15.77 ಲಕ್ಷ

ಸೀಟ್ ಬೆಲ್ಟ್ ರಹಿತ ಚಾಲನೆ 5,364 ಕೇಸ್​ಗಳಲ್ಲಿ 25 ಲಕ್ಷ ದಂಡ

ರಾಂಗ್ ಪಾರ್ಕಿಂಗ್ 3887  ಪ್ರಕರಣದಲ್ಲಿ 11 ಲಕ್ಷ ದಂಡ ವಸೂಲಿ


State

ಬೆಂಗಳೂರು : ಡ್ರಗ್ಸ್ ಮಾಫಿಯಾ ಆರೋಪದಲ್ಲಿ ನ್ಯಾಯಾಂಗ ಬಂಧನದ ಮೂಲಕ ಜೈಲು ಸೇರಿರುವಂತ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ಒಂದು ವಾರ ಮುಂದೂಡಿಕೆಯಾಗಿದೆ.

ಹೌದು, ಡ್ರಗ್ಸ್ ದಂಧೆ ಕೇಸ್  ನಲ್ಲಿ ಶಾಮೀಲಾದ ಆರೋಪ ಹೊತ್ತಿರುವ ನಟಿ ಸಂಜನಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಒಂದು ವಾರ ಮುಂದೂಡಿದೆ. ಅಂದರೆ ಅಕ್ಟೋಬರ್ 20 ಕ್ಕೆ ಸಂಜನಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಡ್ರಗ್ಸ್ ಮಾಫಿಯಾ ಆರೋಪದಲ್ಲಿ ನ್ಯಾಯಾಂಗ ಬಂಧನದ ಮೂಲಕ ಪರಪ್ಪನ ಅಗ್ರಹಾರ ಜೈಲು ಸೇರಿರುವಂತ ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಗಲ್ರಾನಿಗೆ ಸದ್ಯಕ್ಕೆ ಜೈಲೇ ಗತಿಯಾದಂತೆ ಆಗಿದೆ.

ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಸುಖಾಂತ್ಯ : ವೈಮನಸ್ಸು ಮರೆತು ಮತ್ತೆ ಒಂದಾಗಲು ನಿರ್ಧರಿಸಿದ ‘ಪ್ರೇಮಕವಿ’ ಪತ್ನಿ

 


India

ನವದೆಹಲಿ : ಅಮೆರಿಕದ ವಿದೇಶಾಂಗ ಇಲಾಖೆಯ ಉಪ ಕಾರ್ಯದರ್ಶಿ ಬಿ ಸ್ಪೀಫನ್ ಇ. ಬೀಗನ್ ಭಾರತಕ್ಕೆ ಬಂದಿಳಿದಿದ್ದಾರೆ.

ಮೂರು ದಿನಗಳ ಭೇಟಿ ಹಿನ್ನೆಲೆ ಬಿ ಸ್ಪೀಫನ್ ಇ ಬೀಗನ್ ಭಾರತಕ್ಕೆ ಬಂದಿಳಿದಿದ್ದಾರೆ. ದೆಹಲಿಗೆ ಬಂದಿಳಿದ ಬೀಗನ್ ಅವರನ್ನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಕೆನೆತ್ ಜಸ್ಟನ್ ಆತ್ಮೀಯವಾಗಿ ಬರ ಮಾಡಿಕೊಂಡರು.

ಭಾರತ –ಅಮೆರಿಕ ನಡುವಿನ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧ ವೃದ್ದಿಗೆ ಹಾಗೂ ಇಂಡೊ-ಫೆಸಿಫಿಕ್ ಪ್ರಾಂತ್ಯ ಹೊಂದುವ ಸಮಾನ ಪರಿಕಲ್ಪನೆಯನ್ನು ಮುನ್ನಡೆಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.

‘ವಿರುಷ್ಕಾ’ ಗುಡ್ ನ್ಯೂಸ್ ಬೆನ್ನಲ್ಲೇ ಶುಭಸುದ್ದಿ ನೀಡಿದ ಮತ್ತೊಂದು ಜನಪ್ರಿಯ ತಾರಾ ಜೋಡಿ..!

 


Cricket India Sports

ಮುಂಬೈ: ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹಾಗೂ ನಟಿ ಸಾಗರಿಕಾ ಘಾಟ್ಕೆ ಜೋಡಿ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದೆ.

