ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಫೈನಲ್‌ ಗೆ ಪ್ರವೇಶ ಪಡೆದಿದೆ.

ಇಂದು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನದ ದಕ್ಷಿಣ ಆಫ್ರಿಕಾದ ಬಿಗು ಬೌಲಿಂಗ್‌ ನಿಂದ 11.5 ಓವರ್‌ ಗಳಲ್ಲಿ ಕೇವಲ 56 ರನ್‌ ಗಳಿಗೆ ಅಲೌಟ್‌ ಆಯಿತು. ದಕ್ಷಿಣ ಆಫ್ರಿಕಾ ಪರ ಜಾನ್‌ ಸೆನ್‌, ಶಂಸಿ ತಲಾ ಮೂರು ವಿಕೆಟ್‌ ಪಡೆದ್ರೆ, ಕಗಿಸೋ ರಬಡಾ,ಅನ್ರಿಚ್ ನಾರ್ಗ್ಜೆ ತಲಾ ಎರಡು ವಿಕೆಟ್‌ ಪಡೆದು ಮಿಂಚಿದರು.

ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 8.5 ಓವರ್‌ ಗಳಲ್ಲಿ1 ವಿಕೆಟ್‌ ನಷ್ಟಕ್ಕೆ 60 ರನ್‌ ಗಳಿಸುವ ಮೂಲಕ ಸುಲಭ ಗುರಿ ತಲುಪಿದೆ. ಈ ಮೂಲಕ ಟಿ20 ವಿಶ್ವಕಪ್‌ ನಲ್ಲಿ ಮೊದಲ ಬಾರಿಗೆ ಫೈನಲ್‌ ಗೆ ಎಂಟ್ರಿ ಕೊಟ್ಟಿದೆ.

Share.
Exit mobile version