Conference Call – Page 2 – #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
State

ಬೆಳಗಾವಿ: ಜಿಲ್ಲೆಯ ಮಾಲದಿನ್ನಿ ಕ್ರಾಸ್‌ ಬಳಿ ಘಟನೆ ರಮೇಶ್‌ ಜಾರಕಿಹೊಳೆ ಬೆಂಬಲಿಗರು ಸಿಡಿ ಬಯಲು ಮಾಡಿದ ದಿನೇಶ್‌ ಕಲ್ಲಹಳ್ಳಿ ವಿರುದ್ಧ ಪ್ರತಿಭಟನೆ ನಡೆಲಾಗ್ತಿದ್ದು, ಪ್ರತಿಭನೆಯಲ್ಲಿ ಜಾರಕಿಹೊಳೆ ಬೆಂಬಲಿಗನೊಬ್ಬ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಸಿದ್ದಾರೆ. ಆತನನ್ನ ಕೂಡಲೇ ವಶಕ್ಕೆ ಪಡೆದ ಪೊಲೀಸರು, ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಪ್ರತಿಭಟನೆ ರ್ಯಾಲಿ ಸುಮಾರು 10 ಕಿಲೋ ಮೀಟರ್‌ ನಡೆಯಲಿದ್ದು, ರ್ಯಾಲಿ ವೇಳೆ ಈ ಘಟನೆ ನಡೆದಿದೆ. ಇನ್ನು ಇತ್ತಾ ಗೋಕಕ್‌ʼನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬಸ್‌ ಸಂಚಾರ ಸ್ಥಗಿತವಾಗಿದೆ.

ಅಂಕೋಲಾದಲ್ಲಿ ಮನಕಲಕುವ ಘಟನೆ : ಆಂಬುಲೆನ್ಸ್ ಸಿಗದೇ ವೃದ್ಧ ರೋಗಿಯನ್ನು 5 ಕಿ.ಮೀ ಹೊತ್ತೊಯ್ದ ಕುಟುಂಬಸ್ಥರು!

ನಮ್ಮ ನಾಯಕ ರಮೇಶ್‌ ಜಾರಕಿಹೊಳೆಗೆ ಅನ್ಯಾಯ ಆಗಿದೆ. ಅವ್ರಿಗೆ ನ್ಯಾಯ ಸಿಗುವವರೆಗೆ ನಾವು ಉಗ್ರ ಹೋರಾಟ ನಡೆಸುತ್ತೇವೆ. ಅವ್ರ ಖಾತೆಯನ್ನ ಬೇರೆ ಯಾರಿಗೂ ನೀಡಬಾರದು ಎಂದು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲ್ಸವನ್ನ ಪ್ರತಿಭಟನೆಕಾರರು ಮಾಡುತ್ತಿದ್ದಾರೆ.‌

BREAKING : ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರ ಬೃಹತ್ ಪ್ರತಿಭಟನೆ : ಗೋಕಾಕ್ ನಲ್ಲಿ ಬಸ್ ಸಂಚಾರ ಬಂದ್


State

ಗೋಕಾಕ್ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಗೋಕಾಕ್ ನಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಬೆಂಬಲಿಗರು ಗೋಕಾಕ್ ನಗರದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿ ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಗೋಕಾಕ್ ನಲ್ಲಿ ಕಾಲೇಜುಗಳನ್ನು ಸಹ ಬಂದ್ ಮಾಡಲಾಗಿದೆ. ದಿಢೀರ್ ಬಸ್ ಸಂಚಾರದಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬಸ್ ಸಂಚಾರವಿಲ್ಲದೇ ಜನರು ನಡೆದುಕೊಂಡೇ ಊರುಗಳಿಗೆ ತೆರಳುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಏಳಿಗೆ ಯನ್ನು ಸಹಿಸದವರು ಸಿಡಿ ಪ್ರಕರಣದಲ್ಲಿ ಸಿಕ್ಕಿಹಾಕಿಸಲಾಗಿದೆ. ಸಿಡಿ ಬಿಡುಗಡೆ ಮಾಡಿದ ದಿನೇಶ್ ಕಲ್ಲಳ್ಳಿ ವಿರುದ್ಧ ಕ್ರಮ ಕೈಗೊಳ್ಳುಬೇಕು. ಸಚಿವ ಸ್ಥಾನವನ್ನು ಮತ್ತೆ ರಮೇಶ್ ಜಾರಕಿಹೊಳಿಗೆ ಮತ್ತೆ ನೀಡಬೇಕು. ಸಿಡಿ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.


State

ಬೆಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸಿ.ಎಂ. ಇಬ್ರಾಹಿಂ ಅವರು ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಅಂಕೋಲಾದಲ್ಲಿ ಮನಕಲಕುವ ಘಟನೆ : ಆಂಬುಲೆನ್ಸ್ ಸಿಗದೇ ವೃದ್ಧ ರೋಗಿಯನ್ನು 5 ಕಿ.ಮೀ ಹೊತ್ತೊಯ್ದ ಕುಟುಂಬಸ್ಥರು!

ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನಗರದ ಶಿವಾನಂದ ವೃತ್ತದ ಸಮೀಪವಿರುವ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಇಬ್ರಾಹಿಂ, ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಇಂದು ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ. ಜೆಡಿಎಸ್ ಸೇರುವ ಬಗ್ಗೆ ದೆಹಲಿಯಲ್ಲಿ ತೀರ್ಮಾನ ಆಗುತ್ತದೆ. ಸಮಯ ಸಿಕ್ಕಾಗ ದೆಹಲಿಗೆ ಹೋಗಿ ಬರುತ್ತೇನೆ ಎಂದರು.


State

ಅಂಕೋಲಾ : ಆಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ವೃದ್ಧ ರೋಗಿಯೋರ್ವನನ್ನು ಕುಟುಂಬಸ್ಥರು 5 ಕಿಲೋಮೀಟರ್ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ವರೀಬೇಣ ಗ್ರಾಮದಲ್ಲಿ ನಡೆದಿದೆ.

‘ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆ’ಯಡಿಯಲ್ಲಿ ನಿಮಗೆ ಉದ್ಯೋಗ ಲಭಿಸಲಿದೆ ಅಂತ ಕರೆ ಬಂದಿದ್ಯಾ? ಹಾಗಾದ್ರೇ ಇಲ್ಲಿದೆ ನೋಡಿ ನೈಜ ಮಾಹಿತಿ

ವರೀಲಬೇಣ ಗ್ರಾಮದ ನೂರಾ ಪೊಕ್ಕ ಗೌಡ (70) ಎಂಬುವರು ಪಾರ್ಶವಾಯುಗೆ ತುತ್ತಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಿತ್ತು. ಆದರೆ ವರೀಲಬೇಣದಲ್ಲಿ ರಸ್ತೆ ಸಮರ್ಪಕವಾಗಿ ಇಲ್ಲದ ಕಾರನ ಐದು ಕಿ.ಮೀ ದೂರು ಇರುವ ಅಂಕೋಲ ನಗರಕ್ಕೆ ಕುರ್ಚಿಯಲ್ಲಿ ಕೂರಿಸಿ ಕುಟಂಬದವರು ಹೊತ್ತು ಸಾಗಿದ್ದಾರೆ. ಬಳಿಕ ಖಾಸಗಿ ವಾಹನ ಮಾಡಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

Big Update: ಏಪ್ರಿಲ್ 1 ರಿಂದ ಎಲ್ಲಾ ಕಾರುಗಳ ಪ್ರಯಾಣಿಕರ ಮುಂಭಾಗದ ಸೀಟುಗಳಿಗೆ ‘ಏರ್ ಬ್ಯಾಗ್ ಕಡ್ಡಾಯ’..!

ಜಿಲ್ಲೆಯಲ್ಲಿ ಕೇವಲ 8 ಆಂಬುಲೆನ್ಸ್ ಗಳಲ್ಲಿ ಎಂಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದು,ಇದರಿಂದಾಗಿ ಹಳ್ಳಿಯ ರೋಗಿಗಳು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.


State

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 16,838 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 1,11,73,761 ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ನಿನ್ನೆ ಒಂದೇ ದಿನ ಕೊರೊನಾ ಸೋಂಕಿಗೆ 113 ಮಂದಿ ಬಲಿಯಾಗಿದ್ದು, ಈ ಮೂಲಕ ಕೊರೊನಾ ಮಹಾಮಾರಿಗೆ ಸಾವನ್ನಪ್ಪಿದವರ ಸಂಖ್ಯೆ 1,57,548 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಪೈಕಿ 1,08,39,894 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 1,76,319 ಕೋವಿಡ್ ಸಕ್ರಿಯ ಪ್ರಕರಣಗಳಿವೆ.


India

ನವದೆಹಲಿ : ರೈಲು ಪ್ರಯಾಣಿಕರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ರೈಲ್ ಟೆಲ್ ಗುರುವಾರ ಅಧಿಕೃತವಾಗಿ ತನ್ನ ಪೇಯ್ಡ್ ವೈ-ಫೈ ಸೇವೆ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ದೇಶದ 4,000 ರೈಲ್ವೆ ನಿಲ್ದಾಣಗಳಲ್ಲಿ ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ ದೊರೆಯಲಿದೆ.

ಈಗಾಗಲೇ ದೇಶದ 5,950 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ರೈಲ್ ಟೆಲ್ ಉಚಿತ ವೈ-ಫೈ ಸೇವೆಯನ್ನು ಒದಗಿಸಿದ್ದು, ಒಟಿಪಿ ಆಧಾರಿತ ವೆರಿಫಿಕೇಷನ್ ನಂತರ ಸ್ಮಾರ್ಟ್ ಫೋನ್ ಮತ್ತು ಸಕ್ರಿಯ ಸಂಪರ್ಕ ಹೊಂದಿರುವ ವರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಈ ಪ್ರೀಪೇಯ್ಡ್ ಪ್ಲಾನ್ ಗಳನ್ನು ಲಾಂಚ್ ಮಾಡುವ ಮೂಲಕ, ಪ್ರಯಾಣಿಕನು 1 mbps ವೇಗದಲ್ಲಿ ದಿನಕ್ಕೆ 30 ನಿಮಿಷಗಳ ಉಚಿತ ವೈ-ಫೈ ಅನ್ನು ಬಳಸಬಹುದಾಗಿದೆ. ಆದರೆ 34mbps ವರೆಗಿನ ಹೆಚ್ಚಿನ ವೇಗಕ್ಕಾಗಿ, ಬಳಕೆದಾರನು ನಾಮಮಾತ್ರ ಶುಲ್ಕದಲ್ಲಿ ಒಂದು ಯೋಜನೆಯನ್ನು ಆಯ್ಕೆ ಮಾಡಬೇಕಾಗುತ್ತದೆ.

ಪ್ಲಾನ್ ಗಳಲ್ಲಿ ಒಂದು ದಿನದಲ್ಲಿ 5 ಜಿಬಿ ಡೇಟಾಕ್ಕೆ ₹ 10, ದಿನಕ್ಕೆ 10 ಜಿಬಿ ಡೇಟಾಕ್ಕೆ ₹ 15, ಐದು ದಿನಗಳಿಗೆ 10 ಜಿಬಿ ಡೇಟಾ, ₹ 20, 5 ದಿನ ಗಳಿಗೆ 30 ಜಿಬಿ ಡೇಟಾ, ₹ 40, 10 ದಿನಕ್ಕೆ 40 ಜಿಬಿ ಡೇಟಾ ಮಾನ್ಯ, ₹ 50 ರಿಂದ 30 ಜಿಬಿ ಡೇಟಾ 10 ದಿನ ಗಳಿಗೆ ಮಾನ್ಯ, ₹ 70 60 ಜಿಬಿ ಡೇಟಾ 30 ದಿನಗಳ ವ್ಯಾಲಿಡಿಟಿ ಹೊಂದಿದೆ.


State

ಬೆಂಗಳೂರು : ಟೋಲ್ ಶುಲ್ಕ, ಹಳೆ ವಾಹನ ವಿಲೇವಾರಿ ನೀತಿ, ಮೋಟಾರು ಕಾಯ್ದೆ ಉಲ್ಲಂಘನೆ ದಂಡ ಹೆಚ್ಚಳ, ಡೀಸೆಲ್ ದರ ಹೆಚ್ಚಳ ಸೇರಿದಂತೆ ಕೇಂದ್ರ ಸರ್ಕಾರ ಸಾರಿಗೆ ವಿರೋಧಿ ನೀತಿಗಳನ್ನು ಖಂಡಿಸಿ ಏಪ್ರಿಲ್ 5 ರಿಂದ ದೇಶವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಫೆಡರೇಷನ್ ಅಧ್ಯಕ್ಷ ಬಿ. ಚನ್ನಾರೆಡ್ಡಿ ತಿಳಿಸಿದ್ದಾರೆ.

ಕೃಷಿ ಸಾಲ : ರೈತ ಸಮುದಾಯಕ್ಕೆ ಮತ್ತೊಂದು ಶುಭಸುದ್ದಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ನಿಂದ ಸರಕು ಸಾಗಣೆ ವಲಯ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ತೈಲ ಬೆಲೆ ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ಹಿಂದಿನ 6 ತಿಂಗಳಲ್ಲಿ ಡೀಸೆಲ್ ಬೆಲೆ 20.42 ರೂ. ರಷ್ಟು ಹೆಚ್ಚಳ ಕಂಡಿದೆ. ಸಾರಿಗೆ ನೀತಿಗಳನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದರು.


State

ಬೆಂಗಳೂರು : ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಕೆನರಾ ಬ್ಯಾಂಕ್ ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡಲು ಕೃಷಿ ಸಾಲ ಕೇಂದ್ರಗಳನ್ನು ಆರಂಭಿಸಿದೆ.

ಪದವಿ ಮುಗಿಯುವವರೆಗೂ ಮಕ್ಕಳ ಪೋಷಣೆ ಮಾಡಬೇಕು: ಪ್ರಕಣವೊಂದರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಹೌದು, ಕರ್ನಾಟಕ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಹರಿಯಾಣ ರಾಜ್ಯಗಳ ತಲಾ ಒಂದೊಂದು ಶಾಖೆಗಳಲ್ಲಿ ಕೃಷಿ ಸಾಲ ಕೇಂದ್ರಗಳನ್ನು ಕೆನರಾ ಬ್ಯಾಂಕ್ ತೆರೆದಿದೆ. ಕರ್ನಾಟಕದಲ್ಲಿ ತುಮಕೂರಿನ ಬಿ.ಎಚ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಆರ್ ಎಎಚ್ ಶಾಖೆಯಲ್ಲಿ ಕೃಷಿ ಸಾಲ ಕೇಂದ್ರವನ್ನು ಆರಂಭಿಸಲಾಗಿದೆ.

ಟರ್ಕಿಯಲ್ಲಿ ಸೇನಾ ಹೆಲಿಕ್ಟಾಪರ್ ಪತನ : 11 ಮಂದಿ ಸೇನಾ ಸಿಬ್ಬಂದಿ ಸಾವು

ಬ್ಯಾಂಕುಗಳಲ್ಲಿ ಕೃಷಿ ಸಾಲ ನೀಡಿಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ಕೃಷಿ ಸಾಲ ಕೇಂದ್ರ ಗಳನ್ನು ಆರಂಭಿಸಿದೆ. ಈ ಕೇಂದ್ರಗಳಲ್ಲಿ ವ್ಯವಸ್ಥಾಪಕರು ಸೇರಿದಂತೆ 5-6 ಮಂದಿ ಕೃಷಿ ಅಧಿಕಾರಿಗಳಿದ್ದು, ಕೃಷಿ ಸಾಲಕ್ಕೆ ಸಂಬಂಧಿಸಿದ ಕಾರ್ಯಕ್ಕೆ ಮೀಸಲಾಗಿರುಉತ್ತಾರೆ. ಹೀಗಾಗಿ ರೈತರಿಗೆ ಸಾಲ ನೀಡುವ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ.


World

ಅಂಕಾರಾ : ಪೂರ್ವ ಟರ್ಕಿಯಲ್ಲಿ ಗುರುವಾರ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, 11 ಮಂದಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಹಜ್ ಯಾತ್ರಾರ್ಥಿಗಳಿಗೆ `ಕೋವಿಡ್’ ಲಸಿಕೆ ಕಡ್ಡಾಯ

ಘಟನೆಯಲ್ಲಿ ಸೇನೆಯ ಲೆಫ್ಟೆನೆಂಟ್ ಜನರಲ್ ಉಸ್ಮಾನ್ ಎರ್ಬಾಸ್ ಸೇರಿ 11 ಮಂದಿ ಮೃತಪಟ್ಟಿದ್ದು,ಇಬ್ಬರು ಗಾಯಗೊಂಡಿದ್ದಾರೆ. ಬಿಂಗಾಲ್ ಪ್ರದೇಶದಿಂದ ಹಾರಾಟ ಆರಂಭಿಸಿದ್ದ ಹೆಲಿಕಾಪ್ಟರ್ ಮಧ್ಯಾಹ್ನ 2.25ಕ್ಕೆ ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಕರಾವಳಿ ಪ್ರದೇಶಗಳಲ್ಲಿ ಬಳಕೆಯಾಗುವ ಕೂಗರ್ ರೀತಿಯ ಹೆಲಿಕಾಪ್ಟರ್ ತತ್ವಾನ್ ಪಟ್ಟಣದ ಸಮೀಪ ಪತನಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

BIGG NEWS : ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯ ನೀಡುವಂತೆ ಆದೇಶಿಸಿ ರಾಜ್ಯ ಸರ್ಕಾರದಿಂದ ಆದೇಶ


World

ನವದೆಹಲಿ : ಕೆಲವೇ ದಿನಗಳಲ್ಲಿ ಹಜ್ ಯಾತ್ರೆ ಆರಂಭವಾಗಲಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಈ ಬಾರಿ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಸೌದಿ ಆರೋಗ್ಯ ಸಚಿವಾಲಯ ಘೋಷಿಸಿದೆ.

BIGG NEWS : ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯ ನೀಡುವಂತೆ ಆದೇಶಿಸಿ ರಾಜ್ಯ ಸರ್ಕಾರದಿಂದ ಆದೇಶ

ಹಜ್ ಯಾತ್ರೆಗೆ ಹೋಗುವವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ಬಗ್ಗೆ ಸೌದಿ ಸರ್ಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೌದಿ ಅರೇಬಿಯಾ ಆರೋಗ್ಯ ಸಚಿವಾಲಯ ಘೋಷಿಸಿದೆ.

BREAKING : ಡ್ರಗ್ಸ್ ಸರಬರಾಜು ಆರೋಪ : ಬೆಳ್ಳಂಬೆಳ್ಳಗ್ಗೆ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರ ದಾಳಿ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಬಾರಿಯ ಹಜ್ ಯಾತ್ರೆಗೆ ಸೀಮಿತ ಸಂಖ್ಯೆ ಸೌದಿ ನಿವಾಸಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಹಜ್ ಯಾತ್ರೆಗೆ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ ನೀಡಲಾಗಿದೆ.


State

ಬೆಂಗಳೂರು :  ಮಧ್ಯಾಹ್ನ ಉಪಹಾರ ಯೋಜನೆಯಡಿ 2020-21 ನೇ ಸಾಲಿನಲ್ಲಿ ಕೋವಿಡ್ 19 ವೈರಾಣು ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಾಗಿ ಆಹಾರ  ಧಾನ್ಯಗಳನ್ನು ನೀಡುವಂತ ಆದೇಶಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

BREAKING : ಡ್ರಗ್ಸ್ ಸರಬರಾಜು ಆರೋಪ : ಬೆಳ್ಳಂಬೆಳ್ಳಗ್ಗೆ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರ ದಾಳಿ

ಹೌದು, ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 2020 ರಿಂದ ಏಪ್ರಿಲ್  2021 ರ ಮಾಹೆಯ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದ 132 ಶಾಲಾ ದಿನಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ನಿಗದಿತ ಪ್ರಮಾಣದಲ್ಲಿ ವಿತರಣೆ ಮಾಡಲು ಸೂಚಿಸಿ ವಿ ಅನ್ಬುಕುಮಾರ್ , ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಆದೇಶ ಹೊರಡಿಸಿದ್ದಾರೆ.

ಅಹಾರ ಧಾನ್ಯಗಳಾದ ಅಕ್ಕಿ ಮತ್ತು ಗೋಧಿಯೊಂದಿಗೆ, ಪ್ರತಿ ವಿದ್ಯಾರ್ಥಿಗೆ ನಿಗದಿಪಡಿಸಿರುವ ಪರಿವರ್ತನಾ ವೆಚ್ಚಕ್ಕೆ ಅನುಗುಣವಾಗಿ ಆಹಾರ ಸಾಮಗ್ರಿಗಳಾದ ತೊಗರಿಬೇಳೆ, ಖಾದ್ಯತೈಲ, ಆಯೋಡಿಕರಿಸಿದ ಉಪ್ಪು ಇವುಗಳನ್ನು 1 ರಿಂದ 10 ನೇ ತರಗತಿವರೆಗಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ತರಗತಿಯ ದಾಖಲಾತಿಗನುಗುಣವಾಗಿ ವಿತರಿಸಲು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಶಾಲಾ ಮುಖ್ಯಸ್ಥರು ಕೆಲವು ಮಾರ್ಗಸೂಚಿಯಂತೆ ಅಗತ್ಯ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ.


State

ಬೆಂಗಳೂರು : ಸೆಲಿಬ್ರಿಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಡ್ರಗ್ಸ್ ಸರಬರಾಜು ಆರೋಪದ ಹಿನ್ನೆಲೆಯಲ್ಲಿ ಗೋವಿಂದಪುರ ಪೊಲೀಸರು ಈ ದಾಳಿ ನಡೆಸಿದ್ದು, ಸಂಜಯ್ ನಗರದಲ್ಲಿರುವ ಮಸ್ತಾನ್ ಮನೆ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ಮತ್ತೊಂದಡೆ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.


Business India

ನವದೆಹಲಿ: ನೀವು ಪೋಸ್ಟ್ ಆಫೀಸ್‌ನಲ್ಲಿ ಖಾತೆಯನ್ನು ಹೊಂದಿದ್ದರೆ ನಿಮಗಾಗಿ ಒಂದು ಪ್ರಮುಖ ಮಾಹಿತಿ ಇಲ್ಲಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕುಗಳು ಈಗ ಎಇಪಿಎಸ್ (ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ವಾಪಸಾತಿ, ಠೇವಣಿ ಮತ್ತು ಶುಲ್ಕ ವಿಧಿಸಲು ನಿರ್ಧರಿಸಿದೆ. ಹೊಸ ನಿಯಮವನ್ನು 1 ಏಪ್ರಿಲ್ 2021 ರಿಂದ ಜಾರಿಗೆ ತರಲಾಗುವುದು ಎನ್ನಲಾಗಿದ್ದು. ನೀವು ಮೂಲ ಉಳಿತಾಯ ಖಾತೆಯನ್ನು ಹೊಂದಿದ್ದರೆ ಪ್ರತಿ ತಿಂಗಳು ನಾಲ್ಕು ಬಾರಿ ಹಿಂತೆಗೆದುಕೊಳ್ಳುವುದು ಉಚಿತವಾಗಿ ನೀಡಲಾಗುತ್ತದೆ. ಅದರ ನಂತರ, ಪ್ರತಿ ವಹಿವಾಟಿನ ಮೇಲೆ ಕನಿಷ್ಠ 25 ರೂಪಾಯಿಗಳು ಅಥವಾ ಶೇಕಡಾ 0.50 ರಷ್ಟು ಮೌಲ್ಯವನ್ನು ಶುಲ್ಕವಾಗಿ ಪಡೆದುಕೊಳ್ಳಲಾಗುತ್ತದೆಯಂತೆ.

Whats App `ಡೆಸ್ಕ್ ಟಾಪ್’ ಬಳಕೆದಾರರಿಗೆ ಗುಡ್ ನ್ಯೂಸ್ : ವಾಯ್ಸ್, ವಿಡಿಯೋ ಕಾಲಿಂಗ್ ಫೀಚರ್ ರಿಲೀಸ್

ಮೂಲ ಉಳಿತಾಯ ಖಾತೆಗಳಲ್ಲಿ ಠೇವಣಿ ಇರಿಸಲು ಯಾವುದೇ ಶುಲ್ಕವಿರುವುದಿಲ್ಲ. ಆದರೆ ಅಂಚೆ ಕಚೇರಿಯಲ್ಲಿ ಉಳಿತಾಯ (ಮೂಲ ಉಳಿತಾಯ ಖಾತೆ ಹೊರತುಪಡಿಸಿ) ಅಥವಾ ಚಾಲ್ತಿ ಖಾತೆ ಇದ್ದರೆ, ಒಂದು ತಿಂಗಳಲ್ಲಿ 25000 ಸಾವಿರದವರೆಗೆ ಹಿಂಪಡೆಯುವುದು ಉಚಿತವಾಗಿದ್ದು . 25000ದ ಮಿತಿಯನ್ನು ದಾಟಿದ ನಂತರ, ಪ್ರತಿ ವಹಿವಾಟಿನಲ್ಲೂ ಶೇಕಡಾ 0.50 ರಷ್ಟು ಮೌಲ್ಯ ಅಥವಾ ಕನಿಷ್ಠ 25 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇನ್ನೂ ಖಾತೆಯಲ್ಲಿ ಠೇವಣಿ ಇಡಲು ಹೋದರೆ, ಅದಕ್ಕೂ ಒಂದು ಮಿತಿ ಇದ್ದು. ಪ್ರತಿ ತಿಂಗಳು 10 ಸಾವಿರ ರೂಪಾಯಿಗಳವರೆಗೆ ಉಚಿತವಾಗಿ ಠೇವಣಿ ಇಡಬಹುದು. ಅದಕ್ಕಿಂತ ಹೆಚ್ಚಿನದನ್ನು ಠೇವಣಿ ಮಾಡಲು, ಪ್ರತಿ ವಹಿವಾಟಿನಲ್ಲಿ 0.50 ಪ್ರತಿಶತದಷ್ಟು ಮೌಲ್ಯ ಅಥವಾ ಕನಿಷ್ಠ 25 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರದಲ್ಲೇ ರೈತರಿಗೆ ರಸಗೊಬ್ಬರ ಸಬ್ಸಿಡಿ ನೇರ ವರ್ಗಾವಣೆ

ಅನಿಯಮಿತ ವಹಿವಾಟುಗಳು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ನೆಟ್‌ವರ್ಕ್‌ನಲ್ಲಿ ಸಂಪೂರ್ಣವಾಗಿ ಉಚಿತವಾಗಿದೆ. ಐಪಿಪಿಬಿ ಅಲ್ಲದ ನೆಟ್‌ವರ್ಕ್‌ಗಳಲ್ಲಿ ತಿಂಗಳಿಗೆ ಮೂರು ವಹಿವಾಟುಗಳು ಉಚಿತವಾಗಿದ್ದು. ಇದರಲ್ಲಿ ಹಣವನ್ನು ಠೇವಣಿ ಇಡುವುದು, ಹಿಂತೆಗೆದುಕೊಳ್ಳುವುದು ಮತ್ತು ಮಿನಿ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವುದು ಸೇರಿದೆ. ಅದರ ನಂತರ ವಹಿವಾಟಿನ ಮೇಲೆ ಶುಲ್ಕವನ್ನು ನಿಮ್ಮ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಉಚಿತ ಮಿತಿ ಪೂರ್ಣಗೊಂಡ ನಂತರ, ಎಲ್ಲಾ ವಹಿವಾಟುಗಳಿಗೆ ಹಣವನ್ನು ಠೇವಣಿ ಇರಿಸಲು 20 ರೂ. ಹಿಂಪಡೆಯುವಿಕೆಯ ಮೇಲೂ ವಹಿವಾಟು ಶುಲ್ಕ 20 ರೂ ದಂಡ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.

ಈ ಅಧಿಸೂಚನೆಯನ್ನು ಇಂಡಿಯಾ ಪೋಸ್ಟ್ ಮಾರ್ಚ್ 1 ರಂದು ನೀಡಿದೆ. ಈ ಬಗ್ಗೆ ಗ್ರಾಹಕರಿಗೆ ಸಂದೇಶದ ಮೂಲಕ ತಿಳಿಸಲಾಗಿದೆ.


India

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ವಾಟ್ಸಾಪ್ ತನ್ನ ಡೆಸ್ಕ್ ಟಾಪ್ ಅಪ್ಲಿಕೇಶನ್ ಆವೃತ್ತಿಗಾಗಿ ಎಂಡ್-ಟು ಎಂಡ್ ಎನ್ಕ್ರಿಪ್ಟೆಡ್ ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ಘೋಷಿಸಿದೆ. ಈ ಮೂಲಕ ನಿಮ್ಮ ಕಂಪ್ಯೂಟರ್ ನಲ್ಲಿ ಅಪ್ಲಿಕೇಶನ್ ಈಗ ವಾಟ್ಸಾಪ್ ಡೌನ್ ಲೋಡ್ ಮಾಡಿಕೊಂಡು, ನೀವು ವಾಯ್ಸ್ ಹಾಗೂ ವೀಡಿಯೋ ಕರೆಗಳನ್ನು ಕೂಡ ಮಾಡಬಹುದಾಗಿದೆ. ಅದೇಗೆ ಅಂತ ಮುಂದೆ ಓದಿ..

ಬಿಜೆಪಿ ‘ಏಜೆಂಟ್’ರಂತೆ ಸ್ಪೀಕರ್ ವರ್ತನೆ – ಸದನದಿಂದ ಸಸ್ಪೆಂಡ್ ಮಾಡಿದ್ದಕ್ಕೆ ಶಾಸಕ ಬಿ.ಕೆ.ಸಂಗಮೇಶ್ ಕಿಡಿ

ಬಹು ನಿರೀಕ್ಷೆಗಳ ನಂತರ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ಗುರುವಾರ ತನ್ನ ಡೆಸ್ಕ್ ಟಾಪ್ ಆಪ್ ಗೆ ವಾಯ್ಸ್ ಮತ್ತು ವಿಡಿಯೋ ಕಾಲ್ ಸಪೋರ್ಟ್ ಅನ್ನು ಬಿಡುಗಡೆ ಮಾಡಿದೆ.

ಈ ಕುರಿತಂತೆ ಇಂದು ಇಂದು ಟ್ವೀಟ್ ಮಾಡಿರುವ ವಾಟ್ಸಾಪ್, ತನ್ನ ಡೆಸ್ಕ್ ಟಾಪ್ ಆಪ್ ಆವೃತ್ತಿಗಾಗಿ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ವಾಯ್ಸ್ ಮತ್ತು ವಿಡಿಯೋ ಕರೆಗಳನ್ನು ಘೋಷಿಸಿದೆ ಮತ್ತು ನಿಮ್ಮ ಕಂಪ್ಯೂಟರ್ ನಲ್ಲಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಲಿಂಕ್ ಅನ್ನು ಸಹ ಹಂಚಿಕೊಂಡಿದೆ.

‘ಕೆಲವೊಮ್ಮೆ ನಿಮಗೆ ಸ್ವಲ್ಪ ಹೆಚ್ಚು ಜಾಗ ಬೇಕು. ಸುರಕ್ಷಿತ ಮತ್ತು ವಿಶ್ವಾಸಾರ್ಹ, ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ವಾಯ್ಸ್ ಮತ್ತು ವಿಡಿಯೋ ಕರೆಗಳು ಈಗ ನಮ್ಮ ಡೆಸ್ಕ್ ಟಾಪ್ ಆಯಪ್ ನಲ್ಲಿ ಲಭ್ಯವಿದೆ’ ಎಂದು ಫೇಸ್ ಬುಕ್ ಮಾಲೀಕತ್ವದ ಮೆಸೆಜಿಂಗ್ ಆಪ್ ಟ್ವೀಟ್ ನಲ್ಲಿ ತಿಳಿಸಿದೆ.

ಒಟಿಟಿ ಹೊಸ ಮಾರ್ಗಸೂಚಿಗಳನ್ನ ಸಲ್ಲಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ..!

ಮ್ಯಾಕ್ ಮತ್ತು ವಿಂಡೋಸ್ ನ ಸುಮಾರು ಐದು ವರ್ಷಗಳ ಡೆಸ್ಕ್ ಟಾಪ್ ಅಪ್ಲಿಕೇಶನ್ ಈಗ ಕೇವಲ ಒನ್ ಟು ಒನ್ ಕರೆಗಳನ್ನು ಮಾತ್ರ ಬೆಂಬಲಿಸುತ್ತದೆ ಎಂದು ವಾಟ್ಸಾಪ್ ಹೇಳಿದೆ, ಆದರೆ ಗ್ರೂಪ್ ವಾಯ್ಸ್ ಮತ್ತು ವೀಡಿಯೋ ಕರೆಗಳನ್ನು ‘ಭವಿಷ್ಯದಲ್ಲಿ’ ಸೇರಿಸಲು ಈ ವೈಶಿಷ್ಟ್ಯವನ್ನು ವಿಸ್ತರಿಸಲಿದೆ ಎಂದು ವರದಿಗಳು ತಿಳಿಸಿವೆ.

ಈ ಹಿಂದೆ, ತ್ವರಿತ ಸಂದೇಶ ಅಪ್ಲಿಕೇಶನ್ ನ ಬೀಟಾ ಆವೃತ್ತಿಯಲ್ಲಿ ಎಲ್ಲಾ ಹೊಸ ವೈಶಿಷ್ಟ್ಯಗಳು ಮತ್ತು ವರ್ಧನೆಗಳನ್ನು ಟ್ರ್ಯಾಕ್ ಮಾಡುವ ವೆಬ್ ಸೈಟ್ WABetaInfo, ವಾಟ್ಸಾಪ್ ವೆಬ್ ನ ಚಾಟ್ ಹೆಡರ್ ನಲ್ಲಿ ವಾಯ್ಸ್-ಕಾಲಿಂಗ್ ಮತ್ತು ವೀಡಿಯೊ-ಕಾಲಿಂಗ್ ಎರಡೂ ಆಯ್ಕೆಗಳ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿತ್ತು.

BIG NEWS : ‘EPF ಗ್ರಾಹಕ’ರಿಗೆ ಗುಡ್ ನ್ಯೂಸ್ : ಇಪಿಎಫ್ ಠೇವಣಿಗಳ ಮೇಲಿನ ‘ಬಡ್ಡಿದರ ಶೇ.8.5’ರಷ್ಟು ಮುಂದುವರಿಕೆ

ಕರೆಗಳನ್ನು ಸ್ವೀಕರಿಸುವಾಗ, ಪ್ರತಿ ಬಾರಿ ಯಾರಾದರೂ ಕರೆ ಮಾಡಿದಾಗಲೆಲ್ಲ ವಾಟ್ಸಾಪ್ ವೆಬ್ ಬಳಕೆದಾರರು ಪಾಪ್ ಅಪ್ ಅನ್ನು ಪಡೆಯುತ್ತಾರೆ ಎಂದು ವರದಿ ಹೇಳಿದೆ.

ಈ ಪಾಪ್ ಅಪ್ ಕರೆಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಕಾಲರ್ ಐಡಿ ಮತ್ತು ಎರಡು ಬಟನ್ ಗಳಂತಹ ಕೆಲವು ಮೂಲ ವಿವರಗಳನ್ನು ಹೊಂದಿದೆ. ಒಮ್ಮೆ ಸ್ವೀಕೃತವಾದ ನಂತರ ಅಥವಾ ಬಳಕೆದಾರನು ಕರೆಯಲ್ಲಿದ್ದಾಗ, ಪಾಪ್ ಅಪ್ ಅನ್ನು ಕಡಿಮೆ ಗೊಳಿಸಲಾಗುತ್ತದೆ, ಕರೆಯನ್ನು ಕತ್ತರಿಸಲು ಅಥವಾ ವೀಡಿಯೊ ಕರೆಗೆ ಅಥವಾ ವೀಡಿಯೊ ಕರೆಗೆ ಬದಲಾಯಿಸುವ ಆಯ್ಕೆಯೊಂದಿಗೆ ಪಾಪ್ ಅಪ್ ಅನ್ನು ಕಡಿಮೆ ಗೊಳಿಸಲಾಗುತ್ತದೆ.


India

ನವದೆಹಲಿ : ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಸಗೊಬ್ಬರ ಖರೀದಿಸುವ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಕಾರ್ಖಾನೆಗೆ ಭೇಟಿ ನೀಡಿ ಪುನಶ್ಚೇತನ ಕಾಮಗಾರಿ ಪ್ರಗತಿ ಪರಿಶಿಲಿಸಿದ ನಂತರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸದಾನಂದಗೌಡ ಅವರು, ರಸಗೊಬ್ಬರ ಸಬ್ಸಿಡಿಯನ್ನು ರೈತರಿಗೆ ಉತ್ಪಾದಕರ ಮೂಲಕ ನೀಡಲಾಗುತ್ತಿತ್ತು. ಇದರ ಬದಲಿಗೆ ಇನ್ನುಮುಂದೆ ರಸಗೊಬ್ಬರ ಖರೀದಿಸುವ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು. ಈ ಬಗ್ಗೆ ಇಲಾಖೆಯು ತಾಂತ್ರಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ  ಎಂದು ತಿಳಿಸಿದ್ದಾರೆ.


State

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟ : ಉಪವಾಸ ಸತ್ಯಾಗ್ರಹ ಮುಂದೂಡಿಕೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕಿಯರ ಕೆಲವು ಬೇಡಿಕೆಗಳನ್ನು ಈಡೇರಿಸಬಹುದು. ಆದರೆ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಕೆಲ ಬೇಡಿಕೆಗಳಿವೆ. ಶೀಘ್ರವೇ ಬೇಡಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ `ಕೋವಿಡ್’ ಲಸಿಕೆ : ಸಚಿವ ಡಾ.ಕೆ ಸುಧಾಕರ್

ಅಂಗನವಾಡಿ ಕಾರ್ಯಕರ್ತೆಯರ ಮುಖಂಡರ ಜೊತೆ ಚರ್ಚೆ ಮಾಡಿದ್ದು, ರಾಜ್ಯ ಸರ್ಕಾರದ ಮಟ್ಟದಲ್ಲಿ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.


State

ಬೆಂಗಳೂರು : ಮಾರ್ಚ್ 5 ರಿಂದ ಕರೆ ನೀಡಿದ್ದ ಪಂಚಮಸಾಲಿ ಉಪವಾಸ ಸತ್ಯಾಗ್ರಹವನ್ನು ಮುಂದೂಡಲಾಗಿದೆ. ಸದ್ಯಕ್ಕೆ ಉಪವಾಸ ಸತ್ಯಾಗ್ರಹ ಮಾಡುವುದಿಲ್ಲ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ `ಕೋವಿಡ್’ ಲಸಿಕೆ : ಸಚಿವ ಡಾ.ಕೆ ಸುಧಾಕರ್

ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಸಿಎಂ ಯಡಿಯೂರಪ್ಪ ತಮ್ಮ ಪರಮಾಧಿಕಾರ ಬಳಸಿ ಮೀಸಲಾತಿ ಬೇಡಿಕೆಯನ್ನು ಈಡೇರಿಸಬೇಕು. ನಮ್ಮ ಬೇಡಿಕೆ ಈಡೇರುವವರೆಗೂ ಫ್ರೀಡಂಪಾರ್ಕ್ ನಲ್ಲಿ ಧರಣಿ ಮುಂದುವರೆಯಲಿದೆ ಎಂದರು.

ಸಮುದಾಯದ ಶಾಸಕರು ಪಕ್ಷಬೇಧ ಮರೆತು ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕು. ನಮ್ಮ ಬೇಡಿಕೆಗಳು ಈಡೇರಿದಿದ್ದರೆ ಕೊನೆಯ ಘಟ್ಟವಾಗಿ ಅಮರಣಾಂತ ಉಪವಾಸಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


State

ಬೆಂಗಳೂರು : ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಶೀಘ್ರದಲ್ಲೇ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಪಡಿತರ ಚೀಟಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೆಚ್ಚು ಜನರು ಕೊರೊನಾ ಲಸಿಕೆ ಪಡೆಯಲು ಅನುಕೂಲವಾಗುವಂತೆ, ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಆಧಾರದಲ್ಲಿ ಕೋವಿಡ್ ಪಿಎಚ್ ಸಿ ಮತ್ತು ಸಿಎಸ್ ಸಿಗಳಲ್ಲೂ ಕೋವಿಡ್ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಇನ್ಮುಂದೆ ‘ಸಿಎಂ ಕಚೇರಿ’ಗೆ ‘ಕಡತ ಸಲ್ಲಿಕೆ’ಗೆ ಈ ನಿಯಮ ಪಾಲನೆ ಕಡ್ಡಾಯ : ನೌಕರರ ‘ವರ್ಗಾವಣೆ’ಗೂ ಅನುಮತಿಗೆ ಸಿಎಂ ಯಡಿಯೂರಪ್ಪ ಖಡಕ್ ಸೂಚನೆ!


State

ನವದೆಹಲಿ : ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು ಗಮನಿಸಬಹುದಾಗಿದೆ. ಸರ್ಕಾರದ ವಿತರಣಾ ವ್ಯವಸ್ಥೆಯಡಿ ಗೋಧಿ, ಅಕ್ಕಿ, ಇತ್ಯಾದಿಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಜನತೆಗೆ ನೀಡುತ್ತದೆ ಕೂಡ.

ಆದರೆ ಇತ್ತೀಚಿನ ದಿನದಲ್ಲಿ ಪಡಿತರ ಆಹಾರ ವಿತರಣೆ ಯ ದಿನಗಳಂದು ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು. ಪಡಿತರ ಅಂಗಡಿಗಳು ಸಮಯಕ್ಕೆ ಸರಿಯಾಗಿ ಅಂಗಡಿಯನ್ನು ತೆರೆಯದೇ ಇರುವುದು, ಆಹಾರ ಪದಾರ್ಥಗಳನ್ನು ಜನತೆಗೆ ಹಂಚದೇ ಇರುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ನಿಮಗೂ ಕೂಡ ಈ ರೀತಿಯ ಸಮಸ್ಯೆ ಎದುರಾದರೆ ಟೋಲ್ ಫ್ರೀ ನಂಬರ್ ನಲ್ಲಿ ದೂರು ನೀಡಬಹುದಾಗಿದೆ.

ಹೌದು, NFSA ವೆಬ್ ಸೈಟ್ ನಲ್ಲಿ, ಪ್ರತಿ ರಾಜ್ಯಕ್ಕೆ ವಿವಿಧ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಿದ್ದು ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ (NFSA) ನಲ್ಲಿ ದೂರುಗಳನ್ನು ಒದಗಿಸಬಹುದಾಗಿದೆ.

ನೀವು ಬಯಸಿದರೆ https://nfsa.gov.in NFSA ವೆಬ್ ಸೈಟ್ ಗೆ ಭೇಟಿ ನೀಡಿ. ಈ ವೆಬ್ ಸೈಟ್ ನಲ್ಲಿ ಮೇಲ್ ಮತ್ತು ದೂರವಾಣಿ ಸಂಖ್ಯೆ ಮೂಲಕ ದೂರುಗಳನ್ನು ದಾಖಲು ಮಾಡಲಾಗಿದೆ. ಪ್ರತಿಯೊಂದು ರಾಜ್ಯವು ಬೇರೆ ಬೇರೆ ಟೋಲ್ ಫ್ರೀ ಸಂಖ್ಯೆಗಳನ್ನು ಹೊಂದಿದೆ.

 • ಆಂಧ್ರಪ್ರದೇಶ – 1800-425-2977
 • ಅರುಣಾಚಲ ಪ್ರದೇಶ – 03602244290
 • ಅಸ್ಸಾಂ – 1800-345-3611
 • ಬಿಹಾರ- 1800-3456-194
 • ಛತ್ತೀಸ್ ಗಢ- 1800-233-3663
 • ಗೋವಾ- 1800-233-0022
 • ಗುಜರಾತ್- 1800-233-5500
 • ಹರಿಯಾಣ – 1800-180-2087
 • ಹಿಮಾಚಲ ಪ್ರದೇಶ – 1800-180-8026
 • ಜಾರ್ಖಂಡ್ – 1800-345-6598, 1800-212-5512
 • ಕರ್ನಾಟಕ- 1800-425-9339
 • ಕೇರಳ- 1800-425-1550
 • ಮಧ್ಯಪ್ರದೇಶ- 181
 • ಮಹಾರಾಷ್ಟ್ರ- 1800-22-4950
 • ಮಣಿಪುರ- 1800-345-3821
 • ಮೇಘಾಲಯ- 1800-345-3670
 • ಮಿಜೋರಾಂ- 1860-222-222-789, 1800-345-3891
 • ನಾಗಾಲ್ಯಾಂಡ್- 1800-345-3704, 1800-345-3705
 • ಒಡಿಶಾ – 1800-345-6724 / 1800-345-6724 6760
 • ಪಂಜಾಬ್ – 1800-3006-1313
 • ರಾಜಸ್ಥಾನ – 1800-180-6127
 • ಸಿಕ್ಕಿಂ – 1800-345-3236
 • ತಮಿಳುನಾಡು – 1800-425-5901
 • ತೆಲಂಗಾಣ – 1800-4250-0333
 • ತ್ರಿಪುರಾ- 1800-345-3665
 • ಉತ್ತರ ಪ್ರದೇಶ- 1800-180-0150
 • ಉತ್ತರಖಂಡ – 1800-180-2000, 1800-180-4188
 • ಪಶ್ಚಿಮ ಬಂಗಾಳ – 1800-345-5505
 • ದೆಹಲಿ – 1800-110-841
 • ಜಮ್ಮು – 1800-180-7106
 • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು – 1800-343-3197
 • ಚಂಡೀಗಢ – 1800-180-2068
 • ಲಕ್ಷದ್ವೀಪ – 1800-425-3186
 • ಪುದುಚೇರಿ – 1800-425-1082

State

– ವಸಂತ ಬಿ ಈಶ್ವರಗೆರೆ

ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಕಚೇರಿಗೆ ಸಲ್ಲಿಕೆಯಾಗುವಂತ ಕಡತಗಳ ಸಲ್ಲಿಕೆಯ ಸಂದರ್ಭದ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ. ಈ ನಿಯಮಗಳನ್ನು ಪಾಲಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಲ್ಲದೇ ಸರ್ಕಾರಿ ನೌಕರರ ವರ್ಗಾವಣೆಗೂ ತಮ್ಮ ಸೂಚನೆಯಿಲ್ಲದೆ ನಡೆಸದಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ.

‘ಜಾರಕಿಹೊಳಿ ಸೆಕ್ಸ್ ಸಿಡಿ’ ಬಿಡುಗಡೆಗೂ ಮುನ್ನಾ ‘ದಿನೇಶ್ ಕಲ್ಲಹಳ್ಳಿ’ ಎಲ್ಲಿಗೆ ಹೋಗಿದ್ದರು ಗೊತ್ತಾ.?

ಈ ಕುರಿತಂತೆ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ  ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿರುವ ಅವರು, ಮುಖ್ಯಮಂತ್ರಿಯವರ ಕಚೇರಿಗೆ ಸಲ್ಲಿಸುವ ಎಲ್ಲ ಇ-ಕಡತಳನ್ನು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರ ಲಾಗ್-ಇನ್-ಐಡಿಗೆ ಮತ್ತು ಭೌತಿಕ ಕಡತಗಳನ್ನು ಕೊಠಡಿ ಸಂಖ್ಯೆ 326ಎ ಗೆ ಮಾತ್ರ ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.

ಶಾಸಕ ಸಂಗಮೇಶ್ ಅಮಾನತು ಪ್ರಕರಣ : ‘ಆದೇಶ ವಾಪಾಸ್’ಗೆ ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ

ಇನ್ನೂ ಮುಂದುವರೆದು, ಮುಖ್ಯಮಂತ್ರಿಯವರಿಗೆ ಸಲ್ಲಿಸುವ ಕಡತಗಳನ್ನು ಗುರುತು ಮಾಡುವಾಗ ಮುಖ್ಯಮಂತ್ರಿಯವರ ಕಚೇರಿಯ ಯಾವುದೇ ಅಧಿಕಾರಿಗೆ ಗುರುತು ಮಾಡದೇ, ನೇರವಾಗಿ ಮುಖ್ಯಮಂತ್ರಿಯವರಿಗೆ ಗುರುತು ಮಾಡತಕ್ಕದ್ದು ಎಂದು ತಿಳಿಸಿದ್ದಾರೆ.

ಕಡತಗಳನ್ನು ಸಲ್ಲಿಸುವಾಗ ಯಾವ ಅಂಶಗಳಿಗೆ, ವಿಷಯಕ್ಕೆ ಅನುಮೋದನೆ ಕೋರಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು ಎಂಬುದಾಗಿಯೂ ಸೂಚಿಸಿದ್ದಾರೆ.

ಇದಲ್ಲದೇ ಮತ್ತೊಂದು ಟಿಪ್ಪಣಿ ಪತ್ರದಲ್ಲಿ ಆಡಳಿತಾತ್ಮಕವಾಗಿ ಅವಶ್ಯವಿರುವ ಖಾಲಿ ಸ್ಥಾನಗಳನ್ನು ತುಂಬುವುದಕ್ಕೆ ಹೊರತಾಗಿ, ಬೇರೆ ಯಾವುದೇ ವರ್ಗಾವಣೆಗಳನ್ನು 2021ನೇ ಸಾಲಿನ ಸಾಮಾನ್ಯ ವರ್ಗಾವಣೆವರೆಗೆ ಮಾಡಬಾರದೆಂದು ಸರ್ಕಾರವು ನಿರ್ಧರಿಸಿದೆ. ಅಂತಹ ವರ್ಗಾವಣೆಗಳನ್ನು ಕೂಡ ಇಲಾಖೆ ಮಟ್ಟದಲ್ಲಿ, ಹಂತದಲ್ಲಿ ಮಾಡದೇ, ಪ್ರತಿಯೊಂದು ವರ್ಗಾವಣೆಗೂ ಮುಖ್ಯಮಂತ್ರಿಯವರಿಗೆ ಕಡತದಲ್ಲಿ ಸಲ್ಲಿಸಿ, ಆದೇಶ ಪಡೆದ ನಂತ್ರವೇ, ಮಾಡತಕ್ಕದ್ದೆಂದು ತಿಳಿಸಲು ನಿರ್ದೇಶಿಸಿದ್ದಾರೆ.

‘ಡೆಸ್ಕ್ ಟಾಪ್ ವಾಟ್ಸಾಪ್ ಬಳಕೆದಾರ’ರಿಗೆ ಗುಡ್ ನ್ಯೂಸ್ : ಇನ್ಮುಂದೆ ನಿಮ್ಮ ‘ಕಂಪ್ಯೂಟರ್’ನಿಂದಲೂ ವಾಯ್ಸ್, ವೀಡಿಯೋ ಕರೆ ಮಾಡಬಹುದು

ಈಗಾಗಲೇ ಇಲಾಖೆಗಳಲ್ಲಿ ಕಡತದ ಟಿಪ್ಪಣಿ, ನಡವಳಿ, ಸ್ವೀಕೃತಿ ಮೇಲಿನ ಷರಾ ರೂಪದಲ್ಲಿ ಮುಖ್ಯಮಂತ್ರಿಯವರಿಂದ ಸ್ವೀಕೃತವಾದ ವರ್ಗಾವಣೆ ಆದೇಶಗಳನ್ನು ಸಹ ಕಡತದಲ್ಲಿ ಸಲ್ಲಿಸಿ, ಮುಖ್ಯಮಂತ್ರಿಯವರ ಆದೇಶವನ್ನು ಕಡತದಲ್ಲಿ ಪಡೆದು, ನಂತ್ರವೇ ಜಾರಿಗೊಳಿಸುವುದು.

ಈ ಮೇಲಿನ ಸೂಚನೆಗಳನ್ನು ಪಾಲಿಸದೇ ಜಾರಿಗೊಳಿಸಿದ ವರ್ಗಾವಣೆಗಳ ಬಗ್ಗೆ ಸಂಬಂಧಪಟ್ಟ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳೇ ಜವಾಬ್ದಾರರಾಗುತ್ತಾರೆಂದು ಖಡಕ್ ಸೂಚನೆಯಲ್ಲಿ ತಿಳಿಸಿದ್ದಾರೆ.


India

ನವದೆಹಲಿ : ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಬ್ಯಾಂಕ್ ನೌಕರರ 9 ಸಂಘಟನೆಗಳ ಒಕ್ಕೂಟವು (ಯುಎಫ್ ಬಿಯು) ಮಾರ್ಚ್ 15ರಿಂದ ಎರಡು ದಿನಗಳ ಮುಷ್ಕರ ನಡೆಸುವುದಾಗಿ ಘೋಷಿಸಿದೆ.

ಭಾರತೀಯ ಬ್ಯಾಂಕ್ ಒಕ್ಕೂಟವೂ ಮಾರ್ಚ್ 15 ಮತ್ತು 16 ರಂದು ಮುಷ್ಕರೆ ಕರೆ ನೀಡಿದ್ದು, ಜೊತೆಗೆ ಮಾರ್ಚ್ 13 ಎರಡನೇ ಶನಿವಾರ ಹಾಗೂ ಮಾರ್ಚ್ 14 ಭಾನುವಾರ ಇರುವುದರಿಂದ  ಈ ನಾಲ್ಕು ದಿನ ಗ್ರಾಹಕರಿಗೆ ಬ್ಯಾಂಕ್ ಸೇವೆಗಳು ಲಭ್ಯ ಇರುವುದಿಲ್ಲ.  ಮುಷ್ಕರದ ದಿನಗಳಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ತಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.

2021-22ರ ಹೊಸ ಹಣಕಾಸು ವರ್ಷವು ಮಾರ್ಚ್ ಆರಂಭದಿಂದ ಪ್ರಾರಂಭವಾಗುತ್ತದೆ, ಅಂತಹ ಸನ್ನಿವೇಶದಲ್ಲಿ, ರಜಾ ದಿನಗಳ ಕಾರಣದಿಂದ ಬ್ಯಾಂಕಿನ ಶಾಖೆಗಳು ಮುಚ್ಚಲ್ಪಟ್ಟರೂ, ನೀವು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಅನೇಕ ಕೆಲಸಗಳನ್ನು ನಿರ್ವಹಿಸಬಹುದು. ರಾಜ್ಯಗಳಲ್ಲಿ ಬ್ಯಾಂಕ್ ರಜೆಗಳಲ್ಲಿ ವ್ಯತ್ಯಾಸವಾಗಬಹುದು ಎಂದು ಆರ್ ಬಿಐ ಹೇಳಿದೆ. ಆದ್ದರಿಂದ, ಎಲ್ಲಾ ಗ್ರಾಹಕರು ಇದನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕಿಂಗ್ ಗೆ ಸಂಬಂಧಿಸಿದ ತಮ್ಮ ಕೆಲಸವನ್ನು ಯೋಜಿಸಬೇಕಾಗಿದೆ.


State

ಬೆಂಗಳೂರು : ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಹತ್ವದ ಮಾಹಿತಿಯೊಂದನ್ನು ನೀಡಿದದು, ಜೂನ್ ತಿಂಗಳಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಸ್‌ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿ ಹಾಗೂ ಶುಲ್ಕ ಪಾವತಿಗೆ ಮಾರ್ಚ್ 24 ರವರೆಗೆ ಕಾಲಾವಕಾಶ ನೀಡಲಾಗಿದೆ.

ಅಕ್ರಮ `BPL’ ಕಾರ್ಡ್ ದಾರರಿಗೆ ಬಿಗ್ ಶಾಕ್!

ಪ್ರತಿ ಶಾಲೆಯು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡು ಅದರ ಮಾಹಿತಿಯನ್ನು ಅಪ್ ಲೋಡ್ ಮಾಡಲು ಮಾರ್ಚ್ 3 ರವರೆಗೆ ಇದ್ದ ಕಾಲಾವಕಾಶವನ್ನು ಮಾರ್ಚ್ 10 ಕ್ಕೆ ವಿಸ್ತರಿಸಲಾಗಿದೆ. ಅದೇ ರೀತಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕದ ಚಲನ್ ಪಡೆಯಲು ಮಾರ್ಚ್ 23 ರವರೆಗೆ, ಚಲನ್ ಮೂಲಕ ಬ್ಯಾಂಕ್ ಗೆ ಪರೀಕ್ಷಾ ಶುಲ್ಕ ಪಾವತಿಸಲು ಮಾರ್ಚ್ 10 ರ ವರೆಗಿದ್ದ ಕಾಲಾವಕಾಶವನ್ನು ಮಾರ್ಚ್ 24 ರ ವರೆಗೆ ವಿಸ್ತರಿಸಲಾಗಿದೆ.

ನೀವು ‘FDA ಕೀ-ಉತ್ತರ’ದ ಬಗ್ಗೆ ‘ಆಕ್ಷೇಪಣೆ’ ಸಲ್ಲಿಸಬೇಕಾ.? ಹಾಗಿದ್ದರೇ KPSCಯ ಈ ಸೂಚನೆ ಪಾಲಿಸಿ.!

2002 ಮತ್ತು ಅದಕ್ಕೂ ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳು ನೆಫ್ಟ್ ಚಲನ್ ಮೂಲಕ ಶುಲ್ಕ ಪಾವತಸಿದ ಮೂಲ ಚಲನ್ ನಾಮಿನಲ್ ರೋಲ್ ಮತ್ತು ಸಂಬಂಧಿತಿ ಇತರ ದಾಖಲೆಗಳನ್ನು ಮಾರ್ಚ್ 31 ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.


State

ಬೆಂಗಳೂರು: ರಾಜ್ಯ ಸರ್ಕಾರ ನಕಲಿ ದಾಖಲೆಗಳನ್ನ ನೀಡಿ, 12 ಲಕ್ಷ ಬಿಪಿಎಲ್ ಕಾರ್ಡ್’ಗಳನ್ನ ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದೆ. ಸಧ್ಯ ಆ ಅನರ್ಹ ಕಾರ್ಡ್‌ಗಳನ್ನ ಗುರುತಿಸಲು ಮಸ್ತ್‌ ಪ್ಲ್ಯಾನ್‌ ಮಾಡಿದ್ದು, ಆನರ್ಹ ಕಾರ್ಡ್‌ದಾರರ ಮಾಹಿತಿ ನೀಡಿದ್ರೆ, 400 ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.

ನೀವು ‘FDA ಕೀ-ಉತ್ತರ’ದ ಬಗ್ಗೆ ‘ಆಕ್ಷೇಪಣೆ’ ಸಲ್ಲಿಸಬೇಕಾ.? ಹಾಗಿದ್ದರೇ KPSCಯ ಈ ಸೂಚನೆ ಪಾಲಿಸಿ.!

ಅನರ್ಹ ಬಿಪಿಎಲ್ ಕಾರ್ಡ್ ಪಡೆದಿರುವವರ ವಿರುದ್ಧ ಕ್ರಮಕ್ಕೆ ಮುಂದಾದ ಇಲಾಖೆ, ಅನರ್ಹರಿಗೆ ಮಾರ್ಚ್ ಅಂತ್ಯದೊಳಗಾಗಿ ಕಾರ್ಡ್’ಗಳನ್ನ ಮರಳಿಸುವಂತೆ ಕಾಲಾವಕಾಶ ನೀಡಿದೆ. ಈಗ ಆನರ್ಹ ಬಿಪಿಎಲ್‌ ಕಾರ್ಡ್‌ ಹೊಂದಿರುವವರ ಮಾಹಿತಿ ನೀಡಿದ್ರೆ, ಅಂತಹವರಿಗೆ 400 ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.

ಹಾಗಾದ್ರೆ, ಆನರ್ಹ ಬಿಪಿಎಲ್‌ ಕಾರ್ಡ್‌ದಾರರು ಅಂದ್ರೆ ಯಾರು..? * ಸರ್ಕಾರಿ ಅನುದಾನ ಪಡೆಯುತ್ತಿರುವ ಸಿಬ್ಬಂದಿ.
* ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಯ ಅಧಿಕಾರಿಗಳು, ಸರ್ಕಾರಿ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು.
* ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ʼಗಿಂತಲೂ ಹೆಚ್ಚು ಒಣ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು
* ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು.
* ನಾಲ್ಕು ಚಕ್ರದ ವಾಹನ ಇರುವ ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ.1.20 ಲಕ್ಷಕ್ಕಿಂತಲೂ ಹೆಚ್ಚಿರುವ ಕುಟುಂಬಗಳು.


State

– ವಸಂತ ಬಿ ಈಶ್ವರಗೆರೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 28-02-2021ರಂದು ಸಹಾಯಕರು, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಇಂತಹ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಕೀ-ಉತ್ತರವನ್ನು ಕೂಡ ಪ್ರಕಟಿಸಲಾಗಿದೆ. ಆದ್ರೇ ಕೀ-ಉತ್ತರದ ಬಗ್ಗೆ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸುವ ಕುರಿತಂತೆ ಕೆಪಿಎಸ್ಸಿಯ ಈ ಸೂಚನೆಗಳನ್ನು ಪಾಲಿಸುವಂತೆ ಆಯೋಗವು ತಿಳಿಸಿದೆ.

ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಸಹಾಯಕ ಕಾರ್ಯದರ್ಶಿ ಆರ್.ಎಸ್.ವೆಂಕಟಯ್ಯ ಪ್ರಕಟಣೆ ಹೊರಡಿಸಿದ್ದು, ದಿನಾಂಕ 28-02-2021ರಂದು ನಡೆದ ವಿವಿಧ ಇಲಾಖೆಗಳಲ್ಲಿನ ಸಹಾಯಕರು, ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ( ವಿಷಯ ಸಂಕೇತ-385), ಸಾಮಾನ್ಯ ಕನ್ನಡ(ವಿಷಯ ಸಂಕೇತ-386, ಸಾಮಾನ್ಯ ಇಂಗ್ಲೀಷ್(ವಿಷಯ ಸಂಕೇತ-387)ರ ಕೀ-ಉತ್ತರಗಳನ್ನು ಆಯೋಗದ ಜಾಲತಾಣ www.kpsc.kar.nic.in ನಲ್ಲಿ ಪ್ರಕಟಿಸಲಾಗಿದೆ.

ಈ ಕೀ-ಉತ್ತರಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಅಭ್ಯರ್ಥಿಗಳು ಕೆಳಕಂಡ ಸೂಚನೆಯಂತೆ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂಬುದಾಗಿ ತಿಳಿಸಿದೆ.

FDA ಕೀ-ಉತ್ತರದ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸೂಚನೆಗಳು

 • ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ದಿನಾಂಕ 10-03-2021ರಂದು ಸಂಜೆ 5.30ರೊಳಗಾಗಿ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001 ಈ ವಿಳಾಸಕ್ಕೆ ಮಾತ್ರ ತಲುಪುವಂತೆ ಕಳುಹಿಸಿಕೊಡಬೇಕು.
 • ಆಕ್ಷೇಪಣೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 10-03-2021ರ ಸಂಜೆ 5.30ಆಗಿದ್ದು, ಈ ಅವಧಿಯ ನಂತ್ರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳ ಆಕ್ಷೇಪಣೆಗಳು ಅಂಚೆಯ ಮೂಲಕ ಆಯೋಗಕ್ಕೆ ತಲುಪಲು ವಿಳಂಬವಾದಲ್ಲಿ ಕೆಪಿಎಸ್ಸಿ ಜವಾಬ್ದಾರಿಯಾಗುವುದಿಲ್ಲ.
 • ಆಕ್ಷೇಪಣೆಗಳ ವಿವರಗಳನ್ನು ಕಡ್ಡಾಯವಾಗಿ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ನಮೂನೆಯಲ್ಲಿಯೇ ( ಕನ್ನಡ ಅಥವಾ ಇಂಗ್ಲಿಷ್) ಸಲ್ಲಿಸಬೇಕು. ಇದರೊಂದಿಗೆ ಪ್ರತಿ ಪ್ರಶ್ನೆಗೆ ರೂ.50ರಂತೆ ಶುಲ್ಕವನ್ನು ( ಐಪಿಓ ಅಥವಾ ಡಿಡಿ ಮೂಲಕ) ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು, ಇವರ ಹೆಸರಿಗೆ ಸಂದಾಯ ಮಾಡಬೇಕು.
 • ಶುಲ್ಕ ಸಂದಾಯ ಮಾಡದ ಆಕ್ಷೇಪಣಾ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
 • ಪ್ರತಿ ಪ್ರಶ್ನೆಯ ಕೀ ಉತ್ತರಕ್ಕೆ ಸಲ್ಲಿಸುವ ಆಕ್ಷೇಪಣೆಗಳಿಗೆ ಪೂರಕವಾಗಿ ದ್ವಿಪ್ರತಿಯಲ್ಲಿ ಸಲ್ಲಿಸಿರುವ ದಾಖಲೆಗಳಿಗೆ ಸಂಬಂಧಿಸಿದಂತೆ ಲೇಖಕರ ಹೆಸರು, ಪ್ರಕಾಶನ ಪ್ರತಿ, ಇತ್ಯಾದಿ ವಿವರಗಳನ್ನು ಆಕ್ಷೇಪಣೆಗಳೊಂದಿಗೆ ನಮೂನೆಯಲ್ಲಿ ನಮೂದಿಸತಕ್ಕದ್ದು.
 • ದಾಖಲೆಗಳನ್ನು ದ್ವಿಪ್ರತಿಯಲ್ಲಿ ಹಾಗೂ ನಿಗದಿತ ನಮೂನೆಯಲ್ಲಿ ಸಲ್ಲಿಸದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು.
 • ದಾಖಲೆಗಳ ಪ್ರತಿ ಪುಟದ ಮೇಲೆ ಪ್ರಶ್ನೆ ಸಂಖ್ಯೆ ಮತ್ತು ನೊಂದಣೆ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯತಕ್ಕದ್ದು.
 • ಆಕ್ಷೇಪಣೆಯೊಂದಿಗೆ ಅಭ್ಯರ್ಥಿಯು ದೃಢೀಕರಿಸಿದ ಪ್ರವೇಶ ಪತ್ರದ ಪ್ರತಿಯನ್ನು ಪರಿಶೀಲನೆಗಾಗಿ ಲಗತ್ತಿಸಬೇಕು.

ಎಫ್ ಡಿ ಎ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಂತ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಈ ಮೇಲಿನ ಕರ್ನಾಟಕ ಲೋಕಸೇವಾ ಆಯೋಗದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಕೀ-ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸೋದು ಮರೆಯಬೇಡಿ. ಒಂದು ವೇಳೆ ಇಂತಹ ಸೂಚನೆ ಪಾಲಿಸದೇ ನೀವು ಕೀ-ಉತ್ತರದ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದೇ ಆದಲ್ಲಿ, ನಿಮ್ಮ ಆಕ್ಷೇಪಣೆ ತಿರಸ್ಕೃತಗೊಳ್ಳಲಿದೆ. ಸೋ ತಪ್ಪದೇ ಎಚ್ಚರಿಕೆ ವಹಿಸಿ.


State

ಮಂಗಳೂರು ;  ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲ್ಲಿ ಪತ್ರಕರ್ತರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ವಿತರಣೆ ಇಂದು ನಡೆಯಿತು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪತ್ರಕರ್ತರಿಗೆ ಕಾರ್ಡ್ ವಿತರಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ  ಮಾಹಿತಿ ನೀಡುವ ನಿಟ್ಟಿನಲ್ಲಿ  ಮಾ. 8ರಂದು ಆಸ್ಪತ್ರೆಗಳ ಮುಖ್ಯಸ್ಥರನ್ನು ಒಳಗೊಂಡ ಕುಂದುಕೊರತೆ ಪರಿಹಾರ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.

ಆಯುಷ್ಮಾನ್ ಯೋಜನೆಯಡಿ ರೋಗಿ ಆಸ್ಪತ್ರೆಗೆ ದಾಖಲಾದ 24 ಗಂಟೆವರೆಗಿನ ಹಾಗೂ ಆಯುಷ್ಮಾನ್ ಕಾರ್ಡ್ನಡಿ ಚಿಕಿತ್ಸೆಗೆ ಸಮ್ಮತಿ ದೊರಕುವವರೆಗಿನ ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ. ಆಸ್ಪತ್ರೆಗಳಲ್ಲಿ ರೋಗಿಯ  ಎಂಆರ್‌ಐ, ಸಿಟಿ ಸ್ಕಾನ್‌ನಂತಹ ತಪಾಸಣೆಯನ್ನು ಕಾರ್ಡ್ನಡಿ ಚಿಕಿತ್ಸೆ ಆರಂಭಗೊಳ್ಳುವ  ಮಾಡುವುದರಿಂದ ಬಡ ರೋಗಿಗಳಿಗೆ ಈ ಇದು ದುಬಾರಿಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಕುರಿತು ಆಸ್ಪತ್ರೆಗಳ ಮುಖ್ಯಸ್ಥರ ಜತೆ ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ನೋಡಲ್ ಅಧಿಕಾರಿ ಡಾ. ರತ್ನಾಕರ್, ರೋಗಿ ಆಸ್ಪತ್ರೆಗೆ ದಾಖಲಾಗಿ ಕಾಯಿಲೆ ಖಾತ್ರಿಯಾಗುವವರೆಗಿನ ಚಿಕಿತ್ಸಾ ವೆಚ್ಚವನ್ನು ರೋಗಿಯ ಕಡೆಯವರೇ ಭರಿಸಬೇಕಾಗುತ್ತದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 1650 ವಿಧದ ಚಿಕಿತ್ಸೆಗಳು ಜಿಲ್ಲೆಯ 32 ಆಸ್ಪತ್ರೆಗಳಲ್ಲಿ ಗರಿಷ್ಠ 5 ಲಕ್ಷದವರೆಗಿನ ಚಿಕಿತ್ಸೆ ಉಚಿತವಾಗಿರುತ್ತದೆ. ಎಪಿಎಲ್ ಕಾರ್ಡ್ನವರಿಗೆ ಶೇ. 30ರಷ್ಟು ಚಿಕಿತ್ಸಾ ವೆಚ್ಚ ಆಯುಷ್ಮಾನ್ ಕಾರ್ಡ್ನಡಿ ಅನ್ವಯವಾಗುತ್ತದೆ. ರೋಗಿ ಆಸ್ಪತ್ರೆಗೆ ದಾಖಲಾಗಿ 24 ಗಂಟೆಯೊಳಗೆ ಮರಣ ಹೊಂದಿದ್ದಲ್ಲಿ ಆಯುಷ್ಮಾನ್ ಕಾರ್ಡ್ ಅನ್ವಯವಾಗುವುದಿಲ್ಲ. ಈ ಕಾರ್ಡ್ನಡಿ ಒಂದು ಬಾರಿ ಸರ್ಜರಿಗೊಳಪಟ್ಟಲ್ಲಿ ಮತ್ತೆ ಆರು ತಿಂಗಳವರೆಗೆ ಅದೇ ಸರ್ಜರಿಗೆ ಕಾರ್ಡ್ ಅನ್ವಯಿಸುವುದಿಲ್ಲ ಎಂದು ವಿವರಿಸಿದರು.

Flash : ‘ಮೆಟ್ರೋ ಮ್ಯಾನ್’ ಇ ಶ್ರೀಧರನ್ ಸಿ.ಎಂ ಅಭ್ಯರ್ಥಿಯಲ್ಲ, ಯು ಟರ್ನ್ ಹೊಡೆದ ಕೇರಳ ಬಿಜೆಪಿ ಅಧ್ಯಕ್ಷ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಲಾ 10 ಕೆ.ಜಿ.ಅಕ್ಕಿ ಕೊಡುತ್ತೇವೆ ; ಸಿದ್ದರಾಮಯ್ಯ


State

ಚಿಕ್ಕಬಳ್ಳಾಪುರ:  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ.ಅಕ್ಕಿ ನೀಡುವ ಯೋಜನೆ ಜಾರಿಗೊಳಿಸುತ್ತೇವೆ’ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ.ಅಕ್ಕಿ ನೀಡುವ ಯೋಜನೆ ಜಾರಿಗೊಳಿಸುತ್ತೇವೆ’ಅವರು ರಾಜ್ಯವನ್ನು ಹಸಿವು ಮುಕ್ತ ಮಾಡಲು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ 7 ಕೆ.ಜಿ.ಅಕ್ಕಿ ಯೋಜನೆ ಜಾರಿಗೊಳಿಸಿದರೆ ಬಿಜೆಪಿ ಸರ್ಕಾರ 5 ಕೆ.ಜಿ.ಗೆ ಇಳಿಸಿದೆ ಎಂದರು.

ನಾವು ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇವೆ. ಬಡವರಿಗೆ ಅಕ್ಕಿ ಯೋಜನೆ ಜಾರಿಗೆ ತಂದಿದ್ದೆವು. ರೈತರಿಗೆ ಕೃಷಿಭಾಗ್ಯ, ಪಶುಭಾಗ್ಯ ಹಾಗೂ ಬಡ ಹೆಣ್ಣುಮಕ್ಕಳಿಗೆ ಶಾದಿಭಾಗ್ಯ ಯೋಜನೆ ಸಹಿತ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದೆವು.  ಕೊಟ್ಟ ಮಾತಿನಂತೆ ನಡೆದುಕೊಂಡು ಅಧಿಕಾರ ನಡೆಸಿದ್ದೇವೆ. ಆದರೆ, ಕೇಂದ್ರದಲ್ಲಿ 7 ವರ್ಷಗಳಿಂದ ಅಧಿಕಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಏನು ಮಾಡಿದೆ. ಸರ್ಕಾರ ಜನ ವಿರೋಧಿ ಧೋರಣೆ ಅನುಸರಿಸಿ ಶೋಷಣೆ ಮಾಡುತ್ತಿದೆ. ರೈತರು, ಬಡವರು, ಮಹಿಳೆಯರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ರಮೇಶ್ ಜಾರಕಿಹೊಳಿ ‘ಸೆಕ್ಸ್ ಸಿಡಿ’ ಪ್ರಕರಣ :  ‘ವಿಡಿಯೋ’ ಅಪ್ಲೋಡ್ ಮಾಡಿದವರ ಪತ್ತೆಗೆ ಮುಂದಾದ್ರು ಪೊಲೀಸ್ರು..!

Flash : ‘ಮೆಟ್ರೋ ಮ್ಯಾನ್’ ಇ ಶ್ರೀಧರನ್ ಸಿ.ಎಂ ಅಭ್ಯರ್ಥಿಯಲ್ಲ, ಯು ಟರ್ನ್ ಹೊಡೆದ ಕೇರಳ ಬಿಜೆಪಿ ಅಧ್ಯಕ್ಷ


India

ತಿರುವನಂತಪುರಂ: ಮೆಟ್ರೋ ಮ್ಯಾನ್ಇ ಶ್ರೀಧರನ್ ಸಿ.ಎಂ ಅಭ್ಯರ್ಥಿಯಲ್ಲ ಎಂದು ಕೇರಳ ಬಿಜೆಪಿ ಅಧ್ಯಕ್ಷ ಯು ಟರ್ನ್ ಹೊಡೆದಿದ್ದಾರೆ.

ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’ ಎಂದೂ ಕರೆಯಲ್ಪಡುವ ಇ.ಶ್ರೀಧರನ್ ಅವರನ್ನು ಭಾರತೀಯ ಜನತಾ ಪಕ್ಷ ಗುರುವಾರ ಘೋಷಣೆ ಮಾಡಿತ್ತು ಅಂತ ಅವ್ರು ಇಂದು ಮದ್ಯಾಹ್ನ  ಹೇಳಿದ್ದರು,  ಈ ಬೆನ್ನಲ್ಲೇ ‘ಮೆಟ್ರೋ ಮ್ಯಾನ್’ ಇ ಶ್ರೀಧರನ್ ಸಿ.ಎಂ ಅಭ್ಯರ್ಥಿಯಲ್ಲ ಎಂದು ಕೇರಳ ಬಿಜೆಪಿ ಅಧ್ಯಕ್ಷ ಯು ಟರ್ನ್ ಹೊಡೆದಿದ್ದಾರೆ.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ : ಅಭ್ಯರ್ಥಿಗಳ ಆಯ್ಕೆ ಕುರಿತು ಉನ್ನತ ನಾಯಕರ ಚರ್ಚೆ

‘SCHOLARSHIP’ : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ


State

ಕೊಪ್ಪ  : ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು , ಜೈನರು, ಬೌದ್ದ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಮುಂದುವರೆದು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೆ ಎಸ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಕೊಪ್ಪ ಪ್ರಕಟಣೆ ಹೊರಡಿಸಿದೆ.

, (Post-matric, Pre matric and Merit-cum-means Scholarship) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ SSP ( state scholarship portal ) ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದ್ದು, ದಿನಾಂಕ 31:03:2021 ರೊಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ,

.ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಆಯಾ ಕಾಲೇಜಿನ ‘E attestation’ ಆಫೀಸರ್ ಗಳಿಗೆ ಸೂಚನೆ ನೀಡಲಾಗಿದೆ.

ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ https://ssp.postmatric.karnataka.gov.in/ portal ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಿದ ಪ್ರತಿಯನ್ನು ಕಾಲೇಜು ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ಶಾಲಾ/ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

 


State

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ  ಬಿಡುಗಡೆ ವಿಚಾರ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.  ಸಿಡಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ದಿನೇಶ್ ಸಂತ್ರಸ್ತೆಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ, ಇನ್ನೊಂದು ಕಡೆ ಪೊಲೀಸರು ರಮೇಶ್ ಜಾರಕಿಹೊಳಿ ವಿಡಿಯೋ ಹಿಂದೆ ಬಿದ್ದಿದ್ದಾರೆ.

ಸಚಿವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರು ಯಾರು, ಆ ವ್ಯಕ್ತಿಯನ್ನು ಪತ್ತೆ ಮಾಡಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಸದ್ಯ ವೈರಲ್ ಆಗಿರುವ ವಿಡಿಯೋ ಮೂಲ ಪತ್ತೆಗಾಗಿ ಹುಡುಕಾಟ ನಡೆಯುತ್ತಿದ್ದು, ಮೂಲಗಳ ಪ್ರಕಾರ ಖಾಸಗಿ ವೆಬ್ ಸೈಟ್ ನಲ್ಲಿ ರಷ್ಯಾದಿಂದ ವಿಡಿಯೋ ಅಪ್ ಲೋಡ್ ಮಾಡಿದೆ ಎನ್ನಲಾಗಿದ್ದು, ವಿಡಿಯೋ ಅಪ್ ಲೋಡ್ ಮಾಡಿದವರನ್ನು ಪತ್ತೆ ಹಚ್ಚಲು ಪೊಲೀಸರು ಹುಡುಕಾಟದ ಬೇಟೆ ಆರಂಭಿಸಿದ್ದಾರೆ.

‘ರಮೇಶ್ ಜಾರಕಿಹೊಳಿಯನ್ನು ಮುಗಿಸೋಕೆ ಷಡ್ಯಂತ್ರ ರೂಪಿಸಲಾಗಿದೆ’ : ಬಿಜೆಪಿ ಸಂಸದ ನಾರಾಯಣ ಸ್ವಾಮಿ

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ : ಅಭ್ಯರ್ಥಿಗಳ ಆಯ್ಕೆ ಕುರಿತು ಉನ್ನತ ನಾಯಕರ ಚರ್ಚೆ


India

ಡಿಜಿಟಲ್ ಡೆಸ್ಕ್ : ಪಂಚ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಚುನಾವಣಾ ಸಮಿತಿ ಸಭೆ ನಡೆದಿದೆ.

ಪಂಚ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಸಭೆ ನಡೆದಿದ್ದು, ಸಭೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತಿತರರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಾದ ಚರ್ಚೆ ನಡೆದಿದೆ ಎನ್ನಲಾಗಿದೆ.

ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ : ಆದೇಶ ಹಿಂಪಡೆಯುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಒತ್ತಾಯ

‘ರಮೇಶ್ ಜಾರಕಿಹೊಳಿಯನ್ನು ಮುಗಿಸೋಕೆ ಷಡ್ಯಂತ್ರ ರೂಪಿಸಲಾಗಿದೆ’ : ಬಿಜೆಪಿ ಸಂಸದ ನಾರಾಯಣ ಸ್ವಾಮಿ


India World

ಡಿಜಿಟಲ್ ಡೆಸ್ಕ್ :  ಶುಕ್ರವಾರ ಮುಂಜಾನೆ ನ್ಯೂಜಿಲೆಂಡ್‌ ನ ಉತ್ತರ ದ್ವೀಪದ ಪೂರ್ವದಲ್ಲಿ 7.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಶುಕ್ರವಾರ ಮುಂಜಾನೆ ನ್ಯೂಜಿಲೆಂಡ್‌ನ ಉತ್ತರ ದ್ವೀಪದ ಪೂರ್ವಕ್ಕೆ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯೂಸಿ) ತಿಳಿಸಿದೆ.

ನ್ಯೂಜಿಲೆಂಡ್‌ನ ರಾಷ್ಟ್ರೀಯ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ, ಭೂಕಂಪನವು ದೇಶದ ಮೇಲೆ ಪರಿಣಾಮ ಬೀರಬಹುದಾದ ಸುನಾಮಿಯನ್ನು ಉಂಟುಮಾಡಿದೆ ಎಂದು ಹೇಳಿದೆ.

ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ : ಆದೇಶ ಹಿಂಪಡೆಯುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಒತ್ತಾಯ

‘ರಮೇಶ್ ಜಾರಕಿಹೊಳಿಯನ್ನು ಮುಗಿಸೋಕೆ ಷಡ್ಯಂತ್ರ ರೂಪಿಸಲಾಗಿದೆ’ : ಬಿಜೆಪಿ ಸಂಸದ ನಾರಾಯಣ ಸ್ವಾಮಿ

 


State

ಡಿಜಿಟಲ್ ಡೆಸ್ಕ್ :  ರಮೇಶ್ ಜಾರಕಿಹೊಳಿ ಸಿಡಿ ವಿವಾದದಿಂದ ಸರ್ಕಾರಕ್ಕೆ ಮುಜುಗರವಾಗಿರುವುದು ನಿಜ, ಆದರೆ ರಮೇಶ್ ಜಾರಕಿಹೊಳಿಯನ್ನು ಮುಗಿಸೋಕೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಬಿಜೆಪಿ ಸಂಸದ ನಾರಾಯಣ ಸ್ವಾಮಿ ಹೇಳಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು, ತನಿಖೆಯಿಂದ ಸತ್ಯ ಹೊರಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ನನ್ನ ಸರ್ಕಾರದ ಸದಸ್ಯನ ವಿರುದ್ಧ ಕೇಳಿಬಂದಿರುವ ಆರೋಪಕ್ಕಾಗಿ ನಾನು ಕೂಡ ಚರ್ಚೆಗಳನ್ನು ನೋಡಿದ್ದೇನೆ ಎಂದರು.

ಸಿಡಿ ವಿಚಾರವಾಗಿ ನಡೆದ ಚರ್ಚೆಯಿಂದ ಷಡ್ಯಂತ್ರ ಮಾಡಿರುವುದು ಬೆಳಕಿಗೆ ಬಂದಿದೆ, ಸಿಡಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು, ಆಗ  ಮಾತ್ರ ನಿಜಾಂಶ ಗೊತ್ತಾಗಲಿದೆ ಎಂದು ಹೇಳಿದರು.

BREAKING : ಕೊರೊನಾ ಬುಲೆಟಿನ್ ; ಕಳೆದ 24 ಗಂಟೆಯಲ್ಲಿ 571 ಮಂದಿಗೆ ಸೋಂಕು ಧೃಡ

BIGG NEWS : ‘OBC’ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ; ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ


State

ಬೆಂಗಳೂರು : ಹಿಂದುಳಿದ ವರ್ಗಗಳ ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ, ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2020-21 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ. ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಮಾ.05 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಇದನ್ನು ಮಾ.20 ರವರೆಗೆ ವಿಸ್ತರಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ದಿನಾಂಕ 20:03:2021 ರೊಳಗಾಗಿ ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳ ಇಲಾಖೆ ಪ್ರಕಟಣೆ ಹೊರಡಿಸಿದೆ. ವಿದ್ಯಾರ್ಥಿಗಳು www.ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

ರಂಜಿತ್ ಶೃಂಗೇರಿ

 


State

ಬೆಂಗಳೂರು : ವಿಧಾನಮಂಡಲದ ಅಧಿವೇಶ ಇಂದಿನಿಂದ ಆರಂಭಗೊಂಡಿದೆ. ಇಂತಹ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿಭಟನೆಯ ಬಿಸಿ, ರಾಜ್ಯ ಸರ್ಕಾರಕ್ಕೆ ಮುಟ್ಟಲಿದೆ ಎನ್ನುವ ಕಾರಣಕ್ಕಾಗಿ, ವಿಧಾನಸೌಧ, ವಿಕಾಸ ಸೌಧ ಹಾಗೂ ಬಹುಮಹಡಿ ಕಟ್ಟಡಗಳಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇಂತಹ ರಾಜ್ಯ ಬಿಜೆಪಿ ಸರ್ಕಾರದ ನಿರಂಕುಶ ಜನವಿರೋಧಿ ಆದೇಶವನ್ನು ಹಿಂಪಡೆಯುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ತಂದ್ರೆ, ಬೆಲೆ ಎಷ್ಟಾಗುತ್ತೆ ಗೊತ್ತಾ.? ಹೀಗಿದೆ SBI ಆರ್ಥಿಕ ತಜ್ಞರು ವಿವರಿಸಿರುವಂತೆ ಸಂಪೂರ್ಣ ಮಾಹಿತಿ

ಕರ್ನಾಟಕ ವಿಧಾನಮಂಡಲದ ಅಧಿವೇಶವು ದಿನಾಂಕ 04-03-2021 ರಿಂದ ದಿನಾಂಕ 31-03-2021ರವರೆಗೆ ನಡೆಯಲಿದ್ದು, ಕೋವಿಡ್-19ರ ಸೋಂಕು ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ. ಆದುದ್ದರಿಂದ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಹಾಗೂ ಭದ್ರತಾ ದೃಷ್ಠಿಯಿಂದ ಅಧಿವೇಶನದ ಅವಧಿಯಲ್ಲಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ, ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಜನರಿಗೆ ಗುಡ್ ನ್ಯೂಸ್ : ಪಿಎಚ್‍ಸಿ, ಸಮುದಾಯ ಆರೋಗ್ಯ ಕೇಂದ್ರದಲ್ಲೂ ‘ಕೋವಿಡ್ ಲಸಿಕೆ’ – ಸಚಿವ ಡಾ.ಕೆ.ಸುಧಾಕರ್

ಇಂತಹ ರಾಜ್ಯ ಸರ್ಕಾರದ ಸುತ್ತೋಲೆಯ ಬಗ್ಗೆ ಟ್ವಿಟ್ ಮಾಡಿರುವಂತ ಮಾಜಿ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರು, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧ ಜನ ವಿರೋಧಿ ಸರ್ವಾಧಿಕಾರಿ ಧೋರಣೆ ಇಲಾಖೆಗಳಲ್ಲಿ ಕಡತ ಬೆನ್ನತ್ತದ ಹೊರತು ಜನ ಸಾಮಾನ್ಯರ ಕೆಲಸ ಅಲ್ಲೇ ಕೊಳೆಯುತ್ತದೆ ಪ್ರವೇಶ ನಿರ್ಬಂಧ ಸಾರ್ವಜನಿಕ ಇಲಾಖೆಯ ಭ್ರಷ್ಟಾಚಾರಕ್ಕೆ ನೀಡುವ ಕುಮ್ಮಕ್ಕು? ಬಿಜೆಪಿ ಸರ್ಕಾರ ನಿರಂಕುಶ ಜನ ವಿರೋಧಿಯಾಗದೆ ಈ ಆದೇಶ ಹಿಂಪಡೆಯಲಿ ಸಾರ್ವಜನಿಕ ಪ್ರವೇಶ ಮುಕ್ತವಿರಲಿ ಎಂದಿದ್ದಾರೆ.


State

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ  ಹೊಸದಾಗಿ 571  ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,53,136  ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 496  ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,34,639 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 12,350 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.   ಬೆಂಗಳೂರಿನಲ್ಲಿ ಇಂದು 385  ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 4,06,825 ಕ್ಕೆ ಏರಿಕೆಯಾಗಿದೆ.  ಬೆಂಗಳೂರಿನಲ್ಲಿ ಇಂದು ಕಿಲ್ಲರ್ ಕೊರೊನಾ ಸೋಂಕಿಗೆ ಇಬ್ಬರು  ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 4491 ಜನ ಸೋಂಕಿತರು ಇದುವರೆಗೆ ಸಾವನ್ನಪ್ಪಿದ್ದಾರೆ.

ಆರೋಗ್ಯಕರ ತೂಕ ಇಳಿಕೆಗೆ ಅತ್ಯುತ್ತಮ 7 ದಿನಗಳ ಈ ʼಡಯಟ್ ಪ್ಲಾನ್ʼ ಮಾಡಿ..!

ಏಪ್ರಿಲ್ 29ರ ಬಳಿಕ ಬರೇಲಿಯಿಂದ ಮುಂಬೈ , ಬೆಂಗಳೂರಿಗೆ ಇಂಡಿಗೋ ವಿಮಾನ ಸೇವೆ ಆರಂಭ


State

– ವಸಂತ ಬಿ ಈಶ್ವರಗೆರೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 28-02-2021ರಂದು ಸಹಾಯಕರು, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಇಂತಹ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಕೀ-ಉತ್ತರವನ್ನು ಕೂಡ ಪ್ರಕಟಿಸಲಾಗಿದೆ. ಆದ್ರೇ ಕೀ-ಉತ್ತರದ ಬಗ್ಗೆ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸುವ ಕುರಿತಂತೆ ಕೆಪಿಎಸ್ಸಿಯ ಈ ಸೂಚನೆಗಳನ್ನು ಪಾಲಿಸುವಂತೆ ಆಯೋಗವು ತಿಳಿಸಿದೆ.

ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಸಹಾಯಕ ಕಾರ್ಯದರ್ಶಿ ಆರ್.ಎಸ್.ವೆಂಕಟಯ್ಯ ಪ್ರಕಟಣೆ ಹೊರಡಿಸಿದ್ದು, ದಿನಾಂಕ 28-02-2021ರಂದು ನಡೆದ ವಿವಿಧ ಇಲಾಖೆಗಳಲ್ಲಿನ ಸಹಾಯಕರು, ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ( ವಿಷಯ ಸಂಕೇತ-385), ಸಾಮಾನ್ಯ ಕನ್ನಡ(ವಿಷಯ ಸಂಕೇತ-386, ಸಾಮಾನ್ಯ ಇಂಗ್ಲೀಷ್(ವಿಷಯ ಸಂಕೇತ-387)ರ ಕೀ-ಉತ್ತರಗಳನ್ನು ಆಯೋಗದ ಜಾಲತಾಣ www.kpsc.kar.nic.in ನಲ್ಲಿ ಪ್ರಕಟಿಸಲಾಗಿದೆ.

ಈ ಕೀ-ಉತ್ತರಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಅಭ್ಯರ್ಥಿಗಳು ಕೆಳಕಂಡ ಸೂಚನೆಯಂತೆ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂಬುದಾಗಿ ತಿಳಿಸಿದೆ.

FDA ಕೀ-ಉತ್ತರದ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸೂಚನೆಗಳು

 • ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ದಿನಾಂಕ 10-03-2021ರಂದು ಸಂಜೆ 5.30ರೊಳಗಾಗಿ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001 ಈ ವಿಳಾಸಕ್ಕೆ ಮಾತ್ರ ತಲುಪುವಂತೆ ಕಳುಹಿಸಿಕೊಡಬೇಕು.
 • ಆಕ್ಷೇಪಣೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 10-03-2021ರ ಸಂಜೆ 5.30ಆಗಿದ್ದು, ಈ ಅವಧಿಯ ನಂತ್ರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳ ಆಕ್ಷೇಪಣೆಗಳು ಅಂಚೆಯ ಮೂಲಕ ಆಯೋಗಕ್ಕೆ ತಲುಪಲು ವಿಳಂಬವಾದಲ್ಲಿ ಕೆಪಿಎಸ್ಸಿ ಜವಾಬ್ದಾರಿಯಾಗುವುದಿಲ್ಲ.
 • ಆಕ್ಷೇಪಣೆಗಳ ವಿವರಗಳನ್ನು ಕಡ್ಡಾಯವಾಗಿ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ನಮೂನೆಯಲ್ಲಿಯೇ ( ಕನ್ನಡ ಅಥವಾ ಇಂಗ್ಲಿಷ್) ಸಲ್ಲಿಸಬೇಕು. ಇದರೊಂದಿಗೆ ಪ್ರತಿ ಪ್ರಶ್ನೆಗೆ ರೂ.50ರಂತೆ ಶುಲ್ಕವನ್ನು ( ಐಪಿಓ ಅಥವಾ ಡಿಡಿ ಮೂಲಕ) ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು, ಇವರ ಹೆಸರಿಗೆ ಸಂದಾಯ ಮಾಡಬೇಕು.
 • ಶುಲ್ಕ ಸಂದಾಯ ಮಾಡದ ಆಕ್ಷೇಪಣಾ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
 • ಪ್ರತಿ ಪ್ರಶ್ನೆಯ ಕೀ ಉತ್ತರಕ್ಕೆ ಸಲ್ಲಿಸುವ ಆಕ್ಷೇಪಣೆಗಳಿಗೆ ಪೂರಕವಾಗಿ ದ್ವಿಪ್ರತಿಯಲ್ಲಿ ಸಲ್ಲಿಸಿರುವ ದಾಖಲೆಗಳಿಗೆ ಸಂಬಂಧಿಸಿದಂತೆ ಲೇಖಕರ ಹೆಸರು, ಪ್ರಕಾಶನ ಪ್ರತಿ, ಇತ್ಯಾದಿ ವಿವರಗಳನ್ನು ಆಕ್ಷೇಪಣೆಗಳೊಂದಿಗೆ ನಮೂನೆಯಲ್ಲಿ ನಮೂದಿಸತಕ್ಕದ್ದು.
 • ದಾಖಲೆಗಳನ್ನು ದ್ವಿಪ್ರತಿಯಲ್ಲಿ ಹಾಗೂ ನಿಗದಿತ ನಮೂನೆಯಲ್ಲಿ ಸಲ್ಲಿಸದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು.
 • ದಾಖಲೆಗಳ ಪ್ರತಿ ಪುಟದ ಮೇಲೆ ಪ್ರಶ್ನೆ ಸಂಖ್ಯೆ ಮತ್ತು ನೊಂದಣೆ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯತಕ್ಕದ್ದು.
 • ಆಕ್ಷೇಪಣೆಯೊಂದಿಗೆ ಅಭ್ಯರ್ಥಿಯು ದೃಢೀಕರಿಸಿದ ಪ್ರವೇಶ ಪತ್ರದ ಪ್ರತಿಯನ್ನು ಪರಿಶೀಲನೆಗಾಗಿ ಲಗತ್ತಿಸಬೇಕು.

ಎಫ್ ಡಿ ಎ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಂತ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಈ ಮೇಲಿನ ಕರ್ನಾಟಕ ಲೋಕಸೇವಾ ಆಯೋಗದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಕೀ-ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸೋದು ಮರೆಯಬೇಡಿ. ಒಂದು ವೇಳೆ ಇಂತಹ ಸೂಚನೆ ಪಾಲಿಸದೇ ನೀವು ಕೀ-ಉತ್ತರದ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದೇ ಆದಲ್ಲಿ, ನಿಮ್ಮ ಆಕ್ಷೇಪಣೆ ತಿರಸ್ಕೃತಗೊಳ್ಳಲಿದೆ. ಸೋ ತಪ್ಪದೇ ಎಚ್ಚರಿಕೆ ವಹಿಸಿ.


Lifestyle

ಡಿಜಿಟಲ್‌ ಡೆಸ್ಕ್:‌ ಒಬ್ಬ ವ್ಯಕ್ತಿಗೆ ತನ್ನ ತೂಕ ಇಳಿಸಿಕೊಳ್ಳಲು ಮುಖ್ಯವಾಗಿ ಬೇಕಿರೋದು ತಾಳ್ಮೆ. ಯಾಕಂದ್ರೆ, ಇದು ಒಂದು ರಾತ್ರಿಯ ಪ್ರಕ್ರಿಯೆಯಲ್ಲ. ಇದಕ್ಕಾಗಿ ನೀವು ಕಠಿಣ ಪರಿಶ್ರಮ ಪಡ್ಲೇಬೇಕು. ಇನ್ನು ಮುಖ್ಯವಾಗಿ ಪ್ರಕ್ರಿಯೆ ಉದ್ದಕ್ಕೂ ನೀವು ಆಶಾವಾದಿಗಳಾಗರ್ಬೇಕು. ನಿಮ್ಮ ಡಯಟ್ ಪ್ಲಾನ್ ನಿಮ್ಮ ತೂಕವನ್ನ ನಿರ್ಧರಿಸುತ್ತದೆ. ನೀವು ನಿಮ್ಮ ತೂಕ ನಿರ್ವಹಣೆಗೆ ಡಯಟ್ ಪ್ಲಾನ್ ಅನುಸರಿಸುತ್ತಿದ್ರೆ, ನೀವು ಅದನ್ನ ಕಟ್ಟುನಿಟ್ಟಾಗಿ ಮತ್ತು ಸಂಪೂರ್ಣ ಶಿಸ್ತಿನಿಂದ ಪಾಲಿಸುತ್ತಿದ್ದೀರಾ ಅನ್ನೋದನ್ನ ಖಚಿತಪಡಿಸಿಕೊಳ್ಳಿ.

ಡಯಟ್ʼನಿಂದ ಮಾತ್ರ ದೇಹಕ್ಕೆ ಯಾವುದೇ ರೀತಿಯ ಅದ್ಭುತಗಳು ಆಗುವುದಿಲ್ಲ. ನೀವು ವ್ಯಾಯಾಮ ಮಾಡ್ಬೇಕು ಅಥವಾ ಹೆಚ್ಚುವರಿ ಕಿಲೋಗಳನ್ನ ಹೊರಹಾಕಲು ಕೆಲವು ರೀತಿಯ ದೈಹಿಕ ಚಟುವಟಿಕೆಯನ್ನ ಅಭ್ಯಾಸ ಮಾಡ್ಬೇಕು. ತೂಕ ಇಳಿಸಿಕೊಳ್ಳುವುದು ಸುಲಭವಲ್ಲ. ಆದ್ರೆ, ಪ್ರಯತ್ನ ಪಟ್ಟರೇ ಅಸಾಧ್ಯವೂ ಅಲ್ಲ. ತೂಕ ಇಳಿಸುವ ಇಚ್ಛಾಶಕ್ತಿ ನಿಮ್ಮಲ್ಲಿದ್ರೆ, ನೀವು ಸುಲಭವಾಗಿ ತೂಕ ಇಳಿಸಬಹುದು. ಮೊದಲನೆಯದಾಗಿ, ಸೋಮಾರಿತನವು ಅತಿಯಾದ ತೂಕ ಏರಿಕೆಗೆ ಕಾರಣವಾಗಬಹುದು. ಆದ್ದರಿಂದ ಮೊದ್ಲು ನೀವು ಸೋಮಾರಿತನ ಮಾಡುವುದನ್ನ ನಿಲ್ಲಿಸಬೇಕು. ಅದ್ರಂತೆ, ಹೊಸ ಬಗೆಯ 7 ದಿನಗಳ ಭಾರತೀಯ ಡಯಟ್ ಪ್ಲಾನ್ ಇಲ್ಲಿದೆ.

ಸಾರ್ವಜನಿಕರೇ ಗಮನಿಸಿ: ʼಅನರ್ಹ BPL ಕಾರ್ಡ್ʼ ಬಗ್ಗೆ ಮಾಹಿತಿ ನೀಡಿ, 400 ರೂಪಾಯಿ ಬಹುಮಾನ ಗೆಲ್ಲಿ..!

ವಾರದೊಳಗೆ ತೂಕ ಇಳಿಸಲು ಭಾರತೀಯ ಡಯಟ್ ಪ್ಲಾನ್..!

ಮುಂಜಾನೆ: ಒಂದು ಲೋಟ ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದ್ರ ಮೂಲಕ ನಿಮ್ಮ ದಿನವನ್ನ ಪ್ರಾರಂಭಿಸಿ.

ಬೆಳಗಿನ ಉಪಹಾರ: ಇಡ್ಲಿ, ದೋಸೆ, ಮೊಸರನ್ನದೊಂದಿಗೆ ತರಕಾರಿ ಪರಾಟಾ, ತುಪ್ಪದೊಂದಿಗೆ ಮಾಡಿದ ರೊಟ್ಟಿ ತಿನ್ನಿ.

ಮಿಡ್ ಸ್ನ್ಯಾಕ್ಸ್ : ಒಂದು ಬೌಲ್ ಹಣ್ಣು ಅಥ್ವಾ ಫ್ರೂಟ್ ಸ್ನಾಕ್ಸ್ ಅಥ್ವಾ ಒಂದು ಬೌಲ್ʼನಲ್ಲಿ ಬೇಯಿಸಿದ ತರಕಾರಿಗಳು

ಮಧ್ಯಾಹ್ನ: ದಾಲ್ ಮತ್ತು ಚಪಾತಿ, ತರಕಾರಿ ರೈತಾ.

ಸಂಜೆ: ತರಕಾರಿ ಸೂಪ್, ದ್ವಿದಳ ಸೊಪ್ಪು, ಹಸಿರು ಸೊಪ್ಪು

ರಾತ್ರಿ ಊಟ: ಕಾಯಿಗಳು ಮತ್ತು ಹಣ್ಣುಗಳು, ಹಾಲು ಮತ್ತು ಬೆಲ್ಲ

ತಾಜ್‌ಮಹಲ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ : ಭದ್ರತಾ ಸಿಬ್ಬಂದಿ ಸ್ಪಷ್ಟೀಕರಣ

7 ದಿನಗಳ ತೂಕ ಇಳಿಸುವ ಡಯಟ್ ಪ್ಲಾನ್ʼನ ಪ್ರಯೋಜನಗಳು..!

* ನಿಮ್ಮ ಚರ್ಮ ಮತ್ತು ಕೂದಲನ್ನ ಸುಧಾರಿಸುತ್ತದೆ. ಇದು ನಿಮ್ಮ ಚರ್ಮ ಮತ್ತು ಕೂದಲನ್ನು ನೈಸರ್ಗಿಕವಾಗಿ ತಾಜಾ ಮತ್ತು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ.

* ಸಂತೋಷಕರವಾದ ಹಾರ್ಮೋನುಗಳನ್ನ ಉತ್ಪಾದಿಸುತ್ತದೆ ಮತ್ತು ನಿಮ್ಮ ಮೂಡ್ ಅನ್ನ ಹೆಚ್ಚಿಸುತ್ತದೆ. ಇನ್ನು
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಮಲಬದ್ಧತೆಯನ್ನ ನಿವಾರಿಸಲು ಕೂಡ ಇದು ಸಹಕಾರಿ.

* ಇದು ನಿಮ್ಮ ಚಯಾಪಚಯ ಕ್ರಿಯೆಯನ್ನ ಹೆಚ್ಚಿಸುತ್ತದೆ ಮತ್ತು ನಿಮ್ಮ ದೇಹವನ್ನ ರೋಗ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಮರ್ಥರನ್ನಾಗಿಸುತ್ತದೆ.

* ಇದು ನಿಮ್ಮ ದೇಹವನ್ನ ನಿರ್ವಿಷಗೊಳಿಸಿ, ಹೆಚ್ಚುವರಿ ವಿಷಕಾರಿ ಅಂಶಗಳನ್ನೂ ಹೊರ ಹಾಕುತ್ತವೆ.

OTT ಪ್ಲಾಟ್‌ಫಾರ್ಮ್‌ಗಲ್ಲಿ ಪ್ರದರ್ಶನಗೊಳ್ಳುವ ಮೊದಲು ಸೆನ್ಸಾರ್ ಅವಶ್ಯಕ: ಸುಪ್ರಿಂಕೋರ್ಟ್‌ ಮೌಖಿಕ ಅಭಿಪ್ರಾಯ

ನೀವು 7 ದಿನಗಳ ತೂಕ ಇಳಿಸುವ ಡಯಟ್ ಪ್ಲಾನ್ʼನಲ್ಲಿದ್ದಾಗ ಅನುಸರಿಸಬೇಕಾದ ಸಲಹೆಗಳು..!

* ನೀವು ನಿಮ್ಮ ಊಟದ ನಡುವೆ ಆಗಾಗ ನೀರನ್ನ ಕುಡಿಯುತ್ತಿರಬೇಕು. ಇದರಿಂದ ನೀವು ದಿನವಿಡೀ ಹೈಡ್ರೇಟ್ ಆಗಿರುತ್ತೀರಿ ಮತ್ತು ಹೆಚ್ಚು ಹಸಿವಾಗುವುದಿಲ್ಲ. ಈ ಆಹಾರ ಕ್ರಮದಲ್ಲಿ ಕುದಿಸಿದ ಅಥವಾ ಉಗುರು ಬೆಚ್ಚಗಿನ ನೀರಿಗೆ ಆದ್ಯತೆ ನೀಡಲಾಗುತ್ತದೆ.

* ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಆದ್ರೆ, ನಿಮ್ಮ ದೇಹವು ಅದನ್ನ ಕೇಳುತ್ತಿದೆ ಎಂದಾದಲ್ಲಿ ಸ್ವಲ್ಪ ವಿರಾಮ ತೆಗೆದುಕೊಳ್ಳಿ.

* ಈ ಆಹಾರ ಕ್ರಮವನ್ನ ಪಾಲಿಸಿ ಸರಿಯಾದ ಸಮಯಕ್ಕೆ ಸರಿಯಾಗಿ ವ್ಯಾಯಾಮ ಮಾಡಿ, ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿದ್ದರೆ ನಿಮ್ಮ ಡಯಟ್ ಪ್ಲಾನ್ ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮ ನಿದ್ದೆಯ ಸ್ವರೂಪವು ಅಸ್ತವ್ಯಸ್ತವಾಗಿದ್ದರೆ ನಿಮ್ಮ ಎಲ್ಲಾ ಶ್ರಮವು ಚರಂಡಿಗೆ ಇಳಿಯುತ್ತದೆ. ಪ್ರತಿದಿನ ಕನಿಷ್ಠ 8 ಗಂಟೆ ನಿದ್ದೆ ಮಾಡಬೇಕು.

ವಿಧಾನ ಪರಿಷತ್‌ನಲ್ಲಿ ಮೊಬೈಲ್ ಫೋನ್‌ ಬಳಕೆ ಬ್ಯಾನ್‌: ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶ


India

ನವದೆಹಲಿ  : ಏಪ್ರಿಲ್ 29ರ ಬಳಿಕ  ಉತ್ತರ ಪ್ರದೇಶದ ಬರೇಲಿಯಿಂದ ಮುಂಬೈ ಹಾಗೂ ಬೆಂಗಳೂರಿಗೆ ವಿಮಾನ ಯಾನ ಸೇವೆ ಆರಂಭಿಸುವುದಾಗಿ ಇಂಡಿಗೋ ವಿಮಾನ ಸಂಸ್ಥೆ ಮಾಹಿತಿ ನೀಡಿದೆ.

ಮುಂಬೈ-ಬರೇಲಿ ಮಾರ್ಗದಲ್ಲಿ ವಾರಕ್ಕೆ ನಾಲ್ಕು ವಿಮಾನಗಳು ಹಾಗೂ ಬೆಂಗಳೂರು-ಬರೇಲಿ ಮಾರ್ಗದಲ್ಲಿ ವಾರಕ್ಕೆ ಮೂರು ವಿಮಾನಗಳು ಸಂಚರಿಸಲಿವೆ ಎಂದು ಮಾಹಿತಿ ನೀಡಿದೆ.

ಏಪ್ರಿಲ್ 29ರ ಬಳಿಕ  ಉತ್ತರ ಪ್ರದೇಶದ ಬರೇಲಿಯಿಂದ ಮುಂಬೈ ಹಾಗೂ ಬೆಂಗಳೂರಿಗೆ ವಿಮಾನ ಯಾನ ಸೇವೆ ಆರಂಭವಾಗಲಿದ್ದು, ಈ ಮೂಲಕ ಪ್ರಯಾಣಿಕರಿಗೆ ಪ್ರಯೋಜನ ಸಿಗಲಿದೆ.

ʼಸಾಸಿವೆ ಎಣ್ಣೆʼ ನಿಮ್ಮ ʼಹೃದಯಕ್ಕೆ ಅತ್ಯುತ್ತಮʼ: ಆರೋಗ್ಯ ತಜ್ಞರು ಹೇಳ್ತಿರೋದು ಏನು ನೋಡಿ..!

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್‌ : ಇನ್ಮುಂದೆ ‘ಹಳಿ ಮೇಲೆ’ ಉಚಿತವಾಗಿ ನಿಮಗೆ ಬೇಕಾದ ಭಾಷೆಗಳಲ್ಲಿ ಸಿಗಲಿದೆ, ಚಲನಚಿತ್ರ, ವೀಡಿಯೊ, ಸುದ್ದಿ


India

ಡಿಜಿಟಲ್‌ ಡೆಸ್ಕ್:‌ ನಿನ್ನೆ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಅವ್ರ ಆದಾಯದಲ್ಲಿ ಭಾರೀ ಪ್ರಮಾಣದ ವ್ಯತ್ಯಾಸ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ಸಮಯದಲ್ಲಿ ಸ್ವತಃ ಆದಾಯ ತೆರಿಗೆ ಅಧಿಕಾರಿಗಳಿಗೆ ಶಾಕ್‌ ಆಗಿದ್ದಾರೆ ಎನ್ನಲಾಗ್ತಿದ್ದು, ಲೆಕ್ಕಕ್ಕೆ ಸಿಗದ ಸಾಕಷ್ಟು ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಅವ್ರ ಆದಾಯದಲ್ಲಿ 650 ಕೋಟಿ ರೂಪಾಯಿಗಳ ವ್ಯತ್ಯಾಸ ಕಂಡು ಬಂದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಿಧಾನ ಪರಿಷತ್‌ನಲ್ಲಿ ಮೊಬೈಲ್ ಫೋನ್‌ ಬಳಕೆ ಬ್ಯಾನ್‌: ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶ


Lifestyle

ಡಿಜಿಟಲ್‌ ಡೆಸ್ಕ್:‌ ನೀವು ಸಾಂಕ್ರಾಮಿಕ ರೋಗದ ನಡುವೆ ಉತ್ತಮ ಆರೋಗ್ಯವನ್ನ ಪಡೆಯಲು ಬಯಸಿದ್ರೆ, ಸರಿಯಾದ ಎಣ್ಣೆಯನ್ನ ಆಯ್ಕೆ ಮಾಡುವುದು ಆಗತ್ಯ. ಇನ್ನು ಕೋವಿಡ್-19 ಒಂದು ಉರಿಯೂತದ ಕಾಯಿಲೆಯಾಗಿರೋದ್ರಿಂದ ನಾವು ಉರಿಯೂತ ವಿರೋಧಿ ಆಹಾರಗಳ ಬಗ್ಗೆ ಮತ್ತು ಉತ್ತಮ ಅಡುಗೆ ಎಣ್ಣೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಉನ್ನತ ಆರೋಗ್ಯ ತಜ್ಞರು ಹೇಳಿದ್ದಾರೆ.

ಖ್ಯಾತ ವೈದ್ಯ ಮತ್ತು ಹೃದ್ರೋಗ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಕೆ.ಕೆ ಅಗರ್ವಾಲ್ ಅವರು ಸಾಸಿವೆ ಎಣ್ಣೆ ಅತ್ಯುತ್ತಮ ಎನ್ನುತ್ತಾರೆ. ಯಾಕಂದ್ರೆ, ಇದ್ರಲ್ಲಿ ಮೊನೊಸ್ಯಾಚುರೇಟೆಡ್ ಫ್ಯಾಟಿ ಆಸಿಡ್ (MUFA) ಸಮೃದ್ಧವಾಗಿದೆ. ಇನ್ನೀದು ಹೆಚ್ಚಿನ ಪ್ರಮಾಣದ ಒಮೆಗಾ-3, ಕೊಬ್ಬಿನ ಆಮ್ಲಗಳು ಮತ್ತು ಆಲ್ಫಾ-ಲಿನೋಲೆನಿಕ್ ಆಮ್ಲವನ್ನ ಹೊಂದಿದೆ. ಇದು ಉತ್ಕರ್ಷಣ ಒತ್ತಡ ಮತ್ತು ಉರಿಯೂತವನ್ನ ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.

ಸಾರ್ವಜನಿಕರೇ ಗಮನಿಸಿ: ʼಅನರ್ಹ BPL ಕಾರ್ಡ್ʼ ಬಗ್ಗೆ ಮಾಹಿತಿ ನೀಡಿ, 400 ರೂಪಾಯಿ ಬಹುಮಾನ ಗೆಲ್ಲಿ..!

“ಹೃದ್ರೋಗ ತಜ್ಞರು ಸಾಸಿವೆ ಎಣ್ಣೆಯನ್ನ ಮೆಚ್ಚಿದ್ದಾರೆ. ಹಾಗಾಗಿನೇ ಹೆಚ್ಚಿನ ಸಂಖ್ಯೆಯ ವೈದ್ಯರು ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಇತರ ಸಂಬಂಧಿತ ಆರೋಗ್ಯ ಸಮಸ್ಯೆಗಳ ಅಪಾಯವನ್ನ ಕಡಿಮೆ ಮಾಡಲು ಸಾಸಿವೆ ಎಣ್ಣೆಯನ್ನ ಶಿಫಾರಸು ಮಾಡುತ್ತಿದ್ದಾರೆ” ಎಂದು ಪುರಿ ಆಯಿಲ್ ಮಿಲ್ಸ್ ಲಿಮಿಟೆಡ್ʼನ ಆರ್ ಅಂಡ್ ಡಿ ವಿಭಾಗದ (ಪಿ ಮಾರ್ಕ್ ಸಾಸಿವೆ ಎಣ್ಣೆಯ ತಯಾರಕರು) ಸಾಸಿವೆ ಸಂಶೋಧನಾ ಉತ್ತೇಜನಾಧಿಕಾರಿ (ಎಂಆರ್ ಪಿಸಿ) ಹಿರಿಯ ವಿಜ್ಞಾನಿ ಮತ್ತು ನಿರ್ದೇಶಕಿ ಡಾ. ಪ್ರಗ್ಯಾ ಗುಪ್ತಾ ಹೇಳಿದ್ದಾರೆ.

“ಸಾಸಿವೆ ಎಣ್ಣೆಯು ಶುದ್ಧ, ನೈಸರ್ಗಿಕ, ಎಕ್ಸ್ಟ್ರಾ ವರ್ಜಿನ್ ಆಗಿದ್ದು, ವ್ಯಾಪಕವಾದ ಆರೋಗ್ಯ ಪ್ರಯೋಜನಗಳನ್ನ ಒದಗಿಸುತ್ತದೆ. ನಮ್ಮ ಕಂಪನಿಯು 85 ವರ್ಷಗಳಿಂದ ಈ ಅದ್ಭುತ ತೈಲವನ್ನ ತಯಾರಿಸಲು ತನ್ನನ್ನು ತಾನು ಅರ್ಪಿಸಿಕೊಂಡಿದೆ.” ಎಂದರು.

ಖ್ಯಾತ ಹೃದ್ರೋಗ ತಜ್ಞ ಡಾ.ಟಿ.ಎಸ್.ಕ್ಲರ್ ಅವರ ಪ್ರಕಾರ, “ಸಾಸಿವೆ ಎಣ್ಣೆಯು ಆರೋಗ್ಯಕರ ಖಾದ್ಯ ತೈಲಗಳಲ್ಲಿ ಒಂದಾಗಿದೆ. ಯಾಕಂದ್ರೆ, ಇದು ಕಡಿಮೆ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ʼಗಳನ್ನ ಮತ್ತು ಹೆಚ್ಚಿನ ಪ್ರಮಾಣದ ಏಕ ಪರ್ಯಾಪ್ತ ಕೊಬ್ಬಿನ ಆಮ್ಲಗಳು ಮತ್ತು ಪಾಲಿ ಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ʼಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ಒಳ್ಳೆಯದು” ಎಂದು ಹೇಳಿದ್ದಾರೆ.

ತಾಜ್‌ಮಹಲ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ : ಭದ್ರತಾ ಸಿಬ್ಬಂದಿ ಸ್ಪಷ್ಟೀಕರಣ

“ಸಾಸಿವೆ ಎಣ್ಣೆಯಲ್ಲಿ ಕಂಡು ಬರುವ ಆಲ್ಫಾ-ಲಿನೋಲೆನಿಕ್ ಆಮ್ಲವು ಬ್ಲೇಡ್ ಪ್ಲೇಟ್ ಲೆಟ್‌ʼಗಳ ಅಂಟು-ಒಟ್ಟುಗೂಡಿಕೆಯ ಪ್ರವೃತ್ತಿಯನ್ನ ಕಡಿಮೆ ಮಾಡುತ್ತೆ. ಇದು ಹೃದಯಾಘಾತದ ಅಪಾಯವನ್ನ ಕಡಿಮೆ ಮಾಡುತ್ತದೆ. ಹಲವಾರು ವೈದ್ಯಕೀಯ ಅಧ್ಯಯನಗಳು ಕೂಡ ಸಾಸಿವೆ ಎಣ್ಣೆ ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂದು ಕಂಡುಕೊಂಡಿವೆ” ಎಂದು ಕ್ಲರ್ ಹೇಳಿದ್ದಾರೆ.

ಸಾಸಿವೆ ಎಣ್ಣೆಯಲ್ಲಿ ಉರಿಯೂತ ಶಮನಕಾರಿ ಗುಣಗಳಿರುವ ಅಲೀಲ್ ಐಸೋಥಿಯೋಸೈನೇಟ್ (AITC) ಎಂಬ ಫೈಟೋಕೆಮಿಕಲ್ ಸಂಯುಕ್ತವೂ ಇದೆ. ಜರ್ನಲ್ ಆಫ್ ಸೆಲ್ಯುಲರ್ & ಮಾಲಿಕ್ಯುಲರ್ ಮೆಡಿಸಿನ್ʼನಲ್ಲಿ ಪ್ರಕಟವಾದ ಒಂದು ಅಧ್ಯಯನವು ಕರುಳು ಮತ್ತು ಜಠರಗರುಳಿನ ಉರಿಯೂತದ ವಿರುದ್ಧ ಹೋರಾಡಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತೆ ಎಂದಿದೆ.

ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಪೊಲೀಸ್ ವಿಚಾರಣೆಗೆ ದೂರುದಾರ ದಿನೇಶ್ ಕಲ್ಲಹಳ್ಳಿ ಗೈರಿಗೆ ಕೊಟ್ಟ ಕಾರಣವೇನು ಗೊತ್ತಾ.?

ಪ್ರಸ್ತುತ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಶೇಷವಾಗಿ ಪ್ರಸ್ತುತವಾಗುವ ಮತ್ತೊಂದು ಆಸಕ್ತಿದಾಯಕ ಪ್ರಯೋಜನ ಇಲ್ಲಿದೆ. “ಕೋವಿಡ್-19 ಒಂದು ಕೊಬ್ಬಿನ ವೈರಸ್ ಮತ್ತು ಸಾಸಿವೆ ಎಣ್ಣೆಯು ಬೊಜ್ಜು ವಿರೋಧಿ ತೈಲವಾಗಿದೆ” ಎಂದು ಇತ್ತೀಚೆಗೆ ವೆಬ್ ಬಿನಾರ್ʼನಲ್ಲಿ ಅಗರ್ವಾಲ್ ಹೇಳಿದರು.

ಏಷಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ʼನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಸಾಸಿವೆ ಎಣ್ಣೆಯ ನಿಯಮಿತ ಸೇವನೆಯಿಂದ ದೇಹದ ತೂಕ ಕಡಿಮೆ, ಕಡಿಮೆ ವಿಸೆರಲ್ ಕೊಬ್ಬು ಶೇಖರಣೆ, ಮತ್ತು ಗ್ಲುಕೋಸ್ ಮತ್ತು ಲಿಪಿಡ್ ಹೋಮಿಯೋಸ್ಸಿಸ್ʼನ್ನ ಸುಧಾರಿಸುತ್ತೆ.

ವಿಧಾನ ಪರಿಷತ್‌ನಲ್ಲಿ ಮೊಬೈಲ್ ಫೋನ್‌ ಬಳಕೆ ಬ್ಯಾನ್‌: ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶ


India State

ನವದೆಹಲಿ : ಪೆಟ್ರೋಲ್ ದರ ಏರಿಕೆ ಬಗ್ಗೆ ತೀವ್ರ ಆಕ್ರೋಶದ ನಡುವೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಅರ್ಥಶಾಸ್ತ್ರಜ್ಞರು ಗುರುವಾರ ಪೆಟ್ರೋಲ್ ಬೆಲೆಯನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯಾಪ್ತಿಗೆ ತಂದರೆ ದೇಶಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75 ರೂ.ಗೆ ಇಳಿಕೆಯಾಗಬಹುದು ಎಂದು ಹೇಳಿದ್ದಾರೆ.

ಆದರೆ, ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಇದು ಭಾರತದ ತೈಲ ಉತ್ಪನ್ನದ ಬೆಲೆಗಳನ್ನು ಜಗತ್ತಿನಲ್ಲೇ ಅತ್ಯಂತ ಉನ್ನತ ಮಟ್ಟದಲ್ಲಿಯೇ ಇರಿಸಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

‘ಒಬ್ಬಳೆ ಯುವತಿ’ ಮದುವೆಗಾಗಿ ‘ನಾಲ್ವರು ಯುವಕರು ಕ್ಯೂ’ : ಆಕೆ ‘ಲಕ್ಕಿ ಡ್ರಾ’ ಮೂಲಕ ಒಲಿದಿದ್ದು ಯಾರಿಗೆ ಗೊತ್ತಾ.?

ಜಾಗತಿಕ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಮತ್ತು ವಿನಿಮಯ ದರ ಪ್ರತಿ ಡಾಲರ್ ಗೆ ರೂ.73 ರಂತೆ ಡೀಸೆಲ್ 68 ರೂಪಾಯಿಗಳು. ಕೇಂದ್ರ ಮತ್ತು ರಾಜ್ಯಗಳಿಗೆ ಆದಾಯನಷ್ಟವು ಕೇವಲ 1 ಲಕ್ಷ ಕೋಟಿ ರೂಪಾಯಿ ಅಥವಾ 0.4% ನಷ್ಟು ಮಾತ್ರ ಆಗಲಿದೆ ಎಂದು ಅರ್ಥಶಾಸ್ತ್ರಜ್ಞರು ಲೆಕ್ಕಾಚಾರ ಮಾಡಿದ್ದಾರೆ.

ಸರಕು ಮತ್ತು ಸೇವಾ ತೆರಿಗೆಯ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತರುವುದು ಜಿಎಸ್ ಟಿ ಚೌಕಟ್ಟಿನ ಅಪೂರ್ಣ ಕಾರ್ಯಸೂಚಿಯಾಗಿದೆ ಎಂದು ಹೇಳಿದ ಅರ್ಥಶಾಸ್ತ್ರಜ್ಞರು, ಹೊಸ ಪರೋಕ್ಷ ತೆರಿಗೆಗಳ ಚೌಕಟ್ಟಿನ ಅಡಿಯಲ್ಲಿ ಬೆಲೆಗಳನ್ನು ಪಡೆಯುವುದರಿಂದ ಸಹಾಯವಾಗುತ್ತದೆ ಎಂದು ಹೇಳಿದರು.

ರಾಜ್ಯದ ಜನರಿಗೆ ಗುಡ್ ನ್ಯೂಸ್ : ಪಿಎಚ್‍ಸಿ, ಸಮುದಾಯ ಆರೋಗ್ಯ ಕೇಂದ್ರದಲ್ಲೂ ‘ಕೋವಿಡ್ ಲಸಿಕೆ’ – ಸಚಿವ ಡಾ.ಕೆ.ಸುಧಾಕರ್

”ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆ/ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಜಿಎಸ್ ಟಿ ವ್ಯಾಪ್ತಿಗೆ ಒಳಪಡುವುದರಿಂದ ಕೇಂದ್ರ ಮತ್ತು ರಾಜ್ಯಗಳು ಕಚ್ಚಾ ತೈಲದ ಉತ್ಪನ್ನಗಳನ್ನು ತರಲು ಅಸಕ್ತಿ ವಹಿಸುತ್ತಿವೆ. ಆದ್ರೇ ಜಿಎಸ್ ಟಿ ವ್ಯಾಪ್ತಿಗೆ ಕಚ್ಚಾತೈಲವನ್ನು ತರಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ’ ಎಂದು ಅರ್ಥಶಾಸ್ತ್ರಜ್ಞರು ಹೇಳಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ವಿವರಣೆ ನೀಡಿರುವ ಅರ್ಥಶಾಸ್ತ್ರಜ್ಞರು, ರಾಜ್ಯಗಳು ಪ್ರಸ್ತುತ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಜಾಹೀರಾತು ವ್ಯಾಲೋರಿಮ್ ತೆರಿಗೆ, ಸೆಸ್, ಹೆಚ್ಚುವರಿ ವ್ಯಾಟ್/ಸರ್ಚಾರ್ಜ್ ವಿಧಿಸಲು ನಿರ್ಧರಿಸಿವೆ ಎಂದು ಹೇಳಿದ ಅವರು, ಕಚ್ಚಾ ತೈಲ ಬೆಲೆ, ಸಾಗಣೆ ಶುಲ್ಕ, ಡೀಲರ್ ಕಮಿಷನ್ ಮತ್ತು ಕೇಂದ್ರ ಸರ್ಕಾರ ವಿಧಿಸುವ ತೆರಿಗೆಗಳನ್ನು ಗಣನೆಗೆ ತೆಗೆದುಕೊಂಡ ನಂತರ ಈ ತೆರಿಗೆಗಳನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.

ಸಚಿವ ಬಿ.ಸಿ ಪಾಟೀಲ್ʼಗೆ ಕೊರೊನಾ ಲಸಿಕೆ ನೀಡಿದ್ದ ವೈದ್ಯಾಧಿಕಾರಿಗೆ ಸಂಕಷ್ಟ: ಕೇಂದ್ರ ಆರೋಗ್ಯ ಇಲಾಖೆಯಿಂದ ʼಶೋಕಾಸ್ ನೋಟಿಸ್ʼ ಜಾರಿ

ಅಂತಿಮ ಬೆಲೆ ಅಂದಾಜುಗಳ ಪ್ರಕಾರ, ಕಚ್ಚಾ ತೈಲದರ ಮತ್ತು ಡಾಲರ್ ದರ, ಡೀಸೆಲ್ ಗೆ 7.25 ರೂ ಮತ್ತು ಡೀಸೆಲ್ ಗೆ 3.82 ರೂ, ಡೀಲರ್ ಕಮಿಷನ್ 2.53 ರೂ, ಪೆಟ್ರೋಲ್ ಗೆ 3.67 ರೂಪಾಯಿ, ಪೆಟ್ರೋಲ್ ಗೆ 30 ರೂಪಾಯಿ ಸೆಸ್, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೆಯಾಗಲಿರುವುದರಿಂದ ಜಿಎಸ್ ಟಿ ಶೇ 28ರಷ್ಟು ಏರಿಕೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯಕ್ಕೆ ಪ್ರತಿಯೊಂದು ರಾಜ್ಯವೂ ಇಂಧನಗಳ ಮೇಲೆ ತೆರಿಗೆ ವಿಧಿಸುವ ವಿಧಾನಹೊಂದಿದ್ದು, ಕೇಂದ್ರವೂ ತನ್ನದೇ ಆದ ಸುಂಕ ಮತ್ತು ಸೆಸ್ ಗಳನ್ನು ಸಂಗ್ರಹಿಸುತ್ತಿದೆ.

ವಿಧಾನಸಭೆ ಕಲಾಪ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿಕೆ..!

“ಉತ್ತಮ ಸಮಯಗಳಿಂದ ಉಳಿತಾಯವಾಗುವ ನಿಧಿಯನ್ನು ಹಾನಿಗೊಳಿಸದೆ, ಆದಾಯ ನಷ್ಟವನ್ನು ಸರಿದೂಗಿಸಲು, ಕೆಟ್ಟ ಸಮಯದಲ್ಲಿ ಬಳಸಬಹುದಾದ ತೈಲ ಬೆಲೆ ಸ್ಥಿರೀಕರಣ ನಿಧಿಯನ್ನು ಸರ್ಕಾರ ವು ನಿರ್ಮಿಸುತ್ತದೆ” ಎಂದು ಆರ್ಥಿಕ ತಜ್ಞರು ಶಿಫಾರಸು ಮಾಡಿದ್ದಾರೆ.

ದೇಶದ ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ.ಗೆ ಮುಟ್ಟಿರುವ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ಬಂದಿದೆ.

ಎಲ್ ಪಿಜಿ ಸಿಲಿಂಡರ್ ಗಳ ಬಗ್ಗೆ ಮಾತನಾಡಿದ ಅರ್ಥಶಾಸ್ತ್ರಜ್ಞರು, ಬಡ ಗ್ರಾಹಕರಿಗೆ ಸಬ್ಸಿಡಿಯನ್ನು ಹೆಚ್ಚಿಸಬಹುದು. ಗ್ರೇಡಿಂಗ್ ಸಬ್ಸಿಡಿಯನ್ನು ನೀಡಬಹುದು ಎಂದು ಸಲಹೆ ನೀಡಿದರು.


State

ರಾಮ್ ಪುರ್ : ಒಬ್ಬಳೇ ಯುವತಿಯನ್ನು ಮದುವೆಯಾಗಲು ನಾಲ್ವರು ಯುವಕು ಕ್ಯೂ ನಿಂತಿದ್ದಾರೆ. ಹೀಗಾಗಿ ಯಾರಿಗೆ ಹುಡುಗಿಯನ್ನು ಕೊಟ್ಟು ಮದುವೆ ಮಾಡೋದು ಎಂಬುದೇ ದೊಡ್ಡ ತಲೆನೋವಾಗಿ ಪರಿಗಣಿಸಿದೆ. ಆಗ ಗ್ರಾಮದ ಸದಸ್ಯರೆಲ್ಲಾ ಪಂಚಾಯ್ತಿಗೆ ಕುಳಿತು ತೀರ್ಮಾನಿಸಿದಾಗ ಹೊಳೆದದ್ದೇ ಲಕ್ಕಿ ಡ್ರಾ.. ಇಂತಹ ಲಕ್ಕಿ ಡ್ರಾ ಮೂಲಕ ಒಬ್ಬಳೇ ಯುವತಿಯನ್ನು ನಾಲ್ವರು ಯುವಕರಲ್ಲಿ ಒಬ್ಬರಿಗೆ ಆಯ್ಕೆ ಮಾಡಿ ಮದುವೆ ಮಾಡಿರುವಂತ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಹೌದು.. ನಾಲ್ಕು ಮಂದಿ ಯುವಕರಿಗೆ ಒಬ್ಬಳು ಯುವತಿಯನ್ನು ಮದುವೆ ಮಾಡುವ ಸಂಬಂಧ ಯುವಕರ ಅದೃಷ್ಟ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದ ವಿಚಿತ್ರ ಘಟನೆ ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯ ಪಂಚಾಯತ್ ನಲ್ಲಿ ನಡೆದಿದೆ.

ಸಚಿವ ಬಿ.ಸಿ ಪಾಟೀಲ್ʼಗೆ ಕೊರೊನಾ ಲಸಿಕೆ ನೀಡಿದ್ದ ವೈದ್ಯಾಧಿಕಾರಿಗೆ ಸಂಕಷ್ಟ: ಕೇಂದ್ರ ಆರೋಗ್ಯ ಇಲಾಖೆಯಿಂದ ʼಶೋಕಾಸ್ ನೋಟಿಸ್ʼ ಜಾರಿ

ನಾಲ್ವರು ಯುವಕರು ಯುವತಿ ತನಗೆ ಬೇಕು, ತನಗೆ ಬೇಕು ಎಂಬುದಾಗಿ ಹಠಕ್ಕೆ ಬಿದ್ದಿದ್ದಾರೆ. ಅಲ್ಲದೇ ಯುವಕನೊಬ್ಬ ಯುವತಿಯನ್ನು ಕೆರೆದುಕೊಂಡು ಹೋಗಿ, ಅಜೀಂ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಬಚ್ಚಿಟ್ಟಿದ್ದಾನೆ.

ಎರಡು ದಿನಗಳ ಕಾಲ ಯುವಕರು ಯುವತಿಯನ್ನು ಸಂಬಂಧಿಕರ ಮನೆಯಲ್ಲಿ ಅಡಗಿಸಿದ್ದರು. ಆದರೆ ವಿಷಯ ಬಹಿರಂಗವಾದ ನಂತರ ಅವರು ಗ್ರಾಮಕ್ಕೆ ಹಿಂದಿರುಗಬೇಕಾಯಿತು. ಈ ಮಧ್ಯೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಲು ಸಿದ್ಧರಿದ್ದರೂ ಗ್ರಾಮಸ್ಥರು ಅದನ್ನು ತಡೆದಿದ್ದಾರೆ.

ರಾಜ್ಯದ ಜನರಿಗೆ ಗುಡ್ ನ್ಯೂಸ್ : ಪಿಎಚ್‍ಸಿ, ಸಮುದಾಯ ಆರೋಗ್ಯ ಕೇಂದ್ರದಲ್ಲೂ ‘ಕೋವಿಡ್ ಲಸಿಕೆ’ – ಸಚಿವ ಡಾ.ಕೆ.ಸುಧಾಕರ್

ನಂತರ, ಯುವತಿಯನ್ನು ಮದುವೆಯಾಗುವಂತೆ ಮನವೊಲಿಸಲು ಯುವಕರೊಂದಿಗೆ ಪಂಚಾಯಿತಿ ಪ್ರತ್ಯೇಕ ಮಾತುಕತೆ ನಡೆಸಿತು. ಆದರೆ ಯಾರೂ ಸಿದ್ಧರಿರಲಿಲ್ಲ. ಈ ಬಗ್ಗೆ ಪಂಚಾಯಿತಿ ಮೂರು ದಿನಗಳ ಕಾಲ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದಾರೆ.

ಹುಡುಗಿಯೂ ಸಹ ಒಬ್ಬ ಯುವಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ನಂತರ ಎಲ್ಲರೂ ಒಪ್ಪಿದ ವರನನ್ನು ಆಯ್ಕೆ ಮಾಡಲು ಲಕ್ಕಿ ಡ್ರಾ ನಡೆಸಲು ನಿರ್ಧರಿಸಲಾಯಿತು.

ವಿಧಾನಸಭೆ ಕಲಾಪ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿಕೆ..!

ಇದಾದ ನಂತರ ನಾಲ್ಕು ಸ್ಲಿಪ್ ಗಳನ್ನು ತಯಾರಿಸಲಾಯಿತು, ಅದರಲ್ಲಿ ನಾಲ್ಕು ಯುವಕರ ಹೆಸರನ್ನು ಬರೆಯಲಾಗಿತ್ತು. ಒಂದು ಬಟ್ಟಲಿನಲ್ಲಿ ಇಡಲಾಗಿತ್ತು. ಒಂದು ಸ್ಲಿಪ್ ತೆಗೆದುಕೊಳ್ಳಲು ಒಂದು ಮಗುವನ್ನು ಕೇಳಲಾಯಿತು. ಅಂತಿಮವಾಗಿ, ಯುವತಿಯನ್ನು ಮದುವೆಯಾಗಲಿರುವ ಯುವಕನ ಹೆಸರನ್ನು ನಿರ್ಧರಿಸಲಾಯಿತು. ಈ ಮೂಲಕ ಯುವಕನೊಬ್ಬನನ್ನು ಯುವತಿ ವರಿಸುವುದರೊಂದಿಗೆ ಪ್ರಕರಣ ಸುಖಾಂತ್ಯಗೊಂಡಿದೆ.

‘ತಲೆದಿಂಬು’ಗಳನ್ನು ಎರಡು ವರ್ಷಕ್ಕೊಮ್ಮೆ ಏಕೆ ಬದಲಾಯಿಸಬೇಕು ಗೊತ್ತೆ.? ಇಲ್ಲಿದೆ ಸಂಪೂರ್ಣ ಮಾಹಿತಿ


India

ತಮಿಳುನಾಡು : ವಿಧಾನಸಭೆಯ ಚುನಾವಣೆ ಘೋಷಣೆಗೂ ಮುನ್ನವೇ, ಜಯಲಲಿತಾ ಆಪ್ತೆ ಶಶಿಕಲಾ ಜೈಲು ಶಿಕ್ಷೆ ಮುಗಿಸಿ, ಹೊರ ಬರುತ್ತಿದ್ದಂತೆ ತಮಿಳುನಾಡು ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ತಮಿಳುನಾಡು ಚುನಾವಣೆಯಲ್ಲಿ ಶಶಿಕಲಾ ಇಳಿಯಲಿದ್ದಾರೆ. ರಾಜಕೀಯದಲ್ಲಿ ಸಕ್ರೀಯವಾಗುವ ಮೂಲಕ, ತಮಿಳುನಾಡಿನಲ್ಲಿ ಹೊಸ ಬಿರುಗಾಳಿ ಎಬ್ಬಿಸಲಿದ್ದಾರೆ ಎಂಬುದಾಗೇ ಹೇಳಲಾಗುತ್ತಿತ್ತು. ಆದ್ರೇ ನಿನ್ನೆಯಷ್ಟೇ ದಿಢೀರ್ ತಮ್ಮ ರಾಜಕೀಯ ನಿವೃತ್ತಿಯನ್ನು ಶಶಿಕಲಾ ಘೋಷಿಸಿದ್ದರು. ಈ ಮೂಲಕ ಎಲ್ಲರೂ ಅಚ್ಚರಿಗೆ ಒಳಗಾಗುವಂತೆ ಮಾಡಿದ್ದರು.. ಹಾಗಾದ್ರೇ.. ದಿಢೀರ್ ಶಶಿಕಲಾ ರಾಜಕೀಯ ನಿವೃತ್ತಿ ಘೋಷಿಸಿದ್ದರ ಹಿಂದಿನ ಗುಟ್ಟೇನು ಎನ್ನುವ ಬಗ್ಗೆ, ಮುಂದೆ ಓದಿ… 

ಜೈಲಿನಿಂದ ಬಿಡುಗಡೆಯಾದ ನಂತರ, ಒಂದು ಕಾಲದಲ್ಲಿ ಎಐಎಡಿಎಂಕೆಯ ಮುಖವಾಣಿಯಾಗಿದ್ದ ಚಾನೆಲ್ ಈಗ ಶಶಿಕಲಾ ಅವರ ಕುಟುಂಬ ನಡೆಸುತ್ತಿದ್ದ ಚಾನೆಲ್ ಮತ್ತೆ ಶಕ್ತಿ ಪ್ರದರ್ಶನಗೊಂಡಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಂತೆಯೇ ಎರಡು ಎಸ್ ಯುವಿಗಳು ತಮ್ಮ ರಾಜ್ಯ ಪ್ರವಾಸಕ್ಕೆ ಶಶಿಕಲಾ ಅವರ ತಂಡ ಸಿದ್ಧವಾಗುತ್ತಿದೆ ಎಂಬುದು ಅವರಿಗೆ ಗೊತ್ತಿತ್ತು.

ಆದರೆ, ಗುರುವಾರ ರಾತ್ರಿ ಶಶಿಕಲಾ ಕಚೇರಿಯಿಂದ ಎರಡು ಪುಟಗಳ ಪತ್ರ ಪ್ರಸಾರ ಮಾಡುವಂತೆ ಟಿವಿ ಸಿಬ್ಬಂದಿಗಳು ಪತ್ರವೊಂದನ್ನು ಪಡೆದಾಗ ಅಚ್ಚರಿಯಾಗಿತ್ತು. ಯಾರೂ ನಿರೀಕ್ಷಿಸದ ಕೊನೆಯ ಎರಡು ಸಾಲುಗಳು, ಅದರಲ್ಲಿ ಶಶಿಕಲಾ ಅವರು ನೀಡಿದ ಘೋಷಣೆ ಅಂದ್ರೇ.., “ನಾನು ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದೇನೆ. ನಾನು ನನ್ನ ಸಹೋದರಿ, ಪೂಚಿ ತಲೈವಿ, ನಾನು ದೇವರೆಂದು ಪರಿಗಣಿಸುತ್ತೇನೆ. ನನಗೆ ಗೊತ್ತಿರುವ ಪ್ರತಿಯೊಂದು ದೇವರು (ಜಯಲಲಿತಾ) ಚಿನ್ನದ ಆಳ್ವಿಕೆಯು ಚಾಲ್ತಿಯಲ್ಲಿರುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದರು.

ಫೆಬ್ರವರಿ 9ರಂದು ಬೆಂಗಳೂರಿನಿಂದ ಚೆನ್ನೈಗೆ ಬಂದ ಶಶಿಕಲಾ, ನಾಲ್ಕು ವರ್ಷ ಜೈಲು ವಾಸ ಅನುಭವಿಸಿದ್ದರು. ಎಐಎಡಿಎಂಕೆ ಧ್ವಜ ಹೊಂದಿರುವ ಕಾರಿನಲ್ಲಿ ಪ್ರಯಾಣಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಿದ ಪಕ್ಷವನ್ನು ಧಿಕ್ಕರಿಸಿದ್ದರು. ಆಡಳಿತ ಪಕ್ಷದ ವಿರೋಧಿಗಳಿಗೆ ತಾನು ಪದಚ್ಯುತವಾದ ನಂತರ ಕೆಳಮಟ್ಟಕ್ಕೆ ಬೀಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ಹೊರ ಬಿದ್ದಿತ್ತು.

ಚೆನ್ನೈಗೆ ತೆರಳಿ ಬೆಂಬಲಿಗರನ್ನು ಬರಮಾಡಿಕೊಂಡು, “ಪಕ್ಷಕ್ಕೆ ಸಾಕಷ್ಟು ತೊಂದರೆಗಳು ಎದುರಾಗಿವೆ, ಜಯಲಲಿತಾ ಅವರ ಪಾದದಲ್ಲಿ ನಮ್ಮ ಯಶಸ್ಸನ್ನು ನಾವು ಒಪ್ಪಿಸುವ ನಿರ್ಣಯವನ್ನು ತೆಗೆದುಕೊಳ್ಳೋಣ. ನಾವು ಎಷ್ಟೇ ಸವಾಲುಗಳನ್ನು ಎದುರಿಸಿದರೂ, ಜಯಲಲಿತಾ ಅವರ ಆಶೀರ್ವಾದದಿಂದ ನಾವು ಅವುಗಳನ್ನು ಎದುರಿಸಬೇಕಾಗಿದೆ” ಎಂದು ಅವರು ಹೇಳಿದರು.

ರಾಜಕೀಯ ಧುಮುಕಲು ಸಿದ್ಧವಾಗಿದ್ದ ಶಶಿಕಲಾ ಅವರು, ಹಾಗಾದರೆ ಒಂದು ತಿಂಗಳ ಒಳಗೆ ಏನು ಬದಲಾಯಿತು?

ಅವರ ಸೋದರಳಿಯ ಮತ್ತು ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ ಅವರ ಪ್ರಕಾರ, ಶಶಿಕಲಾ ಅವರು ಎಐಎಡಿಎಂಕೆ ಪಕ್ಷದ ನಾಯಕರ ವರ್ತನೆಯಿಂದ ಬಹಳ ವರ್ಷಗಳಿಂದ ಲೂಸ್ ಆಗಿ ಕೆಲಸ ಮಾಡಿದ್ದಾರೆ. ಅವರ ಹೇಳಿಕೆಗಳಿಂದ ಆಕೆ ಬೇಸರಗೊಂಡಿದ್ದಳು. ಅವರು ಜೈಲಿನಲ್ಲಿದ್ದಾಗ ಆಕೆಯನ್ನು ವಜಾ ಮಾಡಿದ ನಂತ್ರವೂ, ಶಶಿಕಲಾ ಜೈಲಿನಿಂದ ಹೊರಬಂದ ಮೇಲೂ, ಅವರು ಅವಳನ್ನು ಬಗ್ಗುಬಡಿಸಲು ತಯಾರಿ ನಡೆಸಿದ್ದರು. ಜೊತೆಗೆ ಆಕೆಯನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಅವರು ಆಕೆಗೆ ದ್ರೋಹ ಬಗೆದಿದ್ದಾರೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಎ.ಡಿ.ಎ.ಡಿ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಯ ವರಿಷ್ಠ ನಾಯಕ, ಅವರು ಪಕ್ಷಕ್ಕೆ ಮರಳುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಟಿಟಿವಿ ದಿನಕರನ್ ಹೇಳುವಂತೆ ಶಶಿಕಲಾ ಅವರು ಎರಡು ಮೂರು ದಿನಗಳಿಂದ ಇಂತಹ ಹೇಳಿಕೆ ನೀಡಲು ಯೋಚಿಸುತ್ತಿದ್ದಾರೆ. “ಬುಧವಾರ ರಾತ್ರಿ ನಾನು ಆಕೆಯನ್ನು ಭೇಟಿಮಾಡಿದೆ. ಅಕೆಯನ್ನು ತಡೆಯಲು ಪ್ರಯತ್ನಿಸಿದೆ, ಆದರೆ ಅವರು ತನ್ನ ನಿರ್ಧಾರವನ್ನು ಕೈಗೊಂಡಳು” ಎಂದು ಅವರು ಹೇಳುತ್ತಾರೆ.

ಶಶಿಕಲಾ ಅವರೊಂದಿಗೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡಿರುವ ಮೂಲವೊಂದು, ನಿರ್ಧಾರ ಕೈಗೊಳ್ಳುವ ಮುನ್ನ ಆಪ್ತ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿತ್ತು. ಅದು ಭಾವನಾತ್ಮಕ ವಿಚಾರವೇ ಎಂದು ತಿಳಿಸಿದ್ದಾರೆ.

“ನಾಳೆ ಮತ ವಿಭಜನೆ ಮಾಡುವ ಮೂಲಕ ಎಐಎಡಿಎಂಕೆ ಸೋಲಿಗೆ ಕಾರಣ ಎಂದು ಆರೋಪಿಸಬಾರದು. ಅಲ್ಲದೆ, EPS ಏಕೆ ಹೀಗೆ ವರ್ತಿಸುತ್ತಿದೆ ಎಂಬುದು ನಮಗೆ ಅರ್ಥವಾಗಲೇ ಇಲ್ಲ. ಬಿಜೆಪಿ ಕೂಡ ತನ್ನೊಂದಿಗೆ ಕದನ ವಿರಾಮವನ್ನು ಮಾಡುವುದು ಉತ್ತಮ ಎಂದು ನಮಗೆ ಹೇಳಿದೆ, ಆದರೆ ಇಪಿಎಸ್ ಅದರ ವಿರುದ್ಧ ಸತ್ತಿದೆ” ಎಂದು ಮೂಲಗಳು ತಿಳಿಸಿವೆ.

ಶಶಿಕಲಾ ಅವರನ್ನು ಚುನಾವಣೆಗೆ ಮುನ್ನ ಅವಕಾಶ ನೀಡುವಂತೆ ಬಿಜೆಪಿ ಎಐಎಡಿಎಂಕೆಯನ್ನು ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮ ತಂಡದೊಂದಿಗೆ ನಿಕಟ ಸಂಬಂಧ ಹೊಂದಿರುವ ಪತ್ರಕರ್ತೆಯೊಬ್ಬರು ಶಶಿಕಲಾ ಅವರು ತೆಗೆದುಕೊಂಡ ವೈಯಕ್ತಿಕ ನಿರ್ಧಾರ ಎಂದು ತಿಳಿಸಿದ್ದಾರೆ.

ಚುನಾವಣಾ ಸಮಿತಿಯ ಭಾಗವಾಗಿರುವ ಬಿಜೆಪಿ ನಾಯಕರೊಬ್ಬರು, ಎಐಎಡಿಎಂಕೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸುವುದು ಮತ್ತು ಟಿಟಿವಿ ದಿನಕರನ್ ಅವರನ್ನು ಮತ್ತೆ ಕಣಕ್ಕೆ ಇಳಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದು ಈಗ ಎಐಎಡಿಎಂಕೆಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.

ಆದರೆ, ಏಪ್ರಿಲ್ 6ರ ಚುನಾವಣೆಯಲ್ಲಿ ಎಐಎಡಿಎಂಕೆ ಗೆಲುವು ಸಾಧಿಸದಿದ್ದರೆ ಶಶಿಕಲಾ ಅವರು ಪಕ್ಷಕ್ಕಾಗಿ ಸದಾ ಕಾಲ ಪ್ರಯತ್ನಿಸಬಹುದು. ಇಂದು ಅವರನ್ನು ಕೈ ಬಿಡುವ ಅನೇಕರು ಚಿನ್ನಮ್ಮ ಅವರನ್ನು ತಮ್ಮ ನಾಯಕನನ್ನಾಗಿ ಮಾಡಲು ಕ್ಯೂ ನಿಲ್ಲಬಹುದು ಎಂದು ಹೇಳಲಾಗುತ್ತಿದೆ..


State

ಬೆಂಗಳೂರು: ಕೃಷಿ ಸಚಿವ ಬಿಸಿ ಪಾಟೀಲ್ ಮತ್ತು ಅವರ ಪತ್ನಿಗೆ ಮನೆಗೆ ಹೋಗಿ ಲಸಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಷ್ಟಾಚಾರ ಉಲ್ಲಂಘಿಸಿರುವ ಹಾವೇರಿ ಜಿಲ್ಲೆಯ ವೈದ್ಯಾಧಿಕಾರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ವರದಿಗಳ ಪ್ರಕಾರ ರಾಷ್ಟ್ರೀಯ ಆರೋಗ್ಯ ಮಿಷನ್ʼನ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಅವ್ರು, ಹಾವೇರಿಯ ಸಂತಾನೋತ್ಪಾದನೆ ಮತ್ತು ಮಕ್ಕಳ ಆರೋಗ್ಯ (ಆರ್ ಸಿಎಚ್) ಕಾರ್ಯಕ್ರಮ ಅಧಿಕಾರಿ ಡಾ.ಜಯಾನಂದ್ ಎಂ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ವಿವರಿಸುವಂತೆ ಅಧಿಕಾರಿಗೆ ಸೂಚಿಸಲಾಗಿದೆ.

ಸಾರ್ವಜನಿಕರೇ ಗಮನಿಸಿ: ʼಅನರ್ಹ BPL ಕಾರ್ಡ್ʼ ಬಗ್ಗೆ ಮಾಹಿತಿ ನೀಡಿ, 400 ರೂಪಾಯಿ ಬಹುಮಾನ ಗೆಲ್ಲಿ..!

‘ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ನಿಗದಿತ ಆಸ್ಪತ್ರೆ ಮತ್ತು ಲಸಿಕೆ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಆದ್ರೆ, ನಿಯಮವನ್ನ ಮೀರಿದ್ದು, ಆರೋಗ್ಯ ಇಲಾಖೆಗೆ ಕೆಟ್ಟ ಹೆಸರು ಬಂದಿದೆ’ ಎಂದು ನಿರ್ದೇಶಕರು ತಮ್ಮ ನೋಟಿಸ್ʼನಲ್ಲಿ ತಿಳಿಸಿದ್ದಾರೆ. ಇನ್ನು ಇದ್ರಲ್ಲಿ ಅಧಿಕಾರಿಯ ತಪ್ಪು ಕಂಡು ಬಂದ್ರೆ ಯಾವುದೇ ಮುಲಾಜಿಲ್ಲಾದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮೊಬೈಲ್ ಫೋನ್‌ ಬಳಕೆ ಬ್ಯಾನ್‌: ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶ


State

ಬೆಂಗಳೂರು : ಕೋವಿಡ್ ಲಸಿಕೆಯನ್ನು ಹೆಚ್ಚಿನ ಹಿರಿಯ ನಾಗರಿಕರು ಪಡೆಯುವಂತೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ದೊರೆಯುವಂತೆ ಮಾಡಲು ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯಕ್ಕೆ ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಹೆಚ್ಚಿನವರು ಲಸಿಕೆ ಪಡೆಯಲು ಇದನ್ನು ಪಿಎಚ್‍ಸಿ, ಸಮುದಾಯ ಆರೋಗ್ಯ ಕೇಂದ್ರಕ್ಕೂ ವಿಸ್ತರಿಸಲಾಗುವುದು. ಈ ಕುರಿತು ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

‘ಜಾರಕಿಹೊಳಿ ಸೆಕ್ಸ್ ಸಿಡಿ’ ಬಿಡುಗಡೆಗೂ ಮುನ್ನಾ ‘ದಿನೇಶ್ ಕಲ್ಲಹಳ್ಳಿ’ ಎಲ್ಲಿಗೆ ಹೋಗಿದ್ದರು ಗೊತ್ತಾ.?

ಕೋವಿಡ್ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಕೋಮಾರ್ಬಿಡಿಟಿ ಇರುವವರಿಗೆ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ನೈತಿಕ ಸ್ಪೂರ್ತಿ ನೀಡುವ ಕೆಲಸವೂ ನಡೆಯುತ್ತಿದೆ. ಲಸಿಕೆ ನೀಡುತ್ತಿರುವುದರಿಂದ ಬಹಳ ಪ್ರಯೋಜನವಾಗುತ್ತಿದೆ. ಲಸಿಕೆ ಪಡೆದವರಿಗೆ ಮುಂದೆ ಸೋಂಕು ಬಂದರೂ ಹೆಚ್ಚು ಸಮಸ್ಯೆ ಉಂಟಾಗುವುದಿಲ್ಲ. ಇನ್ನು ಮುಂದೆ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

‘ತಲೆದಿಂಬು’ಗಳನ್ನು ಎರಡು ವರ್ಷಕ್ಕೊಮ್ಮೆ ಏಕೆ ಬದಲಾಯಿಸಬೇಕು ಗೊತ್ತೆ.? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಧಾನಿ ನರೇಂದ್ರ ಮೋದಿಯವರು ದೇಸಿ ಲಸಿಕೆ ಪಡೆದಿದ್ದಾರೆ. ಹೀಗಾಗಿ ಎಲ್ಲರೂ ವಿಶ್ವಾಸದಿಂದ ಲಸಿಕೆ ಪಡೆಯಬಹುದು. ಮನೆಗಳಲ್ಲಿ ಯುವಜನರು ಹಿರಿಯ ನಾಗರಿಕರನ್ನು ಕರೆದುಕೊಂಡು ಬರುತ್ತಿದ್ದಾರೆ. ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದರು.

ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯ ನೋಡಿಕೊಂಡು ಲಸಿಕೆ ವಿತರಣೆಗೆ ಅಲ್ಲಿಯೂ ಅವಕಾಶ ನೀಡಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ವಿತರಣೆಗೆ ಅವಕಾಶ ನೀಡಲಾಗುವುದು ಎಂದರು.

‘ಡೆಸ್ಕ್ ಟಾಪ್ ವಾಟ್ಸಾಪ್ ಬಳಕೆದಾರ’ರಿಗೆ ಗುಡ್ ನ್ಯೂಸ್ : ಇನ್ಮುಂದೆ ನಿಮ್ಮ ‘ಕಂಪ್ಯೂಟರ್’ನಿಂದಲೂ ವಾಯ್ಸ್, ವೀಡಿಯೋ ಕರೆ ಮಾಡಬಹುದು


State

ಬೆಂಗಳೂರು: ವಿಧಾನ ಸಭೆಯಲ್ಲಿ ಗದ್ದಲ, ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ನಾಳೆ 11 ಗಂಟೆಗೆ ಕಲಾಪ ಮುಂದೂಡಲಾಗಿದೆ.

ಕಲಾಪ ಪುನಾರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ನಿಂದ ಧರಣಿ ನಡೆಸಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆಗೆ ವಿರೋಧ ವ್ಯಕ್ತ ಪಡಿಸಿದೆ. ಈ ನಡುವೆ ಸಭೆಯಲ್ಲಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ನಾಳೆ 11 ಗಂಟೆಗೆ ಕಲಾಪ ಮುಂದೂಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮೊಬೈಲ್ ಫೋನ್‌ ಬಳಕೆ ಬ್ಯಾನ್‌: ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶ


India Lifestyle State

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವಂತ ಒಂದು ವೀಡಿಯೋಗಳಲ್ಲಿ, ತಲೆದಿಂಬನ್ನು ಎಷ್ಟು ವರ್ಷಗಳಿಗೊಮ್ಮೆ ಬದಲಾವಣೆ ಮಾಡಬೇಕು ಎಂಬುದೇ ಆಗಿದೆ. ಇದಕ್ಕೆ ವೀಡಿಯೋ ಒಂದರಲ್ಲಿ ಉತ್ತರಿಸಿರುವಂತ ಟಿಕ್ ಟಾಕ್ ಸ್ಟಾರ್ ಹಾಗೂ ಡಾಕ್ಟರ್ ಕರಣ್ ರಾಜ್, ಬಿಚ್ಚಿಡುವಂತ ಮಾಹಿತಿ ಮಾತ್ರ, ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಹಾಗಾದ್ರೇ.. ಎರಡು ವರ್ಷಕ್ಕೊಮ್ಮೆ ತಲೆದಿಂಬುಗಳನ್ನು ಏಕೆ ಬದಲಾಯಿಸಬೇಕು ಎಂಬ ಸಂಪೂರ್ಣ ಮಾಹಿತಿ, ಮುಂದೆ ಓದಿ..

‘ಜಾರಕಿಹೊಳಿ ಸೆಕ್ಸ್ ಸಿಡಿ’ ಬಿಡುಗಡೆಗೂ ಮುನ್ನಾ ‘ದಿನೇಶ್ ಕಲ್ಲಹಳ್ಳಿ’ ಎಲ್ಲಿಗೆ ಹೋಗಿದ್ದರು ಗೊತ್ತಾ.?

ನಿಮ್ಮ ಮನೆಯಲ್ಲಿ ಸಾಕಷ್ಟು ವಸ್ತುಗಳಿವೆ ಎಂದ್ರೇ, ಅವುಗಳಲ್ಲಿ ಕೆಲವನ್ನು ಅನಿಯಮಿತವಾಗಿ ಬದಲಾಗುತ್ತವೆ. ಆದ್ರೇ ಪದೇ ಪದೇ ಬದಲಾಯಿಸಲು ಆಗದಂತ ಇಷ್ಟದ ಎಷ್ಟೋ ವಸ್ತುಗಳಿರುತ್ತದೆ. ಅದರಲ್ಲಿ ಒಂದು ನೀವು ಮಲಗುವಾಗ ಇಡುವಂತ ತಲೆದಿಂಬು ಆಗಿದೆ. ಇಂತಹ ತಲೆದಿಂಬನ್ನು ವರ್ಷಾನುಗಟ್ಟಲೆ ಬದಲಾಯಿಸೋದೇ ಇಲ್ಲ. ಯಾಕೆಂದ್ರೇ, ಅದು ನಿಮಗೆ ಅಷ್ಟು ಇಷ್ಟ ಆಗಿರುತ್ತದೆ. ಆದ್ರೇ.. ವೈದ್ಯರೊಬ್ಬರ ಮಾಹಿತಿಯ ಪ್ರಕಾರ, ನೀವು ತಪ್ಪದೇ ಎರಡು ವರ್ಷಗಳಿಗೊಮ್ಮೆ ನಿಮ್ಮ ತಲೆದಿಂಬನ್ನು ಬದಲಾವಣೆ ಮಾಡಲೇ ಬೇಕಂತೆ..

ಇನ್ಮುಂದೆ ‘ಸಿಎಂ ಕಚೇರಿ’ಗೆ ‘ಕಡತ ಸಲ್ಲಿಕೆ’ಗೆ ಈ ನಿಮಯ ಪಾಲನೆ ಕಡ್ಡಾಯ : ನೌಕರರ ‘ವರ್ಗಾವಣೆ’ಗೂ ಅನುಮತಿಗೆ ಸಿಎಂ ಯಡಿಯೂರಪ್ಪ ಖಡಕ್ ಸೂಚನೆ.!

ಅಂದಹಾಗೇ ನಾವು ಕಾಲಕಾಲಕ್ಕೆ ನಮ್ಮ ದಿಂಬಿನ ಕವರ್ ಗಳನ್ನು ಬದಲಾಯಿಸುತ್ತೇವೆ. ಆದರೆ ನಾವು ಎಷ್ಟು ಬಾರಿ ದಿಂಬುಗಳನ್ನು ಬದಲಾಯಿಸೋದಿಲ್ಲ. ಆದ್ರೇ, ಡಾ.ಕರಣ್ ರಾಜ್ ಅವರು, ಎರಡು ವರ್ಷಗಳಿಗೊಮ್ಮೆ ತಪ್ಪದೇ ತಲೆದಿಂಬನ್ನು ಬದಲಾವಣೆ ಮಾಡಬೇಕು ಎಂಬುದಾಗಿ ತಮ್ಮ ಹೊಸ ಟಿಕ್ ಟೋಕ್ ವಿಡಿಯೋ ಒಂದರಲ್ಲಿ ತಿಳಿಸಿದ್ದಾರೆ.

ಎನ್ ಎಚ್ ಎಸ್ ವೈದ್ಯರಾಗಿರುವ ಡಾ.ಕರಣ್ ರಾಜ್ ಅವರು ಟಿಕ್ ಟಾಕ್ ನಲ್ಲಿ ಜನಪ್ರಿಯ ವ್ಯಕ್ತಿ. COVID-19 ಸೇರಿದಂತೆ ಹಲವು ವಿಷಯಗಳ ಕುರಿತ ಅವರ ಕಿರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಮೆಚ್ಚುಗೆ ಗಳಿಸಿದರು. ಆದರೆ ಅವರ ಇತ್ತೀಚಿನ ವಿಡಿಯೋ ಎಲ್ಲರ ತಲೆದಿಂಬಿನ ಮೇಲೆ ಹೆಚ್ಚು ಜಾಗ್ರತೆಯನ್ನು, ಕಾಳಜಿಯನ್ನು ವಹಿಸುವಂತೆ ಮಾಡಿದೆ.

ಶಾಸಕ ಸಂಗಮೇಶ್ ಅಮಾನತು ಪ್ರಕರಣ : ‘ಆದೇಶ ವಾಪಾಸ್’ಗೆ ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ

ಉತ್ತಮ ವೈದ್ಯರು ತಮ್ಮ ತಲೆದಿಂಬುಗಳನ್ನು ಕನಿಷ್ಠ ಎರಡು ವರ್ಷಕ್ಕೊಮ್ಮೆಯಾದರೂ ಬದಲಾಯಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಏಕೆಂದರೆ ಅವುಗಳನ್ನು ಎರಡು ವರ್ಷಗಳಿಗೆ ಒಮ್ಮೆ ಬದಲಾಯಿಸದೇ ಇದ್ದರೇ, ದಿಂಬಿನ ಒಳಗೆ ಬ್ಯಾಕ್ಟೀರಿಯಾ, ಧೂಳಿನ ಹುಳಗಳು ಮತ್ತು ಬೆವರಿನ ಮೇಲೆ ಬೆಳೆಯುವ ಹುಳುಗಳು ಸೇರಿಕೊಂಡು, ದಿಂಬು ಒರಟಾಗುತ್ತಂತೆ.

ಈ ವಿಡಿಯೋ ಒಂದು ಮಿಲಿಯನ್ ಬಾರಿ ವೀಕ್ಷಣೆಯಾಗಿದ್ದು, ವೈದ್ಯರು ದಿಂಬುಗಳನ್ನು ಬದಲಾಯಿಸುವ ಅಥವಾ ನಿಯಮಿತವಾಗಿ ಸ್ವಚ್ಛಗೊಳಿಸುವ ಅಗತ್ಯವನ್ನು ಎತ್ತಿ ತೋರಿಸುತ್ತಿದ್ದಾರೆ. ಈ ಸುದ್ದಿ ಅನೇಕ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

‘ಡೆಸ್ಕ್ ಟಾಪ್ ವಾಟ್ಸಾಪ್ ಬಳಕೆದಾರ’ರಿಗೆ ಗುಡ್ ನ್ಯೂಸ್ : ಇನ್ಮುಂದೆ ನಿಮ್ಮ ‘ಕಂಪ್ಯೂಟರ್’ನಿಂದಲೂ ವಾಯ್ಸ್, ವೀಡಿಯೋ ಕರೆ ಮಾಡಬಹುದು

“ನೀವು ನಿಮ್ಮ ದಿಂಬುಗಳನ್ನು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಬದಲಾಯಿಸಬೇಕು. ಸರಾಸರಿ ಪ್ರತಿ ವರ್ಷ 4ಕೆ.ಜಿ. ಅದರಲ್ಲಿ ಹೆಚ್ಚಿನವು ನಿಮ್ಮ ಹಾಸಿಗೆ ಅಥವಾ ದಿಂಬುಗಳು ಸೂಕ್ಷ್ಮಧೂಳಿನ ಹುಳುಗಳಿಗೆ ಒಂದು ಔತಣವಾಗಿದೆ” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ದಿಂಬಿನಲ್ಲಿ ಒಂದು ಧೂಳಿನ ಹುಳು ಪ್ರತಿದಿನ 200 ಹನಿಗಳನ್ನು ಉತ್ಪತ್ತಿ ಮಾಡಿ, ತಲೆದಿಂಬು ಗಟ್ಟಿಯಾಗುವಂತೆ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

“ಒಂದು ದಿನ ದೂಳಿನ ಹುಳುಗಳು ಸುಮಾರು 20 ಹನಿಗಳನ್ನು ಹೊಂದಿದ್ದು, ನಿಮ್ಮ ದಿಂಬಿನ ಮೇಲೆ ವಾಸಿಸುವ ನೂರಾರು ಹುಳುಗಳು ಒಂದಕ್ಕಿಂತ ಹೆಚ್ಚು” ಎಂದು ಅವರು ಹೇಳಿದ್ದಾರೆ.

ಆಗ ವೈದ್ಯರು ದಿಂಬಿನ ಕಲೆಗಳನ್ನು ಕುರಿತು ಮಾತನಾಡುತ್ತಾರೆ, ಇದು ಎಣ್ಣೆ ಮತ್ತು ಬೆವರಿನಿಂದ ಉಂಟಾಗುತ್ತದೆ. ಕಲೆಗಳಿಂದಾಗಿ ಅನೇಕ ವೇಳೆ ಅಚ್ಚು ಮತ್ತು ಬ್ಯಾಕ್ಟೀರಿಯಾಗಳು ಸಂತಾನೋತ್ಪತ್ತಿಗೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ.


India

ಡಿಜಿಟಲ್‌ ಡೆಸ್ಕ್:‌ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಭಾರತ ಸರ್ಕಾರವು ಒದಗಿಸುವ ಸಣ್ಣ ಉಳಿತಾಯ ನಿಧಿಯಾಗಿದೆ. ಬಡ್ಡಿದರವನ್ನ ಕೇಂದ್ರ ಸರ್ಕಾರವು ತ್ರೈಮಾಸಿಕವಾಗಿ ನಿಗದಿಪಡಿಸುತ್ತೆ. 15 ವರ್ಷಗಳಲ್ಲಿ ಪ್ರಬುದ್ಧವಾಗಿರುವ ಜನಪ್ರಿಯ ದೀರ್ಘಕಾಲೀನ ಉಳಿತಾಯ ಯೋಜನೆ ಪ್ರಸ್ತುತ ವಾರ್ಷಿಕವಾಗಿ 7.1% ಬಡ್ಡಿಯನ್ನ ಪಾವತಿಸುತ್ತಿದೆ.

ಪಿಪಿಎಫ್ ಖಾತೆಯನ್ನ ಅಂಚೆ ಕಚೇರಿಯಲ್ಲಿ ತೆರೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಐಸಿಐಸಿಐ ಬ್ಯಾಂಕ್‌ನಂತಹ ಕೆಲವು ಬ್ಯಾಂಕುಗಳು ಸಹ ಪಿಪಿಎಫ್ ಖಾತೆ ತೆರೆಯುವ ಆಯ್ಕೆಯನ್ನ ಒದಗಿಸುತ್ತವೆ. ಶಾಖೆಗೆ ಹೋಗುವ ಮೂಲಕ ಅಥವಾ ಆನ್ಲೈನ್‌ʼನಲ್ಲಿ ಖಾತೆಯನ್ನ ತೆರೆಯಬಹುದು. ಎಸ್‌ಬಿಐ ಗ್ರಾಹಕರು ಈಗ ತಮ್ಮ ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಆನ್‌ಲೈನ್ ಪಿಪಿಎಫ್ ಖಾತೆಯನ್ನ ತೆರೆಯಬಹುದು.

ಸಾರ್ವಜನಿಕರೇ ಗಮನಿಸಿ: ʼಅನರ್ಹ BPL ಕಾರ್ಡ್ʼ ಬಗ್ಗೆ ಮಾಹಿತಿ ನೀಡಿ, 400 ರೂಪಾಯಿ ಬಹುಮಾನ ಗೆಲ್ಲಿ..!

ಆನ್‌ಲೈನ್ ಎಸ್‌ಬಿಐ ಪಿಪಿಎಫ್ ಖಾತೆ ತೆರೆಯಲು ಇವು ಮುಖ್ಯ..!

* ‘ಆಧಾರ್’ ಸಂಖ್ಯೆಯನ್ನ ನಿಮ್ಮ ಎಸ್‌ಬಿಐ ಉಳಿತಾಯ ಖಾತೆಗೆ ಲಿಂಕ್ ಮಾಡಬೇಕು.
* ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆ, ಒಟಿಪಿ ಸ್ವೀಕರಿಸಲು ಸಕ್ರಿಯ ಸ್ಥಿತಿಯಲ್ಲಿರಬೇಕು.

ಎಸ್‌ಬಿಐ ಪಿಪಿಎಫ್ ಖಾತೆಯನ್ನ ಆನ್ಲೈನ್‌ನಲ್ಲಿ ತೆರೆಯಲು ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ..!

1) ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ಎಸ್‌ಬಿಐ ಆನ್‌ಲೈನ್ ಖಾತೆಗೆ ಲಾಗ್ ಇನ್ ಮಾಡಿ.

2) ಮೇಲಿನ ಬಲ ಮೂಲೆಯಿಂದ ‘ವಿನಂತಿ ಮತ್ತು ವಿಚಾರಣೆ’ ಟ್ಯಾಬ್ ಕ್ಲಿಕ್ ಮಾಡಿ.

3) ಡ್ರಾಪ್ ಡೌನ್ ಮೆನುವಿನಿಂದ, ‘ಹೊಸ ಪಿಪಿಎಫ್ ಖಾತೆಗಳು’ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಆಯ್ಕೆ ಮಾಡಿ.

4) ನಿಮ್ಮನ್ನು ‘ಹೊಸ ಪಿಪಿಎಫ್ ಖಾತೆ’ ಪುಟಕ್ಕೆ ಕಳುಹಿಸಲಾಗುತ್ತೆ. ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಸೇರಿದಂತೆ ಅಸ್ತಿತ್ವದಲ್ಲಿರುವ ಗ್ರಾಹಕರ ವಿವರಗಳನ್ನ ಈ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ.

5) ನೀವು ಚಿಕ್ಕವರ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಬಯಸಿದರೆ, ನೀವು ಆ ಟ್ಯಾಬ್ʼನ್ನ ಪರಿಶೀಲಿಸಬೇಕು.

ತಾಜ್‌ಮಹಲ್‌ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ : ಭದ್ರತಾ ಸಿಬ್ಬಂದಿ ಸ್ಪಷ್ಟೀಕರಣ

6) ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಖಾತೆಯನ್ನ ತೆರೆಯದಿದ್ದರೆ, ನಿಮ್ಮ ಪಿಪಿಎಫ್ ಖಾತೆಯನ್ನ ತೆರೆಯಲು ಬಯಸುವ ಶಾಖೆ ಕೋಡ್ʼನ್ನ ನೀವು ಭರ್ತಿ ಮಾಡಬೇಕು. ಬ್ಯಾಂಕ್ ಶಾಖೆಯ ವಿವರಗಳನ್ನ ಒದಗಿಸಿ.

7) ನಿಮ್ಮ ವೈಯಕ್ತಿಕ ವಿವರಗಳು – ವಿಳಾಸ ಮತ್ತು ನಾಮನಿರ್ದೇಶನ – ಪರಿಶೀಲಿಸಬೇಕಾಗಿದೆ. ಪರಿಶೀಲಿಸಿದ ನಂತರ, ‘ಮುಂದುವರಿಯಿರಿ’ ಕ್ಲಿಕ್ ಮಾಡಿ.

8) ಸಲ್ಲಿಸಿದ ನಂತರ, ‘ನಿಮ್ಮ ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ’ ಎಂದು ಸಂದೇಶ ಪೆಟ್ಟಿಗೆ ಕಾಣಿಸುತ್ತದೆ. ಇದು ಉಲ್ಲೇಖ ಸಂಖ್ಯೆಯನ್ನ ಸಹ ಹೊಂದಿರುತ್ತದೆ.

9) ಈಗ ನೀವು ಕೊಟ್ಟಿರುವ ಉಲ್ಲೇಖ ಸಂಖ್ಯೆಯೊಂದಿಗೆ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬೇಕು.

10) ‘ಓಪನ್ ಪಿಪಿಎಫ್ ಆನ್‌ಲೈನ್ ಅಪ್ಲಿಕೇಶನ್’ ಟ್ಯಾಬ್‌ನಿಂದ ಖಾತೆ ತೆರೆಯುವ ಫಾರ್ಮ್ ಅನ್ನು ಮುದ್ರಿಸಿ ಮತ್ತು ಕೆವೈಸಿ ದಾಖಲೆಗಳು ಮತ್ತು 30 ದಿನಗಳೊಳಗೆ ತೆಗೆದ ಛಾಯಾಚಿತ್ರದೊಂದಿಗೆ ಶಾಖೆಗೆ ಭೇಟಿ ನೀಡಿ.

ವಿಧಾನ ಪರಿಷತ್‌ನಲ್ಲಿ ಮೊಬೈಲ್ ಫೋನ್‌ ಬಳಕೆ ಬ್ಯಾನ್‌: ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶ


State

– ವಸಂತ ಬಿ ಈಶ್ವರಗೆರೆ

ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಕಚೇರಿಗೆ ಸಲ್ಲಿಕೆಯಾಗುವಂತ ಕಡತಗಳ ಸಲ್ಲಿಕೆಯ ಸಂದರ್ಭದ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ. ಈ ನಿಯಮಗಳನ್ನು ಪಾಲಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಲ್ಲದೇ ಸರ್ಕಾರಿ ನೌಕರರ ವರ್ಗಾವಣೆಗೂ ತಮ್ಮ ಸೂಚನೆಯಿಲ್ಲದೆ ನಡೆಸದಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ.

‘ಜಾರಕಿಹೊಳಿ ಸೆಕ್ಸ್ ಸಿಡಿ’ ಬಿಡುಗಡೆಗೂ ಮುನ್ನಾ ‘ದಿನೇಶ್ ಕಲ್ಲಹಳ್ಳಿ’ ಎಲ್ಲಿಗೆ ಹೋಗಿದ್ದರು ಗೊತ್ತಾ.?

ಈ ಕುರಿತಂತೆ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ  ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿರುವ ಅವರು, ಮುಖ್ಯಮಂತ್ರಿಯವರ ಕಚೇರಿಗೆ ಸಲ್ಲಿಸುವ ಎಲ್ಲ ಇ-ಕಡತಳನ್ನು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರ ಲಾಗ್-ಇನ್-ಐಡಿಗೆ ಮತ್ತು ಭೌತಿಕ ಕಡತಗಳನ್ನು ಕೊಠಡಿ ಸಂಖ್ಯೆ 326ಎ ಗೆ ಮಾತ್ರ ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.

ಶಾಸಕ ಸಂಗಮೇಶ್ ಅಮಾನತು ಪ್ರಕರಣ : ‘ಆದೇಶ ವಾಪಾಸ್’ಗೆ ಸದನದ ಬಾವಿಗಿಳಿದು ಕಾಂಗ್ರೆಸ್ ಪ್ರತಿಭಟನೆ

ಇನ್ನೂ ಮುಂದುವರೆದು, ಮುಖ್ಯಮಂತ್ರಿಯವರಿಗೆ ಸಲ್ಲಿಸುವ ಕಡತಗಳನ್ನು ಗುರುತು ಮಾಡುವಾಗ ಮುಖ್ಯಮಂತ್ರಿಯವರ ಕಚೇರಿಯ ಯಾವುದೇ ಅಧಿಕಾರಿಗೆ ಗುರುತು ಮಾಡದೇ, ನೇರವಾಗಿ ಮುಖ್ಯಮಂತ್ರಿಯವರಿಗೆ ಗುರುತು ಮಾಡತಕ್ಕದ್ದು ಎಂದು ತಿಳಿಸಿದ್ದಾರೆ.

ಕಡತಗಳನ್ನು ಸಲ್ಲಿಸುವಾಗ ಯಾವ ಅಂಶಗಳಿಗೆ, ವಿಷಯಕ್ಕೆ ಅನುಮೋದನೆ ಕೋರಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು ಎಂಬುದಾಗಿಯೂ ಸೂಚಿಸಿದ್ದಾರೆ.

ಇದಲ್ಲದೇ ಮತ್ತೊಂದು ಟಿಪ್ಪಣಿ ಪತ್ರದಲ್ಲಿ ಆಡಳಿತಾತ್ಮಕವಾಗಿ ಅವಶ್ಯವಿರುವ ಖಾಲಿ ಸ್ಥಾನಗಳನ್ನು ತುಂಬುವುದಕ್ಕೆ ಹೊರತಾಗಿ, ಬೇರೆ ಯಾವುದೇ ವರ್ಗಾವಣೆಗಳನ್ನು 2021ನೇ ಸಾಲಿನ ಸಾಮಾನ್ಯ ವರ್ಗಾವಣೆವರೆಗೆ ಮಾಡಬಾರದೆಂದು ಸರ್ಕಾರವು ನಿರ್ಧರಿಸಿದೆ. ಅಂತಹ ವರ್ಗಾವಣೆಗಳನ್ನು ಕೂಡ ಇಲಾಖೆ ಮಟ್ಟದಲ್ಲಿ, ಹಂತದಲ್ಲಿ ಮಾಡದೇ, ಪ್ರತಿಯೊಂದು ವರ್ಗಾವಣೆಗೂ ಮುಖ್ಯಮಂತ್ರಿಯವರಿಗೆ ಕಡತದಲ್ಲಿ ಸಲ್ಲಿಸಿ, ಆದೇಶ ಪಡೆದ ನಂತ್ರವೇ, ಮಾಡತಕ್ಕದ್ದೆಂದು ತಿಳಿಸಲು ನಿರ್ದೇಶಿಸಿದ್ದಾರೆ.

‘ಡೆಸ್ಕ್ ಟಾಪ್ ವಾಟ್ಸಾಪ್ ಬಳಕೆದಾರ’ರಿಗೆ ಗುಡ್ ನ್ಯೂಸ್ : ಇನ್ಮುಂದೆ ನಿಮ್ಮ ‘ಕಂಪ್ಯೂಟರ್’ನಿಂದಲೂ ವಾಯ್ಸ್, ವೀಡಿಯೋ ಕರೆ ಮಾಡಬಹುದು

ಈಗಾಗಲೇ ಇಲಾಖೆಗಳಲ್ಲಿ ಕಡತದ ಟಿಪ್ಪಣಿ, ನಡವಳಿ, ಸ್ವೀಕೃತಿ ಮೇಲಿನ ಷರಾ ರೂಪದಲ್ಲಿ ಮುಖ್ಯಮಂತ್ರಿಯವರಿಂದ ಸ್ವೀಕೃತವಾದ ವರ್ಗಾವಣೆ ಆದೇಶಗಳನ್ನು ಸಹ ಕಡತದಲ್ಲಿ ಸಲ್ಲಿಸಿ, ಮುಖ್ಯಮಂತ್ರಿಯವರ ಆದೇಶವನ್ನು ಕಡತದಲ್ಲಿ ಪಡೆದು, ನಂತ್ರವೇ ಜಾರಿಗೊಳಿಸುವುದು.

ಈ ಮೇಲಿನ ಸೂಚನೆಗಳನ್ನು ಪಾಲಿಸದೇ ಜಾರಿಗೊಳಿಸಿದ ವರ್ಗಾವಣೆಗಳ ಬಗ್ಗೆ ಸಂಬಂಧಪಟ್ಟ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳೇ ಜವಾಬ್ದಾರರಾಗುತ್ತಾರೆಂದು ಖಡಕ್ ಸೂಚನೆಯಲ್ಲಿ ತಿಳಿಸಿದ್ದಾರೆ.


India

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯ ಗೇಟ್ ನಂ. 7 ಬಳಿ ಅನುಮಾನಾಸ್ಪದವಾಗಿ ಕರ್ತವ್ಯ ನಿರತರಾಗಿದ್ದ ಪೊಲೀಸ್‌ ಅಧಿಕಾರಿ ನಿರ್ಮಲ್ ಚೌಬೆ ಅವರ ಮೇಲೆ ಗುಂಡು ಹಾರಿಸಲಾಗಿದೆ.

ಗುಂಡಿನ ದಾಳಿಗೆ ಒಳಗಾದ ಪೊಲೀಸ್‌ ಅಧಿಕಾರಿ ನಿರ್ಮಲ್ ಚೌಬೆಯವ್ರನ್ನ ಚಿಕಿತ್ಸೆಗಾಗಿ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅಧಿಕಾರಿ ಸಾವನ್ನಪ್ಪಿದ್ದಾರೆ.  ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನ  ನಿಯೋಜಿಸಲಾಗಿದೆ. ಇನ್ನು ಘಟನೆಯ ನಂತರ ನಗರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆಯಾದ್ರು, ಗುಂಡು ಹಾರಿಸಿದವರು ಯಾರು ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ವಿಧಾನ ಪರಿಷತ್‌ನಲ್ಲಿ ಮೊಬೈಲ್ ಫೋನ್‌ ಬಳಕೆ ಬ್ಯಾನ್‌: ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