ಹೌದು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮ ಅಪ್ಪ-ಅಮ್ಮನಾಗುತ್ತಿರುವ ವಿಷಯ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಈ ಜೋಡಿ ಅಪ್ಪ-ಅಮ್ಮನಾಗುತ್ತಿರುವ ವಿಷಯ ಹಂಚಿಕೊಂಡಿದೆ

ಭಾರತ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಸುಖಾಂತ್ಯ : ವೈಮನಸ್ಸು ಮರೆತು ಮತ್ತೆ ಒಂದಾಗಲು ನಿರ್ಧರಿಸಿದ ‘ಪ್ರೇಮಕವಿ’ ಪತ್ನಿ

 


State

ಬೆಂಗಳೂರುಬಹುಭಾಷಾ ನಟಿ ನಟಿ ಪ್ರಣೀತಾ ಹೆಸರಿನಲ್ಲಿ 13 ಲಕ್ಷ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 ನಟಿ ಪ್ರಣೀತಾ ಅವರನ್ನು ಬ್ರಾಂಡ್‌ ಅಂಬಾಸಿಡರ್ ಮಾಡುವುದಾಗಿ ಹೇಳಿ ಕಂಪನಿಯೊಂದರ ಮ್ಯಾನೇಜರ್ 13 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

 ಚೆನ್ನೈ ಮೂಲದ ಮೊಹಮ್ಮದ್‌ ಜುನಾಯತ್ ಎಂಬಾತ ಡೆವಲಪರ್ ಕಂಪನಿಯ ಮ್ಯಾನೇಜರ್ ಗೆ ಪರಿಚಯವಾಗಿದ್ದು, ತಾನು ನಟಿ ಪ್ರಣೀತಾರನ್ನ ತಮ್ಮ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ಹೇಳಿದ್ದಾನೆ. ಆರೋಪಿ ಮೊಹಮ್ಮದ್‌ ಜುನಾಯತ್ ಮಾತಿಗೆ ಮರುಳಾದ ಕಂಪನಿಯ ಮ್ಯಾನೇಜರ್ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಾತುಕತೆಗೆ ಸ್ಥಳ ಕೂಡ ಫಿಕ್ಸ್ ಮಾಡಿದ್ದಾರೆ. ನಾವು ನಿಮ್ಮ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ಪ್ರಣೀತಾರನ್ನ ಮಾಡುತ್ತೇವೆ ಎಂದು ಆರೋಪಿಗಳು ಒಪ್ಪಿಸಿದ್ದಾರೆ.

ವಂಚಕರ ಮಾತಿಗೆ ಮರುಳಾದ ಮ್ಯಾನೇಜರ್ 13 ಲಕ್ಷ ಹಣವನ್ನ ಕೊಟ್ಟಿದ್ದಾರೆ. ಹಣ ಪಡೆದು ಇಬ್ಬರು ಹೊಟೇಲ್ ನ ರೂಂಗೆ ಹೋಗಿ ಬರುತ್ತೇವೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಡೆವಲಪರ್ ಕಂಪನಿಯ ಮ್ಯಾನೇಜರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


State

ಬೆಳಗಾವಿ : ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಸುಖಾಂತ್ಯಗೊಂಡಿದ್ದು, ವೈಮನಸ್ಸು ಮರೆತು ಮತ್ತೆ ಒಂದಾಗಲು ಕಲ್ಯಾಣ್ ಪತ್ನಿ ಅಶ್ವಿನಿ ಹೇಳಿದ್ದಾರೆ. 

ಹೌದು. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಕೆ ಕಲ್ಯಾಣ್ ಪತ್ನಿ ಅಶ್ವಿನಿ ವಿಚ್ಚೇದನಕ್ಕೆ ಸಲ್ಲಿಸಿದ ಅರ್ಜಿಯನ್ನು ಶೀಘ್ರದಲ್ಲೇ ವಾಪಸ್ ಪಡೆಯುತ್ತೇನೆ ಎಂದಿದ್ದಾರೆ.

ಆವೇಶದಲ್ಲಿ ಕೆ ಕಲ್ಯಾಣ್ ಅವರ ಬಗ್ಗೆ ಆರೋಪ ಮಾಡಿದ್ದೆ, ಸದ್ಯ ಪೊಲೀಸರ ಕೌನ್ಸೆಲಿಂಗ್ ನಿಂದ ನಾನು ಮಾಡಿದ್ದು, ತಪ್ಪು ಎಂದು ಗೊತ್ತಾಗಿದೆ. ನಾವಿಬ್ಬರು ಕುಳಿತು ನಮ್ಮಿಬ್ಬರ ನಡುವಿನ ವೈಮನಸ್ಸು ಬಗೆಹರಿಸಿಕೊಳ್ಳುತ್ತೇವೆ, ಶಿವಾನಂದ ವಾಲಿ ಮೋಸದಿಂದ ಹಣ ಲಪಟಾಯಿಸಿದ್ದಾರೆ. ಕೆಲಸಕ್ಕೆ ಯಾರನ್ನಾದರೂ ತೆಗೆದುಕೊಳ್ಳುವಾಗ ಎಚ್ಚರದಿಂದಿರಿ ಎಂದು ಅಶ್ವಿನಿ ಹೇಳಿದ್ದಾರೆ.

‘ಪ್ರಾಥಮಿಕ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್ : DSERTಯಿಂದ ಮಧ್ಯಂತರ ರಜೆ ಮುಗಿಯುವವರೆಗೆ ‘ಮುಖಾಮುಖಿ’ ತರಬೇತಿ ಸ್ಥಗಿತ

 

 


India

ನವದೆಹಲಿ :  ಅಕ್ಟೋಬರ್ 16 ರಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ  (NEET) ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದು, ಅಕ್ಟೋಬರ್ 16 ರಂದು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ . ಎಲ್ಲಾ ಅಭ್ಯರ್ಥಿಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸೆಪ್ಟೆಂಬರ್ 13ರಂದು ನೀಟ್ 2020 ನಡೆದಿದ್ದು, ದೇಶಾದ್ಯಂತ 3,843 ಕೇಂದ್ರಗಳಲ್ಲಿ 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

‘ಪ್ರಾಥಮಿಕ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್ : DSERTಯಿಂದ ಮಧ್ಯಂತರ ರಜೆ ಮುಗಿಯುವವರೆಗೆ ‘ಮುಖಾಮುಖಿ’ ತರಬೇತಿ ಸ್ಥಗಿತ


State

ಬೆಂಗಳೂರು :  ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 70 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 10036  ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ,  ಇಂದು 18 ಮಂದಿ ಸಾವನ್ನಪ್ಪಿದ್ದು,. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3362 ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದು 7606 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,17,915 ಕ್ಕೆ ಏರಿಕೆಯಾಗಿದೆ.  ಬೆಂಗಳೂರಿನಲ್ಲಿ ಇಂದು  3498 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಇಂದು 12030 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 592084 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಬಂದಿದ್ದಾರೆ.

BREAKING : ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ : ಸಿಸಿಬಿಯಿಂದ ಕೋರ್ಟ್ ಗೆ 850 ಪುಟಗಳ ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಕೆ


State

ಬೆಂಗಳೂರು :  ಕರ್ನಾಟಕದಲ್ಲಿ ಇಂದು 7606 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,17,915 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 7606 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 717015 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 12030 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 592084 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಬಂದಿದ್ದಾರೆ.

ಇನ್ನೂ, ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 70 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 10036  ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು  3498 ಮಂದಿಗೆ ಸೋಂಕು ತಗುಲಿದ್ದು,  ಇಂದು 18 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3362 ಕ್ಕೆ ಏರಿಕೆಯಾಗಿದೆ.


State

ಬೆಂಗಳೂರು : ಡ್ರಗ್ಸ್ ಮಾಫಿಯಾ ಆರೋಪದಲ್ಲಿ ನ್ಯಾಯಾಂಗ ಬಂಧನದ ಮೂಲಕ ಜೈಲು ಸೇರಿರುವಂತ ನಟಿ ರಾಗಿಣಿ ದ್ವಿವೇದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಿಚಾರಣೆಯನ್ನು ನ.16 ಕ್ಕೆ ಮುಂದೂಡಿ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ರಾಗಿಣಿ ಮನವಿಯನ್ನು ಪುರಸ್ಕರಿಸಬಾರದು. ರಾಗಿಣಿ ಈಗಾಗಲೇ ಸಾಕ್ಷಿ ನಾಶ ಮಾಡಿದ್ದಾರೆ. ಮೊಬೈಲ್ ಡಾಟಾ ಡಿಲೀಟ್ ಮಾಡಲು ಯತ್ನಿಸಿದ್ದಾರೆ, ಅಲ್ಲದೇ ನಮ್ಮ ಜೈಲಿನಲ್ಲಿರುವ ಆಸ್ಪತ್ರೆ ಚೆನ್ನಾಗಿದೆ. ಅಲ್ಲೇ ಅವರು ಚಿಕಿತ್ಸೆ ಪಡೆಯಬಹುದು ಎಂದು ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಈ ಹಿನ್ನೆಲೆ ಅರ್ಜಿ ವಿಚಾರಣೆಯನ್ನು ನ.16 ಕ್ಕೆ ಮುಂದೂಡಿ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.

ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ : ಕಣಕ್ಕಿಳಿದ 15 ಅಭ್ಯರ್ಥಿಗಳು

 


India

ಡಿಜಿಟಲ್ ಡೆಸ್ಕ್ :  ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹಾಗೂ ಅವರ ಪತ್ನಿ ಉಷಾ ನಾಯ್ಡು ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಸದ್ಯ ಅವರು ಚೇತರಿಸಿಕೊಂಡಿದ್ದು, ಸದ್ಯದಲ್ಲೇ ಗುಣಮುಖರಾಗಿ ಮನೆಗೆ ತೆರಳಲಿದ್ದಾರೆ.

ಏಮ್ಸ್ ನಡೆಸಿದ ಇಂದಿನ ಆರ್‌ಟಿ-ಪಿಸಿಆರ್ ಪರೀಕ್ಷೆಯ ಪ್ರಕಾರ ಅವರುಆರೋಗ್ಯವಾಗಿದ್ದಾರೆ ಮತ್ತು ವೈದ್ಯರ ಸಲಹೆಯಂತೆ ಶೀಘ್ರದಲ್ಲೇ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಹಾಗೂ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 29 ರಂದು ಇಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ನಂತರ ಮನೆ-ಸಂಪರ್ಕದಿಂದ ಹೊರಗಿದ್ದರು.

BIGG NEWS : ‘ಖಾತೆ ಬದಲಾವಣೆ’ಯಿಂದ ಶಾಕ್ ನಲ್ಲಿದ್ದ ಸಚಿವ ‘ಶ್ರೀರಾಮುಲು’ಗೆ ನಾಳೆ ‘ಸಿಎಂ ಭೇಟಿ’ಗೆ ಬುಲಾವ್


India

ಪಾಟ್ನಾ:  ಬಿಹಾರದ ಹಿಂದುಳಿದ ವರ್ಗದ ಕಲ್ಯಾಣ ಸಚಿವ ವಿನೋದ್ ಕುಮಾರ್ ಸಿಂಗ್ (55) ಸೋಮವಾರ ನಿಧನರಾಗಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಕತಿಹಾರ್ ಜಿಲ್ಲೆಯ ಪ್ರಾನ್ಪುರ್ ಕ್ಷೇತ್ರದ ಬಿಜೆಪಿ ಶಾಸಕರಾದ ಶ್ರೀ ಸಿಂಗ್ ಅವರು ಜೂನ್ 28 ರಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು, ಈ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ ತಗುಲಿರುವುದು ಧೃಡವಾಗಿತ್ತು  ಬಳಿಕ  ಚೇತರಿಸಿಕೊಂಡಿದ್ದರು.  ಬಳಿಕ ತೀವ್ರ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಅವರು ಕೊನೆಯುಸಿರೆಳೆದರು.

ಶ್ರೀ ಸಿಂಗ್ ಸಾವಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದು,  ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುವುದಾಗಿ ಘೋಷಿಸಿದರು.

Breaking: ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಕೇಸ್: ಸಿಬಿಐನಿಂದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಅರೆಸ್ಟ್..!


State

ಡಿಜಿಟಲ್ ಡೆಸ್ಕ್ :  ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು ,ಜೈನರು, ಬೌದ್ದ, ಪಾರ್ಸಿ) ವರ್ಗದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕಾಗಿ  ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ ಅಕ್ಟೋಬರ್ 30 ರೊಳಗಾಗಿ www.scholarships.gov.in ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅಲ್ಪಸಂಖ್ಯಾತರ ಇಲಾಖೆ ಪ್ರಕಟಣೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಆಯಾ ತಾಲೂಕಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಬಹುದಾಗಿದೆ.

ರಂಜಿತ್ ಶೃಂಗೇರಿ

 

 

 


Cricket India Sports

ಮುಂಬೈ : ನವೆಂಬರ್ 4 ರಿಂದ 9 ರವರಗೆ ಯುಎಇ ಯಲ್ಲಿ ಮಹಿಳೆಯರ ಟಿ 20 ಚಾಲೆಂಜ್ ಟೂರ್ನಿ ನಡೆಯಲಿದೆ.

ಹಿರಿಯ ಆಟಗಾರ್ತಿಯರಾದ ಮಿಥಾಲಿ  ರಾಜ್ ( ವೆಲಾಸಿಟಿ) ಹರ್ಮಾನ್ ಪ್ರೀತ್ ಕೌರ್ ( ಸೂಪರ್ ನೊವಾಸ್ ) ಹಾಗೂ ಸ್ಮತಿ ಮಂದನಾ ( ಟ್ರೈಲ್ ಬ್ಲೇಜರ್ಸ್ ) ಅವರಿಗೆ ಮೂರು ತಂಡಗಳ ನಾಯಕತ್ವ ವಹಿಸಲಾಗಿದೆ.

ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್. ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಆಟಗಾರ್ತಿಯರು ನಾಲ್ಕು ಪಂದ್ಯಗಳ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಿನಿ ಐಪಿಎಲ್ ಎಂದು ಕರೆಯಲಾಗಿರುವ ಈ ಟೂರ್ನಿಯಲ್ಲಿ ವೆಲಾಸಿಟಿ, ಸೂಪರ್‌ ನೋವಾ ಹಾಗೂ ಟ್ರೈಲ್ ಬ್ಲೇಜರ್ ತಂಡಗಳು ಪಾಲ್ಗೊಳ್ಳಲಿವೆ. ಹಾಗೆಯೇ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೂರು ತಂಡಗಳು ತಲಾ 2 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಹೆಚ್ಚು ಗೆದ್ದ ತಂಡಗಳು ಫೈನಲ್ ಆಡಲಿದೆ.

ನವೆಂಬರ್ 4 ರಿಂದ ಮಹಿಳಾ ಮಿನಿ ಐಪಿಎಲ್ ಆರಂಭವಾಗಲಿದ್ದು, ನವೆಂಬರ್ 9 ರಂದು ಫೈನಲ್ ನಡೆಯಲಿದೆ. ಅದರ ಮರುದಿನವೇ ಪುರುಷರ ಐಪಿಎಲ್​ ಫೈನಲ್ ಕದನ ನಡೆಯಲಿದೆ.

ಮಳೆರಾಯನ ಆರ್ಭಟಕ್ಕೆ ಬಿಸಿಲುನಾಡು ರಾಯಚೂರು ತತ್ತರ

 

 

 

 

 

 


Cricket India

ನ್ಯೂಸ್ ಡೆಸ್ಕ್ :  ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಅಂತೆಯೇ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪರ ಫ್ರಥ್ವಿ ಶಾ 4 ರನ್, ಅಜಿಂಕ್ಯಾ ರಹಾನೆ 15, ಶ್ರೇಯಸ್ ಅಯ್ಯರ್ 42, ಮಾರ್ಕಸ್ ಸ್ಟೋನಿಸ್ 13 ರನ್ ಗಳಿಸಿದ್ದಾರೆ . ಇನ್ನೂ. ಶಿಖರ್ ದವನ್ 69 ರನ್ ಕಲೆ ಹಾಕಿದ್ದಾರೆ.

ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಿ ಗೆಲುವು ಸಾಧಿಸಿದ್ದಾರೆ.ಇನ್ನೂ, ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕು.

ಉತ್ತರ ಪ್ರದೇಶದಲ್ಲಿ ಕಾಮಾಂಧರ ಅಟ್ಟಹಾಸ : ಕಾಲೇಜಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ


State

ರಾಯಚೂರು : ಭೀಕರ ಮಳೆಗೆ ಬಿಸಿಲು ನಾಡು ರಾಯಚೂರು ತತ್ತರಿಸಿದೆ.  ಕಳೆದ 15ದಿನಗಳ ಹಿಂದೆ ಅಪಾರ ಹಾನಿ  ಸೃಷ್ಟಿಸಿದ್ದ ಮಳೆ ಮತ್ತೆ ತನ್ನ ಆರ್ಭಟ ಮುಂದುವರೆಸಿದೆ.

 ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತಕ್ಕೆ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಅಪಾರ ಪ್ರಮಾಣದ ಮಳೆಯಾಗುತ್ತಿರುವ ಹಿನ್ನಲೆ ಹೊಲಗಳಲ್ಲಿ ನೀರು ನಿಂತು ಬೆಳೆ ನಾಶವಾಗಿದೆ.

ಮಸ್ಕಿಯಲ್ಲಿ  ಇಂದು ಮುಂಜಾನೆ ವ್ಯಕ್ತಿಯೊಬ್ಬ ಹಳ್ಳದ ಪಕ್ಕ ಹೋಗಿದ್ದ ಹಳ್ಳದಲ್ಲಿ ಸಿಲುಕಿರುವ ಘಟನೆ ನಡೆದಿದೆ.  ಜಲಾಶಯದಿಂದ ಏಕಾಏಕಿ 1600 ಕ್ಯೂಸೆಕ್​ ನೀರು ಬಿಟ್ಟ ಪರಿಣಾಮ ಚನ್ನಬಸಪ್ಪ ಎಂಬ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಮತ್ತೊಬ್ಬ ವ್ಯಕ್ತಿ ಜಲೀಲ ಎಂಬುವರು ನಡುಗಡ್ಡೆಯಲ್ಲಿ ಸಿಲಿಕಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ರಕ್ಷಿಸಿದೆ. ಬಳಿಕ ನಡುಗಡ್ಡೆಯಲ್ಲಿ ಸಿಲುಕಿದ ಜಲೀಲ ಎಂಬ ವ್ಯಕ್ತಿಯನ್ನು ಕ್ರೇನ್​ ಮೂಲಕ ರಕ್ಷಿಸಲಾಗಿದೆ.

ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 75 ಬಲಿ ; 9966 ಕ್ಕೇರಿದ ಸಾವಿನ ಸಂಖ್ಯೆ


State

ಬೆಂಗಳೂರು :  ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 75 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 9966  ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು  4623 ಮಂದಿಗೆ ಸೋಂಕು ತಗುಲಿದ್ದು,  ಇಂದು 24 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3344 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 9523 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 710309 ಕ್ಕೆ ಏರಿಕೆಯಾಗಿದೆ.

BREAKING ; ‘ಕೊರೊನಾ ಬುಲೆಟಿನ್’ : ರಾಜ್ಯದಲ್ಲಿ ಇಂದು ‘9523’ ಮಂದಿಗೆ ಸೋಂಕು ಧೃಡ, ’75’ ಬಲಿ


State

ಬೆಂಗಳೂರು :  ಕರ್ನಾಟಕದಲ್ಲಿ ಇಂದು 9523 ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,10,309 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 9523 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 710309 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 10107 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 580054 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಬಂದಿದ್ದಾರೆ.

ಇನ್ನೂ, ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 75 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 9966  ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು  4623 ಮಂದಿಗೆ ಸೋಂಕು ತಗುಲಿದ್ದು,  ಇಂದು 24 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3344 ಕ್ಕೆ ಏರಿಕೆಯಾಗಿದೆ.


India

ಉತ್ತರ ಪ್ರದೇಶ :  ಉತ್ತರ ಪ್ರದೇಶದಲ್ಲಿ ಕಾಮಾಂಧರು ಅಟ್ಟಹಾಸ ಮೆರೆದಿದ್ದು, ಕಾಲೇಜಿನಲ್ಲಿ ಬಾಲಕಿ ಮೇಲೆ 12 ಜನರಿಂದ ಸಾಮೂಹಿಕ ಅತ್ಯಾಚಾರ  ನಡೆದ ಘಟನೆ ಝಾನ್ಸಿ ಪಟ್ಟಣದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ.

ಹತ್ರಾಸ್ ಅತ್ಯಾಚಾರ ಘಟನೆ ಮಾಸುವ ಮುನ್ನವೇ ಝಾನ್ಸಿಯಲ್ಲಿ ಮತ್ತೊಂದು ಅತ್ಯಾಚಾರ ಘಟನೆ ವರದಿಯಾಗಿದ್ದು, ಉತ್ತರ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ.

