kannada kannada kannada latest news kannada latest news kannada news kannada news kannada news live kannada news live kannada online news kannada online news – Kannada News Now


India

ಆಂಧ್ರಪ್ರದೇಶ : ರಾಜ್ಯದಲ್ಲಿ ನವೆಂಬರ್ 2 ರಿಂದ ಭಾಗಶಃ ಶಾಲೆಗಳನ್ನು ತೆರೆಯಲು ಆಂಧ್ರ ಪ್ರದೇಶ ಸರ್ಕಾರವು ತೀರ್ಮಾನಿಸಿದೆ.

ಹೌದು, ಆಂಧ್ರಪ್ರದೇಶ ಸರ್ಕಾರವು ನವೆಂಬರ್ 2 ರಿಂದ ಹಂತ ಹಂತವಾಗಿ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮದೊಂದಿಗೆ ರಾಜ್ಯದಲ್ಲಿ ಶಾಲೆ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ. ಜೊತೆಗೆ ವಿದ್ಯಾರ್ಥಿಗಳು ಖುದ್ದಾಗಿ ಶಾಲೆಯ ತರಗತಿಗೆ  ಹಾಜರಾಗಬಹುದು, ಇಲ್ಲವೇ ಆನ್ ಲೈನ್ ತರಗತಿಗೂ ಮನೆಯಲ್ಲಿಯೇ ಕುಳಿತು ಕೇಳಲು ಅವಕಾಶ ನೀಡಿದೆ ಎಂದು ಕೂಡ ಹೇಳಲಾಗುತ್ತಿದೆ.

ʼಸೈಬರ್ʼ ಭೂತಗಳ ಹವಾಳಿಗೆ ಕಡಿವಾಣ ಹಾಕಲು ಬರ್ತಿದೆ ʼNCSSʼ

 


Film India

ಡಿಜಿಟಲ್‌ ಡೆಸ್ಕ್:‌ ತೆಲಂಗಾಣದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಕೋಟ್ಯಾಂತರ ರೂ. ಗಳ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಮನೆ ಮಠ ಕಳೆದುಕೊಂಡು ಹಲವು ಜನರು ನಿರ್ಗತಿಕರಾಗಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಮಳೆಯಿಂದಾದ ಹಾನಿಗೆ ಪರಿಹಾರ ನೀಡಲು ಸ್ಥಾಪಿಸಿದ್ದ ಪರಿಹಾರ ನಿಧಿಗೆ, ತೆಲುಗು ಚಿತ್ರರಂಗದ ಚಿತ್ರ ನಟರಾದ ಚಿರಂಜೀವಿ, ನಾಗಾರ್ಜುನ, ಜೂನಿಯರ್ ಎನ್‌ಟಿಆರ್, ವಿಜಯ್ ದೇವೇರಕೊಂಡ, ಮಹೇಶ್ ಬಾಬು ಸೇರಿದಂತೆ ಹಲವಾರು ನಟರು ಕೊಡುಗೆ ನೀಡಿದ್ದಾರೆ.

ಇದೀಗ ಬಾಹುಬಲಿ ಸಿನಿಮಾ ಖ್ಯಾತಿಯ ಸ್ಟಾರ್ ನಟ ಪ್ರಭಾಸ್ ತೆಲಂಗಾಣ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಹೌದು, ನಟ ಪ್ರಭಾಸ್ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡುವ ಮೂಲಕ ಪ್ರವಾಸ ಸಂತ್ರಸ್ತರ ಕಣ್ಣೀರು ಒರೆಸಿದ್ದಾರೆ.

ಹಾಥರಸ್ ಪ್ರಕರಣ: ನ.2ವರೆಗೆ ಕೇರಳ ಪತ್ರಕರ್ತ ಸೇರಿ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ..!

 Cricket India Sports

ಡಿಜಿಟಲ್ ಡೆಸ್ಕ್ : ಐಪಿಎಲ್ 2020ರ  38 ನೇ ಪಂದ್ಯದಲ್ಲಿ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಣಾಹಣಿ ನಡೆಯುತ್ತಿದೆ.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್  ಬ್ಯಾಟಿಂಗ್   ಆಯ್ಕೆ ಮಾಡಿಕೊಂಡಿದೆ. ಅಂತೆಯೇ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಪಂಜಾಬ್ ಗೆ 165 ರನ್ ಗಳ ಟಾರ್ಗೆಟ್ ನೀಡಿದೆ. ಎರಡು ತಂಡಗಳಲ್ಲಿ ಯಾವ ಟೀಮ್ ಗೆಲುವಿನ ಪತಾಕೆ ಹಾರಿಸಲಿದೆ ಎಂಬುದನ್ನು ಕಾದು ನೋಡಬೇಕು.

ʼTRP ಪ್ರಕರಣʼಕ್ಕೆ ಮೆಗಾ ಟ್ವಿಸ್ಟ್‌ : ಯುಪಿ ಸರ್ಕಾರದಿಂದ ಶಿಫಾರಸ್ಸು, ಅಕಾಡಕ್ಕಿಳಿದ ʼಸಿಬಿಐʼ..!

 State

ಬೆಂಗಳೂರು :  ರಾಜ್ಯ ಸರ್ಕಾರ ಇಂದು ಮೂವರು ‘IPS’ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.

1) ಲಾಬರಾಮ್, ಪೊಲೀಸ್ ಆಯುಕ್ತ ಹುಬ್ಬಳ್ಳಿ, ಧಾರವಾಡ

2) ಆರ್ ದಿಲೀಪ್ , ಡಿಐಜಿ. ಸಿಐಡಿ ಆರ್ಥಿಕ ಅಪರಾಧ ವಿಭಾಗ

3)  ಪಿ ಕೃಷ್ಣಕಾಂತ್, ಪೊಲೀಸ್ ವರಿಷ್ಟಾಧಿಕಾರಿ ಧಾರವಾಡ

ಈ ಮೂವರು ಐಪಿಎಸ್ ಅಧಿಕಾರಿಗಳನ್ನು  ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

BIGG NEWS ; ಕಿಲ್ಲರ್  ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 66 ಮಂದಿ ಬಲಿ ; 10,608  ಕ್ಕೇರಿದ ಸಾವಿನ ಸಂಖ್ಯೆ

 State

aಬೆಂಗಳೂರು :  ಕಿಲ್ಲರ್  ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 66 ಮಂದಿ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 10,608  ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 36 ಮಂದಿ ಸಾವನ್ನಪ್ಪಿದ್ದರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3542 ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದು 6297  ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ776901 ಕ್ಕೆ ಏರಿಕೆಯಾಗಿದೆ.. ರಾಜ್ಯದಲ್ಲಿ 941 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಬೆಂಗಳೂರಿನಲ್ಲಿ ಇಂದು  2821  ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 312842  ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.State

ಬೆಂಗಳೂರು :  ಕರ್ನಾಟಕದಲ್ಲಿ ಇಂದು 6297  ಜನರಿಗೆ ಸೋಂಕು ತಗುಲಿದ್ದು,  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ776901 ಕ್ಕೆ ಏರಿಕೆಯಾಗಿದೆ..

ಬೆಂಗಳೂರಿನಲ್ಲಿ ಇಂದು  2821  ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 312842  ಕ್ಕೆ ಏರಿಕೆಯಾಗಿದೆ. ಕಿಲ್ಲರ್  ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 66 ಮಂದಿ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 10,608  ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 36 ಮಂದಿ ಸಾವನ್ನಪ್ಪಿದ್ದರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 3578 ಕ್ಕೆ ಏರಿಕೆಯಾಗಿದೆ.

 Cricket India Sports

 ಡಿಜಿಟಲ್ ಡೆಸ್ಕ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಮುಂದಿನ ವರ್ಷ ಅಹಮದಾಬಾದ್ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. 

ಮುಂದಿನ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ನ ಭಾರತ ಪ್ರವಾಸದ ಸಂದರ್ಭದಲ್ಲಿ ಅಹಮದಾಬಾದ್ ಡೇ-ನೈಟ್ ಪಿಂಕ್ ಬಾಲ್ ಟೆಸ್ಟ್ ಆತಿಥ್ಯ ವಹಿಸಲಿದೆ ಎಂದು ಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಟೆಸ್ಟ್ ಶ್ರೇಯಾಂಕದಲ್ಲಿ 4 ನೇ ಸ್ಥಾನ ಮತ್ತು ಏಕದಿನ ಸ್ವರೂಪದಲ್ಲಿ ಪ್ರಥಮ ಸ್ಥಾನದಲ್ಲಿರುವ ಇಂಗ್ಲೆಂಡ್ ಜನವರಿ-ಮಾರ್ಚ್ ನಿಂದ 5 ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಸರಣಿಗೆ ಭಾರತಕ್ಕೆ ಭೇಟಿ ನೀಡಲಿದೆ.

ಭಾರತದ ನಿರ್ಣಾಯಕ ಕೊರೊನಾವೈರಸ್ ಕಾರಣದಿಂದಾಗಿ, ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಯನ್ನು ಆಯೋಜಿಸುತ್ತಿರುವ ಯುಎಇ, ಭಾರತ ವಿರುದ್ಧ ಇಂಗ್ಲೆಂಡ್ ಸರಣಿಯನ್ನು ಸಹ ಆಯೋಜಿಸುತ್ತದೆ ಎಂದು ಹೇಳಿದ್ದಾರೆ. ಆದರೆ ಬಿಸಿಸಿಐ ಭಾರತದಲ್ಲಿ ಮಾತ್ರ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲು ನಿರ್ಧರಿಸಿದೆ ಎಂದರು.   ಆದರೆ, ಮಂಡಳಿಯು ಇನ್ನೂ ಕೂಡ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. “ನಾವು ಕೆಲವು ತಾತ್ಕಾಲಿಕ ಯೋಜನೆಗಳನ್ನು ಮಾಡಿದ್ದೇವೆ ಆದರೆ ಈಗಿನವರೆಗೆ ಏನನ್ನೂ ನಿರ್ಧರಿಸಲಾಗಿಲ್ಲ. ನಮಗೆ ಇನ್ನೂ ನಾಲ್ಕು ತಿಂಗಳ ಸಮಯವಿದೆ” ಎಂದು ಗಂಗೂಲಿ ಹೇಳಿದರು.

ತೆಲಂಗಾಣ ಜನರ ಸಂಕಷ್ಟಕ್ಕೆ ಮರುಗಿದ ʼಸಿನಿ ಸ್ವಾರ್ʼಗಳ ಹೃದಯ: ಕೋಟ್ಯಾಂತರ ರೂ.ಗಳ ಕೊಡುಗೆ..!State

ಬೆಂಗಳೂರು :   ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಮಾಸ್ಟರ್ ಫ್ಲಾನ್ ಮಾಡಿದ್ದು, ಗೆಲುವಿಗೆ ವಾರ್ಡ್ ಮಟ್ಟದ ಉಸ್ತುವಾರಿಗಳ ನೇಮಕಮಾಡಿದೆ.ರಾಜರಾಜೇಶ್ವರಿ ನಗರದ 9 ವಾರ್ಡ್ ಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ.

ಕೊಟ್ಟಿಗೆ ಪಾಳ್ಯ ವಾರ್ಡ್ – ಸಚಿವ ವಿ ಸೋಮಣ್ಣ

 ಲಗ್ಗೆರೆ ವಾರ್ಡ್ – ಸಚಿವ ಕೆ ಗೋಪಾಲಯ್ಯ, ಸಚಿವ ನಾರಾಯಣಗೌಡ, ಭೈರತಿ ಬಸವರಾಜು

 ಜ್ಞಾನಭಾರತಿ ವಾರ್ಡ್ – ಸಚಿವ ಎಸ್ ಟಿ ಸೋಮಶೇಖರ್

 ರಾಜರಾಜೇಶ್ವರಿ ನಗರ ವಾರ್ಡ್ – ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ

ಹೆಚ್ ಎಂ ಟಿ ವಾರ್ಡ್ – ಮಾಜಿ ಶಾಸಕ ಮುನಿರಾಜು

ಜಾಲಹಳ್ಳಿ ವಾರ್ಡ್  – ಎಸ್ ಆರ್ ವಿಶ್ವನಾಥ್

ಜೆ ಪಿ ಪಾರ್ಕ್ ವಾರ್ಡ್ – ನಂದೀಶ್ ರೆಡ್ಡಿ

ಯಶವಂತಪುರ ವಾರ್ಡ್ – ಶಾಸಕ ಸತೀಶ್ ರೆಡ್ಡಿ

BREAKING ; ಬೆಂಗಳೂರಿನಲ್ಲಿ ಮುಂದುವರೆದ ‘ಮಳೆರಾಯನ ಆರ್ಭಟ’ ; ಜನಜೀವನ ಅಸ್ತವ್ಯಸ್ತFilm India

 ಸಿನಿಮಾ ಡೆಸ್ಕ್ : ಬಾಲಿವುಡ್ ನಟಿ ಶ್ವೇತಾ ತಿವಾರಿ ಬಿಕಿನಿ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ. 

ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶ್ವೇತಾ ತಿವಾರಿ ಅವರು ನೀಲಿ ಬಿಕಿನಿಯಲ್ಲಿ ಕಾಣುವ ಚಿತ್ರಗಳ ಸರಣಿಯನ್ನು ಪೋಸ್ಟ್ ಮಾಡಿದ್ದಾರೆ. ಸ್ವಿಮ್ಮಿಂಗ್ ಫೂಲ್ ಒಂದರಲ್ಲಿ ನಟಿ  ಶ್ವೇತಾ ತಿವಾರಿ ಬಿಕಿನಿ ತೊಟ್ಟು ಕಾಣಿಸಿಕೊಂಡಿದ್ದಾರೆ.

 ನಟಿಯ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಮೆಂಟ್ ಬಂದಿದೆ. ಒಬ್ಬ ಅಭಿಮಾನಿ “ಸುಂದರ” ಎಂದು ಕಾಮೆಂಟ್ ಮಾಡಿದ್ರೆ.  ಮತ್ತೊಬ್ಬ ಅಭಿಮಾನಿ ‘ನಿಮ್ಮ ಸೌಂದರ್ಯದ ರಹಸ್ಯವೇನು?  ಎಂದು ಕೇಳಿದ್ದಾರೆ, ಮತ್ತೋರ್ವ ಅಭಿಮಾನಿ ಈಗಿನ ಹೆಚ್ಚಿನ ನಟಿಯರಿಗಿಂತ ನೀವು ಕಿರಿಯ ಮತ್ತು ಬಿಸಿಯಾಗಿ ಕಾಣುತ್ತೀರಿ ಎಂದು ಕಮೆಂಟ್ ಮಾಡಿದ್ದಾರೆ.

 

””””””””””””””””””””””””””””””””””””””””””’State

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಾಳೆ (ಅ. 20) ಹಾಗೂ ನಾಡಿದ್ದು (ಅ.21) ರಂದು ನಾಡಿದ್ದು ಎರಡು ದಿನಗಳ ಕಾಲ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು, ನಾಳೆ ಹಾಗೂ ನಾಡಿದ್ದು ಎರಡು ದಿನಗಳ ಕಾಲ ಡಿ.ಕೆ. ಶಿವಕುಮಾರ್ ಅವರು ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮನವಿ ಮಾಡಿದ್ದರು. ಅದರಂತೆ ಕ್ಷೇತ್ರದ ಹಲವು‌ ಹಳ್ಳಿಗಳಲ್ಲಿ ಟಿ.ಬಿ. ಜಯಚಂದ್ರ ಅವರ ಪರವಾಗಿ ಡಿಕೆಶಿ ಮತಯಾಚನೆ ಮಾಡಲಿದ್ದಾರೆ.

ಚನ್ನೇನಹಳ್ಳಿ, ತರೂರು, ಭೂಪಸಂದ್ರ,  ಯತ್ತಪ್ಪನಹಟ್ಟಿ, ದೊಡ್ಡ ಆಲದಮರ, ಬ್ರಹ್ಮಸಂದ್ರ,  ತಾಳಗುಂದ, ಚಿಕ್ಕನಹಳ್ಳಿ, ಕಳ್ಳಂಬೆಳ್ಳ, ಯಲದಬಾಗಿ ಸೇರಿದಂತೆ ಹಲವು ಕಡೆ ಮತಬೇಟೆಯಾಡಲಿದ್ದಾರೆ.

‘KSRTC’ ಐಷಾರಾಮಿ ಬಸ್ ಪ್ರಯಾಣಿಕರಿಗೆ ಸಿಹಿಸುದ್ದಿ

 

error: Content is protected !!