corona virus in karnataka – Page 2 – #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath




State

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜನವರಿ ಮೊದಲ ದಿನದಿಂದ ಶಾಲಾ ಕಾಲೇಜುಗಳನ್ನ ಆರಂಭಿಸಲು ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ಶಿಕ್ಷಣ ಸಚಿವರ ಯೋಜನೆ ಪ್ರಕಾರ ಕನಿಷ್ಠ ನೂರಿಪ್ಪತ್ತು ದಿನ ಅಂದ್ರೆ ಮೂರು ತಿಂಗಳು ಶಾಲೆಗಳನ್ನ ನಡೆಸಬೇಕು ಅಂತಾ ತೀರ್ಮಾನಿಸಿದ್ದಾರೆ. ಸಿಲಬಸ್ ಕಡಿತಗೊಳಿಸಿ ಯಾವ ಅಂಶಗಳನ್ನಷ್ಟೆ ಪಾಠಕ್ಕೆ ಇರಿಸಬೇಕು ಅನ್ನೋದನ್ನ ಫೈನಲ್ ಮಾಡಲಿದ್ದಾರೆ. ಈ ಮಧ್ಯೆ ಖಾಸಗಿ ಶಾಲೆ ಮಾಲಿಕರು ಮತ್ತು ಖಾಸಗಿ ಶಾಲೆ ಶಿಕ್ಷಕರು ಹಾಗೂ ಪೋಷಕರ ಮಧ್ಯೆ ಒಂದು ತ್ರಿಕೋನ ಸಮಸ್ಯೆ ಇದೆ.

ಮಕ್ಕಳನ್ನ ಶಾಲೆಗೆ ಸೇರಿಸದೆ ನಾವು ಹೇಗೆ ಶುಲ್ಕ ಕಟ್ಟುವುದು ಎಂತಲೂ , ಇತ್ತ ಶಿಕ್ಷಕರು ನಮಗೆ ಸಂಬಳವಿಲ್ಲದ ದುಸ್ಥಿತಿಯಲ್ಲಿದ್ದೇವೆ ಎಂದೂ ಹಾಗೂ ಶಾಲಾ ಮಾಲಿಕರು ತರಗತಿಗಳೇ ನಡೆಯದೆ ಪೋಷಕರು ಹಣ ನೀಡದೇ ಶಿಕ್ಷಕರನ್ನ ಸಂಬಾಳಿಸೋದು ಹೇಗೆ ಎಂಬ ದಂದ್ವ ಮಾಲಿಕರನ್ನ ಕಾಡುತ್ತಿದೆ.
ಇದೀಗ ಮೂರು ತಿಂಗಳುಗಳ‌ ಕಾಲ ಪಾಠ ಪ್ರವಚನ ನೀಟಾಗಿ ನಡೆದರೆ ಎಲ್ಲರೂ ನಿಟ್ಟುಸಿರು ಬಿಡಲಿದ್ದಾರೆ.

ಇನ್ನೂ ಇಲ್ಲಿ ದುರಂತ ನಾಯಕರು ಅಂದ್ರೆ ಅತಿಥಿ ಶಿಕ್ಷಕರು. ಅತಿಥಿ ಶಿಕ್ಷಕರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನ ಸಂಪರ್ಕಿಸಿದರೆ ಅವರು ಎಷ್ಟು ಜನ ಅತಿಥಿ ಶಿಕ್ಷಕರು ಬೇಕಿದ್ದಾರೆ ಎಂಬುದನ್ನ ಲಿಸ್ಟ್ ಮಾಡಲಾಗುವುದು ಅಂತಾ ಹೇಳಿದ್ದಾರೆ. ಈ ಮಧ್ಯೆ ಅತಿಥಿ ಶಿಕ್ಷಕರು ನಮಗೆ ಕೊರೊನಾ ಭತ್ಯೆ ಘೋಷಿಸಿ , ನಮ್ಮ ಸಂಭಾವನೆಯನ್ನ‌ಹೆಚ್ಚಿಸಿ , ನಮಗೆ ಮೊದಲ‌ದಿನದಿಂದಲೇ ಪಾಠ ಪ್ರವಚನಕ್ಕೆ ಅವಕಾಶ ಕಲ್ಪಿಸಿ ಅಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮೌಲ್ಯ ಮಾಪನಕ್ಕೆ ಅವಕಾಶ ಕೊಡಿ , ಸೇವಾ ಭದ್ರತೆಯನ್ನ ನೀಡಿ ಅಂದ್ರೆ ಸುರೇಶ್ ಕುಮಾರ್ ನಕ್ಕು ಸುಮ್ಮನಾಗಿದ್ದಾರೆ.

ಇಲ್ಲಿ ಅತಿಥಿ ಶಿಕ್ಷಕರು ಮಲತಾಯಿ ಮಕ್ಕಳೇ ಸರಿ. ಅವರಿಗೆ ಯಾವುದೇ ಭದ್ರತೆ ಇಲ್ಲ. ಈ ವರ್ಷ ಪಡೆದವರನ್ನ ಮುಂದಿನ ವರ್ಷ ತೆಗೆದುಕೊಳ್ಳುವ ಗ್ಯಾರಂಟಿ ಇಲ್ಲ. ಹೀಗಾದರೆ ಅವರ ಕುಟುಂಬಗಳ ಪರಿಸ್ಥಿತಿ ಏನು ಎಂಬುದನ್ನ ಸಚಿವರು , ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರಿಗೊಂದು ನೆಲೆ ಕಲ್ಪಿಸುವ ಅವಶ್ಯಕತೆ ಇದೆ.

ಇನ್ನೂ ಮೂರು ತಿಂಗಳುಗಳ‌ ಕಾಲ ಶಾಲೆ ನಡೆಯುವುದು ಫಿಕ್ಸ್ ಆಗಿದೆ. ಆದರೆ ಇನ್ನೊಂದು ವರ್ಗ ಇಲ್ಲಿ ತಮ್ಮ ನೋವನ್ನ ತೋಡಿಕೊಂಡಿದೆ. ಅವರು ಯಾರು ಅಂದ್ರೆ ಮದ್ಯಾಹ್ನದ ಅಡುಗೆಯವರು. ಪ್ರತಿ ದಿನ ಮದ್ಯಾಹ್ನದವರೆಗೆ ಮಾತ್ರ ಶಾಲೆ ನಡೆಸಲು ಯೋಜಿಸಲಾಗಿದೆ. ಹಾಗಾಗಿ ಅಡುಗೆಯವರಿಗೆ ಅಡುಗೆ ಮಾಡಲೂ ಅವಕಾಶ ವಿಲ್ಲ. ಮಕ್ಕಳೆಲ್ಲಾ ಮಧ್ಯಾಹ್ನಕ್ಕೆ ಮನೆಗೆ ತೆರಳಲಿದ್ದಾರೆ. ಅಡುಗೆಯವರಿಗೆ ಈ ವರ್ಷಕ್ಕೆ ಸಂಪೂರ್ಣವಾಗಿ ಕೆಲಸ ಇಲ್ಲ.

ಕೊನೇದಾಗಿ ಕೊರೋನಾ ರೂಪಾಂತರಗೊಂಡಿದ್ದು ಮಕ್ಕಳನ್ನ ಯಾವ ಧೈರ್ಯದ ಮೇಲೆ ಕಳಿಸಬೇಕು ಎಂಬ ಪೋಷಕರ ಧಾವಂತಕ್ಕೆ ಶಿಕ್ಷಣ ಇಲಾಖೆ ಸ್ಪಷ್ಟನೆ ಹೀಗಿದೆ. ನಿಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲು ಸಾಧ್ಯವಾದರೆ ಕಳುಹಿಸಿ. ಇಲ್ಲವಾದಲ್ಲಿ ಮನೆಯಲ್ಲೇ ಆನ್ಲೈನ್ ಕ್ಲಾಸ್ ನಡೆಸಿ ಎಂಬ ಆಯ್ಕೆ ನೀಡಿದೆ.

ಒಟ್ಟಾರೆ ಈ ಶೈಕ್ಷಣಿಕ ವರ್ಷವನ್ನ ಯಶಸ್ವಿಗೊಳಿಸುವ ಸವಾಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೇಲಿದ್ದು ಮುಂದಿನ ಸಣ್ಣ ಅವಧಿಯಲ್ಲಿ ಯಾವ ರೀತಿ ನಿರ್ವಹಿಸಲಿದ್ದಾರೆ ಎಂಬುದನ್ನ ನೋಡಬೇಕು

ಬರಹ : ರಾಮು, ಅರಕೇರಿ


State

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿ, ಯುಕೆ ವೈರಸ್ ಸೋಂಕಿನ ಭೀತಿಯ ಉಂಟಾಗಿದೆ. ಇಂತಹ ಸಂದರ್ಭದಲ್ಲಿಯೇ ಹೊಸ ವರ್ಷ ಕೂಡ ಆಗಮಿಸಿದೆ. ಇಂತಹ ಹೊಸ ವರ್ಷಕ್ಕೆ ನೀವು ಪಾರ್ಟಿ ಮಾಡೋ ಫ್ಲಾನ್ ಮಾಡಿದ್ರೆ, ಕೊಂಚ ಕಾಯಬೇಕಿದೆ. ರಾಜ್ಯ ಸರ್ಕಾರದಿಂದ ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದ್ದು, ಸರ್ಕಾರದ ರೂಲ್ಸ್ ಮೋಡಿಕೊಂಡು, ಹೊಸ ವರ್ಷದಂದು ಪಾರ್ಟಿ ಮಾಡುವ ಫ್ಲಾನ್ ಮಾಡೋದು ಒಳಿತು.

ಹೌದು.. ಜನರೇ ಹೊಸ ವರ್ಷಕ್ಕೆ ಪಾರ್ಟಿ ಪ್ಲಾನ್ ಮಾಡಿದ್ದೀರಾ.? ಸರ್ಕಾರದ ರೂಲ್ಸ್ ನೋಡಿ ಪಾರ್ಟಿ ಮಾಡಿ. ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿಗೆ ಕೌಂಟ್ ಡೌನ್ ಶುರುವಾಗಿದೆ. ಸಚಿವ ಸುಧಾಕರ್ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾರ್ಗಸೂಚಿ ಸಂಬಂಧ ಏನು ರೂಲ್ಸ್ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ಕೂಡ ಆಗಿದೆ. ಕೆಲವೇ ಕ್ಷಣಗಳಲ್ಲಿ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ ಕೂಡ ಆಗಲಿದೆ. ಹೀಗಾಗಿ ರಾಜ್ಯ ಸರ್ಕಾರದ ಹೊಸ ರೂಲ್ಸ್ ನೋಡಿಕೊಂಡು ಪಾರ್ಟಿ ಮಾಡೋ ಫ್ಲಾನ್ ಮಾಡೋಕೆ ಸಿದ್ಧರಾಗಿರಿ.

ಅಂದಹಾಗೇ, ಈ ಬಾರಿ ನಿಮ್ಮಿಷ್ಟದಂತೆ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಗುಂಪು ಸೇರುವಂತಿಲ್ಲ, ಕಂಡ ಕಂಡಲ್ಲಿ ಪಾರ್ಟಿ ಮಾಡಂಗಿಲ್ಲ. ನೈಟ್ ಕರ್ಪ್ಯೂ ತೆಗೆದರೂ ರಾತ್ರಿ ನ್ಯೂ ಇಯರ್ ಪಾರ್ಟಿ ಇಲ್ಲ. ಪ್ರತಿ ವರ್ಷದಂತೆ ಹೊಸ ವರ್ಷದ ಅದ್ಧೂರಿ ಸ್ವಾಗತಕ್ಕೆ ಸರ್ಕಾರದಿಂದ ಬ್ರೇಕ್ ಹಾಕಲಾಗುತ್ತಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನ ಸೇರಲು ಅವಕಾಶ ಇರೋದಿಲ್ಲ.

ವಿಶಾಲ ಜಾಗ ಇರುವ ಕಡೆ ಶೇ.50ರಷ್ಟು ಜನಕ್ಕೆ ಅನುಮತಿ ನೀಡಲಿದೆ ಎನ್ನಲಾಗುತ್ತಿದೆ. ಬಾರ್ ಹಾಗೂ ರೆಸ್ಟೋರೆಂಟ್ ಅವಧಿ ವಿಸ್ತರಣೆ ಇಲ್ಲ ಮಾಡುತ್ತಿಲ್ಲ ಎನ್ನಲಾಗಿದೆ. ಜನ ಸೇರಬಾರದು ಅಂತ ಆನ್ ಲೈನ್ ಮೂಲಕವೂ ಮದ್ಯ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕೆಲವೇ ಕ್ಷಣಗಳಲ್ಲಿ ರಾಜ್ಯ ಸರ್ಕಾರ ಹೊಸ ವರ್ಷಾಚರಣೆಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

👉 👇 ತಾಜಾ ಸುದ್ದಿಗಾಗಿ ನಮ್ಮ WhatAapp, Telegram ಗ್ರೂಪ್‌ ಹಾಗೂ ಫೇಸ್ ಬುಕ್ ಫೇಜ್ ಸೇರಿಕೊಳ್ಳಿ
👉 https://bit.ly/2Md4kxL
👉 https://t.me/kannadanewsnow
👉 https://www.facebook.com/kannadanewsnowdotcom


State

ಬೆಂಗಳೂರು : ರಾಜ್ಯದಲ್ಲಿ ಜನವರಿ.1ರಿಂದ ಶಾಲಾ-ಕಾಲೇಜು, ವಿದ್ಯಾಗಮ ಆರಂಭವಾಗಲಿದೆ. ಇಂತಹ ಶಾಲಾ-ಕಾಲೇಜು, ವಿದ್ಯಾಗಮ ಆರಂಭದ ಬಗ್ಗೆ ಶಿಕ್ಷಣ ಇಲಾಖೆಗೆ ಮಾರ್ಗದರ್ಶನ, ಸಹಕಾರ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಶಾಸಕರು, ಸಚಿವರಿಗೆ ಪತ್ರ ಬರೆದು, ಮನವಿ ಮಾಡಿದ್ದಾರೆ.

ಈ ಕುರಿತಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿರುವಂತ ಅವರು, ರಾಜ್ಯದಲ್ಲಿ ಜನವರಿ 1ರಿಂದ ಶಾಲೆ ಆರಂಭ ವಿಚಾರದಲ್ಲಿ ಸಮನ್ವಯ ಅಗತ್ಯವಾಗಿದೆ. ಹಾಗಾಗಿ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಬೇಕು. ಶಿಕ್ಷಣ ಇಲಾಖೆಗೆ ಮಾರ್ಗದರ್ಶನ, ಸಹಕಾರ ನೀಡಿ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

👉 👇 ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ಗೆ ಸೇರಿಕೊಳ್ಳಿ https://bit.ly/3aR8rtL


State

ಹಾಸನ : ಕೊರೋನಾ ಸಂಕಷ್ಟ ಸದ್ಯಕ್ಕೆ ಕಡಿಮೆ ಆಗೋದಿಲ್ಲ. ಕೊರೋನಾ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷಗಳ ಕಾಲ ಬೇಕಾಗುತ್ತದೆ. ಇದೀಗ ಬ್ರಿಟನ್ ವೈರಸ್, ಕೊರೋನಾ ವೈರಸ್ ರೂಪಾಂತರ ಅಂತಾರಲ್ಲ, ಅದರ ಬಗ್ಗೆ ಎರಡು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂಬುದಾಗಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಹೊಸ ವರ್ಷದಲ್ಲಿ ಬರುತ್ತಿರುವಂತ ಗ್ರಹಣಗಳೇ ಬದಲಾವಣೆಯ ಸಂಕೇತಗಳಾಗಿವೆ. ರಾಜ್ಯದಲ್ಲಿ ಪುನಹ ಅಕಾಲಿಕ ಮಳೆ, ಜಲಸಂಬಂಧಿ ಅನಾಹುತಗಳಾಗುವ ಸಾಧ್ಯತೆಗಳಿವೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು, ರಾಜ್ಯ ರಾಜಕಾರಣದಲ್ಲಿ ಶೀಘ್ರವೇ ಧ್ರುವೀಕರಣ ಸಂಭವಿಸಲಿದೆ. ಸಾಕಷ್ಟು ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿದೆ. ಇದು ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿರದೇ, ದೇಶ, ಜಾಗತಿಗ ಮಟ್ಟದಲ್ಲೂ ಬದಲಾವಣೆಯಾಗಲಿದೆ ಎಂದಿದ್ದಾರೆ.

👉 👇 ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ಗೆ ಸೇರಿಕೊಳ್ಳಿ https://bit.ly/3aR8rtL


State

ಹಾಸನ : ಈಗಾಗಲೇ ರಾಜ್ಯ, ದೇಶದ ಹಾಗುಹೋಗುಗಳ ಕುರಿತಂತೆ ಮಹತ್ವದ ಭವಿಷ್ಯ ನುಡಿದ್ದಂತಂತ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಇದೀಗ ಮತ್ತೊಂದು ರಾಜ್ಯ ರಾಜಕಾರಣದ ಸ್ಪೋಟ ಭವಿಷ್ಯ ನುಡಿದಿದ್ದಾರೆ. ಅದೇ ರಾಜ್ಯ, ದೇಶದ ರಾಜಕಾರಣದಲ್ಲಿ ಧ್ರುವೀಕರಣ ಸಂಭವಿಸಲಿದೆ. ಮಹತ್ವದ ಬದಲಾವಣೆಯ ನಿರೀಕ್ಷೆ ಕೂಡ ಆಗಲಿದೆ ಎಂಬುದಾಗಿ ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಹೊಸ ವರ್ಷದಲ್ಲಿ ಬರುತ್ತಿರುವಂತ ಗ್ರಹಣಗಳೇ ಬದಲಾವಣೆಯ ಸಂಕೇತಗಳಾಗಿವೆ. ರಾಜ್ಯದಲ್ಲಿ ಪುನಹ ಅಕಾಲಿಕ ಮಳೆ, ಜಲಸಂಬಂಧಿ ಅನಾಹುತಗಳಾಗುವ ಸಾಧ್ಯತೆಗಳಿವೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.

ಇನ್ನೂ ಮುಂದುವರೆದು, ಕೊರೋನಾ ಸಂಕಷ್ಟ ಸದ್ಯಕ್ಕೆ ಕಡಿಮೆ ಆಗೋದಿಲ್ಲ. ಕೊರೋನಾ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷಗಳ ಕಾಲ ಬೇಕಾಗುತ್ತದೆ. ಇದೀಗ ಬ್ರಿಟನ್ ವೈರಸ್, ಕೊರೋನಾ ವೈರಸ್ ರೂಪಾಂತರ ಅಂತಾರಲ್ಲ, ಅದರ ಬಗ್ಗೆ ಎರಡು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು, ರಾಜ್ಯ ರಾಜಕಾರಣದಲ್ಲಿ ಶೀಘ್ರವೇ ಧ್ರುವೀಕರಣ ಸಂಭವಿಸಲಿದೆ. ಸಾಕಷ್ಟು ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿದೆ. ಇದು ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿರದೇ, ದೇಶ, ಜಾಗತಿಗ ಮಟ್ಟದಲ್ಲೂ ಬದಲಾವಣೆಯಾಗಲಿದೆ ಎಂದರು.

👉 👇 ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ಗೆ ಸೇರಿಕೊಳ್ಳಿ https://bit.ly/3aR8rtL


State

ಬೆಂಗಳೂರು : ನಿಗದಿಯಂತೆ ರಾಜ್ಯದಲ್ಲಿ ಜನವರಿ 1ರಿಂದಲೇ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಬದಲಾವಣೆ ಇಲ್ಲ. ಯಾವುದೇ ಗೊಂದಲಕ್ಕೂ ಪೋಷಕರು ಒಳಗಾಗಬಾರದು. ಈಗಾಗಲೇ ನಿರ್ಧರಿಸಿದಂತೆ ಜನವರಿ 1ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಗುತ್ತದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜನವರಿ 1ರಿಂದಲೇ ನಿಗದಿಯಂತೆ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. ಶಾಲೆ ಆರಂಭಿಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಲಾ ಆರಂಭದ ಬಗ್ಗೆ ಈಗಾಗಲೇ ನಿರ್ಧಾರ ಮಾಡಲಾಗಿದೆ. ಅದರಂತೆಯೇ ಜನವರಿ 1ರಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಗುತ್ತದೆ. ಆದ್ರೂ ಮತ್ತೊಮ್ಮೆ ಚರ್ಚೆ ಮಾಡಲಾಗುತ್ತದೆ ಎಂದು ಸ್ಪಷ್ಟ ಪಡಿಸುವ ಮೂಲಕ, ಪೋಷಕರ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

👉 👇 ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ಗೆ ಸೇರಿಕೊಳ್ಳಿ https://bit.ly/3aR8rtL


State

ಬೆಂಗಳೂರು : ನಿಗದಿಯಂತೆ ರಾಜ್ಯದಲ್ಲಿ ಜನವರಿ 1ರಿಂದಲೇ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಬದಲಾವಣೆ ಇಲ್ಲ. ಯಾವುದೇ ಗೊಂದಲಕ್ಕೂ ಪೋಷಕರು ಒಳಗಾಗಬಾರದು. ಈಗಾಗಲೇ ನಿರ್ಧರಿಸಿದಂತೆ ಜನವರಿ 1ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಗುತ್ತದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜನವರಿ 1ರಿಂದಲೇ ನಿಗದಿಯಂತೆ ಶಾಲಾ-ಕಾಲೇಜು ಆರಂಭಿಸಲಾಗುತ್ತಿದೆ. ಶಾಲೆ ಆರಂಭಿಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಲಾ ಆರಂಭದ ಬಗ್ಗೆ ಈಗಾಗಲೇ ನಿರ್ಧಾರ ಮಾಡಲಾಗಿದೆ. ಅದರಂತೆಯೇ ಜನವರಿ 1ರಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಲಾಗುತ್ತದೆ ಎಂದು ಸ್ಪಷ್ಟ ಪಡಿಸುವ ಮೂಲಕ, ಪೋಷಕರ ಗೊಂದಲಕ್ಕೆ ತೆರೆ ಎಳೆದಿದ್ದಾರೆ.


State

ಬೆಂಗಳೂರು : ಯುಕೆ ಕೊರೋನಾ ವೈರಸ್ ರೂಪಾಂತರದ ಭೀತಿಯ ನಡುವೆಯೂ ಶಾಲಾ-ಕಾಲೇಜು ಆರಂಭಿಸಬೇಕೋ ಬೇಡವೋ ಎನ್ನುವ ಬಗ್ಗೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ, ಗೃಹಸಚಿವರು ಹಾಗೂ ಶಿಕ್ಷಣ ಸಚಿವರು ಸೇರಿದಂತೆ ವಿವಿಧ ತಜ್ಞರ ಸಭೆ ಇಂದು ನಡೆಯಲಿದೆ. ಇಂತಹ ಸಭೆಯಲ್ಲಿ ಚರ್ಚಿಸಿದ ಬಳಿಕವೇ ಶಾಲಾ-ಕಾಲೇಜು ಆರಂಭದ ಬಗ್ಗೆ ಇಂದು ಭವಿಷ್ಯ ನಿರ್ಧಾರವಾಗಲಿದೆ. 

ಈ ಕುರಿತಂತೆ ಮಾಹಿತಿ ನೀಡಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಇದುವರೆಗೆ ರಾಜ್ಯಕ್ಕೆ ಯುಕೆಯಿಂದ ಬಂದಂತ 1614 ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ನಿನ್ನೆ ಸಂಜೆಯವರೆಗೆ ಪರೀಕ್ಷೆ ನಡೆಸಿದ ನಂತ್ರ ಸಿಕ್ಕ ವರದಿಯಂತೆ 26 ಜನರಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ ಎಂದು ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಂತ 26 ಜನರ ಕೋವಿಡ್ ಸ್ವ್ಯಾಬ್ ಮಾದರಿಯನ್ನು ನಿಮ್ಹಾನ್ಸ್ ಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಕೊರೋನಾ ರೂಪಾಂತರ ವೈರಸ್ ಬಗ್ಗೆಯೂ ಪರೀಕ್ಷೆ ನಡೆಯಲಿದೆ. ಅಲ್ಲಿನ ವರದಿಯನ್ನು ಎಸ್ಓಪಿ ಅನುಸಾರವಾಗಿ ಐಸಿಎಂಆರ್ ಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಂದಲೇ ಕೊರೋನಾ ರೂಪಾಂತರ ದೃಢಪಟ್ಟಿದ್ಯಾ ಎನ್ನುವ ಮಾಹಿತಿ ಹೊರ ಬೀಳಲಿದೆ ಎಂದರು.

ಈಗಾಗಲೇ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಂತ ಯುಕೆಯಿಂದ ಬಂದ 26 ಜನರನ್ನು ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ತೀವ್ರ ತರವಾದಂತ ತೊಂದರೆಯಿಲ್ಲ. ಚಿಕಿತ್ಸೆ ಮುಂದುವರೆದಿದೆ. ಕೋವಿಡ್ ರೂಪಾಂತರ ವೈರಸ್ ಪರೀಕ್ಷೆ ನಂತ್ರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದರು.

ಕೋವಿಡ್ ರೂಪಾಂತರ ವೈರಸ್ ಭೀತಿಯ ಹಿನ್ನಲೆಯಲ್ಲಿ ಜನವರಿ 1ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭ ಮಾಡಬೇಕೋ ಬೇಡವೋ ಎನ್ನುವ ಬಗ್ಗೆ ಇಂದು, ಗೃಹಸಚಿವರು, ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇಂದು ನಡೆಯುತ್ತಿರುವಂತ ಸಭೆಯಲ್ಲಿ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದರು.

👉 👇 ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ಗೆ ಸೇರಿಕೊಳ್ಳಿ https://bit.ly/3aR8rtL


State

ಬೆಂಗಳೂರು : ರಾಜ್ಯಕ್ಕೆ ಯುಕೆಯಿಂದ ಬಂದಂತ 1,614 ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 26 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಇದುವರೆಗೆ ರಾಜ್ಯಕ್ಕೆ ಯುಕೆಯಿಂದ ಬಂದಂತ 1614 ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ನಿನ್ನೆ ಸಂಜೆಯವರೆಗೆ ಪರೀಕ್ಷೆ ನಡೆಸಿದ ನಂತ್ರ ಸಿಕ್ಕ ವರದಿಯಂತೆ 26 ಜನರಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ ಎಂದು ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಂತ 26 ಜನರ ಕೋವಿಡ್ ಸ್ವ್ಯಾಬ್ ಮಾದರಿಯನ್ನು ನಿಮ್ಹಾನ್ಸ್ ಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಕೊರೋನಾ ರೂಪಾಂತರ ವೈರಸ್ ಬಗ್ಗೆಯೂ ಪರೀಕ್ಷೆ ನಡೆಯಲಿದೆ. ಅಲ್ಲಿನ ವರದಿಯನ್ನು ಎಸ್ಓಪಿ ಅನುಸಾರವಾಗಿ ಐಸಿಎಂಆರ್ ಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಂದಲೇ ಕೊರೋನಾ ರೂಪಾಂತರ ದೃಢಪಟ್ಟಿದ್ಯಾ ಎನ್ನುವ ಮಾಹಿತಿ ಹೊರ ಬೀಳಲಿದೆ ಎಂದರು.

ಈಗಾಗಲೇ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಂತ ಯುಕೆಯಿಂದ ಬಂದ 26 ಜನರನ್ನು ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ತೀವ್ರ ತರವಾದಂತ ತೊಂದರೆಯಿಲ್ಲ. ಚಿಕಿತ್ಸೆ ಮುಂದುವರೆದಿದೆ. ಕೋವಿಡ್ ರೂಪಾಂತರ ವೈರಸ್ ಪರೀಕ್ಷೆ ನಂತ್ರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದರು.

ಕೋವಿಡ್ ರೂಪಾಂತರ ವೈರಸ್ ಭೀತಿಯ ಹಿನ್ನಲೆಯಲ್ಲಿ ಜನವರಿ 1ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭ ಮಾಡಬೇಕೋ ಬೇಡವೋ ಎನ್ನುವ ಬಗ್ಗೆ ಇಂದು, ಗೃಹಸಚಿವರು, ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇಂದು ನಡೆಯುತ್ತಿರುವಂತ ಸಭೆಯಲ್ಲಿ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದರು.

👉 👇 ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ಗೆ ಸೇರಿಕೊಳ್ಳಿ https://bit.ly/3aR8rtL


State

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 911 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 9,16,256ಕ್ಕೆ ಏರಿಕೆಯಾಗಿದೆ. ಅಲ್ಲದೇ ಸೋಂಕಿತರಾದಂತ 11 ಜನರು ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 911 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 9,16,256ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 1,214 ಸೋಂಕಿತರು ಸೇರಿದಂತೆ ಇದುವರೆಗೆ 8,91,095 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 13,080 ಸಕ್ರೀಯ ಸೋಂಕಿತರಿರುವುದಾಗಿ ತಿಳಿಸಿದೆ.

ಇನ್ನೂ ಇಂದು ಬೆಂಗಳೂರು ನಗರದಲ್ಲಿ 8, ಕೋಲಾರದಲ್ಲಿ ಒಬ್ಬರು, ಮೈಸೂರು ಜಿಲ್ಲೆಯಲ್ಲಿ ಇಬ್ಬರು ಸೇರಿದಂತೆ ಒಟ್ಟು 11 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 12,062ಕ್ಕೆ ಏರಿಕೆಯಾಗಿದೆ ಎಂಬುದಾಗಿ ತಿಳಿಸಿದೆ.

👉 👇 ತಾಜಾ ಸುದ್ದಿಗಾಗಿ ನಮ್ಮ ‘WhatAapp ಗ್ರೂಪ್’‌ಗೆ ಸೇರಿಕೊಳ್ಳಿ https://bit.ly/3aR8rtL