12 ಜನ ಯುವಕರು ಬಾಲಕಿ ಮತ್ತು ಆಕೆಯ ಸ್ನೇಹಿತನನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ, ನಂತರ ಸ್ನೇಹಿತನನ್ನು ಥಳಿಸಿದ್ದಾರೆ. ಬಳಿಕ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ

 

BIGG NEWS : ರಾಜ್ಯ ಸಚಿವ ಸಂಪುಟದಲ್ಲಿ ದಿಢೀರ್ ಖಾತೆ ಬದಲಾವಣೆ : ಸಚಿವ ‘ಸುಧಾಕರ್’ಗೆ ಹೆಗಲಿಗೆ ಆರೋಗ್ಯ ಖಾತೆ : ‘ಶ್ರೀರಾಮುಲು’ಗೆ ಸಮಾಜ ಕಲ್ಯಾಣ ಖಾತೆ


India

ಶ್ರೀನಗರ :  ಚೀನಾದ ಸಹಾಯದಿಂದ ಕಾಶ್ಮೀರದಲ್ಲಿ ಆರ್ಟಿಕಲ್ 370 ಜಾರಿಯಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಣಿವೆ ರಾಜ್ಯದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ್ದರಿಂದಲೇ ಗಡಿಯಲ್ಲಿ ಉದ್ವಿಘ್ನತೆ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಚೀನಾ ಜೊತೆಗೂಡಿ 370 ನೇ ವಿಧಿಯನ್ನು ಮತ್ತೆ ಸ್ಥಾಪಿಸಲು ಪ್ರಯತ್ನ ಮಾಡುವುದಾಗಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

 ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಕೂಡ ಆಗಿರುವ ಫಾರೂಕ್ ಅಬ್ದುಲ್ಲಾ ಚೀನಾದೊಂದಿಗೆ ಕೈ ಜೋಡಿಸಿ ಜಮ್ಮ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರವನ್ನು ಭುಗಿಲೇಳಿಸಲು ಯತ್ನ ಮಾಡುತ್ತಿದ್ದರಾ ಎಂಬ ಅನುಮಾನ ಮೂಡಿದೆ. ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

‘ಬ್ಯಾಂಕ್ ಗ್ರಾಹಕ’ರಿಗೆ ಶಾಕಿಂಗ್ ನ್ಯೂಸ್ : ‘ನೋಟ್’ನಿಂದಲೂ ಹರಡುತ್ತಿದೆ ಕೊರೋನಾ – ಸಂಶೋಧನೆ


State

ಬೆಂಗಳೂರು :  ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಬೆಳವಣಿಗೆ ಉಂಟಾಗಿದ್ದು, ಶ್ರೀರಾಮುಲು ಆರೋಗ್ಯ ಖಾತೆ ಜವಾಬ್ದಾರಿ ಸಚಿವ ಸುಧಾಕರ್ ಹೆಗಲಿಗೆ ಬಿದ್ದಿದೆ.

ಹೌದು, , ಬಿ ಶ್ರೀರಾಮುಲು ಅವರ ಖಾತೆಯನ್ನು ಬದಲಾಯಿಸಲಾಗಿದೆ. ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.  ಸಚಿವ ಬಿ ಶ್ರೀರಾಮುಲು ಅವರಿಗೆ  ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ನೀಡಲಾಗಿದೆ. ಈ ಹಿಂದೆ ಸಮಾಜ ಕಲ್ಯಾಣ ಖಾತೆ ಸಚಿವರಾಗಿ  ಗೋವಿಂದ ಕಾರಜೋಳ ಕೆಲಸ ಮಾಡುತ್ತಿದ್ದರು. ಬಹಳ ದಿನಗಳಿಂದ ಶ್ರೀರಾಮುಲು ಅವರು ಖಾತೆ ಬದಲಾವಣೆ ಮಾಡುವಂತೆ ಸಿಎಂ ಯಡಿಯೂರಪ್ಪಗೆ ಅವರಿಗೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ  ಖಾತೆ ಬದಲಾವಣೆ ಮಾಡಲಾಗಿದೆ.

 ಶ್ರೀರಾಮುಲು ಬೇಡಿಕೆಗೆ ಮಣಿದ ಸಿಎಂ ಖಾತೆ ಬದಲಾವಣೆ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ಸಚಿವರ ಖಾತೆ ಬದಲಾವಣೆಯಾಗಲಿದೆ.ಈ ಬಗ್ಗೆ ನಾಳೆ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳಲಿದೆ.