ಆಡಿಲೇಟ್‌ : ಟಿ20 ವಿಶ್ವಕಪ್‌ ನಲ್ಲಿ ಅಫ್ಥಾನಿಸ್ತಾನ ತಂಡ ಇತಿಹಾಸ ನಿರ್ಮಿಸಿದ್ದು, ಸೂಪರ್‌ 8ರ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್‌ ಗೆ ಎಂಟ್ರಿ ಪಡೆದಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ನಿಗಧಿತ 20 ಓವರ್‌ ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 115  ರನ್‌ ಗಳಿಸಿತು. ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ 17.5 ಓವರ್‌ ಗಳಲ್ಲಿ 105 ರನ್‌ ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನಕ್ಕೆ 8 ರನ್ ಗಳ ಜಯ ಸಾಧಿಸಿ ಸೆಮಿಫೈನಲ್ ಗೆ ಅರ್ಹತೆ ಪಡೆದಿದೆ.

ಅಫ್ಘಾನಿಸ್ತಾನ ತಂಡ ಜೂನ್ 27ರಂದು ನಡೆಯಲಿರುವ ಸೆಮಿಫೈನಲ್ 1ರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

Share.
Exit mobile version