Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಅಮರಾವತಿ : ಆ ಮಂತ್ರವಾದಿ… ನಿಮ್ಮ ಮಕ್ಕಳು ಸತ್ತ ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರ್ತಾರೆ ಎಂದು ಹೇಳಿದ್ದ.. ಕಲಿಯುಗದಲ್ಲೂ ಇಂತಹ ಸತ್ಯ ನಂಬಿದ ಆ ಸುಶಿಕ್ಷಿತ ಪೋಷಕರು ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಮಾಡಿದ್ದು ಮಾತ್ರ ಹೀನ ಕೃತ್ಯ. ಅದೇನು ಎನ್ನುವ ಬಗ್ಗೆ ಮುಂದೆ ಓದಿ..
ಈ ಕುಲಿಯುಗ ಮುಗಿಯುತ್ತಾ ಬಂದಿದೆ. ಕಲಿಯುಗವಯ್ಯ ಇದು. ಮಂತ್ರ ತಂತ್ರಕ್ಕೆ ಬೆಲೆಯಿಲ್ಲ ಎಂಬ ಮಾತು ಅರಿಯಬೇಕಾದಂತ ಉಪನ್ಯಾಸಕಿಯ ಕುಟುಂಬದವರು ಮಾಡಿದ್ದು ಮಾತ್ರ ಹೀನ ಕೃತ್ಯ. ಅದೇ ಆಧ್ಯಾತ್ಮ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರುತ್ತಾರೆ ಎಂಬುದಾಗಿ ನಂಬಿದ ಸುಶಿಕ್ಷಿತ ದಂಪತಿಗಳು, ತಮ್ಮ ಇಬ್ಬರು ಪುತ್ರಿಯರನ್ನು ಕೊಂದು ಹಾಕಿರುವ ಘಟನೆ, ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
ವಿ.ಪುರುಷೋತ್ತಮ ನಾಯ್ಡು ಮತ್ತು ಪದ್ಮಜಾ ದಂಪತಿಗಳಿಗೆ ಅಲೇಖ್ಯಾ(27) ಮತ್ತು ಸಾಯಿ ದಿವ್ಯ(22) ಎಂಬ ಇಬ್ಬರು ಹೆಣ್ಣು ಮಕ್ಕಳು. ಅಲೇಖ್ಯಾ ಭೂಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರೇ, ಸಾಯಿ ದಿವ್ಯಾ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ಕೆ.ಎಂ.ಮ್ಯೂಸಿಕ್ ಕನ್ಸರ್ವೇಟರಿ ಶಾಲೆಯ ವಿದ್ಯಾರ್ಥಿನಿ. ಇವರಿಬ್ಬರು ಕೊರೋನಾ ತಂದ ಲಾಕ್ ಡೌನ್ ನಂತ್ರ ಪೋಷಕರ ಜೊತೆಗೆ ಇದ್ದರು.
ಇತ್ತ ತಂದೆ ಪುರುಷೋತ್ತಮ ನಾಯ್ಡು ಎಂಎಸ್ಸಿ, ಪಿಹೆಚ್ ಡಿ ಪದವೀಧರರಾಗಿ, ಮದನಪಲ್ಲಿಯ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ, ಕಾಲೇಜಿನ ಉಪ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪತ್ನಿ ಪದ್ಮಜಾ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು, ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಪ್ರಾಚಾರ್ಯೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೀಗೆ ಸುಶಿಕ್ಷಿತ ಕುಟುಂಬ ಮಾತ್ರ, ಮಂತ್ರವಾದಿಯೊಬ್ಬರು ಹೇಳಿದ ಮಾತಿನಿಂದಾಗಿ ಮಕ್ಕಳು ಸತ್ತ ಗಂಟೆಯಲೇ ಹುಟ್ಟಿ ಬರುತ್ತಾರೆ ಎಂಬ ಮಾತು ನಂಬಿ, ಉಪನ್ಯಾಸಕಿ ಪದ್ಮಜಾ ಹಿರಿಯ ಪುತ್ರಿಯನ್ನು ತ್ರಿಶೂಲದಿಂದ ಚುಚ್ಚಿ, ಕಿರಿಯ ಪುತ್ರಿಯನ್ನು ಡಂಬಲ್ ಗಳಿಂದ ಹೊಡೆದು ಕೊಂದು ಬಿಟ್ಟಿದ್ದಾರೆ. ಎಷ್ಟೇ ಹೊತ್ತಾದ್ರೂ ಮಕ್ಕಳು ಬದುಕಿಬಾರದ್ದರಿಂದ ಆಘಾತಕ್ಕೊಳಗಾಗಿ ತಮ್ಮ ಮಕ್ಕಳನ್ನು ತಾವೇ ಕೊಂದಿದ್ದಾಗಿ ಸ್ನೇಹಿತರಿಗೆ ಪೋನ್ ಮಾಡಿ ಪುರುಷೋತ್ತಮ ನಾಯ್ಡು ಹೇಳಿದ್ದರಿಂದ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸದ ಸ್ನೇಹಿತರೂ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದಂತ ಮಕ್ಕಳನ್ನು ಕಂಡು ದಿಭ್ರಾಂತರಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಪೋಷಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸತ್ಯ ಯುಗ ಆರಂಭವಾಗುತ್ತದೆ. ಇಬ್ಬರು ಮಕ್ಕಳೂ ಅಲ್ಲೇ ಹುಟ್ಟಿ ಬರಲಿದ್ದಾರೆ, ದೇಹಗಳಿಗೆ ಜೀವ ಬರಲಿದೆ ಎಂಬ ಮಂತ್ರವಾದಿಯ ಮಾತು ನಂಬಿ ಇಂತಹ ಕೃತ್ಯ ಎಸಗಿದ್ದಾಗಿ ಹೇಳಿದ್ದಾರೆ. ಈ ಮೂಲಕ ಸುಶೀಕ್ಷಿತರಾದಂತ ದಂಪತಿಗಳು ಹೀನ ಕೃತ್ಯವೆಸಗಿದ್ದಾರೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಎಬ್ಬಿಸಿದ್ದ ಖಾತೆ ಅದಲು-ಬದಲು ಆಟ ಕೊನೆಗೂ ಅಂತ್ಯ ಕಂಡಿದ್ದು, ಮೂವರು ಸಚಿವರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವ್ರು ಖಾತೆ ಮರು ಹಂಚಿಕೆ ಮಾಡಿದ್ದಾರೆ.
ಅದ್ರಂತೆ, ಸಚಿವ ಆನಂದ್ ಸಿಂಗ್ ಅವ್ರಿಗೆ ಹಜ್ ಮತ್ತು ವಕ್ ಖಾತೆಯ ಜವಾಬ್ದಾರಿ ನೀಡಲಾಗಿದ್ದು, ಸಚಿವ ಮಾಧು ಸ್ವಾಮಿಯವ್ರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಿದ್ದಾರೆ. ಇನ್ನು ಉಳಿದಂತೆ ಡಾ.ಕೆ ಸುಧಾಕರ್ ಅವ್ರಿಗೆ ಮೊದಲಿನಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳನ್ನ ನೋಡಿದ್ದಾರೆ. ಈ ಮೂಲಕ ಸಚಿವ ಸುಧಾಕರ್ ಬಯಸಿದಂತೆ ಎರಡು ಖಾತೆ ಪಡೆದಿದ್ದಾರೆ.
ಇನ್ನು ಈ ಖಾತೆಗಳ ಮರು ಹಂಚಿಕೆಯಿಂದ ಸಹಜವಾಗಿಯೇ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಮತ್ತು ಮಾಧು ಸ್ವಾಮಿಯವ್ರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3sQOxW9
ಬೆಂಗಳೂರು : ಈಗಾಗಲೇ ಎರಡು ಬಾರಿ ಖಾತೆ ಅದಲು-ಬದಲು ಮಾಡಿದ್ದಂತ ಸಿಎಂ ಯಡಿಯೂರಪ್ಪ, ಈಗ ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ. ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ ನೀಡಲಾಗಿದ್ದಂತ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ, ಸುಧಾಕರ್ ಅವರಿಗೆ ನೀಡಿದ್ದಾರೆ. ಈ ಮೂಲಕ ಸಚಿವ ಸುಧಾಕರ್ ಹೆಗಲಿದೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳ ಜವಾಬ್ದಾರಿ ಹೊರಿಸಿದ್ದಾರೆ. ಜೊತೆಗೆ ಸಚಿವ ಆನಂದ್ ಸಿಂಗ್ ಅವರಿಗೆ ಸಿಎಂ ಬಳಿಯಲ್ಲಿದ್ದಂತ ಮೂಲ ಸೌಕರ್ಯ ಖಾತೆಯನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಸಚಿವ ಮಾಧುಸ್ವಾಮಿ ಅವರಿಗೆ ಪ್ರವಾಸೋದ್ಯಮ ಖಾತೆಯ ಜೊತೆಗೆ ಪರಿಸರ ಖಾತೆ ನೀಡಲಾಗಿದೆ. ಇಂತಹ ಅಧಿಕೃತ ಪಟ್ಟಿಯನ್ನು ಗೆಜೆಟ್ ಅಧಿಸೂಚನೆ ಮೂಲಕ ಪ್ರಕಟಿಸಲಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆಯ ಬಗ್ಗೆ ಅಸಮಾಧಾನ ಸ್ಪೋಟಗೊಂಡ ನಂತ್ರ, ಹಲವು ಸಚಿವರ ಖಾತೆ ಅದಲು ಬದಲು ಮಾಡಿದ್ದರು. ಸಚಿವ ಜೆಸಿ ಮಾಧುಸ್ವಾಮಿ ಅವರ ಬಳಿಯಿದ್ದಂತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿ, ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿತ್ತು. ಆದ್ರೇ ನಾನು ಗ್ರಾಮೀಣ ಭಾಗದಿಂದ ಬಂದವನು, ವೈದ್ಯಕೀಯ ಶಿಕ್ಷಣ ಖಾತೆಯಿಂದ ಏನ್ ಜನರ ಕೆಲಸ ಮಾಡಲಿ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ನಡುವೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಒಬ್ಬರಲ್ಲೇ ಇರಲಿ ಎನ್ನುವ ಕಾರಣಕ್ಕಾಗಿ, ಸಚಿವ ಡಾ.ಕೆ.ಸುಧಾಕರ್ ಬಳಿಯಲ್ಲಿಯೇ ಇದ್ದಂತ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ಅವರಿಗೆ ನೀಡಲಾಗಿದೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕಾಗಿ 2 ಖಾತೆಗಳ ಹೊಣೆಗಾರಿಕೆ ನೀಡಲಾಗಿದೆ.
ಇತ್ತ ಆನಂದ್ ಸಿಂಗ್ ಅವರ ಖಾತೆಯನ್ನು ಕೂಡ ಅದಲು ಬದಲು ಮಾಡಲಾಗಿದೆ. ಅವರಿಗೆ ಸಿಎಂ ಯಡಿಯೂರಪ್ಪ ಬಳಿಯಲ್ಲಿದ್ದಂತ ಮೂಲ ಸೌಕರ್ಯ ಖಾತೆ ಜೊತೆಗೆ ಸಚಿವ ಮಾಧುಸ್ವಾಮಿ ಬಳಿಯಲ್ಲಿದ್ದಂತ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ. ಅಲ್ಲದೇ ಸಚಿವ ಮಾಧುಸ್ವಾಮಿಯವರಿಗೆ ಪ್ರವಾಸೋದ್ಯಮ ಖಾತೆಯ ಜೊತೆಗೆ ಪರಿಸರ ಖಾತೆಯ ಹೊಣೆಗಾರಿಕೆ ನೀಡಲಾಗಿದೆ. ಈ ಮೊದಲು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಬಳಿಯಲ್ಲಿತ್ತು. ಈ ಮೂಲಕ ಡಾ.ಕೆ.ಸುಧಾಕರ್, ಜೆಸಿ ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಇಂತಹ ಖಾತೆ ಅದಲು-ಬದಲು ಪಟ್ಟಿಗೆ ರಾಜ್ಯಪಾಲರು ಕೂಡ ಅಂಕಿತ ಸೂಚಿಸಿದ್ದಾರೆ.
ಲಂಡನ್: ಬೌಲರ್ ಎಸೆಯುವ ಬೌನ್ಸರ್ ಬ್ಯಾಟ್ಸ್ಮನ್ ತಲೆಗೆ ಬಿದ್ದು ಗಂಭೀರ ಗಾಯಗಳಾದ ಸಾಕಷ್ಟು ಉದಾಹರಣೆಗಳಿದ್ದು, ಅಂಡರ್-18 ಕ್ರಿಕೆಟ್ನಲ್ಲಿ ಬೌನ್ಸರ್ ನಿಷೇಧ ಮಾಡುವಂತೆ ಇಂಗ್ಲೆಂಡ್ ತಜ್ಞರ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ.
ತಲೆಯ ರಕ್ಷಣೆಗೆ ಹೆಲ್ಮೆಟ್ ಹಾಕಿಕೊಳ್ಳಲಾಗುತ್ತೆ. ಆದ್ರೂ ಬೌನ್ಸರ್ನಿಂದ ತಲೆಗೆ ಬೀಳುವ ಏಟು ಬಲವಾಗಿರುತ್ತೆ. 18 ವರ್ಷದೊಳಗಿನ ಯುವಕರಿಗೆ ತಲೆಗೆ ಏಟು ಬಿದ್ದರೆ ಮಿದುಳಿಗೆ ಹೆಚ್ಚು ಸಮಸ್ಯೆ ಉಂಟಾಗ್ಬೋದು. ಹೀಗಾಗಿ, ಈ ಅಂಡರ್-18 ಕ್ರಿಕೆಟ್ ಮ್ಯಾಚ್ʼನಲ್ಲಿ ಬೌನ್ಸರ್ ನಿಷೇಧ ಮಾಡಿ, ಈ ಮೂಲಕ ಆಟಗಾರರ ಹಿತರಕ್ಷಣೆಯನ್ನ ಕಾಪಾಡಿ ಎಂದು ತಜ್ಞರು ಕೋರಿದ್ದಾರೆ.
ಇನ್ನು ಮನುಷ್ಯರ ಮೆದುಳು 20 ವರ್ಷದವರೆಗೂ ಬೆಳವಣಿಗೆ ಕಾಣುತ್ತಿರುತ್ತದೆ. ಈ ಅವಧಿಯಲ್ಲಿ ಮೆದುಳಿಗೆ ಸಣ್ಣ ತೊಂದರೆ ಉಂಟಾದ್ರು ಅದರ ಪರಿಣಾಮ ತುಂಬಾ ದೊಡ್ಡದಾಗುತ್ತೆ. ಹಾಗಾಗಿ ಆಟಗಾರರ ಭವಿಷ್ಯದ ದೃಷ್ಟಿಯಲ್ಲಿ ಈ ಕ್ರಮ ಕೈಗೊಳ್ಳಿ ಎಂದು ತಜ್ಞರು ಹೇಳಿದ್ದಾರೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3sQOxW9
ನವದೆಹಲಿ: ಯುಗಾದಿ ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಬೇವು ಬೆಲ್ಲ ಎರಡು ಸಿಕ್ಕಿದೆ. ಯಾಕಂದ್ರೆ, ಭಾರತೀಯ ಮಾರುಕಟ್ಟೆಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಕುಸಿತವಾದ್ರೆ, ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಈ ಮೂಲಕ ಚಿನ್ನದ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ.
ಹೌದು, 10 ಗ್ರಾಂ ಚಿನ್ನದ ಬೆಲೆಯಲ್ಲಿ 141 ರೂ.ಗಳಷ್ಟು ಕಮ್ಮಿಯಾಗಿದ್ದು, ಈ ಮೂಲಕ 48,650 ರೂಪಾಯಿಗಳಾಗಿದೆ. ಇನ್ನು ಪ್ರತಿ ಕೆ.ಜಿ ಬೆಳ್ಳಿಯಲ್ಲಿ 43 ರೂಪಾಯಿಗಳು ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 65,976 ರೂಪಾಯಿಗಳಷ್ಟಾಗಿದೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3sQOxW9
ಡಿಜಿಟಲ್ ಡೆಸ್ಕ್: ಕಳೆದ ಎರಡ್ಮೂರು ದಿನಗಳಿಂದ ದೇಶದಲ್ಲಿ 5,10.100 ರೂಪಾಯಿಗಳು ನೋಟುಗಳು ಬ್ಯಾನ್ ಆಗಲಿವೆ. ಇವುಗಳನ್ನ ಆರ್ಬಿಐ ವಾಪಸ್ ಪಡೆಯಲಿದೆ ಎನ್ನುವುದು ಅಪ್ಪಟ ಸುಳ್ಳು ಸುದ್ದಿ ಎಂದು ಆರ್ಬಿಐ ಸ್ಪಷ್ಟೀಪಡಿಸಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆರ್ಬಿಐ, ಯಾವುದೇ ಕಾರಣಕ್ಕೂ 100 ರೂಪಾಯಿ, 10 ಮತ್ತು 5 ರೂಪಾಯಿಗಳನ್ನ ಬ್ಯಾನ್ ಮಾಡೋದಿಲ್ಲ. ಯಾವುದೇ ಕಾರಣಕ್ಕೂ ನೋಟು ವಾಪಸ್ ಪಡೆಯುವುದಿಲ್ಲ ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ಸುಳ್ಳು ಸುದ್ದಿಗಳಿಗೆ ಆರ್ಬಿಐ ಬ್ರೇಕ್ ಹಾಕಿದೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3sQOxW9
ಬೆಂಗಳೂರು: ರಾಜ ರಾಜಕೀಯದಲ್ಲಿ ಖಾತೆ ಕುರಿತ ಕ್ಯಾತೆ ಮುಗಿಯುವ ಲಕ್ಷಣಗಳು ಕಾಣ್ತಿಸ್ತಿಲ್ಲ. ಸಧ್ಯ ಮತ್ತೆ ಖಾತೆ ಬದಲಾವಣೆಯ ಬಿರುಗಾಳಿ ಎದ್ದಿದ್ದು, ಅದಲು-ಬದಲು ಆಟ ಶುರುವಾಗಿದೆ. ಈ ಮಧ್ಯೆ ಇದ್ರಿಂದ ಬೇಸರಗೊಂಡಿರೋ ಸಚಿವ ಆನಂದ್ ಸಿಂಗ್, ನಾನು ಶಾಸಕನಾಗಿಯೇ ಉಳಿದು ಬಿಡುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಆನಂದ್ ಸಿಂಗ್ ರಾಜೀನಾಮೆ ಮಾತುಗಳನ್ನಾಡಿದ್ದಾರೆ.
ಈ ವಿಷ್ಯ ಕೇಳಿ ಭಟ್ಕಳದ ಐಬಿಯಲ್ಲಿರೋ ಸಚಿವ ಆರ್ ಅಶೋಕ್, ಆನಂದ್ ಸಿಂಗ್ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. “ನಿಮಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ವಾ. ಎಲ್ಲವನ್ನ ಸರಿಮಾಡೋಣ ಆದ್ರೆ ರಾಜೀನಾಮೆ ನೀಡ್ಬೇಡಿ” ಎಂದು ಮನವೊಲಿಕೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗ್ತಿದೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3sQOxW9
ಡಿಜಿಟಲ್ ಡೆಸ್ಕ್: ಗ್ಲೋಬಲ್ ಕ್ಲೈಮೇಟ್ ರಿಸ್ಕ್ ಇಂಡೆಕ್ಸ್ 2021 ಸೋಮವಾರ 2019 ರಲ್ಲಿ ಹವಾಮಾನ ಬದಲಾವಣೆಯಿಂದ ಹೆಚ್ಚು ಪರಿಣಾಮ ಬೀರಿದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದ್ರಲ್ಲಿ ಹವಾಮಾನ ವೈಪರೀತ್ಯದಿಂದಾದ ನಷ್ಟವೆಷ್ಟು? ಸಾವು ಮತ್ತು ದುರ್ಘಟನೆಗಳ ಬಗ್ಗೆ ವರದಿ ಮಾಡಿದೆ.
ಈ ವರದಿಯಂತೆ, 2000 ಮತ್ತು 2019ರ ನಡುವೆ ಹವಾಮಾನ ಬೀರಿದ ಪರಿಣಾಮದಿಂದಾಗಿ ವಿಶ್ವದಲ್ಲಿ 11,000 ದುರ್ಘಟನೆಗಳು ನಡೆದಿದ್ರೆ, 4,75,000ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಸುಮಾರು 2.56 ಟ್ರಿಲಿಯನ್ ಯುಎಸ್ ಡಾಲರ್ಗಳು ನಷ್ಟವಾಗಿವೆ.
ಇನ್ನು ಗ್ಲೋಬಲ್ ಕ್ಲೈಮೇಟ್ ರಿಸ್ಕ್ ಇಂಡೆಕ್ಸ್ 2021 ಸೋಮವಾರ 2019 ರಲ್ಲಿ ಹವಾಮಾನ ಬದಲಾವಣೆಯಿಂದ ಹೆಚ್ಚು ಪರಿಣಾಮ ಬೀರಿದ ದೇಶಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತ 7ನೇ ಸ್ಥಾನದಲ್ಲಿದೆ.
ಇನ್ನು ಈ ಪಟ್ಟಿಯಲ್ಲಿ ಮೊಜಾಂಬಿಕ್, ಜಿಂಬಾಬ್ವೆ, ಬಹಾಮಾಸ್, ಜಪಾನ್, ಮಲಾವಿ ಮತ್ತು ಅಫ್ಘಾನಿಸ್ತಾನ, ಭಾರತಕ್ಕಿಂತ ಮುಂದಿವೆ. 2000 ರಿಂದ 2019 ರವರೆಗಿನ ತೀವ್ರ ಮತ್ತು ಭಯಾನಕ ಹವಾಮಾನ ಘಟನೆಗಳ ನಡೆಸಿದ್ದು, ಹೆಚ್ಚು ಪರಿಣಾಮ ಬೀರಿದ ದೇಶಗಳ ಪಟ್ಟಿಯನ್ನು ಬಾನ್ ಮೂಲದ ಜರ್ಮನ್ ವಾಚ್ ಪರಿಸರ ಸಂಸ್ಥೆ ಬಿಡುಗಡೆ ಮಾಡಿದೆ. ಇದ್ರಲ್ಲಿ 2019ರ ಘಟನೆಗಳ ಆಧಾರದ ಮೇಲೆ ಭಾರತ ಏಳನೇ ಸ್ಥಾನದಲ್ಲಿದೆ. ಈ 20 ವರ್ಷಗಳಲ್ಲಿ ಪೋರ್ಟೊ ರಿಕೊ, ಮ್ಯಾನ್ಮಾರ್ ಮತ್ತು ಹೈಟಿ ಹವಾಮಾನ ಬದಲಾವಣೆಯಿಂದ ಹೆಚ್ಚು ಪ್ರಭಾವಿತವಾದ ದೇಶಗಳಾಗಿವೆ.
ಗ್ಲೋಬಲ್ ಅಡಾಪ್ಟೇಶನ್ ಶೃಂಗಸಭೆ 2021 ನೆದರ್ಲ್ಯಾಂಡ್ಸ್ನಲ್ಲಿ ಪ್ರಾರಂಭವಾಗುವ ಮೊದಲು ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಮ್ಮೇಳನದಲ್ಲಿ, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸಹಾಯ ಮಾಡುವ ವಿಷಯದ ಬಗ್ಗೆ ಚರ್ಚಿಸಲಿದ್ದು, ಇದರಿಂದಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಾಯ ಮಾಡಬಹುದು.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3sQOxW9
ಹೊಸದಿಲ್ಲಿ : ಸಾಮಾಜಿಕ ಸಂದೇಶ ಆ್ಯಪ್ ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಯನ್ನು ಅಕ್ಸೆಪ್ಟ್ ಮಾಡುವುದು ಒಂದು “ಸ್ವಯಂಪ್ರೇರಿತ” ವಿಷಯವಾಗಿದ್ದು, ಷರತ್ತುಗಳನ್ನು ಒಪ್ಪದಿದ್ದರೆ ವೇದಿಕೆಯನ್ನು ಬಳಸದಿರಲು ನಿರ್ಧರಿಸಬಹುದು ಎಂದು ದೆಹಲಿ ಹೈಕೋರ್ಟ್ ಸೋಮವಾರ ಪುನರುಚ್ಚರಿಸಿದೆ.
‘ನಿಮ್ಮ ಮೊಬೈಲ್ ನಲ್ಲಿ ವಾಟ್ಸಾಪ್ ಡೌನ್ ಲೋಡ್ ಮಾಡುವುದು ಕಡ್ಡಾಯವಲ್ಲ, ಸ್ವಯಂಪ್ರೇರಿತ’ ಎಂದು ಫೇಸ್ ಬುಕ್ ಮಾಲೀಕತ್ವದ ಮೆಸೆಜಿಂಗ್ ವೇದಿಕೆಯ ಹೊಸ ಪ್ರೈವೈ ನೀತಿವಿರುದ್ಧ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ನ್ಯಾಯಾಲಯ ಹೇಳಿದೆ.
ಹೊಸ ಗೌಪ್ಯತಾ ನೀತಿಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಭಾರತೀಯ ಬಳಕೆದಾರರನ್ನು ಯುರೋಪಿಯನ್ನರಿಂದ ವಿಭಿನ್ನವಾಗಿ ನಡೆಸಿಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ನ್ಯಾಯಪೀಠಕ್ಕೆ ತಿಳಿಸಿದೆ.
‘ಭಾರತೀಯ ಬಳಕೆದಾರರು ಏಕಪಕ್ಷೀಯವಾಗಿ ವಾಟ್ಸ್ ಆಪ್ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಳೆದ ವಾರ ಸರ್ಕಾರ ವಾಟ್ಸಾಪ್ ಸಿಇಒ ವಿಲ್ ಕ್ಯಾಥ್ ಕಾರ್ಟ್ ಗೆ ಪತ್ರ ಬರೆದು, ಮೆಸೆಜಿಂಗ್ ಆಪ್ ನ ಗೌಪ್ಯತೆ ನೀತಿಯಲ್ಲಿ ಆಗಿರುವ ಬದಲಾವಣೆಗಳನ್ನು ಹಿಂಪಡೆಯುವಂತೆ ಕಂಪನಿಗೆ ಸೂಚಿಸಿತ್ತು.
ವಾಟ್ಸಾಪ್ ಸಿಇಒ ವಿಲ್ ಕ್ಯಾಥ್ ಕಾರ್ಟ್ ಗೆ ಬರೆದ ಪತ್ರದಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಭಾರತವು ಜಾಗತಿಕವಾಗಿ ವಾಟ್ಸಾಪ್ ನ ಅತಿ ದೊಡ್ಡ ಬಳಕೆದಾರರ ನೆಲೆಯನ್ನು ಹೊಂದಿದೆ ಮತ್ತು ಅದರ ಸೇವೆಗಳಿಗೆ ಅತೀ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಿದೆ.
ವಾಟ್ಸಾಪ್ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳು “ಭಾರತೀಯ ನಾಗರಿಕರ ಆಯ್ಕೆ ಮತ್ತು ಸ್ವಾಯತ್ತತೆಯ ಮೇಲೆ ಪರಿಣಾಮ ಬೀರುತ್ತವೆ” ಎಂದು ಅದು ಬರೆದಿದೆ.
ಉದ್ದೇಶಿತ ಬದಲಾವಣೆಗಳನ್ನು ಹಿಂತೆಗೆದುಕೊಳ್ಳಲು ಮತ್ತು ಮಾಹಿತಿ ಗೌಪ್ಯತೆ, ಆಯ್ಕೆ ಸ್ವಾತಂತ್ರ್ಯ ಮತ್ತು ಡೇಟಾ ಭದ್ರತೆಯ ಬಗ್ಗೆ ತನ್ನ ಧೋರಣೆಯನ್ನು ಮರುಪರಿಶೀಲಿಸುವಂತೆ ಸಚಿವಾಲಯ ವು ವಾಟ್ಸಾಪ್ ಗೆ ಸೂಚಿಸಿದೆ.
ವಾಟ್ಸ್ ಆಪ್ ತನ್ನ ಮಾತೃ ಸಂಸ್ಥೆ ಫೇಸ್ ಬುಕ್ ನೊಂದಿಗೆ ಡೇಟಾ ಹಂಚಿಕೊಳ್ಳುತ್ತಿದೆ ಎಂಬ ಆತಂಕದ ನಡುವೆಯೇ ಬಳಕೆದಾರರು ತಮ್ಮ ಡೇಟಾದ ಗೌಪ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ನಡುವೆಯೇ ಈ ಸುದ್ದಿ ಹೊರಬಿದ್ದಿದೆ.
