ಸುಭಾಷಿತ :

Monday, February 24 , 2020 3:07 AM

ರಾಜ್ಯ ಸರಕಾರದಿಂದ ಜನತೆಗೆ ‘ಸಿಹಿ ಸುದ್ದಿ’ : ಅರ್ಜಿ ಹಾಕದಿದ್ದರೂ ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ‘ಪಿಂಚಣಿ’


Monday, January 20th, 2020 6:32 am


ನ್ಯೂಸ್‌ಡೆಸ್ಕ್: ಸರ್ಕಾರ ನೀಡುವ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೂ ಕೂಡ ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಪಿಂಚಣಿ ಹುಡುಕಿಕೊಂಡು ಬರಲಿದೆ. ಹೌದು, ಉಡುಪಿ ಜಿಲ್ಲೆಯಲ್ಲಿ ಆರು ತಿಂಗಳ ಕಾಲ ಯೋಜನೆಯನ್ನು ಜಾರಿಗೊಳಿಸಿದ್ದು ಇಲ್ಲಿನ ಸಾಧಕ ಭಾದಕಗಳನ್ನು ವಿಶ್ಲೇಷಣೆ ಮಾಡಿದ ಬಳಿಕ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ.

ಉಡುಪಿಯಲ್ಲಿ ಯೋಜನೆಯನ್ನು ಪ್ರಯೋಗಿಕವಾಗಿ ಆರು ತಿಂಗಳ ಹಿಂದೆ ಯೋಜನೆ ಕಾರ್ಯ ಆರಂಭವಾಗಿದೆ ಶೀಘ್ರ ರಾಜ್ಯ ಮಟ್ಟದಲ್ಲಿ ವಿಸ್ತರಿಸ ಲಾಗುವುದು ಅಂಥ ಕಂದಾಯ ಸಚಿವ ಆರ್‌. ಆಶೋಕ್‌ ಅವರು ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಯೋಜನೆಯಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನಕ್ಕಾಗಿ ಅರ್ಜಿ ಆಹ್ವಾನಿಸದೆ, ಆಧಾರ್‌ ಕಾರ್ಡ್‌, ವಾರ್ಷಿಕ ವರಮಾನದ ಆಧಾರದಲ್ಲಿ ಸರಕಾರವೇ ಪಿಂಚಣಿಗೆ ಅರ್ಹರನ್ನು ಗುರುತಿಸಿ ಮನೆ ಬಾಗಿಲಿಗೆ ವಿತರಿಸುವ ವಿನೂತನ ಯೋಜನೆ ಇದಾಗಿದೆ. ಉಡುಪಿ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರಿಂದ ನಡೆಸಿದ ಪಿಂಚಣಿದಾರರ ಸರ್ವೇ ಮತ್ತು ಆಧಾರ್‌ ಮಾಹಿತಿ ಕ್ರೋಡೀಕರಿಸಿ ಅರ್ಹ 1,938 ಫ‌ಲಾನುಭವಿ ಗಳನ್ನು ಗುರುತಿಸಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions