com – Kannada News Now


India

ಮುಂಬೈ:  ಮುಂಬೈಯನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಆಡಳಿತಾರೂಢ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಮುಂಬೈನಲ್ಲಿರುವ ಕಂಗಾನ ಅವರ ಕಚೇರಿಯನ್ನು ಅನಧಿಕೃತ ಎಂದು ಹೇಳಿ ಮಹಾರಾಷ್ಟ್ರ ಸರ್ಕಾರ ಅದನ್ನು ನೆಲಸಮ ಮಾಡಿತ್ತು.

ಈ ವಿಚಾರವಾಗಿ ನೇರವಾಗಿಯೇ ಉದ್ಧವ್​ ಠಾಕ್ರೆಯವರಿಗೆ ಸವಾಲು ಹಾಕಿರುವ ಕಂಗನಾ  ಮುಂಬೈ ಬಿಟ್ಟ ಕೆಲವೇ ಕ್ಷಣದಲ್ಲಿ ಟ್ವೀಟ್ ಮೂಲಕ ಉದ್ಧವ್​ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಬಾಲಿವುಡ್​ ಮಾಫಿಯಾ, ಸುಶಾಂತ್​ ಸಿಂಗ್​ ಸಾವು, ಡ್ರಗ್ಸ್​ ದಂಧೆ ಬಗ್ಗೆ ತುಂಬ ವಿಚಾರಗಳನ್ನು ಮಾತನಾಡುತ್ತಿರುವುದೇ ಅವರಿಗೆ ಸಮಸ್ಯೆಯಾಗಿದೆ, ನನ್ನನ್ನು ಹತ್ತಿಕ್ಕಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ. ಎಲ್ಲದರ ಜತೆ ಉದ್ಧವ್ ಪ್ರೀತಿಯ ಪುತ್ರ ಆದಿತ್ಯ ಠಾಕ್ರೆಗೆ ಸಂಪರ್ಕವಿದೆ. ಕೆಟ್ಟದ್ದನ್ನು ಎತ್ತಿ ತೋರಿಸಿದ್ದಕ್ಕೆ ಅವರೆಲ್ಲ ಸೇರಿ ನನ್ನನ್ನು ಬಾಯಿಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಮುಂಬೈ -ಚೆನ್ನೈ ತಂಡಗಳ ಕಾದಾಟದೊಂದಿಗೆ ‘IPL’ ಟೂರ್ನಿಗೆ ಚಾಲನೆ : ಪಾಕ್ ಬಿಟ್ಟು 120 ದೇಶಗಳಲ್ಲಿ ನೇರಪ್ರಸಾರ

Film State

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾ’ಗಿಣಿ’ ಪಂಜರ ಸೇರಿದೆ. ಹೌದು. ಮಾದಕ ಲೋಕದ ಬೆಡಗಿ ನಟಿ ರಾಗಿಣಿ ಪರಪ್ಪನ ಅಗ್ರಹಾರ ಸೇರಿದ್ದಾರೆ.

ಹೌದು.  ನಟಿ ರಾಗಿಣಿ ಸೇರಿ 5 ಆರೋಪಿಗಳ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ವಿಡಿಯೋ ಕಾನ್ಫರೇನ್ಸ್‌ ಮೂಲಕ ಜಡ್ಜ್‌ ಮುಂದೆ ಹಾಜರು ಪಡಿಸಲಾಗಿತ್ತು. ಸಧ್ಯ ಕೋರ್ಟ್‌ ತನ್ನ ಆದೇಶ ನೀಡಿದ್ದು, ಇಬ್ಬರು ನಟಿಯರು ಸೇರಿ 5 ಆರೋಪಿಗಳನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಈಗಾಗಲೇ ಡ್ರಗ್ಗಿಣಿ ಗ್ಯಾಂಗ್ ಪರಪ್ಪನ ಅಗ್ರಹಾರ ತಲುಪಿದ್ದು, ಜೈಲಿನ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಜೈಲಿನ ಒಳಕ್ಕೆ ಬಿಟ್ಟಿದ್ದಾರೆ. ಇನ್ನೂ. ಜೈಲಿಗೆ ಹೋಗುವ ಮುನ್ನ ನಟಿ ರಾಗಿಣಿ ಅಪ್ಪ ಅಮ್ಮನನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಮಗಳು ಜೈಲು ಪಾಲಾಗುವುದನ್ನು ಕಂಡ ರಾಗಿಣಿ ತಂದೆ ತಾಯಿ ಕೂಡ ಕಣ್ಣೀರಿಟ್ಟಿದ್ದಾರೆ.

ನಟಿ ರಾಗಿಣಿ, ಪ್ರಶಾಂತ್‌ ರಂಕ, ಲೂಮ್‌ ಪೆಪ್ಪರ್‌ , ರಾಹುಲ್‌ ಸೇರಿದಂತೆ ಐವರು ಆರೋಪಿಗಳು ವಿಚಾರಣಾಧೀನ ಖೈದಿಗಳಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ.  ಎಸಿಎಂಎಂ ನ್ಯಾಯಾಲಯ ಈ ತೀರ್ಪು ನೀಡಿದ್ದು, 12 ದಿನಗಳ ಕಸ್ಟಡಿ ನಂತರ ನಟಿ ರಾಗಿಣಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಇನ್ನು ಈ ಆರೋಪಿಗಳು ವಿಚಾರಣಾಧೀನಾ ಖೈದಿಗಳಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ.

BREAKING : ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ಕೇಸ್ : ಪರಪ್ಪನ ಅಗ್ರಹಾರ ತಲುಪಿದ ‘ಡ್ರಗ್ಗಿಣಿ’ ಗ್ಯಾಂಗ್

State

ಬೆಂಗಳೂರು :  ರಾಜ್ಯದಲ್ಲಿ   ಕೊರೊನಾ ಸೋಂಕಿಗೆ 119 ಜನರು ಬಲಿಯಾಗಿದ್ದು, ಈ ಮೂಲಕ ಕೊರೊನಾ ಸಾವಿನ ಸಂಖ್ಯೆ 7384 ಕ್ಕೆ ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 37 ಜನರು ಬಲಿಯಾಗಿದ್ದು, ಈ ಮೂಲಕ ಕೊರೊನಾ ಸಾವಿನ ಸಂಖ್ಯೆ 2473 ಕ್ಕೆ ಏಕೆಯಾಗಿದೆ. ಬೆಂಗಳೂರಿನಲ್ಲಿ ಸದ್ಯ 40527 ಸಕ್ರಿಯ ಪ್ರಕರಣಗಳಿದೆ.

ರಾಜ್ಯದಲ್ಲಿ ಇಂದು 8244 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 467689 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ 361823 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ರಾಜ್ಯದಲ್ಲಿ 98463 ಸಕ್ರೀಯ ಸೋಂಕಿತರಿದ್ದಾರೆ. ಅಲ್ಲದೇ ಇಂದು ಕಿಲ್ಲರ್ ಕೊರೋನಾಗೆ 119 ಸೋಂಕಿತರು ಸಾವನ್ನಪ್ಪಿದ್ದಾರೆ.

ಐಎಂಎ ವಂಚನೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್; ನಿಂಬಾಳ್ಕರ್, ಹಿಲೋರಿ ವಿಚಾರಣೆ ಗ್ರೀನ್‌ ಸಿಗ್ನಲ್..!‌

State

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ನಟಿ ಸಂಜನಾ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇದ್ದಾರೆ. ಡ್ರಗ್ಸ್ ಮಾಫಿಯಾದಲ್ಲಿ ಹಲವು ನಟ ನಟಿಯರು ಭಾಗಿಯಾಗಿದ್ದಾರೆ, ಈ ಬಗ್ಗೆ ದಾಖಲೆಗಳನ್ನು ನೀಡುವುದಾಗಿ ಸಂಬರಗಿ ಹೇಳಿದ್ದರು. ಆದರೆ ಇದೀಗ ನನ್ನ ಬಳಿ ಯಾವುದೇ ದಾಖಲೆ ಇಲ್ಲ ಎಂದು ಪ್ರಶಾಂತ್ ಸಂಬರಗಿ ಪೊಲೀಸರಿಗೆ ಕಾಗೆ ಹಾರಿಸಿದ್ದಾರೆ.