ಭಾರತ ಸೇರಿದಂತೆ ಜಾಗತಿಕವಾಗಿ ಬಳಕೆದಾರರಿಂದ ಭಾರೀ ಟೀಕೆ ಎದುರಿಸುತ್ತಿರುವ ವಾಟ್ಸ್ ಆಪ್ ತನ್ನ ಹೊಸ ನೀತಿ ಪರಿಷ್ಕರಣೆಯನ್ನು ಮೇ 15ಕ್ಕೆ ಮುಂದೂಡಲು ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸ್ ಆಪ್, ಜನರು ಯಾವ ದಿನಾಂಕದಂದು ನಿಯಮಗಳನ್ನು ವಿಮರ್ಶಿಸಬೇಕು ಮತ್ತು ಸ್ವೀಕರಿಸಬೇಕು ಎಂದು ಕೇಳಲಾಗುತ್ತದೆ.
‘ಫೆ.8ರಂದು ಯಾರ ಖಾತೆಯೂ ಅಮಾನತು ಅಥವಾ ಡಿಲೀಟ್ ಮಾಡುವುದಿಲ್ಲ. ವಾಟ್ಸಾಪ್ ನಲ್ಲಿ ಗೌಪ್ಯತೆ ಮತ್ತು ಭದ್ರತೆ ಹೇಗೆ ಕೆಲಸ ಮಾಡುತ್ತದೆ ಎಂಬ ತಪ್ಪು ಮಾಹಿತಿಯನ್ನು ಹೊರಹಾಕಲು ನಾವು ಇನ್ನೂ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಮೇ 15ರಂದು ಹೊಸ ವ್ಯಾಪಾರ ಆಯ್ಕೆಗಳು ಲಭ್ಯವಾಗುವ ಮೊದಲು, ನಾವು ಕ್ರಮೇಣ ಜನರ ಬಳಿ ಹೋಗಿ ನೀತಿ ಪರಾಮರ್ಶೆ ಮಾಡುತ್ತೇವೆ” ಎಂದು ಬ್ಲಾಗ್ ಪೋಸ್ಟ್ ನಲ್ಲಿ ಹೇಳಲಾಗಿದೆ.
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ. ಈಗಾಗಲೇ 14 ಆರೋಪಿಗಳನ್ನು ಬಂಧಿಸಿರುವಂತ ಸಿಸಿಬಿ ಪೊಲೀಸರು, ಪ್ರಮುಖ ಆರೋಪಿಗಳಾದಂತ ಕೆಪಿಎಸ್ಸಿಯ ಇಬ್ಬರು ನೌಕರರನ್ನು ಬಂಧಿಸಿದ್ದಾರೆ.
ಕೆಪಿಎಸ್ಸಿಯ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು, ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇದೀಗ ಕೆಪಿಎಸ್ಸಿ ಕಚೇರಿಯ ಎಸ್ ಡಿ ಎ ರಮೇಶ್, ಸ್ಟೆನೋಗ್ರಾಫರ್ ಸನಾ ಬೇಡಿ ಬಂಧಿಸಿದೆ.
ಅಂದಹಾಗೇ ಬಂಧಿತ ಕೆಪಿಎಸ್ಸಿ ಇಬ್ಬರು ನೌಕರರಲ್ಲಿ ಸ್ಟೆನೋಗ್ರಾಫರ್ ಸನಾ ಬೇಡಿ, ಎಸ್ ಡಿಎ ರಮೇಶ್ ಗೆ ಎಫ್ ಡಿಎ ಪ್ರಶ್ನೆ ಪತ್ರಿಕೆ ನೀಡಿದ್ದರಂತೆ. ಇಂತಹ ಪ್ರಶ್ನೆ ಪತ್ರಿಕೆಯನ್ನು ಆರೋಪಿಗಳಾದಂತ ಚಂದ್ರು ಹಾಗೂ ರಾಚಪ್ಪಗೆ ನೀಡಿದ್ದರು ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.