ಬೆಂಗಳೂರು: ಜೂನ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಗಳ ವೀಕ್ಷಣೆಗೆ ಟಿಕೆಟ್ ಬುಕ್ಕಿಂಗ್ ಜೂನ್ 12ರಂದು ಆನ್ ಲೈನ್ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಮಾರಾಟ ಆರಂಭವಾಗಲಿದೆ.
Job Alerts: ನೀವು ‘SSLC ಪಾಸ್’ ಆಗಿದ್ದೀರಾ.? ಈ ಹುದ್ದೆಗೆ ಅರ್ಜಿ ಸಲ್ಲಿಸಿ | IOB Recruitment 2022
ಈ ಕುರಿತಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಹಿತಿ ಬಿಡುಗಡೆ ಮಾಡಿದ್ದು, ಜೂನ್ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಗೆ ಜೂನ್.12ರಂದು ಬೆಳಿಗ್ಗೆ 10 ಗಂಟೆಯಿಂದ 7 ಗಂಟೆಯವರೆಗೆ ಆನ್ ಲೈನ್ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದೆ.
Big News: ಅಲ್ಬೇನಿಯಾ ದೇಶದ ನೂತನ ಅಧ್ಯಕ್ಷರಾಗಿ ʻಬಜ್ರಾಮ್ ಬೇಗಜ್ʼ ಆಯ್ಕೆ!
ಹೀಗಿದೆ ಬಾಕ್ಸ್ ಆಫೀಸ್ ಟಿಕೆಟ್ ದರ
- ಎ ಅಪ್ಪರ್, ಬಿ ಅಪ್ಪರ್ ಹಾಗೂ ಲೋವರ್ ಸೀಟ್ ಟಿಕೆಟ್ ದರ ರೂ.2000, ಈ ಟಿಕೆಟ್ ಕಬ್ಬನ್ ರಸ್ತೆಯ ಗೇಟ್ ನಂಬರ್ 2ನಲ್ಲಿ ಮಾರಾಟ ಮಾಡಲಾಗುತ್ತದೆ.
- ಜಿ ಅಪ್ಪರ್, ಲೋವರ್ 1 ಹಾಗೂ ಲೋವರ್-2 ಸೀಟ್ ಗಳಿಗೆ ರೂ.750, ಗೇಟ್ ನಂ.5ರ ಕಬ್ಬನ್ ರಸ್ತೆಯಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತದೆ.
- ಡಿ ಕಾರ್ಪೊರೇಟ್ ಸೀಟ್ ದರ ರೂ.4000 ಆಗಿದ್ದು, ಕ್ವೀನ್ಸ್ ರಸ್ತೆಯ ಗೇಟ್ ನಂ.19ರಲ್ಲಿ ಮಾರಾಟ ಮಾಡಲಾಗುತ್ತದೆ.
- ಎನ್ ಸ್ಟ್ಯಾಂಡ್ ಸೀಟ್ ದರ ರೂ.5000, ಕ್ವೀನ್ಸ್ ರಸ್ತೆಯ ಗೇಟ್ ನಂ.18ರಲ್ಲಿ ಟಿಕೆಟ್ ಮಾರಾಟ
- ಎ-ಎಕ್ಸಿಕ್ಯೂಟಿವ್ ಸೀಟ್ ಟಿಕೆಟ್ ದರ ರೂ.6000, ಕ್ವೀನ್ಸ್ ರಸ್ತೆಯ ಗೇಟ್ ನಂ.18ರಲ್ಲಿ ಮಾರಾಟ
ಹೀಗಿದೆ.. ಭಾರತ vs ದಕ್ಷಿಣ ಆಫ್ರಿಕಾ ಟಿ20 ಮ್ಯಾಚ್ ಆನ್ ಲೈನ್ ಟಿಕೆಟ್ ದರ
- ಗ್ರ್ಯಾಂಡ್ ಟೆರೇಸ್ ಸೀಟ್ ಟಿಕೆಟ್ ದರ ರೂ.6000
- ಪಿ ಕಾರ್ಪೊರೇಟ್ ಟಿಕೆಟ್ ದರ ರೂ.10000
- ಪೆವಿಲಿಯನ್ ಟೆರೇಸ್ ಟಿಕೆಟ್ ದರ ರೂ.15000
- ಪಿ-2 ಸ್ಟ್ಯಾಂಡ್ ಟಿಕೆಟ್ ದರ ರೂ.20000