ಸದ್ಯಕ್ಕೆ ನನ್ನ ಹತ್ರ ಯಾವುದೇ ದಾಖಲೆ ಇಲ್ಲ ಎಂದು ಸಿಸಿಬಿ ಪೊಲೀಸರ ‌ಮುಂದೆ ಪ್ರಶಾಂತ್ ಸಂಬರಗಿ ಸೈಲೆಂಟ್ ಆಗಿದ್ದಾರೆ. ಸಂಜನಾ ಸಿನಿಮಾ ಲಿಸ್ಟ್, ಇಡ್ಕೊಂಡು ಸಂಬರ್ಗಿ ಬಂದಿದ್ದು, ಬರೇ ಖಾಲಿ ಫೈಲ್ ಇಡ್ಕೊಂಡು ಬಂದಿದ್ದನ್ನು ನೋಡಿ ಪೊಲೀಸರು ಗರಂ ಆಗಿದ್ದಾರೆ.

ನೀನು ತೋರಿಸಿದ ಎಲ್ಲಾ ದಾಖಲೆಗಳು ನಮ್ಮ ಹತ್ರ ಕೂಡ ಇದಾವೆ..ಇದನ್ನು ಬಿಟ್ಟು ಬೇರೆ ಏನಿದೆ ಹೇಳಿ ಎಂದು ಮಾಧ್ಯಮಗಳ ಮುಂದೆ ಪೋಸ್ ಕೊಡೋದಲ್ಲ ಅಂತಾ ಗರಂ ಪೊಲೀಸರು ಗರಂ ಆಗಿದ್ದಾರೆ. ಬಳಿಕ ದಾಖಲೆ ಸಮೇತ ಶುಕ್ರವಾರ ಬರ್ತಿನಿ ಹೋದ ಸಂಬರ್ಗಿ ಎದ್ದುಹೋಗಿದ್ದಾರೆ. ಶುಕ್ರವಾರ ಬರೋಕೆ ನಾವು ಯಾವುದೇ ನೋಟಿಸ್ ಕೊಟ್ಟಿಲ್ಲ, ಕೊಡೋದು ಇಲ್ಲ.. ಸಿಸಿಬಿ ಪೊಲೀಸರ ಪ್ರಶ್ನೆ ಗೆ ಗಲಿಬಿಲಿಗೊಂಡ ಸಂಬರ್ಗಿ ಸೈಲೆಂಟ್ ಆಗಿ ಎದ್ದು ಬಂದಿದ್ದಾರೆ.

ನಾಳೆ NEET ಪರೀಕ್ಷೆ: ಕೊರೊನಾ ಕಟ್ಟುನಿಟ್ಟಿನ ಕ್ರಮಗಳ ನಡುವೆ ಪರೀಕ್ಷೆ ಬರೆಯಲಿದ್ದಾರೆ 15 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು..!

India State

ನವದೆಹಲಿ:  ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿಯೊಂದನ್ನು ರೈಲ್ವೆ ಇಲಾಖೆ ನೀಡಿದೆ. ಕೋವಿಡ್ ಸೋಂಕಿನ ಹಿನ್ನೆಲೆ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್ ದರವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಿದೆ. 

ಹೌದು, ಕೇಂದ್ರ ಸರ್ಕಾರ ಬೆಂಗಳೂರು ಸೇರಿದಂತೆ ದೇಶದ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್ ದರವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಿದೆ.

ಕೆಎಸ್ ಆರ್, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ದರವನ್ನು 10 ರಿಂದ 50 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ದರ ಏರಿಕೆ ಇಂದಿನಿಂದ ಜಾರಿಗೆ ಬಂದಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಕೋವಿಡ್ ಸೋಂಕಿನ ಹಿನ್ನೆಲೆ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್ ದರವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಿದೆ, ಆದರೆ ಇದು ತಾತ್ಕಾಲಿಕ ಎಂದಷ್ಟೇ ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.

BREAKING : ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ‘ರಣದೀಪ್ ಸಿಂಗ್ ಸುರ್ಜೇವಾಲ’ ನೇಮಕ

India State

ನ್ಯೂಸ್ ಡೆಸ್ಕ್ :  ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪುನಾರಚನೆಗೊಂಡಿದ್ದು, ಕೈ’  ಚುನಾವಣಾ ಕಮಿಟಿಯಿಂದ ವೀರಪ್ಪ ಮೊಯ್ಲಿ ಔಟ್ ಆಗಿದ್ದಾರೆ. ಈ ಮೂಲಕ ಮೊಯಿಲಿಗೆ ಎಐಸಿಸಿ ಬಿಗ್  ಶಾಕ್ ನೀಡಿದೆ. ಕೇಂದ್ರ ಕಾಂಗ್ರೆಸ್ ಚುನಾವಣಾ ಸಮಿತಿಯ ಸದಸ್ಯ ಸ್ಥಾನಕ್ಕೆ ಕೃಷ್ಣಭೈರೇಗೌಡ ಅವರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ.

ನೂತನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆಯಾಗಿದ್ದು, ನೂತನ ಉಸ್ತುವಾರಿಯಾಗಿ ‘ರಣದೀಪ್ ಸಿಂಗ್ ಸುರ್ಜೇವಾಲ’ ರನ್ನು ನೇಮಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ಹೌದು. ಮಹತ್ವದ ಬೆಳವಣಿಗೆಯಲ್ಲಿ ಎಐಸಿಸಿ  ಪುನರ್ ರಚನೆಗೊಂಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸಿಂಗ್ ನೇಮಕಗೊಂಡಿದ್ದು, ವೇಣುಗೋಪಾಲ್ ಸ್ಥಾನಕ್ಕೆ ರಣದೀಪ್ ಸಿಂಗ್ ನೇಮಕವಾಗಿದ್ದಾರೆ.

ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಂ ನಬಿ ಅಜಾದ್ ಔಟ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ, ಮಹಾರಾಷ್ಟ್ರ ಉಸ್ತುವಾರಿಯಾಗಿ  ಹೆಚ್ ಕೆ  ಪಾಟೀಲ್ ನೇಮಕಗೊಂಡಿದ್ದರೆ, ತಮಿಳುನಾಡು  ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

BIG BREAKING : ಆರ್ಯ ಸಮಾಜದ ಮುಖಂಡ ‘ಸ್ವಾಮಿ ಅಗ್ನಿವೇಶ್’ ನಿಧನ

State

ಬೆಂಗಳೂರು :  ನಾಳೆಯಿಂದ ‘ಸಾರ್ವಜನಿಕ ಗ್ರಂಥಾಲಯ’ ತೆರೆಯಲು ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆಯಿಂದ ಸಾರ್ವಜನಿಕ ಗ್ರಂಥಾಲಯಗಳು ಕಾರ್ಯನಿರ್ವಹಿಸಲಿದೆ.

ಹೌದು, ಕಂಟೈನ್ ಮೆಂಟ್ ವಲಯ ಹೊರತುಪಡಿಸಿ ಇತರೆಡೆ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ಸರ್ಕಾರ ಆದೇಶ ಹೊರಡಿಸಿದೆ. ಕೋವಿಡ್ ಸೋಂಕಿನ ಹಿನ್ನೆಲೆ ‘ಸಾರ್ವಜನಿಕ ಗ್ರಂಥಾಲಯವನ್ನು ಮುಚ್ಚಲಾಗಿತ್ತು.ಇದೀಗ ನಾಳೆಯಿಂದ ನಾಳೆಯಿಂದ ಸಾರ್ವಜನಿಕ ಗ್ರಂಥಾಲಯಗಳು ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ.

ಆದರೆ ಕೋವಿಡ್ ಸೋಂಕು ನಿಯಂತ್ರಿಸುವ ಸಂಬಂಧ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾತ್ರವಲ್ಲದೆ ಗ್ರಂಥಾಲಯ ಪ್ರವೇಶಿಸುವವರನ್ನು ಥರ್ಮಲ್ ತಪಾಸಣೆ ನಡೆಸಬೇಕು ಎಂದು ಇದೇ ವೇಳೆ ಸೂಚನೆ ನೀಡಲಾಗಿದೆ.ಅನ್ ಲಾಕ್ 4 ಮಾರ್ಗಸೂಚಿ ಪ್ರಕಾರ ಕಂಟೈನ್ ಮೆಂಟ್ ಹೊರತುಪಡಿಸಿ ಹೊರಗಿನ ಪ್ರದೇಶಗಳಲ್ಲಿ ಗ್ರಂಥಾಲಯಗಳು ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ.

BREAKING : ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಕೇಸ್ : ‘CCB’ ಯಿಂದ ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ

 

BREAKING : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಟ್ವಿಸ್ಟ್ : ‘ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್’ ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ

State

ಬೆಂಗಳೂರು : ಡ್ರಗ್ಸ್​ ದಂಧೆಯ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸಂಜನಾ ಗಲ್ರಾನಿ ಅವರನ್ನು ಕೂಡ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಕೋರ್ಟ್ ಎದುರು ಸಿಸಿಬಿ ಅಧಿಕಾರಿಗಳು 5 ದಿನ ಕಸ್ಟಡಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಮೂರು ದಿನ  ಕಾಲ ಸಿಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ

ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿಯ ಜೊತೆಗೆ ನಟಿ ಸಂಜನಾ, ರಾಹುಲ್, ಲೂಮ್, ಪ್ರಶಾಂತ್ ರಂಕಾ , ರವಿ ಶಂಕರ್, ನಿಯಾಜ್ ಆರು ಮಂದಿಯನ್ನು ನ್ಯಾಯಾಧೀಶರು ಪೊಲೀಸ್​​ ಕಸ್ಟಡಿಗೆ ನೀಡಿದ್ದಾರೆ.

SHOCKING : ಭಾರತದಲ್ಲಿ ಮೇ ತಿಂಗಳಲ್ಲೆ 64 ಲಕ್ಷ ಕೊರೋನಾ ಪ್ರಕರಣ ದಾಖಲು !

State

ಬೆಂಗಳೂರು : ಡ್ರಗ್ಸ್​ ದಂಧೆಯ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್​ವುಡ್ ನಟಿ ರಾಗಿಣಿ ಸೇರಿದಂತೆ 6 ಜನರನ್ನ ಮತ್ತೆ ಮೂರು ದಿನಗಳ ಕಾಲ ಪೊಲೀಸ್​​ ಕಸ್ಟಡಿಗೆ ನೀಡಿ ನೇ ಎಸಿಎಂಎಂ ನ್ಯಾಯಧೀಶರು ಆದೇಶ ಹೊರಡಿಸಿದ್ದಾರೆ. 

ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರು ಪಡಿಸಿದ್ದರು. ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿಯ ಜೊತೆಗೆ ನಟಿ ಸಂಜನಾ, ರಾಹುಲ್, ಲೂಮ್, ಪ್ರಶಾಂತ್ ರಂಕಾ , ರವಿ ಶಂಕರ್, ನಿಯಾಜ್ ಆರು ಮಂದಿಯನ್ನು ನ್ಯಾಯಾದೀಶರು ಪೊಲೀಸ್​​ ಕಸ್ಟಡಿಗೆ ನೀಡಿದ್ದಾರೆ.

ಇನ್ನೂ. ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ರಾಗಿಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 14 ರವರೆಗೆ ಮುಂದೂಡಿಕೆಯಾಗಿದೆ.

ನನ್ನ ಮೇಲಿನ ಆರೋಪ ಸಾಭೀತಾದ್ರೆ.. ನನ್ನ ಎಲ್ಲಾ ಆಸ್ತಿ ಸರ್ಕಾರಕ್ಕೆ ಬರೆದು ಕೊಡುವೆ – ಶಾಸಕ ಜಮೀರ್ ಅಹ್ಮದ್

 

State

ಬೆಂಗಳೂರು :  ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತರನ್ನು ನೇಮಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಐಎಎಸ್ ಅಧಿಕಾರಿಯಾಗಿರುವ ಗೌರವ ಗುಪ್ತ ಈ ಹಿಂದೆ ಕೆ ಎಸ್ ಆರ್ ಟಿ ಸಿ ಎಂಡಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.  ಇಂದು ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್ ಸಂಕಷ್ಟ : ‘ಕನ್ನಡ ಚಿತ್ರರಂಗ’ದ ನೆರವಿಗೆ ಧಾವಿಸಿದ ‘ರಾಜ್ಯ ಸರ್ಕಾರ’

BIGG NEWS : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ‘ED’ ಎಂಟ್ರಿ…!